• Home
  • »
  • News
  • »
  • jobs
  • »
  • Job in USA: ಅಮೆರಿಕಾದಲ್ಲಿ ಉದ್ಯೋಗ ಪಡೆಯುವುದು ಹೇಗೆ, ಯಾವೆಲ್ಲಾ ದಾಖಲೆಗಳು ಬೇಕು?

Job in USA: ಅಮೆರಿಕಾದಲ್ಲಿ ಉದ್ಯೋಗ ಪಡೆಯುವುದು ಹೇಗೆ, ಯಾವೆಲ್ಲಾ ದಾಖಲೆಗಳು ಬೇಕು?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಯುಎಸ್‌ನಲ್ಲಿ ಉದ್ಯೋಗ ಹುಡುಕಲು ಮೊದಲಿಗೆ ಅಲ್ಲಿನ ಉದ್ಯೋಗಗಳನ್ನು ಪಟ್ಟಿ ಮಾಡುವ ಉದ್ಯೋಗ ಪೋರ್ಟಲ್‌ಗಳ ಮೇಲೆ ಭಾರತೀಯ ಆಕಾಂಕ್ಷಿಗಳು ಕಣ್ಣು ಹಾಯಿಸಬೇಕು.

  • Trending Desk
  • 5-MIN READ
  • Last Updated :
  • Share this:

    ಇತ್ತೀಚೆಗೆ ಅಬ್ರಾಡ್‌ಗಳಲ್ಲಿ (Foreign) ಉದ್ಯೋಗ ಅವಕಾಶಗಳನ್ನು (Job in USA) ನೋಡುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಭಾರತೀಯರಿಗೆ ವಿದೇಶಗಳಲ್ಲಿ ಅದರಲ್ಲೂ ಯುಎಸ್‌ನಂತಹ ದೇಶಗಳಲ್ಲಿ ಕೆಲಸ ಮಾಡೋದು ಅಂದರೆ ಒಂಥರ ಒಲವು. ಅನೇಕರು ಓದು, ಉದ್ಯೋಗ (job) ಅಂತಾ ಅಮೆರಿಕಾಕ್ಕೆ ವಲಸೆ ಬರುತ್ತಿರುವ ಸಾಕಷ್ಟು ಅಂಕಿಅಂಶಗಳು ದಾಖಲಾಗುತ್ತಲೇ ಇರುತ್ತದೆ. ಅಮೆರಿಕಾದ ಕೆಲಸದ ಸಂಸ್ಕೃತಿ, ಉತ್ತಮ ಸೌಲಭ್ಯ ಉದ್ಯೋಗಿಗಳನ್ನು ಕೈಬೀಸಿ ಕರೆಯುತ್ತದೆ.


    ಅಮೆರಿಕಾದಲ್ಲಿ ಉದ್ಯೋಗ


    ಯುನೈಟೆಡ್ ಸ್ಟೇಟ್ಸ್ ಆಫ್  ಅಮೆರಿಕಾ ಶಿಕ್ಷಣ ಮತ್ತು ಕೆಲಸದ ಅನುಭವಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ಕಡಿಮೆ ಶಿಕ್ಷಣ ಹೊಂದಿದ್ದವರು ಇಲ್ಲಿ ಉದ್ಯೋಗ ಹುಡುಕುವುದು ದೊಡ್ಡ ಸವಾಲು. ಆದರೆ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಿಂದ ಪದವಿ ಹೊಂದಿದ್ದರೆ ಅಥವಾ ಕೆಲವು ವರ್ಷಗಳ ಉತ್ತಮ ಕೆಲಸದ ಅನುಭವವನ್ನು ಹೊಂದಿದ್ದರೆ, ಇಲ್ಲಿ ಉತ್ತಮ ಉದ್ಯೋಗವಕಾಶಗಳು ಲಭ್ಯವಿವೆ.


    ಜೀವನದಲ್ಲಿ ಆರ್ಥಿಕವಾಗಿ ಉತ್ತಮವಾಗಿರಲು ಬಯಸುವವರು ಇತರ ದೇಶಗಳಲ್ಲಿ ಉದ್ಯೋಗ ಪಡೆಯುವ ಮಾರ್ಗಗಳನ್ನು ಅನುಸರಿಸುತ್ತಾರೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಕೆಲಸ ಮಾಡಲು ಮತ್ತು ಸಂತೋಷದ ಜೀವನವನ್ನು ನಡೆಸಲು ಸಾಕಷ್ಟು ಹಣವನ್ನು ಗಳಿಸಲು ಉತ್ತಮ ದೇಶಗಳಲ್ಲಿ ಒಂದಾಗಿದೆ. ಇಲ್ಲಿ ಉದ್ಯೋಗಿಗಳಿಗೆ ವೇತನ, ಸೌಲಭ್ಯ ಎಲ್ಲವೂ ಉತ್ತಮವಾಗಿರುವುದರಿಂದ ಉದ್ಯೋಗಿಗಳು ಇಲ್ಲಿ ಕೆಲಸ ಮಾಡಲು ಮನಸ್ಸು ಮಾಡುತ್ತಾರೆ.




    ಹಾಗಾದರೆ ಅಮೆರಿಕಾದಲ್ಲಿ ಭಾರತೀಯರು ಉದ್ಯೋಗ ಪಡೆಯುವುದು ಹೇಗೆ ಎಂಬುದರ ಬಗ್ಗೆ ಆಳ-ಅಗಲ ಮಾಹಿತಿಯನ್ನು ಇಲ್ಲಿ ತಿಳಿಯೋಣ.


    ಭಾರತದಿಂದ ಯುಎಸ್‌ನಲ್ಲಿ ಉದ್ಯೋಗ ಪಡೆಯುವುದು ಹೇಗೆ?


    ಯುಎಸ್‌ನಲ್ಲಿ ಉದ್ಯೋಗ ಹುಡುಕಲು ಮೊದಲಿಗೆ ಅಲ್ಲಿನ ಉದ್ಯೋಗಗಳನ್ನು ಪಟ್ಟಿ ಮಾಡುವ ಉದ್ಯೋಗ ಪೋರ್ಟಲ್‌ಗಳ ಮೇಲೆ ಭಾರತೀಯ ಆಕಾಂಕ್ಷಿಗಳು ಕಣ್ಣು ಹಾಯಿಸಬೇಕು. ನಿಮ್ಮ ಪದವಿ, ಕೆಲಸದ ಅನುಭವಗಳ ಮೇಲೆ ನಿಮಗೆ ಹೊಂದುವ ಕೆಲಸದ ಆಯ್ಕೆ ಸಿಕ್ಕ ಕೂಡಲೇ ನಿಮ್ಮ ಕೌಶಲ್ಯ ಮತ್ತು ಕೆಲಸದ ಅನುಭವಗಳನ್ನು ಹೈಲೈಟ್ ಮಾಡುವ ರೆಸ್ಯೂಮ್‌ಗಳನ್ನು ನೀವು ಕಳಿಸಬೇಕು.


    ಯುಎಸ್‌ನಲ್ಲಿ ಉದ್ಯೋಗವನ್ನು ಪಡೆಯಲು ಬೇಕಿರುವ ಅವಶ್ಯಕತೆಗಳು ಯಾವುವು?


    ಇಲ್ಲಿ ಉದ್ಯೋಗ ಪಡೆಯಲು ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸುವ ಅಗತ್ಯವಿದೆ. ಅವುಗಳಲ್ಲಿ ಪ್ರಮುಖವಾದದ್ದು ಮಾನ್ಯವಾದ ಕೆಲಸದ ವೀಸಾವನ್ನು ಹೊಂದಿರುವುದು. ನಂತರ, ನೀವು ಉತ್ತಮ ಶಿಕ್ಷಣ ಮತ್ತು ಕೆಲಸದ ಅನುಭವವನ್ನು ಹೊಂದಿರಬೇಕು. ಇದಲ್ಲದೆ ಇಲ್ಲಿ ಉದ್ಯೋಗದಾತರು ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡುವ ಜನರಿಗೆ ಆದ್ಯತೆ ನೀಡುತ್ತಾರೆ. ಹೀಗಾಗಿ ಉದ್ಯೋಗಿಗಳು ಇಂಗ್ಲಿಷ್‌ ಭಾಷೆ ಜ್ಞಾನ ಹೊಂದಿರಬೇಕು.


    USA ನಲ್ಲಿ ಉದ್ಯೋಗವನ್ನು ಪಡೆಯಲು ಉತ್ತಮ ಮಾರ್ಗ ಯಾವುದು?


    USA ನಲ್ಲಿ ಉದ್ಯೋಗವನ್ನು ಪಡೆಯಲು ಉತ್ತಮ ಮಾರ್ಗವೆಂದರೆ ನೀವು ಯಾವುದರಲ್ಲಿ ಉತ್ತಮರು ಎಂಬುದನ್ನು ಗುರುತಿಸುವುದು ಮತ್ತು ನಂತರ ನಿಮ್ಮ ಕೌಶಲ್ಯಕ್ಕೆ ಹೊಂದಿಕೆಯಾಗುವ ಉದ್ಯೋಗಗಳನ್ನು ಹುಡುಕುವುದು. ಒಮ್ಮೆ ನೀವು ನಿಮಗೆ ಹೊಂದಿಕೆಯಾಗುವ, ನಿಮ್ಮ ಅನುಭವಕ್ಕೆ ತಕ್ಕ ಉದ್ಯೋಗವನ್ನು ಗುರುತಿಸಿದ ನಂತರ ಒಂದೊಳ್ಳೆ ರೆಸ್ಯೂಮ್‌ ತಯಾರಿಸಿ ಸಂಬಂಧಪಟ್ಟವರಿಗೆ ಕಳುಹಿಸಬೇಕು.


    Will Americas economic setback affect Indias tech giants stg asp
    ಸಾಂಕೇತಿಕ ಚಿತ್ರ


    ಅಮೆರಿಕಾದಲ್ಲಿ ಉದ್ಯೋಗವನ್ನು ಪಡೆಯುವ ಇನ್ನೊಂದು ಮಾರ್ಗವೆಂದರೆ ವಲಸೆ ಏಜೆನ್ಸಿಯ ನೆರವು ಪಡೆಯಬಹುದು, ಇದು ಉದ್ಯೋಗಗಳನ್ನು ಹುಡುಕಲು ಜನರಿಗೆ ಸಹಾಯ ಮಾಡುತ್ತದೆ. ಅಥವಾ ನಿಮಗೆ ಈಗಾಗಲೇ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಕೆಲಸ ಮಾಡುತ್ತಿರುವವರ ಸಂಪರ್ಕ ಇದ್ದರೆ ಅವರ ಮೂಲಕ ಸಹ ಮಾಹಿತಿ ಪಡೆಯಬಹುದು.


    ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು ಹೊಂದಿರಬೇಕಾದ ದಾಖಲೆಗಳು
    - ಭಾರತ ಅಥವಾ ವಿದೇಶದಲ್ಲಿರುವ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ.
    - ಕೆಲಸದ ಅನುಭವದ ಪ್ರತಿ
    - ಇಂಗ್ಲಿಷ್ ಭಾಷೆಯ ಅತ್ಯುತ್ತಮ ಪಾಂಡಿತ್ಯ, ಬರವಣಿಗೆ ಮತ್ತು ಮಾತನಾಡುವ ಕೌಶಲ್ಯ
    - ಮಾನ್ಯ ಭಾರತೀಯ ಗುರುತಿನ ಚೀಟಿ
    - ಪಾಸ್‌ಪೋರ್ಟ್ ಮತ್ತು ವೀಸಾ (ವರ್ಕ್ ವೀಸಾ)


    ಇತರೆ ಅಗತ್ಯ ದಾಖಲೆಗಳು
    - ಕಂಪನಿ ದಾಖಲೆಗಳು (ವಲಸೆ ಏಜೆನ್ಸಿ ಮೂಲಕ ಅರ್ಜಿ ಸಲ್ಲಿಸಿದರೆ) - ಪದವಿ ಪ್ರಮಾಣಪತ್ರಗಳು ಮತ್ತು ಪ್ರತಿಗಳು (ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮಾತ್ರ). H-1B ವೀಸಾಗೆ ಅರ್ಜಿ ಸಲ್ಲಿಸುವಾಗ ಇವುಗಳು ಬಹಳ ಮುಖ್ಯವಾಗುತ್ತದೆ.
    - IELTS/TOEFL ಸ್ಕೋರ್‌ಕಾರ್ಡ್
    - USA ನಲ್ಲಿರುವ ಕಂಪನಿಯಿಂದ ಉದ್ಯೋಗದ ಪ್ರಸ್ತಾಪ ಪತ್ರ


    USA ನಲ್ಲಿ ಉದ್ಯೋಗ ಪಡೆಯಲು ಎಷ್ಟು ಸಮಯ ಬೇಕು?


    USA ನಲ್ಲಿ ಉದ್ಯೋಗ ಪಡೆಯಲು ಇದು ಸಾಮಾನ್ಯವಾಗಿ ಕೆಲವು ವಾರಗಳು ಅಥವಾ ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಆದಾಗ್ಯೂ, ಉದ್ಯೋಗವನ್ನು ಪಡೆಯಲು ತೆಗೆದುಕೊಳ್ಳುವ ಸಮಯವು ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.


    a monkeypox health emergency has been declared in the america
    ಅಮೆರಿಕ ಅಧ್ಯಕ್ಷ ಜೋ ಬೈಡನ್


    ಉದಾಹರಣೆಗೆ ನೀವು ಕಂಪನಿ ಬಗ್ಗೆ ತಿಳಿದುಕೊಂಡಿರುವ ಬಗ್ಗೆ ಮತ್ತು ನೀವು ಅರ್ಜಿ ಸಲ್ಲಿಸುತ್ತಿರುವ ಸ್ಥಾನ, ಇಂಗ್ಲಿಷ್‌ನಲ್ಲಿ ನಿಮ್ಮ ನಿರರ್ಗಳತೆ ಮತ್ತು ನಿಮ್ಮ ಅರ್ಜಿಯೊಂದಿಗೆ ನೀವು ಸಲ್ಲಿಸಿದ ದಾಖಲೆಗಳು ಇವುಗಳ ಮೇಲೂ ಸಮಯ ಅವಲಂಬಿತವಾಗಿರುತ್ತದೆ.


    ಕನ್ಸಲ್ಟೆನ್ಸಿ ಮೂಲಕ ಭಾರತದಿಂದ ಯುಎಸ್‌ನಲ್ಲಿ ಉದ್ಯೋಗ ಪಡೆಯುವುದು ವಿಧಾನ ಏನು?


    ಅಮೆರಿಕಾದಲ್ಲಿ ಉದ್ಯೋಗವನ್ನು ಪಡೆಯಲು ನೀವು ಯಾವ ರೀತಿಯ ಕೆಲಸವನ್ನು ಮಾಡಲು ಬಯಸುತ್ತೀರಿ ಎಂಬುದನ್ನು ಕನ್ಸಲ್ಟೆನ್ಸಿಗೆ ತಿಳಿಸಬೇಕು. ಅವರು ನಿಮಗೆ ಅಂತಹ ಅವಕಾಶಗಳು ಇದ್ದಲ್ಲಿ ತಿಳಿಸುತ್ತಾರೆ. ಅ ಮೂಲಕ ನೀವು ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು.


    ನೀವು ವಲಸೆ ಸಲಹಾ ಸಂಸ್ಥೆಯ ಮೂಲಕ ಉದ್ಯೋಗವನ್ನು ಪಡೆಯಲು ಬಯಸಿದರೆ, ನಿಮ್ಮ ರೆಸ್ಯೂಮ್, IELTS/TOEFL ಸ್ಕೋರ್‌ಕಾರ್ಡ್, ಕೆಲಸದ ಅನುಭವ ಪ್ರಮಾಣಪತ್ರಗಳು ಮತ್ತು ಪದವಿ ಪ್ರಮಾಣಪತ್ರಗಳಂತಹ ದಾಖಲೆಗಳನ್ನು ನೀವು ಅವರಿಗೆ ಒದಗಿಸಬೇಕು.


    ಸಲಹಾ ಸಂಸ್ಥೆಯು ನಿಮಗೆ ಸಂಬಂಧಿತ ವೀಸಾಕ್ಕೆ ಅರ್ಜಿ ಸಲ್ಲಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಕೌಶಲ್ಯ ಮತ್ತು ಅನುಭವಕ್ಕೆ ಹೊಂದಿಕೆಯಾಗುವ USA ನಲ್ಲಿ ಉದ್ಯೋಗವನ್ನು ಹುಡುಕುವಲ್ಲಿ ನಿಮಗೆ ಸಹಾಯ ಮಾಡುತ್ತದೆ.


    ಭಾರತೀಯರು MBA ನಂತರ ಅಮೇರಿಕಾದಲ್ಲಿ ಉದ್ಯೋಗ ಪಡೆಯುವುದು ಹೇಗೆ?


    ಭಾರತೀಯರು MBA ಪೂರ್ಣಗೊಳಿಸಿದ ನಂತರ USA ನಲ್ಲಿ ಕೆಲಸ ಪಡೆಯಲು ಉತ್ತಮ ಮಾರ್ಗವೆಂದರೆ ಈಗಾಗಲೇ ಕೆಲಸ ಮಾಡುವ ಜನರೊಂದಿಗೆ ಸಂಪರ್ಕ ಹೊಂದುವುದು.


    ಅವರು ಮಾಡುವ ಕೆಲಸದ ಪ್ರಕಾರವನ್ನು ಆಧರಿಸಿ ನೀವು ಕೆಲವು ಕಂಪನಿಗಳನ್ನು ಹುಡುಕಬಹುದು. ಸೂಕ್ತ ಕಂಪನಿ ದೊರೆತ ನಂತರ ಉದ್ಯೋಗಾಂಕ್ಷಿಗಳು ಭಾಷೆಯಲ್ಲಿ ನಿಮ್ಮ ನಿರರ್ಗಳತೆಯನ್ನು ಸಾಬೀತುಪಡಿಸಲು IELTS ಅಥವಾ TOEFL ನಂತಹ ಇಂಗ್ಲಿಷ್ ಪ್ರಾವೀಣ್ಯತೆಯ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.


    ಅಮೆರಿಕಾದಲ್ಲಿ ಭಾರತೀಯರು ಸಾಫ್ಟ್‌ವೇರ್ ಉದ್ಯೋಗವನ್ನು ಹೇಗೆ ಪಡೆಯುವುದು?


    ಅಮೆರಿಕಾದಲ್ಲಿ ಸಾಫ್ಟ್‌ವೇರ್ ಉದ್ಯೋಗ ಬೇಕೆಂದಿದ್ದರೆ, ಭಾರತ ಅಥವಾ ವಿದೇಶದಲ್ಲಿರುವ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ವಿಜ್ಞಾನ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
    - ನಿಮ್ಮ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಕೆಲಸದ ಅನುಭವ.
    - ಇಂಗ್ಲಿಷ್ ಭಾಷೆಯ ಅತ್ಯುತ್ತಮ ಪಾಂಡಿತ್ಯ, ಬರವಣಿಗೆ ಮತ್ತು ಮಾತನಾಡುವ ಎರಡೂ ಜ್ಞಾನವಿರಬೇಕು.
    - ಮಾನ್ಯ ಭಾರತೀಯ ಗುರುತಿನ ಚೀಟಿ


    countries that give visa on arrival to Indians
    ಸಾಂದರ್ಭಿಕ ಚಿತ್ರ


    B. ಟೆಕ್ ನಂತರ ಭಾರತೀಯರು USA ನಲ್ಲಿ ಉದ್ಯೋಗ ಪಡೆಯುವುದು ಹೇಗೆ?


    B. ಟೆಕ್ ಪದವಿ ಹೊಂದಿರುವವರು ಕೂಡ ಸಾಮಾನ್ಯವಾಗಿ ಅಮೆರಿಕಾದಲ್ಲಿ ಉದ್ಯೋಗ ಹುಡುಕುತ್ತಿರುವವರ ಕೆಲವು ಅದೇ ಮಾರ್ಗವನ್ನು ಅನುಸರಿಸಬೇಕಾಗುತ್ತದೆ. ಅಲ್ಲಿನ ಪರಿಚಯಸ್ಥರ ಜೊತೆ ಮಾಹಿತಿ, ಉದ್ಯೋಗ ಪೋರ್ಟಲ್‌ನಲ್ಲಿ ಹುಡುಕಾಟ, ಇಂಗ್ಲಿಷ್‌ ಜ್ಞಾನ, ರೆಸ್ಯೂಮ್‌ ಕಳುಹಿಸುವಿಕೆ ಹೀಗೆ ಕೆಲ ಕ್ರಮಗಳನ್ನು ತೆಗೆದುಕೊಳ್ಳಬೇಕು.


    ಭಾರತದಿಂದ USA ನಲ್ಲಿ ನರ್ಸ್ ಉದ್ಯೋಗವನ್ನು ಹೇಗೆ ಪಡೆಯುವುದು?


    ಮಾನ್ಯ ನರ್ಸಿಂಗ್ ಪರವಾನಗಿ, ಇಂಗ್ಲಿಷ್‌ ಜ್ಞಾನ ಮತ್ತು ಸಂಬಂಧಿತ ಕೆಲಸದ ಅನುಭವವನ್ನು ಹೊಂದಿರಬೇಕು. ಈ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೆ ನೀವು ವಿವಿಧ ವೆಬ್‌ಸೈಟ್‌ಗಳಲ್ಲಿ ಅಥವಾ ಸ್ಥಳೀಯ ಉದ್ಯೋಗ ಏಜೆನ್ಸಿಗಳ ಮೂಲಕ ಉದ್ಯೋಗಗಳನ್ನು ಹುಡುಕಲು ಪ್ರಾರಂಭಿಸಬಹುದು.


    ಶಿಕ್ಷಕರ ಕೆಲಸವನ್ನು ಹೇಗೆ ಪಡೆಯುವುದು?


    USA ನಲ್ಲಿ ಶಿಕ್ಷಕರ ಕೆಲಸವನ್ನು ಹುಡುಕುತ್ತಿದ್ದರೆ, ಮಾನ್ಯವಾದ ಬೋಧನಾ ಪರವಾನಗಿ ಮತ್ತು ಹಲವಾರು ವರ್ಷಗಳ ಕೆಲಸದ ಅನುಭವವನ್ನು ಹೊಂದಿರುವುದು ಅತ್ಯಗತ್ಯ. ನೀವು ವಿವಿಧ ವೆಬ್‌ಸೈಟ್‌ಗಳು ಅಥವಾ ಸ್ಥಳೀಯ ಉದ್ಯೋಗ ಏಜೆನ್ಸಿಗಳಲ್ಲಿ ಉದ್ಯೋಗಗಳನ್ನು ಹುಡುಕಬಹುದು.


    USA ನಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಸಮಯ ಮತ್ತು ಶ್ರಮ ಎರಡೂ ಬೇಕಾಗುತ್ತದೆ. ಆದ್ದರಿಂದ ಉದ್ಯೋಗಾಂಕ್ಷಿಗಳು ತಾಳ್ಮೆಯಿಂದ ಕಾಯಬೇಕು. ಹಾಗೆಯೇ ಕಂಪನಿಗೆ ಕಳುಹಿಸುವ ನಿಮ್ಮ ದಾಖಲೆಗಳು ತುಂಬಾ ನಿಖರವಾಗಿಬೇಕು.


    ಅಮೆರಿಕಾ ದೇಶದಲ್ಲಿರುವ ಅನೇಕ ಕಂಪನಿಗಳು ಉದ್ಯೋಗಾಂಕ್ಷಿಗಳಿಗೆ ಸಹಾಯ ಮಾಡಲು ಮುಂದಾಗುತ್ತವೆ. ಹೀಗೆ ಇಂತಹ ಕಂಪನಿಗಳ ಸಹಾಯ, ವಲಸೆ ಸಲಹಾ ಸಂಸ್ಥೆಯ ಸಲಹೆ, ಉದ್ಯೋಗ ಪೋರ್ಟಲ್‌ ಮೂಲಕ ನಿಮ್ಮ ಅಮೆರಿಕಾದ ಕನಸಿನ ಕೆಲಸವನ್ನು ಸುಲಭವಾಗಿ ಪಡೆಯಬಹುದು.

    Published by:Kavya V
    First published: