ಕೆಲಸದಲ್ಲಿರುವವರಿಗೆ (Employee) ಉದ್ಯಮದ ಟ್ರೆಂಡ್ ಬಗ್ಗೆ ವಿವರಿಸೋದೆ ಬೇಡ ಎಲ್ಲವೂ ತಿಳಿದಿರುತ್ತದೆ. ವೇತನ, ಅವಕಾಶ, ಪ್ರಯೋಜನ, ಉದ್ಯೋಗದ ಪಾತ್ರ ಎಲ್ಲದರ ಅರಿವಿರುತ್ತದೆ. ಅದೇ ಕೆಲಸದಿಂದ ಸ್ವಲ್ಪ ಬ್ರೇಕ್ (Career Break) ತೆಗೆದುಕೊಂಡರೂ ಇದ್ಯಾವುದರ ಬಗ್ಗೆಯೂ ಹೆಚ್ಚಿಗೆ ತಿಳಿಯೋದೆ ಇಲ್ಲಾ.
ವೃತ್ತಿ ವಿರಾಮದಿಂದ ಹಿಂತಿರುವ ಅಭ್ಯರ್ಥಿಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆಯೇ?
ಅನಿವಾರ್ಯತೆ ಕಾರಣಗಳಿಂದ ವೃತ್ತಿಜೀವನದಲ್ಲಿ ಬ್ರೇಕ್ ತೆಗೆದುಕೊಂಡು ಮತ್ತೆ ಕೆಲಸಕ್ಕೆ ಹಾಜರಾಗುವವರಿಗೆ ಈ ಬಗ್ಗೆ ಗೊತ್ತಿರುತ್ತದೆ. ಇದು ವಿರಾಮ ತೆಗೆದುಕೊಂಡು ಬರುವ ಉದ್ಯೋಗಿಗಳಿಗೆ ಸಾಮಾನ್ಯವಾದ ಅನುಭವ. ಬ್ರೇಕ್ ತೆಗೆದುಕೊಂಡು ಬಂದ ಅಭ್ಯರ್ಥಿಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಈ ವಾದ ಹೌದು ಎಂದು ಸಹ ಹಲವು ಸಂದರ್ಭದಲ್ಲಿ ಸಾಬೀತಾಗಿದೆ.
ವಿರಾಮದ ನಂತರ ಕೆಲಸ ಮಾಡಬೇಕು ಅಂತಾ ಕೆಲಸಕ್ಕೆ ಅರ್ಜಿ ಸಲ್ಲಿಸಿ ಸಂದರ್ಶನಕ್ಕೆ ಹೋದರೆ, ಇಲ್ಲಿ ಪ್ರಮುಖವಾಗಿ ಗಮನ ಸೆಳೆಯುವುದೇ ಕೆಲಸದ ವಿರಾಮ. ಎಲ್ಲಾ ಸಂದರ್ಶಕರು ಈ ವಿರಾಮದ ಬಗ್ಗೆ ತಪ್ಪದೇ ಕೇಳುತ್ತಾರೆ. ಇದರ ಒಟ್ಟು ಪರಿಣಾಮ ಸಂಬಳ, ಅವರಿಗೆ ಸಿಗುವ ಸ್ಥಾನಮಾನ, ಪಾತ್ರ, ಪ್ರಯೋಜನದ ಮೇಲೆ ಪರಿಣಾಮ ಬೀರುತ್ತದೆ. ಈ ಸಂದರ್ಭ ಇಂತಹ ಅಭ್ಯರ್ಥಿಗಳಿಗೆ ಸವಾಲಾದರೂ ಸಹ ಧೈರ್ಯದಿಂದ ಉತ್ತರಿಸಬೇಕಾಗುತ್ತದೆ.
ಕೆಲಸದಲ್ಲಿ ಬ್ರೇಕ್: ಸಂಬಳದ ಮೇಲೆ ಎಫೆಕ್ಟ್
ಮುಖ್ಯವಾಗಿ ಸಂಬಳದ ವಿಚಾರ ಬಂದಾಗ ಸ್ಥಿತಿಯೇ ಬೇರೆಯದ್ದಾಗಿರುತ್ತದೆ. ನೀವು ವಿರಾಮದ ನಂತರ ಹಿಂತಿರುಗುತ್ತಿರುವುದರಿಂದ, ನಿಮ್ಮ ಕೊನೆಯ ಸಂಬಳವನ್ನು ಮಾತ್ರ ನಾವು ನಿಮಗೆ ನೀಡಲು ಸಾಧ್ಯವಾಗುತ್ತದೆ" ಎಂದು ಸಂದರ್ಶಕರು ಹೇಳುತ್ತಾರೆ. ವೃತ್ತಿ ವಿರಾಮದಿಂದ ಹಿಂತಿರುಗುವವರು ಸಂದರ್ಶನದಲ್ಲಿ ಈ ಪ್ರಶ್ನೆಯನ್ನು ಎದುರಿಸಬಹುದು.
ಹಾಗಾದರೆ ಇಂತಹ ಸಂದರ್ಭವನ್ನು ಅಭ್ಯರ್ಥಿಗಳು ಹೇಗೆ ನಿಭಾಯಿಸಬೇಕು? ತಜ್ಞರು ಏನು ಹೇಳುತ್ತಾರೆ? ಎಂಬುದನ್ನು ನೋಡೋಣ.
"ವಿರಾಮದ ನಂತರ ಕೌಶಲ್ಯಗಳ ಜೊತೆ ಹಿಂದಿರುಗಿ"
ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಾರ್ಯನಿರ್ವಾಹಕ ಹುಡುಕಾಟ ಮತ್ತು ಪ್ರತಿಭಾ ಸಲಹೆಗಾರರಲ್ಲಿ ಒಂದಾದ ವಾಕ್‌ವಾಟರ್ ಟ್ಯಾಲೆಂಟ್ ಅಡ್ವೈಸರ್ಸ್‌ನ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ಹೆರಾಲ್ಡ್ ಡಿಸೋಜಾ ಅವರು ವಿರಾಮದ ನಂತರ ಉದ್ಯೋಗಕ್ಕೆ ಮರಳುವಾಗ ಪ್ರಮುಖ ಕೌಶಲ್ಯ ಹೆಚ್ಚಿನ ಅರ್ಹತೆಗಳೊಂದಿಗೆ ಹಿಂದಿರುಗುವುದು ಮುಖ್ಯ ಎಂದು ಹೇಳುತ್ತಾರೆ. ಹಾಗೆಯೇ ಕೆಲಸದಿಂ ಬ್ರೇಕ್ ತೆಗೆದುಕೊಂಡಿರುವ ಸರಿಯಾದ ಕಾರಣವನ್ನು ರೆಸ್ಯೂಮ್‌ನಲ್ಲಿ ಉಲ್ಲೇಖಿಸಲು ಹೇಳುತ್ತಾರೆ ಡಿಸೋಜಾ. ಹಾಗೆಯೇ ಸಂದರ್ಶನದಲ್ಲೂ ಈ ಬಗ್ಗೆ ಧೈರ್ಯದಿಂದ ಪ್ರಸ್ತಾಪ ಮಾಡಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ: Salary Negotiation: ಉದ್ಯೋಗ ಸಂದರ್ಶನದಲ್ಲಿ ಸಂಬಳದ ಬಗ್ಗೆ ಕೇಳುವ ಪ್ರಶ್ನೆಗೆ ನಿಮ್ಮ ಉತ್ತರ ಹೀಗಿರಲಿ
ಈ ಸಂದರ್ಭದಲ್ಲಿ ಕಂಪನಿ, ಪಾತ್ರ ಮತ್ತು ರಚನೆಯನ್ನು ಸಾಧ್ಯವಾದಷ್ಟು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ಡಿಸೋಜಾ ಹೇಳುತ್ತಾರೆ. ಸಂಬಳದ ಬಗ್ಗೆ ಪರಿಣಿತರನ್ನು, ಉದ್ಯೋಗದಲ್ಲಿರುವಸ್ನೇಹಿತರ ಜೊತೆ ಚರ್ಚಿಸಿ ಸಂದರ್ಶಕರಿಗೆ ಕೇಳಿ ಎನ್ನುತ್ತಾರೆ ಡಿಸೋಜಾ.
ಈ ಕೆಳಗಿನ ಮಾರ್ಗಗಳನ್ನು ಸಹ ಅನುಸರಿಸಬಹುದು.
* ನಿಮಗೆ ನಿಮ್ಮ ಕೌಶಲ್ಯ, ಸಾಮರ್ಥ್ಯದ ಬಗ್ಗೆ ವಿಶ್ವಾಸವಿದ್ದರೆ, ಸಂದರ್ಶಕರ ಜೊತೆಗೆ ಸಂಬಳದ ಬಗ್ಗೆ ಮಾತನಾಡುವಾಗ ಎಲ್ಲವನ್ನೂ ಅರ್ಥ ಮಾಡಿಸಿ
* ಸಂಪೂರ್ಣ ಪ್ಯಾಕೇಜ್ ಸಂಬಳಕ್ಕಿಂತ ಹೆಚ್ಚಿರಬಹುದು. ನೀವು ಮಾತುಕತೆ ನಡೆಸುವಾಗ, ಪಾತ್ರದ ಉತ್ಸಾಹ, ಒದಗಿಸಿದ ಕಲಿಕೆ, ವಿಮೆ ಮತ್ತು ಆರೋಗ್ಯ ಪ್ರಯೋಜನಗಳು, ರಜೆ ನೀತಿ, ವೇರಿಯಬಲ್ ಪೇ, ESOP ಅರ್ಹತೆ ಮತ್ತು ಹೆಚ್ಚಿನವುಗಳಂತಹ ವಿಶಾಲ ಅಂಶಗಳನ್ನು ಚರ್ಚಿಸಿ
* ಪಾತ್ರಕ್ಕೆ ಸರಿಹೊಂದುವ ಬಗ್ಗೆ ಚರ್ಚಿಸಲು ಮುಕ್ತತೆಯನ್ನು ತೋರಿಸುವುದು ಮುಖ್ಯವಾಗಿದೆ, ಆದರೆ ಯಾವುದು ಸಾಧ್ಯ ಮತ್ತು ಸಾಧ್ಯವಿಲ್ಲ ಎಂಬುದರ ಕುರಿತು ಸ್ಪಷ್ಟವಾದ ಗಡಿಗಳನ್ನು ಹಾಕಿಕೊಳ್ಳಿ
ಕೆಲಸಕ್ಕೂ,ಪಾತ್ರಕ್ಕೂ, ವಿರಾಮಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಆದರೆ ಅಭ್ಯರ್ಥಿಗಳು ಆ ಗ್ಯಾಪ್ ಆದ ವರ್ಷದಲ್ಲಿ ಉದ್ಯೋಗ, ಪಾತ್ರಕ್ಕೆ ಸಂಬಂಧಿಸಿದಂತೆ ಏನೆಲ್ಲಾ ಬದಲಾವಣೆಯಾಗಿದೆ? ಕೌಶಲ್ಯಗಳೇನಿರಬೇಕು ಎಂಬುದನ್ನು ತಿಳಿದು ಕೆಲಸದಲ್ಲಿ ಮುಂದುವರೆಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ