• ಹೋಂ
  • »
  • ನ್ಯೂಸ್
  • »
  • Jobs
  • »
  • PUC ನಂತರ ಕೋರ್ಸ್ ಆಯ್ಕೆ ಮಾಡುವಾಗ ಎಲ್ಲರೂ ಮಾಡುವ ಈ ತಪ್ಪನ್ನು ನೀವು ಮಾಡಬೇಡಿ

PUC ನಂತರ ಕೋರ್ಸ್ ಆಯ್ಕೆ ಮಾಡುವಾಗ ಎಲ್ಲರೂ ಮಾಡುವ ಈ ತಪ್ಪನ್ನು ನೀವು ಮಾಡಬೇಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

Right Career Path:  12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ನಂತರ ಮುಂದೆ ಏನು ಮಾಡಬೇಕೆಂದು ಗೊತ್ತಿಲ್ಲದ ವಿದ್ಯಾರ್ಥಿಗಳಿಗೆ ನಾವು ಕೆಲವು ಸಲಹೆಗಳನ್ನು ತಿಳಿಸಿದ್ದೇವೆ ನೋಡಿ.

  • Trending Desk
  • 3-MIN READ
  • Last Updated :
  • Share this:

    ಒಮ್ಮೆ ಹತ್ತನೇ ತರಗತಿ (SSLC) ಮುಗಿಸಿ ಪಿಯುಸಿ (PUC) ಕಾಲೇಜಿನ ಮೆಟ್ಟಿಲು ಹತ್ತಿದ ವಿದ್ಯಾರ್ಥಿಗೆ ಮನೆಯಲ್ಲಿ ಅಥವಾ ಹೊರಗೆ ಎಲ್ಲೇ ಹೋದರೂ ಕೇಳುವ ಸಾಮಾನ್ಯ ಪ್ರಶ್ನೆ ಎಂದರೆ ಅದು ‘ಸೆಕೆಂಡ್​ ಪಿಯುಸಿ ಆದ ನಂತರ ಏನು ಮಾಡಬೇಕು ಅಂತ ಅನ್ಕೊಂಡಿದೀಯಾ’ ಅಂತ ಹೇಳಬಹುದು. ಹೌದು... ಈ ಪ್ರಶ್ನೆ ಕೇಳುವವರಿಗೆ ತುಂಬಾನೇ ಸುಲಭವಾಗಿರುತ್ತದೆ, ಆದರೆ ಇದರ ಉತ್ತರ ಕೆಲವು ವಿದ್ಯಾರ್ಥಿಗಳಿಗೆ ತುಂಬಾನೇ ಗೊಂದಲ ಉಂಟು ಮಾಡುತ್ತದೆ. ಏಕೆಂದರೆ ಕೆಲವರು ತಮ್ಮ ಪಿಯುಸಿ ಆದ ನಂತರ ಎಂಜಿನಿಯರಿಂಗ್ ನಲ್ಲಿ ಇಂತಹದ್ದೇ ವಿಷಯದಲ್ಲಿ ಪದವಿ ಓದಬೇಕು ಅಂತ ಗುರಿಯನ್ನು ಇಟ್ಟುಕೊಂಡಿರುತ್ತಾರೆ. ಇನ್ನೂ ಕೆಲವರು ಮುಂದೆ ಡಾಕ್ಟರ್ ಆಗಬೇಕು ಅಂತ ಎಂಬಿಬಿಎಸ್ ಪದವಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.


    ಇವೆರಡರಲ್ಲೂ ಆಸಕ್ತಿ ಇಲ್ಲದ ವಿದ್ಯಾರ್ಥಿಯು ಬೇರೆ ಕೋರ್ಸ್ ಗಳ ಆಯ್ಕೆಗಳನ್ನು ಹುಡುಕುತ್ತಿರುತ್ತಾರೆ ಅಂತ ಹೇಳಬಹುದು. ಹೀಗೆ ಹುಡುಕುವಾಗ ಅನೇಕ ರೀತಿಯ ಗೊಂದಳಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬರುತ್ತವೆ. ಕೋರ್ಸ್ ಗೆ ಮುಂದೆ ಭವಿಷ್ಯ ಇದೆಯೇ? ಇದಕ್ಕೆ ಉದ್ಯೋಗವಕಾಶಗಳು ಹೇಗಿವೆ? ಕೆಲಸ ಸಿಕ್ಕರೂ ಆದಾಯ ಹೇಗಿರುತ್ತದೆ? ಹೀಗೆ ಹತ್ತು ಹಲವು ಪ್ರಶ್ನೆಗಳು ವಿದ್ಯಾರ್ಥಿಯನ್ನು ಗೊಂದಲಕ್ಕೆ ಸಿಲುಕಿಸುತ್ತವೆ ಅಂತ ಹೇಳಿದರೆ ಸುಳ್ಳಲ್ಲ.


    12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ನಂತರ ಮುಂದೆ ಏನು ಮಾಡಬೇಕೆಂದು ಗೊತ್ತಿಲ್ಲದ ವಿದ್ಯಾರ್ಥಿಗಳಿಗೆ ನಾವು ಕೆಲವು ಸಲಹೆಗಳನ್ನು ತಿಳಿಸಿದ್ದೇವೆ ನೋಡಿ.


    ನಿಮಗೆ ಇಷ್ಟವಿರುವ ಕೋರ್ಸ್‌ಗಳ ಬಗ್ಗೆ ತಿಳಿದುಕೊಳ್ಳಿ


    ನಿಮ್ಮ ಬೋರ್ಡ್ ಪರೀಕ್ಷೆಗಳು ಪೂರ್ಣಗೊಂಡ ನಂತರ ನಿಮಗೆ ಅತೀ ಹೆಚ್ಚು ಇಷ್ಟವಾಗುವ ವಿಷಯ ಯಾವುದು ಅಂತ ತಿಳಿದುಕೊಳ್ಳಿ. ನಿಮಗೆ ವಿಜ್ಞಾನ, ಕಾಮರ್ಸ್ ಅಥವಾ ಕಲೆಯ ವಿಭಾಗದಲ್ಲಿ ಯಾವುದು ಇಷ್ಟ ಅಂತ ಅರ್ಥ ಮಾಡಿಕೊಳ್ಳಿ. ನಿಮಗೆ ಇಷ್ಟವಿರುವ ವಿಷಯವನ್ನು ಹುಡುಕಿ ಮತ್ತು ಅದರ ಬಗ್ಗೆ ಹೆಚ್ಚು ಮಾಹಿತಿಯನ್ನು ಕಲೆ ಹಾಕಿ. ನಿಮ್ಮ ಪೋಷಕರ ಅಥವಾ ಗೆಳೆಯರ ಒತ್ತಾಯದ ಮೇರೆಗೆ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳುವುದು ಮುಂದೊಂದು ದಿನ ದೊಡ್ಡ ಸವಾಲಿನ ಕೆಲಸ ಅಂತ ಅನ್ನಿಸಬಹುದು. ಒಮ್ಮೆ ನೀವು ಒಂದು ವಿಷಯವನ್ನು ಆಯ್ಕೆ ಮಾಡಿದ ನಂತರ, ಆ ವಿಷಯದಲ್ಲಿ ವೃತ್ತಿಜೀವನದ ಭವಿಷ್ಯದ ಬಗ್ಗೆ ಸ್ವಲ್ಪ ಸಂಶೋಧನೆ ಮಾಡಿ ತಿಳಿದುಕೊಂಡು ಮುಂದೆ ಸಾಗಿ.


    students can choose these career paths after 12th


    ಕೋರ್ಸ್‌ಗೆ ಭವಿಷ್ಯದಲ್ಲಿರುವ ಉದ್ಯೋಗವಕಾಶಗಳ ಬಗ್ಗೆ ತಿಳಿದುಕೊಳ್ಳಿ


    ನಾವು ತಂತ್ರಜ್ಞಾನದ ಯುಗದಲ್ಲಿ ಇರುವುದರಿಂದ ಇಂದಿನ 65 ಪ್ರತಿಶತದಷ್ಟು ಉದ್ಯೋಗಗಳು 10 ವರ್ಷಗಳ ನಂತರ ಅಸ್ತಿತ್ವದಲ್ಲಿರುವುದಿಲ್ಲ ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ, ಕೋರ್ಸ್ ಅನ್ನು ಆಯ್ಕೆ ಮಾಡುವಾಗ, ಅದರ ಭವಿಷ್ಯ, ಮಾರುಕಟ್ಟೆ ಬೇಡಿಕೆ ಮತ್ತು ಆರ್ಥಿಕ ಭದ್ರತೆಯನ್ನು ನೆನಪಿನಲ್ಲಿಡಿ.


    ಇದನ್ನೂ ಓದಿ: Career Tips for Freshers: ಮೊದಲ ಉದ್ಯೋಗ ಪಡೆಯುವುದು ಕಷ್ಟವಾಗುತ್ತಿದ್ರೆ 5 ಟ್ರಿಕ್ಸ್ ಬಳಸಿ


    ವೃತ್ತಿ ಸಲಹೆಗಾರರನ್ನು ಭೇಟಿ ಮಾಡಿ


    ಸೂಕ್ತ ವೃತ್ತಿಜೀವನವನ್ನು ಆಯ್ಕೆ ಮಾಡಲು ಕಷ್ಟಪಡುತ್ತಿರುವ ಪೋಷಕರು ಮತ್ತು ವಿದ್ಯಾರ್ಥಿಗಳು ಯಾವಾಗಲೂ ಅರ್ಹ ವೃತ್ತಿ ಸಲಹೆಗಾರರ ಸಹಾಯವನ್ನು ಪಡೆಯಬೇಕು. ಅವರು ವಿದ್ಯಾರ್ಥಿಗಳ ಆಸಕ್ತಿ ಮತ್ತು ಕೌಶಲ್ಯಗಳನ್ನು ನಿರ್ಧರಿಸುವಲ್ಲಿ ವೃತ್ತಿಪರರಾಗಿರುತ್ತಾರೆ. ವಿದ್ಯಾರ್ಥಿಗೆ ಉತ್ತಮ ಕಾರ್ಯಕ್ರಮ, ಸಂಸ್ಥೆ ಮತ್ತು ವೃತ್ತಿ ಮಾರ್ಗವನ್ನು ಆಯ್ಕೆ ಮಾಡಲು ಅವರು ನಿಮಗೆ ಸಹಾಯ ಮಾಡುತ್ತಾರೆ.


    ಕೆಲಸ ಸಿಕ್ಕರೆ ಆದಾಯ ಹೇಗಿರುತ್ತದೆ ನೋಡಿ


    ಕೋರ್ಸ್ ಮಾಡಿದ ನಂತರ ಲಭ್ಯವಿರುವ ವೃತ್ತಿಜೀವನದ ಆದಾಯದ ಸಾಧ್ಯತೆಗಳ ಬಗ್ಗೆಯೂ ನೀವು ಯೋಚಿಸಬೇಕು. ಪ್ರತಿಯೊಬ್ಬರೂ ಹಣ ಸಂಪಾದಿಸಲು ವೃತ್ತಿಯನ್ನು ಆಯ್ಕೆ ಮಾಡುತ್ತಾರೆ, ಇದರರ್ಥ ಪ್ರತಿಯೊಬ್ಬರೂ ಡಾಕ್ಟರ್, ಎಂಜಿನಿಯರ್ ಅಥವಾ ಶಿಕ್ಷಕರಾಗಲು ಆಯ್ಕೆ ಮಾಡುತ್ತಾರೆ ಎಂದಲ್ಲ. ನೀವು ಬಯಸುವ ಹಣದ ಮೊತ್ತವನ್ನು ಯಾವ ಉದ್ಯೋಗವು ನಿಮಗೆ ಪಾವತಿಸುತ್ತದೆ ಎಂಬುದನ್ನು ನೀವು ಈಗ ನಿರ್ಧರಿಸಬೇಕು.




    ಇಷ್ಟವಿರುವ ಕೋರ್ಸ್ ಗಳ ಕಾಲೇಜುಗಳನ್ನು ಪಟ್ಟಿ ಮಾಡಿ


    ನಿಮ್ಮ ಕೋರ್ಸ್ ಗೆ ಅನುಗುಣವಾಗಿ ಸರ್ಕಾರಿ ಕಾಲೇಜುಗಳು ಮತ್ತು ಖಾಸಗಿ ಕಾಲೇಜುಗಳ ಪಟ್ಟಿಯನ್ನು ಮಾಡಿ. ಆ ಕಾಲೇಜು ಶುಲ್ಕ, ಉದ್ಯೋಗ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆಯಿರಿ. ಕಾಲೇಜು ಆಯ್ಕೆಯ ಸಮಯದಲ್ಲಿ ಯಾವಾಗಲೂ ನಿಮ್ಮ ಸ್ಥಳಕ್ಕೆ ಆದ್ಯತೆ ನೀಡಿ. ಇವುಗಳಲ್ಲಿ ಮೊದಲ 5 ಕಾಲೇಜುಗಳನ್ನು ಅಂತಿಮಗೊಳಿಸಿ ಮತ್ತು ಅಲ್ಲಿಗೆ ಹೋಗಿ ಮಾಹಿತಿಯನ್ನು ಸಂಪೂರ್ಣವಾಗಿ ಪಡೆಯಿರಿ. ಕಾಲೇಜು ನಿಮ್ಮ ಬಜೆಟ್ ನಲ್ಲಿದೆಯೇ ಎಂದು ಕಂಡು ಹಿಡಿಯಿರಿ. ಕಾಲೇಜು ಎಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಗಳಿಸಿದೆ ಅಂತ ಸಹ ನೋಡುವುದು ಭವಿಷ್ಯದಲ್ಲಿ ನೀವು ಪಡೆಯುವ ಪದವಿಗೆ ಸ್ವಲ್ಪ ತೂಕ ಬರುತ್ತದೆ.

    Published by:Kavya V
    First published: