• ಹೋಂ
 • »
 • ನ್ಯೂಸ್
 • »
 • Jobs
 • »
 • Mining Industry: ಗಣಿಗಾರಿಕೆ ಉದ್ಯಮದಲ್ಲಿ ಇದೆ ಭರ್ಜರಿ ಉದ್ಯೋಗಾವಕಾಶಗಳು; 7 ಪ್ರಮುಖ ಮಾಹಿತಿ ತಿಳಿಯಿರಿ

Mining Industry: ಗಣಿಗಾರಿಕೆ ಉದ್ಯಮದಲ್ಲಿ ಇದೆ ಭರ್ಜರಿ ಉದ್ಯೋಗಾವಕಾಶಗಳು; 7 ಪ್ರಮುಖ ಮಾಹಿತಿ ತಿಳಿಯಿರಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಇದೊಂದು ಕುತೂಹಲಕಾರಿ-ರೋಮಾಂಚಕಾರಿ ಆದ ಕ್ಷೇತ್ರವಾಗಿದ್ದು, ಇಲ್ಲಿ ವೃತ್ತಿಜೀವನ ಆರಂಭಿಸಲು ನೀವು ಬಯಸಿದರೆ ನಿಮಗಾಗಿ ಏಳು ಸಲಹೆಗಳು ಇಲ್ಲಿವೆ.

 • Trending Desk
 • 5-MIN READ
 • Last Updated :
 • Share this:

  ಗಣಿಗಾರಿಕೆ ಉದ್ಯಮವು (Mining Industry) ವಿಶ್ವದ ಅತ್ಯಂತ ಹಳೆಯ ಕೈಗಾರಿಕೆಗಳಲ್ಲಿ ಒಂದು. ಭಾರತದಲ್ಲಿ ಗಣಿಗಾರಿಕೆ ಉದ್ಯಮವು ಪ್ರಮುಖ ಆರ್ಥಿಕ ಚಟುವಟಿಕೆಯಾಗಿದ್ದು, ಇದು ದೇಶದ ಆರ್ಥಿಕತೆಗೆ ( Economics) ಗಣನೀಯ ಕೊಡುಗೆ ನೀಡುವ ಕ್ಷೇತ್ರವಾಗಿದೆ. ಚಿನ್ನ, ಬೆಳ್ಳಿ, ತಾಮ್ರ ಹೀಗೆ ಹತ್ತಾರು ಬೆಲೆ ಬಾಳುವ ವಸ್ತುಗಳನ್ನು ಭೂಮಿಯ ಆಳದಿಂದ ತೆಗೆದು ಅದನ್ನು ಬಳಕೆಯ ವಸ್ತುವಾಗಿ ರೂಪಿಸುವ ಈ ಗಣಿಗಾರಿಕೆಯು ಕೋಟಿ ಕೋಟಿ ವ್ಯವಹಾರ ಹೊಂದಿರುವ ಉದ್ಯಮ.


  ಗಣಿಗಾರಿಕೆ ಇತ್ತೀಚಿನ ದಿನಗಳಲ್ಲಿ ಸುರಕ್ಷಿತ, ಹೆಚ್ಚು ಪರಿಣಾಮಕಾರಿ ಮತ್ತು ಹೆಚ್ಚು ಪರಿಸರ ಸ್ನೇಹಿಯಾಗುವತ್ತ ತನ್ನ ದಾಪುಗಾಲು ಹಾಕುತ್ತಿದೆ. ಇದೊಂದು ಕುತೂಹಲಕಾರಿ- ರೋಮಾಂಚಕಾರಿ ಕ್ಷೇತ್ರವಾಗಿದ್ದು, ಇಲ್ಲಿ ವೃತ್ತಿಜೀವನ ಆರಂಭಿಸಲು ನೀವು ಬಯಸಿದರೆ ನಿಮಗಾಗಿ ಏಳು ಸಲಹೆಗಳು ಇಲ್ಲಿವೆ .


  ಗಣಿಗಾರಿಕೆ ಉದ್ಯಮದಲ್ಲಿ ವೃತ್ತಿಜೀವನ ಪ್ರಾರಂಭಿಸಲು 7 ಸಲಹೆಗಳು


  1) ಗಣಿಗಾರಿಕೆಯಲ್ಲಿ ಉದ್ಯೋಗ ಪಡೆಯುವುದು ಒಂದು ಸವಾಲು:  ಗಣಿಗಾರಿಕೆ ಉದ್ಯಮವು ದೇಶದಲ್ಲಿ ಮಾತ್ರವಲ್ಲದೇ ಜಾಗತಿಕವಾಗಿದೆ. ಹೀಗಾಗಿ ಉದ್ಯೋಗವಕಾಶಗಳು ಹೆಚ್ಚಾಗಿಯೇ ಇದೆ. ಆದರೆ ಉದ್ಯೋಗ ಪಡೆಯಲು ಸ್ವಲ್ಪ ಹರಸಾಹಸ ಪಡಬೇಕು. ಗಣಿಗಾರಿಕೆ ಉದ್ಯಮವು ಹೆಚ್ಚು ಸ್ಪರ್ಧಾತ್ಮಕವಾಗಿದ್ದು, ಉತ್ತಮ ಪ್ರತಿಭೆಯ ಹುಡುಕಾಟದಲ್ಲಿ ಅನೇಕ ಕಂಪನಿಗಳಿವೆ. ಗಣಿಗಾರಿಕೆ ಉದ್ಯಮಕ್ಕೆ ಬೇಕಾದ ಅರ್ಹತೆಗಳನ್ನು ನೀವು ಹೊಂದಿದ್ದರೆ ಇಲ್ಲಿ ಕೆಲಸ ಹುಡುಕುವುದು ಸುಲಭವಾಗುತ್ತದೆ.
  ಇಲ್ಲಿ ನೀವು ಗಣಿಗಳನ್ನು ವಿನ್ಯಾಸಗೊಳಿಸುವ ಭೂವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಂದ ಹಿಡಿದು ಪರಿಸರ ವಿಜ್ಞಾನಿಗಳವರೆಗೆ ಸುಮಾರು ಹುದ್ದೆಗಳಲ್ಲಿ ಉದ್ಯೋಗವಕಾಶ ಪಡೆಯಬಹುದು.


  2) ಗಣಿಗಾರಿಕೆ ನೇಮಕಾತಿ ಏಜೆನ್ಸಿಗಳ ಸಹಾಯ ಪಡೆಯಬಹುದು: ಗಣಿ ಉದ್ಯಮದಲ್ಲಿ ವೃತ್ತಿಜೀವನ ಆರಂಭಿಸಬೇಕು ಎಂದು ಬಯಸಿದ್ದರೆ ಅಥವಾ ಅಲ್ಲಿ ಕೆಲಸ ಹುಡುಕುತ್ತಿದ್ದರೆ ನೀವು ಗಣಿಗಾರಿಕೆ ನೇಮಕಾತಿ ಏಜೆನ್ಸಿಗಳ ಸಹಾಯ ಪಡೆಯಬಹುದು.


  ಈ ನೇಮಕಾತಿ ಸಂಸ್ಥೆಗಳು ಈ ಉದ್ಯಮದಲ್ಲಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಸಹಾಯ ಮತ್ತು ಬೆಂಬಲವನ್ನು ಅಭ್ಯರ್ಥಿಗಳಿಗೆ ಒದಗಿಸುತ್ತದೆ.
  * ಕೌಶಲ್ಯ ಮತ್ತು ಅನುಭವವನ್ನು ಹೈಲೈಟ್ ಮಾಡುವ ರೆಸ್ಯೂಮ್‌ ತಯಾರಿಸಲು ಸಹಾಯ ಮಾಡುತ್ತದೆ.
  * ಅಗತ್ಯವಿದ್ದರೆ ವೀಸಾಗಳು ಅಥವಾ ಕೆಲಸದ ಪರವಾನಗಿಗಳನ್ನು ನೀಡುತ್ತದೆ.
  * ಸಂದರ್ಶನಕ್ಕೆ ತರಬೇತಿ ನೀಡುತ್ತದೆ.


  ಏಜೆನ್ಸಿಗಳಿಗೆ ಉದ್ಯೋಗದಾತರು ಅಭ್ಯರ್ಥಿಗಳಿಂದ ಏನು ಬಯಸುತ್ತಾರೆ ಎಂಬುವುದು ತಿಳಿದಿರುವ ಕಾರಣ ಇದು ಅಭ್ಯರ್ಥಿಗಳಿಗೆ ಸಹಾಯವಾಗುತ್ತದೆ. ಇದರರ್ಥ ನಿಮ್ಮ ಕೌಶಲ್ಯ ಮತ್ತು ಅನುಭವದ ಮಟ್ಟಕ್ಕೆ ಸರಿಯಾದ ಹುದ್ದೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ.


  3) ಹೊಸ ವೃತ್ತಿ ಅವಕಾಶಗಳಿಗೆ ತೆರೆದುಕೊಳ್ಳಿ: ಭವಿಷ್ಯದಲ್ಲಿ ಯಾವ ಅವಕಾಶಗಳು ಬರುತ್ತವೆ ಎಂಬುದನ್ನು ನೀವು ಊಹಿಸಲು ಸಾಧ್ಯವಿಲ್ಲ, ಆದ್ದರಿಂದ ಹೊಸ ವೃತ್ತಿ ಅವಕಾಶಗಳಿಗೆ ತೆರೆದುಕೊಳ್ಳುವುದು ಮುಖ್ಯವಾಗಿದೆ.


  ಬದಲಾವಣೆಗೆ ಹೆದರದೇ ನಿಮ್ಮ ಕಂಪರ್ಟ್‌ ಜೋನ್‌ ಬಿಟ್ಟು ಕೆಲಸ ಮಾಡಲು ಸಿದ್ಧವಾಗಿರಿ. ಇದು ನೀವು ಆಯ್ಕೆ ಮಾಡಿದ ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸಹಾಯ ಮಾಡುತ್ತದೆ.
  4) ಟ್ರಾನ್ಸ್‌ಫರ್‌ಗೆ ಸಿದ್ಧವಾಗಿರಿ: ಈ ಉದ್ಯಮವು ಎಲ್ಲಾ ಕಡೆ ಹಬ್ಬಿರುವುದರಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಸ್ಥಳ ಬದಲಾವಣೆಗೆ ಮೊದಲೇ ಸಜ್ಜಾಗಿರಿ.


  5) ಉದ್ಯಮಕ್ಕೆ ತಕ್ಕ ಅನುಭವ ಪಡೆಯುವುದು ಅತ್ಯಗತ್ಯ: ಗಣಿಗಾರಿಕೆ ಉದ್ಯಮದಲ್ಲಿ ಉದ್ಯೋಗ ಆರಂಭಿಸಲು ನೀವು ಸಂಬಂಧಿತ ಅನುಭವವನ್ನು ಹೊಂದಿರಬೇಕು. ಈ ಉದ್ಯಮದಲ್ಲಿ ಪ್ರವೇಶ ಮಟ್ಟದಲ್ಲಿ ಕೆಲಸ ಮಾಡಲು ಕನಿಷ್ಠ ಎರಡು ವರ್ಷಗಳ ಅನುಭವದ ಅಗತ್ಯವಿರುತ್ತದೆ.


  ಅದರಾಚೆ ಕೆಲವು ಕೌಶಲ್ಯಗಳನ್ನು, ಅರ್ಹತೆಗಳನ್ನು ಸಹ ಕಂಪನಿಗಳು ಕೇಳುವುದರಿಂದ ಅಭ್ಯರ್ಥಿಗಳು ಅನುಭವದ ಜೊತೆ ಕೌಶಲ್ಯಗಳನ್ನು ಹೊಂದಿರಬೇಕು.


  6) ಈಗಾಗ್ಲೇ ವೃತ್ತಿಯಲ್ಲಿರುವವರ ಜೊತೆ ಸಂಪರ್ಕದಲ್ಲಿರಿ: ನಿಮ್ಮ ಸಮೀಪದಲ್ಲಿರುವ ಗಣಿಗಳಲ್ಲಿ ಕೆಲಸ ಮಾಡುವ ಜನರೊಂದಿಗೆ ಸಂಪರ್ಕ ಹೊಂದಿರಿ. ಮತ್ತು ಕೆಲಸದ ನೇಮಕಾತಿ ಬಗ್ಗೆ ಅವರ ಬಳಿ ವಿಚಾರಿಸುತ್ತಿರಿ.


  ಇಲ್ಲದಿದ್ದರೆ ಕಂಪನಿಗಳಿಗೆ ಸಂಬಂಧಿಸಿದ ವೆಬ್‌ಸೈಟ್‌ಗಳು ಅಥವಾ ಲಿಂಕ್ಡ್‌ಇನ್ ಪುಟಗಳ ಮೂಲಕ ಕೆಲಸ ಖಾಲಿ ಇದೆಯೇ? ಮುಂದಿನ ನೇಮಕಾತಿ ಯಾವಾಗ? ಎಂಬಿತ್ಯಾದಿ ಮಾಹಿತಿ ಕಲೆ ಹಾಕುತ್ತಿರಿ.


  ಇದನ್ನೂ ಓದಿ: Google Job Course: ಉಚಿತವಾಗಿ ಲಭ್ಯವಿರುವ ಗೂಗಲ್​ನ ಈ 4 ಕೋರ್ಸ್ ಮಾಡಿದ್ರೆ ದೊಡ್ಡ ಸಂಬಳದ ಉದ್ಯೋಗ ನಿಮ್ಮದಾಗುತ್ತೆ


  7) ಪದವಿ ಇಲ್ಲದಿದ್ದರೆ ಕೋರ್ಸ್‌ಗಳನ್ನು ಮಾಡಿ: ನೀವು ಗಣಿಗಾರಿಕೆಯಲ್ಲಿ ವೃತ್ತಿಜೀವನವನ್ನು ಪರಿಗಣಿಸುತ್ತಿದ್ದರೆ, ಸರಿಯಾದ ಅರ್ಹತೆಗಳನ್ನು ಹೊಂದಿರುವುದು ಅತ್ಯಗತ್ಯ. ಇಂಜಿನಿಯರಿಂಗ್, ಭೂವಿಜ್ಞಾನ ಅಥವಾ ಗಣಿಗಾರಿಕೆಯಲ್ಲಿ ಪದವಿ ಹೊಂದಿರಬೇಕು. ಆದಾಗ್ಯೂ ಈ ಪದವಿಗಳನ್ನು ನೀವು ಹೊಂದಿರದಿದ್ದರೆ ಗಣಿ ಸೈಟ್‌ನಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು ಕೆಲವು ಹೆಚ್ಚುವರಿ ತರಬೇತಿಯನ್ನು ಪಡೆದುಕೊಳ್ಳಿ.


  ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಲಭ್ಯವಿರುವ ಕೋರ್ಸ್‌ಗಳು ಗಣಿಗಾರಿಕೆಗೆ ಸಂಬಂಧಿಸಿದ ವಿವಿಧ ಕ್ಷೇತ್ರಗಳಲ್ಲಿ ಗಣಿಗಾರರು ಮತ್ತು ಇಂಜಿನಿಯರ್‌ಗಳಾಗಿ ಕೆಲಸ ಮಾಡಲು ಜನರನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ. ಸಂದರ್ಶನ ತಯಾರಿ, ಸರಿಯಾದ ರೀತಿಯಲ್ಲಿ ಕೆಲಸ ಹುಡುಕುವುದು ಹೀಗೆ ಒಟ್ಟಾರೆ ಸರಿಯಾದ ತಯಾರಿಯೊಂದಿಗೆ ಒಬ್ಬರು ಗಣಿಗಾರಿಕೆ ಉದ್ಯಮದಲ್ಲಿ ಕೆಲಸ ಗಿಟ್ಟಿಸಿಕೊಂಡು ವೃತ್ತಿಜೀವನ ಆರಂಭಿಸಬಹುದು.

  Published by:Kavya V
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು