ಆಫೀಸ್ ಗಳಲ್ಲಿ ಎರಡು ರೀತಿಯ ಕೆಟ್ಟ ಬಾಸ್ ಗಳಿರುತ್ತಾರೆ (Bad Boss). ಕೆಲ ಮ್ಯಾನೇಜರ್ಸ್ (Managers) ಎಲ್ಲಾ ಕೆಲಸವನ್ನು ಕೆಳಗಿನ ಉದ್ಯೋಗಿಗಳ (Employees) ಮೇಲೆ ಹಾಕುತ್ತಾರೆ. ಹೆಚ್ಚು ಹೆಚ್ಚು ಕೆಲಸ ಮಾಡುವಂತೆ ಒತ್ತಡವೇರುತ್ತಾರೆ (Work Pressure). ಇನ್ನು ಕೆಲವರು ಎಲ್ಲದಕ್ಕೂ ಮೂಗು ತೂರಿಸುತ್ತಾರೆ. ಸಣ್ಣಪುಟ್ಟ ವಿಷಯಗಳಿಗೆ ಡೈರೆಕ್ಷನ್ ಮೇಲೆ ಡೈರೆಕ್ಷನ್ಸ್ ಕೊಡುತ್ತಿರುತ್ತಾರೆ. ತಪ್ಪೇ ಮಾಡುತ್ತೀರಿ ಎಂದು ಉದ್ಯೋಗಿಗೆ ಮೊದಲೇ ಎಚ್ಚರಿಕೆಗಳನ್ನು ಕೊಡುವುದು. ತಾನು ಬಯಸಿದಂತೆ ಒಂದಿಷ್ಟೂ ವ್ಯತ್ಯಾಸವಾಗದಂತೆ ಕೆಲಸ ಮಾಡಬೇಕು ಎಂದು ಬಯಸುವ ಬಾಸ್/ ಮ್ಯಾನೇಜರ್ ನಿಜಕ್ಕೂ ಕಿರಿಕಿರಿ ಎನಿಸುತ್ತಾರೆ.
ಏನಿದು ಮೈಕ್ರೋ ಮ್ಯಾನೇಜಿಂಗ್? (Micromanaging)
ಹೀಗೆ ಎಲ್ಲದ್ದಕ್ಕೂ ಮೂಗು ತೋರಿಸುವ ಅಭ್ಯಾಸವನ್ನು ಮೈಕ್ರೋ ಮ್ಯಾನೇಜಿಂಗ್ (ಸಣ್ಣಪುಟ್ಟ ವಿಷಯಗಳನ್ನು ತನ್ನಿಷ್ಟದಂತೆ ಮಾಡಬೇಕೆಂದು ಬಯಸುವುದು) ಅನ್ನುತ್ತಾರೆ. ದೊಡ್ಡ ಸ್ಥಾನದಲ್ಲಿದ್ದವರು ಕೆಳಗಿನ ಉದ್ಯೋಗಿಗಳಿಗೆ ಸೂಚನೆಗಳನ್ನು ನೀಡುವುದು ಸಾಮಾನ್ಯ. ಅದೇ ಅವರ ಕೆಲಸ ಕೂಡ. ಆದರೆ ಕೊಟ್ಟ ಕೆಲಸದಲ್ಲಿ ಅತಿಯಾದ ಮೂಗು ತೂರಿಸುವಿಕೆಯನ್ನು ಮೈಕ್ರೋ ಮ್ಯಾನೇಜಿಂಗ್ ಎನ್ನುತ್ತಾರೆ. ಬಹುತೇಕ ಬಾಸ್/ಮ್ಯಾನೇಜರ್ ಗಳಿಗೆ ಮೈಕ್ರೋ ಮ್ಯಾನೇಜಿಂಗ್ ಸಮಸ್ಯೆ ಇರುತ್ತದೆ. ಆದರೆ ಅವರಿಗೇ ಆ ಬಗ್ಗೆ ಅರಿವು ಇರುವುದಿಲ್ಲ. ಇದರಿಂದ ಅವರ ಜೊತೆ ಕೆಲಸ ಮಾಡುವ ಉದ್ಯೋಗಿಗಳಿಗೆ ನಿಜಕ್ಕೂ ಹಿಂಸೆ ಆಗುತ್ತಿರುತ್ತದೆ.
ಮೈಕ್ರೋ ಮ್ಯಾನೇಜ್ಮೆಂಟ್ನಿಂದ ಕಿರಿಕಿರಿ
ತಪ್ಪೇ ಮಾಡುತ್ತಾರೆ ಎಂದು ಪೂರ್ವ ಯೋಚನೆಯೊಂದಿಗೆ, ಕೆಲಸ ಮಾಡುವ ಮೊದಲೇ ಎಚ್ಚರಿಕೆಗಳನ್ನು ಕೊಡುವುದು ಯಾವುದೇ ಉದ್ಯೋಗಿಯ ಸ್ವಾಭಿಮಾನಕ್ಕೆ ತೊಂದರೆಯಾಗುತ್ತೆ. ಉದ್ಯೋಗಿ ಮಿಷನ್ ಅಲ್ಲ, ಕೆಲಸವನ್ನು ತನ್ನದೇ ಆದ ರೀತಿಯಲ್ಲಿ ಮಾಡುವ ಸ್ವಾತಂತ್ರ್ಯ ಇದೆ ಎಂದು ಅರಿಯಬೇಕು. ಆಫೀಸ್ ವಾಟ್ಸಪ್ ಗ್ರೂಪ್ ಗಳಲ್ಲಿ ಅಥವಾ ಮೇಲ್ ಗಳಲ್ಲಿ ದಿನಕ್ಕೊಂದು ನಿಯಮಗಳನ್ನು ಉದ್ಯೋಗಿಗಳ ಮೇಲೆ ಹೇರುವುದು. ಪದೇ ಪದೇ ವಾರ್ನಿಂಗ್ ಟೋನ್ ನಲ್ಲಿ ಸೂಚನೆಗಳನ್ನು ಕೊಡುವುದು ನಿಜಕ್ಕೂ ಉದ್ಯೋಗಿಗಳ ಮೇಲೆ ಅನಗತ್ಯ ಒತ್ತಡವನ್ನು ಸೃಷ್ಟಿಸುತ್ತೆ.
ಇದನ್ನೂ ಓದಿ: Career Tips: 2023ರಲ್ಲಿ ಪ್ರಮೋಷನ್, ಹೈಕ್ ಸಿಗಬೇಕೆಂದರೆ ವರ್ಷದ ಕೊನೆಯಲ್ಲಿ ಈ ದಾಖಲೆಗಳನ್ನು ಸಂಗ್ರಹಿಸಿ
ಬಾಸ್ಗಳು ಏಕೆ ಹೀಗೆ ವರ್ತಿಸುತ್ತಾರೆ?
ಆತ್ಮವಿಶ್ವಾಸ ಕಡಿಮೆ ಇದ್ದಾಗ, ತಮ್ಮ ಸ್ಥಾನವನ್ನು ಎಲ್ಲಿ ಕಳೆದುಕೊಂಡು ಬಿಡುತ್ತೇವೋ ಎಂಬ ಭಯದಲ್ಲಿ ಬಾಸ್ ಗಳು ಹೀಗೆ ವರ್ತಿಸುತ್ತಾರೆ. ತಪ್ಪುಗಳನ್ನು ಹುಡುಕುವುದೇ ಬಾಸ್ ಆದವರ ಕೆಲಸ ಅಂತಲೂ ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ತಪ್ಪುಗಳನ್ನು ಕಂಡು ಹಿಡಿಯುವ ಮೂಲಕ ಉದ್ಯೋಗಿಯ ಮೇಲೆ ಹಿಡಿತ ಸಾಧಿಸಬೇಕು ಎಂಬ ಯೋಚನೆಯೂ ಇರುತ್ತೆ.
ಇಂಥ ಪರಿಸ್ಥಿತಿ ಉದ್ಯೋಗಿಗಳು ಏನು ಮಾಡಬಹುದು?
1) ಇಂತಹ ಸಮಯದಲ್ಲಿ ಉದ್ಯೋಗಿಯೇ ಬಾಸ್ ಗೆ ನೇರವಾಗಿ, ನಯವಾದ ರೀತಿಯಲ್ಲಿ ಹೇಳಬೇಕು.
2) ಕೆಲಸ ಕೊಟ್ಟ ಮೇಲೆ ತಲೆ ತಿನ್ನಬೇಡಿ ಎಂಬರ್ಥದಲ್ಲಿ ಮುಖಕ್ಕೆ ಹೊಡೆದ ರೀತಿಯಲ್ಲಿ ಮಾತನಾಡಬೇಡಿ.
3) ಬದಲಿಗೆ ನಮ್ಮ ಮೇಲೆ ವಿಶ್ವಾಸವಿಟ್ಟು ಕೆಲಸ ಕೊಡಿ, ಸರಿಯಾಗಿ ಮಾಡುತ್ತೇವೆ ಎಂದು ಹೇಳಿ.
4) ನೀವು ಹೇಳಿದಂತೆಯೇ ಕೆಲಸ ಮಾಡುತ್ತೇವೆ, ನಂತರ ತಿಳಿಸುವುದಾಗಿ ಮನವರಿಕೆ ಮಾಡಿಕೊಡಿ.
5) ಒಬ್ಬೊಬ್ಬ ಉದ್ಯೋಗಿಯೂ ಒಂದೊಂದು ರೀತಿಯಲ್ಲಿ ಕೆಲಸ ಮಾಡುತ್ತಾರೆ. ಕೆಲಸ ಸರಿಯಾಗಿ ಆಗುವುದು ಮುಖ್ಯ. ಎಲ್ಲರೂ ಒಂದೇ ರೀತಿ ವರ್ತಿಸುವ ಅಗತ್ಯವಿಲ್ಲ ಎಂದು ತಿಳಿಸಿ.
6) ನಿಮ್ಮ ಸಲಹೆಗಳಿಗೆ ಧನ್ಯವಾದ, ಕೆಲಸ ಮಾಡಿದ ಬಳಿಕ ಕರೆಕ್ಷನ್ಸ್ ಇದ್ದರೆ ಹೇಳಿ ಎಂದು ಬಾಸ್/ಮ್ಯಾನೇಜರ್ ಗೆ ಮೇಲ್ನಲ್ಲಿ ತಿಳಿಸಬಹುದು.
ಕೆಲಸದಲ್ಲಿ ಎಷ್ಟರ ಮಟ್ಟಿಗೆ ಸೂಚನೆಗಳನ್ನು ಕೊಡಬೇಕು. ಯಾವುದು ಅತಿಯಾದ ಮ್ಯಾನೇಜಿಂಗ್ ಎಂಬ ಅರಿವು ಉನ್ನತ ಹುದ್ದೆಯಲ್ಲಿ ಇರುವವರಿಗೆ ಇರಬೇಕು. ಇಲ್ಲವಾದರೆ ಉದ್ಯೋಗಿಗಳು ತಮ್ಮ ಸಾಮರ್ಥವ್ಯಕ್ಕೆ ತಕ್ಕಂತೆ ಕೆಲಸ ಮಾಡದೇ ಇರಬಹುದು. ಹೇಗೋ ಬಾಸ್ ತಪ್ಪು ಕಂಡು ಹಿಡಿತ್ತಾರೆ ಎಂದು ಉದಾಸೀನದಿಂದ ಬೇಕಾಬಿಟ್ಟಿ ಕೆಲಸ ಮಾಡಬಹುದು. ಅತಿಯಾಗಿ ಅವಲಂಬಿಸಿ ಬಾಸ್ ಸೂಚನೆಗಳಿಗೇ ಕಾಯುತ್ತಾ ಕೂರಬಹುದು. ಇವುಗಳ ಬಗ್ಗೆ ಎಚ್ಚರಿಕೆ ಇರಲಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ