ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಅನ್ನೋ ಮಾತಿದೆ. ಮಾತಿನಿಂದ ಗೆಲ್ಲಬಹುದಾದ ಸಾಕಷ್ಟು ವಿಷಯಗಳಿವೆ. ಒಬ್ಬರನ್ನು ಬದಲಾಯಿಸುವ, ರೂಪಿಸುವ, ಗೆಲ್ಲುವ ಶಕ್ತಿ ಮಾತಿಗಿದೆ (Power of Speech). ಎಲ್ಲರೂ ಮಾತನಾಡುತ್ತಾರೆ, ಆದರೆ ಉತ್ತಮವಾಗಿ ಮಾತನಾಡುವ ಶೈಲಿಯೂ ಒಂದು ಕಲೆ. ನಮಗೆ ಈ ಸ್ಪೂರ್ತಿ ತುಂಬುವ ಹಲವು ಭಾಷಣಕಾರರ ಭಾಷಣಕಾರರಿದ್ದಾರೆ ( Professional Speaker).
ಮಾತಿನ ಕಲೆಯನ್ನೇ ಬಂಡವಾಳವನ್ನಾಗಿಸಿ ವೃತ್ತಿಜೀವನವನ್ನು ಸಹ ಇದರಿಂದಲೇ ಆರಂಭಿಸಿದ್ದಾರೆ. ಹಾಗಾದರೆ ಇಲ್ಲಿ ನಾವು ವೃತ್ತಿಪರ ಸ್ಪೀಕರ್ ಆಗುವುದು ಹೇಗೆ, ಸುಮಾರು ವರ್ಷ ಇದೇ ವೃತ್ತಿಜೀವನವನ್ನು ಮುಂದುವರೆಸುವುದು ಹೇಗೆ ಅಂತ ನೋಡೋಣ.
ನಿಮ್ಮ ವಿಷಯದ ಬಗ್ಗೆ ಪರಿಣಿತರಾಗಿ
ಮಾತುಗಾರನಾಗಿದ್ದಲ್ಲಿ ಹೆಚ್ಚೆಚು ಓದುವ, ಹೊಸ ವಿಷಯವನ್ನು ತಿಳಿಯುವುದನ್ನು ಕಡ್ಡಾಯವಾಗಿ ಅಳವಡಿಸಿಕೊಂಡಿರಬೇಕು. ಹೀಗಾಗಿ ನೀವು ಯಾವ ವಿಷಯದಲ್ಲಿ ಭಾಷಣೆ ನೀಡುತ್ತೀರೋ, ಸಲಹೆಗಾರರಾಗಿದ್ದೀರೋ ಆ ವಿಷಯದ ಬಗ್ಗೆ ದಿನೇ ದಿನೇ ಪರಿಣಿತರಾಗುವತ್ತ ಚಿತ್ತ ಹರಿಸಿ.
ಇದಕ್ಕೆ ಓದುವುದು ಸುಲಭವಾದ ಕಾರ್ಯತಂತ್ರ. ನಿಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚು ಪರಿಣಿತರ ಪುಸ್ತಕಗಳನ್ನು ಓದಿ, ಸಂಭಾಷಣೆಗಳನ್ನು ಕೇಳಿ. ತಜ್ಞರನ್ನು ಸಂದರ್ಶಿಸಿ, ನಿಮ್ಮ ವಿಷಯದ ಕುರಿತು ತಜ್ಞರ ಅಭಿಪ್ರಾಯಗಳನ್ನು ಪ್ರಸ್ತುತಪಡಿಸುವ ಲೇಖನಗಳು ಮತ್ತು ಬ್ಲಾಗ್‌ಗಳನ್ನು ಬರೆಯಿರಿ.
ಯಾವುದೇ ವಿಷಯದಲ್ಲಿ ಪರಿಣಿತರಾಗಲು ಮುಂದಿನ ಹಂತ ಎಂದರೆ ಅದು ನೀವು ಓದಿದ್ದನ್ನು ಮತ್ತು ಅನುಭವದಿಂದ ಕಲಿತದ್ದನ್ನು ಸಂಶ್ಲೇಷಿಸಿ ಮತ್ತು ವಿಶ್ಲೇಷಿಸುವುದು. ಹೀಗಾಗಿ ನೀವು ಓದಿದ್ದನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿ. ಹೀಗೆ ನಿಮ್ಮ ವಿಷಯದ ಬಗ್ಗೆ ಮತ್ತಷ್ಟು ಜ್ಞಾನ ಹೊಂದಿದ್ದಲ್ಲಿ ದೀರ್ಘ ವೃತ್ತಿಜೀವನ ಇಲ್ಲಿ ನಿಮ್ಮದಾಗುತ್ತದೆ.
ನಿಮ್ಮ ಕರಕುಶಲತೆಯನ್ನು ಅಭ್ಯಾಸ ಮಾಡಿ ಮತ್ತು ಫಲಿತಾಂಶಗಳನ್ನು ಅವಲೋಕಿಸಿ
ಒಮ್ಮೆ ನೀವು ನಿಮ್ಮ ಸ್ವಂತ ಸಿದ್ಧಾಂತಗಳು, ಕಲ್ಪನೆಗಳು ಮತ್ತು ವಿವರಣೆಗಳನ್ನು ಅಭಿವೃದ್ಧಿಪಡಿಸಿದ ನಂತರ, ನೀವು ಬೋಧಿಸುವದನ್ನು ಅಭ್ಯಾಸ ಮಾಡಿ. ಅಂದರೆ, ನಿರ್ದಿಷ್ಟ, ಪ್ರಾಯೋಗಿಕ ಸಂದರ್ಭಗಳಲ್ಲಿ ಕೆಲಸ ಮಾಡಲು ನಿಮ್ಮ ಆಲೋಚನೆಗಳನ್ನು ಇರಿಸಿ. ನಿಮಗೆ ತಿಳಿದಿರುವದನ್ನು ಬಳಸಲು ಮತ್ತು ಫಲಿತಾಂಶಗಳನ್ನು ಅಳೆಯಲು ಅವಕಾಶಗಳನ್ನು ಹುಡುಕಿ.
ನಿಮಗೆ ತಿಳಿದಿರುವ ಸರಿಯಾದ ಮಾಹಿತಿಯನ್ನು ಹಂಚಿರಿ
ಯಾವುದೇ ಸಲಹೆ, ಭಾಷಣ, ಸ್ಪೂರ್ತಿ ತುಂಬುವ ಮಾತುಗಳಲ್ಲಿ ಸರಿಯಾದ ವಿಷಯವನ್ನು ಮಾತ್ರ ಹಂಚಿರಿ. ನಿಮ್ಮ ಪ್ರಸ್ತುತಿಗಳು, ಕಾರ್ಯಕ್ರಮಗಳು ಮತ್ತು ಪ್ರಕ್ರಿಯೆಗಳನ್ನು ಉತ್ತಮವಾಗಿ ಹೊಂದಿಸುವಲ್ಲಿ ಉತ್ತಮರಾಗಿರಿ ಇದು ನಿಮ್ಮ ಮಾತಿನ ಮೇಲಿನ ನಂಬಿಕೆ, ಭರವಸೆಯನ್ನು ಹೆಚ್ಚಿಸಿ ವೃತ್ತಿಜೀವನದಲ್ಲಿ ದೀರ್ಘಕಾಲ ಉಳಿಯಲು ಸಹಾಯ ಮಾಡುತ್ತದೆ.
ಮಾತಿನ ಮಧ್ಯೆ ಸಣ್ಣ ನಗೆ ಚಟಾಕಿ ಇರಲಿ
ನಿಮ್ಮ ಉದ್ದೇಶವು ನಿಮ್ಮ ಆಲೋಚನೆಗಳನ್ನು ಇತರರಿಗೆ ಪ್ರಸ್ತುತಪಡಿಸುವಲ್ಲಿ ಪಾಂಡಿತ್ಯವನ್ನು ಅಭಿವೃದ್ಧಿಪಡಿಸುವುದು, ವಿಶಿಷ್ಟ ವಿವರಣೆಗಳು, ಸಾದೃಶ್ಯಗಳು, ರೂಪಕಗಳನ್ನು ಅಭಿವೃದ್ಧಿಪಡಿಸುವುದನ್ನು ಒಳಗೊಂಡಿರುತ್ತದೆ.
ನಿಮ್ಮ ಕೆಲಸವನ್ನು ಪ್ರಸ್ತುತಪಡಿಸಲು ನೀವು ಬಳಸುವ ಅಗತ್ಯ ತಂತ್ರಜ್ಞಾನವನ್ನು ಮಾಸ್ಟರಿಂಗ್ ಮಾಡಿ. ಮಾತಿನ ಮಧ್ಯೆ ಸಣ್ಣ ನಗೆ ಚಟಾಕಿ ಇರಲಿ, ಗಂಭಿರ ವಿಷಯದಲ್ಲೂ ಇದನ್ನು ಬಳಸಿಕೊಳ್ಳಬಹುದು.
ಒಳ್ಳೆಯ ಮಾತುಗಾರ, ಸಲಹೆಗಾರ ಆಗಿ ಕೆರಿಯರ್ ಆರಂಭಿಸುವ ಮುನ್ನ ನಿಮ್ಮ ವಿಷಯವನ್ನು ಅಭಿವೃದ್ಧಿಪಡಿಸಲು ಮೊದಲಿಗೆ ಯಾವುದೇ ಹಣ ತೆಗೆದುಕೊಳ್ಳದೇ ಉಚಿತವಾಗಿ ಮಾತನಾಡಿ. ಲಯನ್ಸ್ ಕ್ಲಬ್ ಆಗಿರಬಹುದು, ಬೇರೆ ಇನ್ಯಾವುದೋ ಅಸೋಸಿಯೇಷನ್, ವಸತಿ ಕೇಂದ್ರ ಹೀಗೆ ಇಲ್ಲಿಂದ ಆರಂಭಿಸಿ.
ನಿಮ್ಮ ದೌರ್ಬಲ್ಯಗಳನ್ನು ಬಲಪಡಿಸಲು ತರಬೇತಿ ಪಡೆಯಿರಿ
ನಿಮ್ಮ ಪ್ಲಸ್‌ಗಿಂತ ನಿಮ್ಮ ಮೈನಸ್ ಅಂದರೆ ದೌರ್ಬಲ್ಯತೆಗಳ ಬಗ್ಗೆ ತಿಳಿಯಿರಿ. ಅವುಗಳನ್ನು ಬಲಪಡಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಿ. ಕೆಲವರಿಂದ ಅಭಿಪ್ರಾಯ ಪಡೆದು ಎಲ್ಲಿ ಸರಿಮಾಡಿಕೊಳ್ಳಬಹುದು ಎಂದು ತಿಳಿಯಿರಿ.
ಕೆಲ ಭಾಷಣಕಾರರು ತುಂಬಾ ವೇಗವಾಗಿ ಮಾತನಾಡುತ್ತಾರೆ. ಇದರಿಂದ ವಿಷಯ ಅರ್ಥ ಮಾಡಿಕೊಳ್ಳುವುದು ಜನರಿಗೆ ಕಷ್ಟವಾಗಬಹುದು. ಹೀಗೆ ಇಂತಹ ವಿಷಯಗಳ ಬಗ್ಗೆ ತಿಳಿಯಿರಿ. ದೌರ್ಬಲ್ಯಗಳನ್ನು ಶಕ್ತಿಯನ್ನಾಗಿ ಪರಿವರ್ತಿಸುವುದರಿಂದ ನಿಮ್ಮ ವೃತ್ತಿಜೀವನ ಹೊಸ ಮಟ್ಟಕ್ಕೆ ನಿಮ್ಮನ್ನು ತಲುಪಿಸಲು ಸಹಾಯ ಮಾಡುತ್ತದೆ..
ನಿಮ್ಮ ಶುಲ್ಕವನ್ನು ನೀವೇ ನಿರ್ಧರಿಸಿ
ಯಾವುದೇ ಸಲಹೆ, ಭಾಷಣ ಏನೇ ಇದ್ದರೂ ನಿಮ್ಮ ಕಾರ್ಯಕ್ರಮದ ಅವಧಿಯ ಶುಲ್ಕವನ್ನು ನೀವೇ ನಿರ್ಧಾರ ಮಾಡಿ. ಇದನ್ನು ಧನಾತ್ಮಕ ರೀತಿಯಲ್ಲಿ ಕೊಂಡೊಯ್ಯಲು ಮರೆಯದಿರಿ.
ಮಾರುಕಟ್ಟೆಯಲ್ಲಿ ನಿಮ್ಮ ಪರಿಣತಿ ಮತ್ತು ವಿಶ್ವಾಸಾರ್ಹತೆಯನ್ನು ವಿಸ್ತರಿಸಲು ಮಾಧ್ಯಮವನ್ನು ಬಳಸಿ
ಸಾಮಾಜಿಕ ಮಾಧ್ಯಮಗಳನ್ನು ವೇದಿಕೆಯಾಗಿ ತೆಗೆದುಕೊಳ್ಳಿ. ನಿಮ್ಮ ಕಾರ್ಯಕ್ರಮ, ನೀವು ಕೊಟ್ಟ ಸ್ಪೀಚ್ ಕಾರ್ಯಕ್ರಮ ಎಲ್ಲವನ್ನೂ ನಿಮ್ಮದೇ ಸಾಮಾಜಿಕ ಮಾಧ್ಯಮದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿರಿ.
ಇದನ್ನೂ ಓದಿ: Career Tips: ಕಂಪನಿ ನಿಮಗೆ ಯಾವ ಆಧಾರದ ಮೇಲೆ ಪ್ರೊಮೋಷನ್, ಸ್ಯಾಲರಿ ಹೈಕ್ ನೀಡುತ್ತೆ ಗೊತ್ತೇ?
ಇದು ನಿಮ್ಮ ಜನಪ್ರಿಯತೆಯನ್ನು ಕೂಡ ಹೆಚ್ಚಿಸಲು ಅನುಕೂಲವಾಗಿರುತ್ತದೆ. ಹೆಚ್ಚಿನ ಮಾಧ್ಯಮ ಪ್ರಸಾರವು ಹೆಚ್ಚಿನ ನಿಮ್ಮ ಪ್ರಚಾರಕ್ಕೆ ಕಾರಣವಾಗುತ್ತದೆ, ಅದು ಹೆಚ್ಚಿನ ವ್ಯಾಪಾರ ಅವಕಾಶಗಳಿಗೆ ಕಾರಣವಾಗುತ್ತದೆ.
ಸಾಮಾನ್ಯ ಒತ್ತಡಗಳನ್ನು ನಿಭಾಯಿಸಲು ಕಲಿಯಿರಿ
ಎಲ್ಲಾ ಕ್ಷೇತ್ರದಲ್ಲಿ ಸವಾಲಿನ ಸ್ಥಿತಿಗಳು ಎದುರಾಗುತ್ತವೆ. ಇಲ್ಲೂ ಸಹ ಶುಲ್ಕ, ವಿಷಯ, ಪ್ರತಿಸ್ಪರ್ಧಿಯಂತಹ ವಿಷಯಗಳು ಸವಾಲಾಗಬಹುದು. ಇಂತಹ ಸಾಮಾನ್ಯ ಒತ್ತಡಗಳನ್ನು ನಿಭಾಯಿಸಲು ಕಲಿಯಿರಿ. ಇವುಗಳನ್ನು ಹೊರೆ ಮಾಡಿಕೊಳ್ಳದೇ ಸುಲಭವಾಗಿ ಬಗೆಹರಿಸುವ ಪ್ರಯತ್ನ ಮಾಡಿ.
ಕಾಮೆಂಟ್, ವಿಮರ್ಶೆ ಪಡೆದುಕೊಳ್ಳಿ
ಕೇಳುಗರ ಬಳಿ ನಿಮ್ಮ ವಾಚನದ ಬಗ್ಗೆ ಸಲಹೆ, ವಿಮರ್ಶೆ ಪಡೆಯಲು ಹಿಂಜರಿಯಬೇಡಿ. ಇದು ನಿಮ್ಮನ್ನು ಮತ್ತಷ್ಟು ಸಂಪನ್ಮೂಲ ವ್ಯಕ್ತಿಯನ್ನಾಗಿಸಲು ಸಹಕರಿಸುತ್ತದೆ. ಮುಕ್ತ ಮನಸ್ಸಿನಿಂದ ಎಲ್ಲವನ್ನೂ ಸ್ವೀಕರಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ