ಈ ಆತಂಕ (Anxiety) ಅನ್ನೋದು ಮನುಷ್ಯನಿಗೆ ಅನೇಕ ವಿಷಯಗಳಿಂದ ಬರಬಹುದು ನೋಡಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯ (Exam) ಬಗ್ಗೆ ಮತ್ತು ಪರೀಕ್ಷೆಯ ಫಲಿತಾಂಶದ ಬಗ್ಗೆ ಭಯ ಆದರೆ, ದೊಡ್ಡವರಿಗೆ ಕೆಲಸ (Job) ಸಿಗುತ್ತೋ ಇಲ್ವೋ, ಕೆಲಸ ಸಿಕ್ಕರೆ ಅದು ಎಷ್ಟು ವರ್ಷಗಳ ಕಾಲ ತಮ್ಮ ಕೈ ಹಿಡಿಯುತ್ತೆ ಅನ್ನೋ ಆತಂಕ. ಹೀಗೆ ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ದರವರೆಗೆ ಒಂದಲ್ಲ ಒಂದು ಆತಂಕ ಕಾಡುತ್ತಲೇ ಇರುತ್ತದೆ ಅಂತ ಹೇಳಬಹುದು.
ಈ ಆತಂಕ ಹೆಚ್ಚಾದರೆ ಅದು ನಮ್ಮ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆಯೂ ಸಹ ಭಾರಿ ಪರಿಣಾಮ ಬೀರುತ್ತದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಅಥವಾ ಭವಿಷ್ಯದಲ್ಲಿ ಸಂಭಾವ್ಯ ಅಪಾಯಗಳಿಂದ ನಮ್ಮನ್ನು ನಾವು ಈ ಆತಂಕದಿಂದ ರಕ್ಷಿಸಿಕೊಳ್ಳಳ್ಳುವುದು ತುಂಬಾನೇ ಮುಖ್ಯವಾಗಿದೆ. ಆತಂಕ ಶುರುವಾಗುವುದೇ ಅನಿಶ್ಚಿತತೆಯ ಭಾವನೆಯಿಂದ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಕೌನ್ಸೆಲಿಂಗ್ ಸೈಕಾಲಜಿಸ್ಟ್ ಜಗಜೀತ್ ಕೌರ್ ಉಲ್ಲೇಖಿಸಿದಂತೆ, ಆತಂಕಗೊಂಡ ಜನರು ಅವರ ಬಳಿ ಬಂದಾಗ "ಆತಂಕ ಅನ್ನೋದು ನಮ್ಮ ಕುಟುಂಬದಲ್ಲಿಯೇ ಇದೆ, ನಾವು ಸಹ ಹಾಗೆಯೇ ಇದ್ದೇವೆ. ಯಾವುದೇ ಪರಿಸ್ಥಿತಿಯ ಬಗ್ಗೆ ಆತಂಕಗೊಂಡು ಅತಿಯಾಗಿ ಯೋಚಿಸುವುದು ನಮ್ಮ ಸಾಮಾನ್ಯ ನಿಭಾಯಿಸುವ ಪ್ರತಿಕ್ರಿಯೆಯಾಗಿದೆ ಎಂದು ಹೇಳುತ್ತಾರಂತೆ”.
ಉದ್ಯೋಗ ಕಳೆದುಕೊಳ್ಳುವುದು, ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವುದು, ಬ್ಯಾಂಕ್ ಖಾತೆಯಲ್ಲಿ ಹಣ ಕಡಿಮೆಯಾಗುವುದು ಅಥವಾ ಅನಾರೋಗ್ಯ.. ಹೀಗೆ ಇವೆಲ್ಲವೂ ನಮ್ಮನ್ನು ತುಂಬಾನೇ ಆತಂಕಕ್ಕೆ ಗುರಿ ಪಡಿಸುತ್ತವೆ ಅಂತ ಇವರು ಹೇಳುತ್ತಾರೆ.
ಆತಂಕವು ಯಾವಾಗ ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತದೆ?
ಹೃದಯ ಬಡಿತ ಹೆಚ್ಚಾಗುವುದು, ನಡುಗುವಿಕೆ, ವಾಕರಿಕೆ, ಉಸಿರಾಟದ ತೊಂದರೆ ಮತ್ತು ಹೆಚ್ಚಿನ ಸಮಯ ಉದ್ವಿಗ್ನತೆಯಂತಹ ಹೆಚ್ಚಿನ ದೈಹಿಕ ರೋಗಲಕ್ಷಣಗಳನ್ನು ನಾವು ಅನುಭವಿಸಿದಾಗ ಆತಂಕವು ನಮ್ಮ ಜೀವನವನ್ನು ದುರ್ಬಲಗೊಳಿಸಲು ಪ್ರಾರಂಭಿಸುತ್ತದೆ ಅಂತ ನಾವು ತಿಳಿದುಕೊಳ್ಳಬಹುದು. ನಾವು ಅತಿಯಾಗಿ ಚಿಂತಿಸುತ್ತೇವೆ, ಚಡಪಡಿಕೆಗೆ ಒಳಗಾಗುತ್ತೇವೆ, ಏಕಾಗ್ರತೆ ಅಥವಾ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ, ಮತ್ತು ಮುಂಬರುವ ಅಪಾಯದ ಬಗ್ಗೆ ಭಯಪಡುತ್ತೇವೆ.
ವೃತ್ತಿಜೀವನದ ಆತಂಕವನ್ನು ನಿವಾರಿಸುವುದು ಹೇಗೆ?
ಮುಂಬರುವ ಪರಿಸ್ಥಿತಿಗೆ ನಾವು ಹೊಂದಿಕೊಳ್ಳಲು ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳು, ಸಾಮರ್ಥ್ಯ ಮತ್ತು ಗುಣಗಳು ಇಲ್ಲ ಎಂದು ನಾವು ವಿಶ್ಲೇಷಿಸಿದಾಗ ಆತಂಕ ಇನ್ನೂ ಹೆಚ್ಚಾಗುತ್ತದೆ. "ನಾನು ಸ್ನೇಹಿತರನ್ನು ಸಂಪಾದಿಸಲು ಸಾಧ್ಯವಾಗುವುದಿಲ್ಲ, ಏಕೆಂದರೆ ಅವರು ನನ್ನ ವಾರ್ಡ್ರೋಬ್ ಶೈಲಿಯನ್ನು ಇಷ್ಟಪಡದಿರಬಹುದು" ಎಂಬಂತಹ ಆಲೋಚನೆಗಳನ್ನು ಜನರು ಸಾಮಾನ್ಯವಾಗಿ ಹೊಂದಿರಬಹುದು.
"ಕಳೆದ ಎರಡು ವರ್ಷಗಳಲ್ಲಿ ನಾನು ನನ್ನ ತಾಂತ್ರಿಕ ಕೌಶಲ್ಯಗಳನ್ನು ನವೀಕರಿಸದ ಕಾರಣ ನಾನು ಹೊಸ ಉದ್ಯೋಗದಲ್ಲಿ ಕಡಿಮೆ ಪ್ಯಾಕೇಜ್ ಪಡೆಯಬಹುದು". ಯಾವುದೇ ವಯಸ್ಸಿನಲ್ಲಿ, ನಿಮ್ಮ ಸ್ವಂತ ವೃತ್ತಿಜೀವನವನ್ನು ನಿರ್ವಹಿಸುವುದು, ಉದ್ಯೋಗದ ಏಣಿಯ ಮೇಲೆ ಮೊದಲ ಹೆಜ್ಜೆ ಇಡುವುದು, ವ್ಯವಹಾರವನ್ನು ಸ್ಥಾಪಿಸುವುದು ಅಥವಾ ವೃತ್ತಿಜೀವನವನ್ನು ಸಂಪೂರ್ಣವಾಗಿ ಬದಲಾಯಿಸುವುದು ಆತಂಕಕಾರಿಯಾಗಬಹುದು. ಸ್ವ-ಸಂದೇಹ ಶುರುವಾಗಬಹುದು ಮತ್ತು ಇದೆಲ್ಲವೂ ನಿಮ್ಮ ಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳುವುದರಿಂದ ನಿಮ್ಮನ್ನು ತಡೆಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ