• ಹೋಂ
  • »
  • ನ್ಯೂಸ್
  • »
  • Jobs
  • »
  • Career Goals: ನೀವು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಹಂತ ಹಂತವಾಗಿ ದೊಡ್ಡ ಹುದ್ದೆಗೇರುವುದು ಹೇಗೆಂದು ತಿಳಿಯಿರಿ

Career Goals: ನೀವು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಹಂತ ಹಂತವಾಗಿ ದೊಡ್ಡ ಹುದ್ದೆಗೇರುವುದು ಹೇಗೆಂದು ತಿಳಿಯಿರಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಅವಕಾಶಗಳು ನಿಮ್ಮನ್ನು ಅರಸಿ ಬರುವವರೆಗೆ ಕಾಯದಿರಿ, ನೀವೇ ನಿಮ್ಮ ವೃತ್ತಿಜೀವನದ ನಾವಿಕರಾಗಿ. ಹಂತ ಹಂತವಾಗಿ ಬೆಳೆಯಲು ಈ ರೀತಿ ಪ್ರಯತ್ನಿಸಿ.

  • Share this:

ವೃತ್ತಿ ಜೀವನದಲ್ಲಿ (Career) ಪ್ರಗತಿಯಾಗಬೇಕು ಎಂದಾದರೆ ಹೆಚ್ಚಿನ ಕೌಶಲ್ಯಗಳ ಬಗ್ಗೆ ಜ್ಞಾನವನ್ನು ಬೆಳೆಸಿಕೊಂಡಿರಬೇಕು ಇಲ್ಲದಿದ್ದರೆ ಇನ್ನಷ್ಟು ಪರಿಣಿತಿ ಹೊಂದಿರುವ ವೃತ್ತಿ ಬದಲಾವಣೆಗೆ ಆದ್ಯತೆ ನೀಡಬೇಕು. ಆದರೆ ವೃತ್ತಿಜೀವನದ ಬೆಳವಣಿಗೆ ಕೊರತೆಯು ಉದ್ಯೋಗ (Job) ಕ್ಷೇತ್ರದಲ್ಲಿ ಬೆಳವಣಿಗೆಗೆ ತಡೆಯುನ್ನುಂಟು ಮಾಡುತ್ತಿದೆ ಎಂದು ಇತ್ತೀಚಿನ ವೃತ್ತಿ ಸಮೀಕ್ಷೆ ಬಹಿರಂಗಗೊಳಿಸಿದೆ.


ವೃತ್ತಿಬೆಳವಣಿಗೆಯ ಕೊರತೆ


ಪ್ಯೂ ರಿಸರ್ಚ್ ಸೆಂಟರ್‌ನ ಸಮೀಕ್ಷೆಯ ಪ್ರಕಾರ, ಉದ್ಯೋಗಿಗಳು ತಮ್ಮ ಉದ್ಯೋಗವನ್ನು ತೊರೆಯಲು ವೃತ್ತಿಜೀವನದ ಬೆಳವಣಿಗೆಯ ಕೊರತೆಯು ಎರಡನೆಯ ಸಾಮಾನ್ಯ ಕಾರಣವಾಗಿದೆ.


ಉದ್ಯೋಗ ತ್ಯಜಿಸಿರುವ 62% ಉದ್ಯೋಗಿಗಳು ಸಂಸ್ಥೆಯಲ್ಲಿ ಮೇಲ್ದರ್ಜೆಗೇರಲು ಅವಕಾಶವಿಲ್ಲದೇ ಇರುವುದನ್ನು ಒಪ್ಪಿಕೊಂಡಿದ್ದು ಬೆಳವಣಿಗೆ ಹಾಗೂ ಕೌಶಲ್ಯ ಸುಧಾರಣೆಯ ಕೊರತೆಯೇ ವೃತ್ತಿಜೀವನಕ್ಕೆ ಅಂತ್ಯ ಹಾಡಲು ಕಾರಣ ಎಂದು ತಿಳಿಸಿದ್ದಾರೆ.
ತಮ್ಮ ಸಂಸ್ಥೆಗಳೇ ಉದ್ಯೋಗ ಉನ್ನತಿಗೆ ಬೇಕಾದ ತರಬೇತಿ ಹಾಗೂ ಪ್ರೋಗ್ರಾಮ್‌ಗಳನ್ನು ಒದಗಿಸಬೇಕೆಂದು ಹೆಚ್ಚಿನ ಉದ್ಯೋಗಿಗಳು ಬಯಸುತ್ತಾರೆ, ಆದರೆ ಒಮ್ಮೊಮ್ಮೆ ಇಂತಹ ಅವಕಾಶಗಳು ಉದ್ಯೋಗಿಗೆ ತುಂಬಾ ಕಡಿಮೆ ದೊರೆಯುತ್ತದೆ.


ಈ ಸಮಯದಲ್ಲಿ ಉದ್ಯೋಗಿಯೇ ಕೆಲವೊಂದು ಹೆಜ್ಜೆಗಳನ್ನಿರಿಸಬೇಕಾಗುತ್ತದೆ ಹಾಗೂ ವೃತ್ತಿ ಸುಧಾರಣೆಗೆ ಅಗತ್ಯವಾಗಿರುವ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅದೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.


ವೃತ್ತಿ ಅನ್ವೇಷಕರಾಗಿ


ಅವಕಾಶಗಳು ನಿಮ್ಮನ್ನು ಅರಸಿ ಬರುವವರೆಗೆ ಕಾಯದಿರಿ, ಬದಲಿಗೆ ನಿಮಗೆ ಎಲ್ಲಿ ಉತ್ತಮ ಅವಕಾಶವಿದೆ ಎಂಬುದನ್ನು ಅರಸಿ. ನಿಮಗೆ ಆಸಕ್ತಿ ಇರುವ ಹುದ್ದೆಯನ್ನು ಹುಡುಕಿ ಹಾಗೂ ಅಲ್ಲಿರುವ ಸಂಪರ್ಕಗಳನ್ನು ಬೆಳೆಸಿಕೊಳ್ಳಿ.


ಅಲ್ಲಿರುವ ಜನರು ಹೇಗೆ ವೃತ್ತಿ ಸುಧಾರಣೆ ಮಾಡಿದ್ದಾರೆ ಎಂಬುದನ್ನು ಅರಿತುಕೊಳ್ಳಿ. ನಿಮ್ಮಷ್ಟಕ್ಕೆ ಅನ್ವೇಷಣೆ ಮಾಡಿಕೊಳ್ಳುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.


ವಿಶಾಲವಾದ ನೆಟ್‌ವರ್ಕ್ ರೂಪಿಸಿ


ಹೆಚ್ಚು ಹೆಚ್ಚು ಸಂಪರ್ಕಗಳನ್ನು ನೀವು ರೂಪಿಸಿಕೊಂಡಂತೆ ಮುಂದಿನ ವೃತ್ತಿಜೀವನಕ್ಕೆ ಇದು ಕೊಡುಗೆಯನ್ನು ಒದಗಿಸುತ್ತದೆ. ಪ್ರಸ್ತುತ ನೇಮಕಾತಿದಾರರು, ಉದ್ಯೋಗಿ ಸಂಪನ್ಮೂಲ ಗುಂಪುಗಳನ್ನು ವಿಸ್ತರಿಸಿಕೊಳ್ಳಲು ಮುಂದುವರೆಯಿರಿ.


ಪ್ರಾಜೆಕ್ಟ್‌ಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಹೊಸ ಹೊಸ ಸಂಪರ್ಕಗಳನ್ನು ಬೆಳೆಸಿಕೊಳ್ಳಿ. ಸಾಮಾಜಿಕ ವೃತ್ತಿ ತಾಣಗಳಾದ ಲಿಂಕ್ಡ್‌ಇನ್‌ನಂತಹ ಮಾಧ್ಯಮಗಳನ್ನು ವೃತ್ತಿ ಸುಧಾರಣೆಗೆ ಬಳಸಿಕೊಳ್ಳಿ.


Networking Tips
ಪ್ರಾತಿನಿಧಿಕ ಚಿತ್ರ


ಬೆಂಬಲವನ್ನು ಪಡೆದುಕೊಳ್ಳಿ


ನಾಯಕತ್ವ ನಿಮ್ಮ ಬಳಿಗೆ ಬಂದು ವೃತ್ತಿ ಸುಧಾರಣೆ ಮಾಡಲಿ ಎಂದು ಕಾಯದಿರಿ. ದೀರ್ಗ ಹಾಗೂ ಸಣ್ಣ ಗುರಿಗಳನ್ನು ಹಾಕಿಕೊಳ್ಳಿ ಅದನ್ನು ನೆರವೇರಿಸಿಕೊಳ್ಳುವತ್ತ ಪ್ರಯತ್ನಪಡಿ.


ನಿಮ್ಮ ಕಂಪನಿ ಕಲಿಕೆ ಹಾಗೂ ತರಬೇತಿಗೆ ಆರ್ಥಿಕ ತರಬೇತಿ ನೀಡುತ್ತಿದ್ದರೆ ಅದನ್ನು ಬಳಸಿಕೊಳ್ಳಿ. ಮೆಂಟರ್ ಆಗಿ ತರಬೇತಿ ಹಾಗೂ ನೈಪುಣ್ಯತೆಯುಳ್ಳವರನ್ನು ನೇಮಿಸಿಕೊಳ್ಳಿ.


ಹೈ ಪ್ರೊಫೈಲ್ ಪ್ರಾಜೆಕ್ಟ್‌ಗಳನ್ನು ಅರಸಿ


ಯಾವುದಾದರೂ ಉನ್ನತ ಮಟ್ಟದ ಪ್ರಾಜೆಕ್ಟ್‌ಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ನಿಮ್ಮ ಸಾಧನೆಗಳನ್ನು ದಾಖಲಿಸಿ ಮತ್ತು ಕಾರ್ಯನಿರ್ವಾಹಕ ತಂಡದೊಂದಿಗೆ ಯಾವುದೇ ಪ್ರಾಜೆಕ್ಟ್ ಗೆಲುವುಗಳನ್ನು ಹಂಚಿಕೊಳ್ಳಿ. ನಿಮ್ಮ ಕಂಫರ್ಟ್ ಝೋನ್‌ನಿಂದ ಹೊರಬನ್ನಿ. ಬಾವಿಯೊಳಗಿನ ಕಪ್ಪೆಯಂತಾಗದೆ ಅವಕಾಶಗಳನ್ನು ಅರಸಿ ಮುನ್ನಡೆಯಿರಿ.


ವೃತ್ತಿ ನಕಾಶೆಯನ್ನು ರಚಿಸಿ


ವೃತ್ತಿಹಾದಿಯನ್ನು ರಚಿಸುವ ಸಮಯದಲ್ಲಿ ಗುರಿ ಹಾಗೂ ಉದ್ದೇಶವನ್ನು ಹಾಕಿಕೊಳ್ಳುವುದು ಮುಖ್ಯವಾಗಿರುತ್ತದೆ. ವೃತ್ತಿಪರ ಗುರಿಗಳೇನು ಎಂಬುದನ್ನು ಯೋಚಿಸಿ ಹಾಗೂ ಅದನ್ನು ಸಾಧಿಸಲು ಎಷ್ಟು ವರ್ಷಗಳು ಬೇಕು ಎಂಬುದನ್ನು ಅಂದಾಜಿಸಿಕೊಳ್ಳಿ. ನಿಮ್ಮ ಕೌಶಲ್ಯ ಹಾಗೂ ನೈಪುಣ್ಯತೆಗಳು ಎಷ್ಟು ಸುಧಾರಣೆಯಾಗುತ್ತದೆ ಎಂಬುದನ್ನು ತಿಳಿಯಿರಿ.


ಇದನ್ನೂ ಓದಿ: Job Search Tips: ಭಾರತಕ್ಕೆ ಮರಳಿ ಉದ್ಯೋಗ ಬೇಟೆಗೆ ಇಳಿಯುವ NRIಗಳಿಗೆ 5 ಟಿಪ್ಸ್


ನಿಮ್ಮ ಯೋಜನೆಯನ್ನು ದಾಖಲಿಸಿ. ಪ್ರತಿ ಗುರಿಯ ಜೊತೆಗೆ, ಗುರಿ ನಿರ್ದಿಷ್ಟತೆಗಳೊಂದಿಗೆ ನೀವು ಸಾಧಿಸಬೇಕಾದ ಮೈಲಿಗಲ್ಲುಗಳ ಪಟ್ಟಿಯನ್ನು ಸೇರಿಸಿ. ಅಂತಿಮವಾಗಿ, ನಿಮ್ಮ ಮ್ಯಾನೇಜರ್ ಅಥವಾ ಮಾರ್ಗದರ್ಶಕರೊಂದಿಗೆ ನಿಮ್ಮ ಮಾರ್ಗಸೂಚಿಯನ್ನು ಹಂಚಿಕೊಳ್ಳುವ ಮೂಲಕ ದರ ಜವಾಬ್ದಾರಿಯನ್ನು ನೀವೇ ತೆಗೆದುಕೊಳ್ಳಿ. ನಿಮ್ಮ ಯೋಜನೆಯು ಗುರಿಗೆ ಹೊಂದಿಕೊಳ್ಳುವಂತಿದೆ ಎಂಬುದನ್ನು ನೆನಪಿಡಿ, ಹಾಗಾಗಿ ಅದನ್ನು ಪದೇ ಪದೇ ನವೀಕರಿಸಿ.


ನಿಮ್ಮ ಸ್ವಂತ ನಿಯಮಗಳಲ್ಲಿ ಯಶಸ್ಸನ್ನು ವ್ಯಾಖ್ಯಾನಿಸಲು ಹಿಂಜರಿಯಬೇಡಿ. ನಿಮ್ಮ ವೃತ್ತಿ ಮಾರ್ಗದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ, ನೀವು ಪ್ರತಿ ಹೊಸ ಕೆಲಸದ ದಿನವನ್ನು ಉದ್ದೇಶ, ನಿರ್ದೇಶನ ಮತ್ತು ಪ್ರೇರಣೆಯ ನವೀಕೃತ ವಿಷಯದಲ್ಲಿ ವೀಕ್ಷಿಸಿ.

top videos
    First published: