ಕೋವಿಡ್ (Covid) ಸಮಯದಲ್ಲಿ ಘೋಷಣೆಯಾದ ವರ್ಕ್ ಫ್ರಮ್ ಹೋಮ್ ಇಂದಿಗೂ ಮುಂದುವರಿದಿದೆ. ಕೆಲವೊಂದು ಕಂಪನಿಗಳು ಮರಳಿ ಕಚೇರಿಗಳಿಗೆ ಉದ್ಯೋಗಿಗಳನ್ನು ಕರೆಯಿಸಿಕೊಂಡಿದ್ದರೆ ಇನ್ನು ಕೆಲವು ಹೈಬ್ರೀಡ್ ಆಯ್ಕೆಯನ್ನು ಉದ್ಯೋಗಿಗಳಿಗೆ ನೀಡಿವೆ. ಇನ್ನು ಕೆಲವು ಕಂಪನಿಗಳು ವರ್ಕ್ ಫ್ರಮ್ ಹೋಮ್ ಅನ್ನೇ ಬಳಸಿಕೊಂಡಿವೆ. ಮನೆಯಿಂದ ಕೆಲಸ ಮಾಡುವುದು ಉತ್ತಮ ಆಯ್ಕೆ ಎಂದೆನಿಸಿದರೂ ಕೆಲವೊಂದು ನ್ಯೂನತೆಗಳು ಇದ್ದೇ ಇದೆ. ಕಚೇರಿಯಿಂದ ದೂರವಿದ್ದು ಮನೆಯಿಂದಲೇ ಕೆಲಸ ಮಾಡುವ ಪ್ರವೃತ್ತಿ ವೃತ್ತಿಜೀವನದ ಮುನ್ನಡೆಗೆ, ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ನಿರ್ಮಿಸಲು ಹಾಗೂ ಮುಂದಿನ ನಿಮ್ಮ ವೃತ್ತಿ (Career) ಪ್ರಚಾರಕ್ಕೆ ಅಡ್ಡಿಯನ್ನುಂಟು ಮಾಡುವ ಸಂಭವವಿರುತ್ತದೆ ಎಂಬುದು ಪರಿಣಿತರ ವಾದವಾಗಿದೆ.
ಉದ್ಯೋಗಿಗಳು ತಮ್ಮ ಪ್ರಾಮುಖ್ಯತೆಯನ್ನು ಹೇಗೆ ತಿಳಿಯಪಡಿಸಬಹುದು?
ಮನೆಯಿಂದ ಕೆಲಸ ಮಾಡುವುದು ಜವಬ್ದಾರಿಯನ್ನು ಹೆಚ್ಚಿಸುತ್ತದೆ, ಒಮ್ಮೊಮ್ಮೆ ಕೆಲಸದ ಒತ್ತಡವನ್ನು ಸೃಷ್ಟಿಸಬಹುದು. ನಿಮ್ಮ ಬದ್ಧತೆ, ತೊಡಗಿಸಿಕೊಳ್ಳುವಿಕೆ ಮತ್ತು ಕೆಲಸದ ಪ್ರಾಮುಖ್ಯತೆಯನ್ನು ನೀವು ಹೇಗೆ ಪ್ರದರ್ಶಿಸುತ್ತೀರಿ ಎಂಬುದು ಇಲ್ಲಿ ಮುಖ್ಯವಾಗಿರುತ್ತದೆ. ಇದನ್ನು ನಿರ್ವಹಿಸುವ ತಂತ್ರಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.
ಮುಖ್ಯವಾಗಿ ನಿಮ್ಮ ಪ್ರಸ್ತುತಿ ನಾಲ್ಕು ಜನರಲ್ಲಿ ಎದ್ದುಗಾಣುವಂತಿರಬೇಕು. ಹಾಗೂ ನೀವು ಮನಸ್ಸಿಟ್ಟು ಬದ್ಧತೆಯಿಂದ ಕೆಲಸ ಮಾಡುತ್ತಿದ್ದೀರಿ ಎಂಬ ಅರಿವು ಕಚೇರಿಯಲ್ಲಿರುವವರ ಅರಿವಿಗೆ ಬರಬೇಕು.
ಕಚೇರಿಯಲ್ಲಿ ಹೇಗೆ ಕೆಲಸ ಮಾಡುತ್ತೀರೋ ಹಾಗೆಯೇ ನೀವು ಇರುವ ಕಡೆ ಕೂಡ ಉದ್ಯೋಗ ನಿರ್ವಹಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸುವುದು ಮುಖ್ಯವಾಗಿದೆ.
ನೀವು ಎಲ್ಲಿಂದ ಬೇಕಾದರೂ ಕೆಲಸ ಮಾಡುತ್ತಿರಿ ಆದರೆ ಕೆಲವೊಂದು ವೃತ್ತಿ ಅವಕಾಶಗಳಿಗೂ ನೀವು ಪ್ರಾಮುಖ್ಯತೆ ನೀಡಬೇಕಾಗುತ್ತದೆ. ನಿಮ್ಮ ಬೆಳವಣಿಗೆಗೂ ಮಹತ್ವ ನೀಡಬೇಕಾಗುತ್ತದೆ. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ
ಜವಬ್ದಾರಿಯುತವಾಗಿರಿ
ನೀವು ಎಲ್ಲೇ ಕೆಲಸ ಮಾಡುತ್ತಿರಿ ನಿಮ್ಮ ಪ್ರಸ್ತುತೆತಯನ್ನು ಉತ್ತಮ ಕಾರ್ಯಕ್ಷಮತೆಯ ಮೂಲಕ ತಿಳಿಯಪಡಿಸಬಹುದಾಗಿದೆ. ಸಮಸ್ಯೆಗಳನ್ನು ಗುರುತಿಸಲು ಮತ್ತು ಪ್ರಕ್ರಿಯೆಗಳನ್ನು ಸುಧಾರಿಸಲು ಕೆಲವೊಂದು ವಿಧಾನಗಳನ್ನು ಆಯ್ದುಕೊಳ್ಳಬಹುದಾಗಿದೆ.
ಸಹೋದ್ಯೋಗಿಗಳೊಂದಿಗೆ ಸಂಪರ್ಕದಲ್ಲಿರುವುದು, ನಿರ್ವಾಹಕರೊಂದಿಗೆ ಸಮಸ್ಯೆಗಳನ್ನು ಚರ್ಚಿಸುವುದು ಹೀಗೆ ಮಾಡುವುದರಿಂದ ಉದ್ಯೋಗಿಗಳು ತಮ್ಮ ಪ್ರಸ್ತುತಿಯನ್ನು ನಿಖರಪಡಿಸಬಹುದಾಗಿದೆ. ಇಂತಿಷ್ಟು ಹೊತ್ತಿಗೆ ಕೆಲಸ ಮುಗಿಸುತ್ತೀರಿ ಎಂಬ ಸಮಯದ ಗಡುವನ್ನು ಹಾಕಿಕೊಂಡಿದ್ದರೆ ಅದನ್ನು ಮುಗಿಸಿ. ನಿಮಗೆ ವಹಿಸಿದ ಉದ್ಯೋಗವನ್ನು ಉತ್ತಮವಾಗಿ ನಿರ್ವಹಿಸಿ.
ನಿಮಗೆ ನೀಡಿರುವ ಕೆಲಸವನ್ನು ಸಮಪರ್ಕವಾಗಿ ಮುಗಿಸಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದರಿಂದ ನೀವು ನೀವು ವಿಶ್ವಾಸಾರ್ಹತೆಯನ್ನು ನಿರ್ಮಿಸುವಿರಿ ಮತ್ತು ಜನರು ನಿಮ್ಮ ಮೇಲೆ ಅವಲಂಬಿತರಾಗುತ್ತಾರೆ.
ಕಾರ್ಯಗಳನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸುವುದು ನಿಮ್ಮನ್ನು ಇತರರ ಗಮನಕ್ಕೆ ಬರುವಂತೆ ಮಾಡುತ್ತದೆ. ಇದು ಅದ್ಭುತ ವೃತ್ತಿ ಬೆಳವಣಿಗೆಗೆ ಆಧಾರವಾಗಿದೆ.
ಉತ್ಸಾಹ ಬತ್ತದಿರಲಿ ಹಾಗೂ ಅಗತ್ಯವಿದ್ದಾಗ ಸಂಪರ್ಕದಲ್ಲಿರಿ
ನಿಮ್ಮ ಪ್ರಸ್ತುತಿಯನ್ನು ಮನವರಿಕೆ ಮಾಡಲು ಬತ್ತದ ಉತ್ಸಾಹ ಹಾಗೂ ಅಗತ್ಯತೆ ಮುಖ್ಯವಾಗಿದೆ. ಆಗಾಗ್ಗೆ ಕಚೇರಿಗೆ ಭೇಟಿ ನೀಡಿ ಹಾಗೂ ಸಹೋದ್ಯೋಗಿಗಳೊಂದಿಗೆ ವೇಳಾಪಟ್ಟಿ ಹೊಂದಿಸಿಕೊಳ್ಳಿ.
ಇದರಿಂದ ನೀವು ಅವರನ್ನು ಅದೇ ಸಮಯದಲ್ಲಿ ಕಚೇರಿಯಲ್ಲಿ ಭೇಟಿಮಾಡಬಹುದು. ರಿಮೋಟ್ ವಲಯದಲ್ಲಿ ಕೆಲಸ ಮಾಡುತ್ತಿದ್ದರೆ ಆನ್‌ಲೈನ್ ಮೂಲಕ ಸಂಭಾಷಿಸಿ.
ಸಂವಹನ ಮುಖ್ಯವಾಗಿರುತ್ತದೆ ಹಾಗಾಗಿ ಸಂವಹನದ ನಡುವೆ ಅಂತರ ಎಷ್ಟೇ ಇದ್ದರೂ ನಿಮ್ಮ ಸಂವಹನ ಪರಿಣಾಮಕಾರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಇದನ್ನೂ ಓದಿ: ಇದನ್ನೆಲ್ಲಾ ಸುಮ್ನೆ ಬಿಡಲ್ಲ ಎಂದ ರೋಹಿಣಿ ಸಿಂಧೂರಿ; ಇತ್ತ ದೂರು ದಾಖಲಿಸಿದ ಸುಧೀರ್ ರೆಡ್ಡಿ
ನೀವು 24/7 ಕೆಲಸ ಮಾಡಬೇಕಾಗಿಲ್ಲ ಹಾಗೂ ಆರೋಗ್ಯಕರ ದಿಚನರಿಯನ್ನು ರೂಢಿಸಿಕೊಳ್ಳಿ. ಸಹೋದ್ಯೋಗಿಗಳ ಪ್ರಶ್ನೆಗಳಿಗೆ ಅಥವಾ ವಿನಂತಿಗಳಿಗೆ ತ್ವರಿತವಾಗಿ ಮತ್ತು ಸಂಪೂರ್ಣವಾಗಿ ಪ್ರತಿಕ್ರಿಯಿಸಿ.
ಸಂಪರ್ಕದಲ್ಲಿರಿ
ಸಂಸ್ಥೆಯಲ್ಲಿ ಸಾಕಷ್ಟು ಜನರೊಂದಿಗೆ ಉತ್ತಮ ಒಡನಾಟ ಹೊಂದಿ. ಸಂಸ್ಥೆಯ ಎಲ್ಲಾ ಹಂತಗಳಲ್ಲಿ ಇರುವವರೊಂದಿಗೆ ಸಂವಹನವನ್ನು ಪ್ರಾರಂಭಿಸಿ. ಬೇರೆ ಪ್ರಾಜಕ್ಟ್‌ಗಳಲ್ಲಿ ತೊಡಗಿಕೊಳ್ಳುವುದು, ಹೊಸ ಕೆಲಸವನ್ನು ಅರಿತುಕೊಳ್ಳುವ ಮೂಲಕ ನೀವೆಷ್ಟು ಕ್ರಿಯಾಶೀಲರು ಎಂಬುದನ್ನು ತೋರ್ಪಡಿಸಿ.
ಜಾಬ್‌ಲಿಸ್ಟ್ ಸಮೀಕ್ಷೆಯಲ್ಲಿ, 37.4% ಜನರು ಕಾರ್ಯಗಳಲ್ಲಿ ಸಹೋದ್ಯೋಗಿಗಳಿಗೆ ಸಹಾಯ ಮಾಡುವ ಮೂಲಕ ತಮ್ಮ ಪ್ರಸ್ತುತಿಯನ್ನು ಪ್ರದರ್ಶಿಸಿದ್ದಾರೆ.
ನಿಯಮಿತವಾದ one-on-one ಮೀಟಿಂಗ್‌ಗಳ ಮೂಲಕ ಮತ್ತು ಸಮಸ್ಯೆಗಳಿಗೆ ಸೂಕ್ತವಾಗಿ ಪರಿಹಾರ ನೀಡುವ ಮೂಲಕ ಅಥವಾ ನಿಮ್ಮ ಬಾಸ್‌ಗೆ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಮೂಲಕ ನಿಮ್ಮ ನಾಯಕರೊಂದಿಗೆ ನೀವು ಸಂಪರ್ಕದಲ್ಲಿರುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಕೆಲಸ ಮತ್ತು ನಿಮ್ಮ ಫಲಿತಾಂಶಗಳನ್ನು ಅರ್ಥಪೂರ್ಣ ರೀತಿಯಲ್ಲಿ ಟ್ರ್ಯಾಕ್ ಮಾಡಿ
ಪಾರದರ್ಶಕತೆ ಇರಲಿ
ನಿಮ್ಮ ಮುಕ್ತ ಸಂವಾದ ಹಾಗೂ ಕ್ರಿಯಾತ್ಮಕ ಕೆಲಸದ ಪರಿ ಹೆಚ್ಚಿನ ಸಹೋದ್ಯೋಗಿಗಳನ್ನು ಸೆಳೆಯಬಹುದು ಹಾಗೂ ನಿಮ್ಮೊಂದಿಗೆ ಕೆಲಸ ಮಾಡುವ ಅವರ ಆಸಕ್ತಿಯನ್ನು ಹೆಚ್ಚಿಸಬಹುದು.
ಇದರಿಂದ ನೀವು ವಿಶೇಷ ಪ್ರತಿಭಾವಂತರು ಎಂಬುದು ಕಚೇರಿಯಲ್ಲಿ ಮನವರಿಕೆಯಾಗುತ್ತದೆ. ಕಚೇರಿಯಲ್ಲಿ ಕೆಲಸ ಮಾಡುತ್ತಿರಿ ಇಲ್ಲವೇ ಮನೆಯಿಂದ ಕೆಲಸ ಮಾಡುತ್ತಿರಿ ನಿಮ್ಮ ಪ್ರಸ್ತುತಿಯನ್ನು ಇತರರು ಗಮನಿಸುವಂತೆ ಮಾಡುವುದು ಮುಖ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ