• ಹೋಂ
  • »
  • ನ್ಯೂಸ್
  • »
  • Jobs
  • »
  • Career Counsellor: ಸರಿಯಾದ ವೃತ್ತಿ ಸಲಹೆಗಾರರನ್ನು ಆರಿಸುವುದು ಹೇಗೆ, ಈ ವಿಷಯದಲ್ಲಿ ಎಡವಿದ್ರೆ ನಿಮಗೇ ನಷ್ಟ

Career Counsellor: ಸರಿಯಾದ ವೃತ್ತಿ ಸಲಹೆಗಾರರನ್ನು ಆರಿಸುವುದು ಹೇಗೆ, ಈ ವಿಷಯದಲ್ಲಿ ಎಡವಿದ್ರೆ ನಿಮಗೇ ನಷ್ಟ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಕರಿಯರ್‌ ಕೌನ್ಸಿಲರ್‌ ಅಥವಾ ವೃತ್ತಿ ಸಲಹೆಗಾರರು ನಿಮಗಾಗಿ ಅತ್ಯುತ್ತಮವಾದದ್ದನ್ನು ಹುಡುಕಲು ಸಹಾಯ ಮಾಡುತ್ತಾರೆ. ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಅವಕಾಶಗಳ ಬಗ್ಗೆ ನಿಮಗೆ ತಿಳುವಳಿಕೆಯನ್ನು ನೀಡುತ್ತಾರೆ.

  • Trending Desk
  • 4-MIN READ
  • Last Updated :
  • Share this:

    ವೃತ್ತಿ ಆಯ್ಕೆ (Career Choice) ಅನ್ನೋದು ಜೀವನದಲ್ಲಿ ತೆಗೆದುಕೊಳ್ಳಬೇಕಾದ ಪ್ರಮುಖ ನಿರ್ಧಾರ. ನೀವು ಯಾವಾಗಲೂ ನಿಮ್ಮ ವೃತ್ತಿಪರ ಜೀವನದ ಹಾದಿಯನ್ನು ಬದಲಾಯಿಸಬಹುದಾದರೂ, ನಿಮಗೆ ಸೂಕ್ತವಾದ ಉದ್ಯೋಗವನ್ನು (Job) ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ಆದರೆ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಗೊಂದಲ (Confusion) ಉಂಟಾಗುವುದು ಸಹಜ. ಆದರೆ ಇದಕ್ಕಾಗಿ ನೀವು ಮಾರ್ಗದರ್ಶಕರನ್ನು (Career Guide) ಹೊಂದಿದ್ದರೆ ಕೆಲವೊಮ್ಮೆ ಇದು ಸುಲಭವಾಗುತ್ತದೆ.


    ಕರಿಯರ್‌ ಕೌನ್ಸಿಲರ್‌ ಯಾಕೆ ಬೇಕು?


    ಕರಿಯರ್‌ ಕೌನ್ಸಿಲರ್‌ ಅಥವಾ ವೃತ್ತಿ ಸಲಹೆಗಾರರು ನಿಮಗಾಗಿ ಅತ್ಯುತ್ತಮವಾದದ್ದನ್ನು ಹುಡುಕಲು ಸಹಾಯ ಮಾಡುತ್ತಾರೆ. ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಅವಕಾಶಗಳ ಬಗ್ಗೆ ನಿಮಗೆ ತಿಳುವಳಿಕೆಯನ್ನು ನೀಡುತ್ತಾರೆ. ವೃತ್ತಿ ಸಲಹೆಗಾರರು ನಿಮಗೆ ಸೂಕ್ತವಾದ ವೃತ್ತಿ ಮಾರ್ಗವನ್ನು ರೂಪಿಸಲು ಸಹಾಯ ಮಾಡುತ್ತಾರೆ. ವೃತ್ತಿಗೆ ನೀವು ಹೊಸಬರಿರಲಿ ಅಥವಾ ನಿಮಗೆ ಆಸಕ್ತಿಯಿಲ್ಲದ ವೃತ್ತಿಯಲ್ಲಿ ಸಿಲುಕಿಕೊಂಡಿರಲಿ ಅದರಿಂದ ಹೊರಬರಲು ಅವರು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ನೀವು ಹೊಂದಿರುವ ಕೌಶಲ್ಯ ಮತ್ತು ಅನುಭವಗಳನ್ನು ಅವರು ಹೈಲೈಟ್ ಮಾಡುತ್ತಾರೆ.


    ಪ್ರಾತಿನಿಧಿಕ ಚಿತ್ರ


    ಪರೀಕ್ಷೆ ಎಂಬ ಪ್ರೆಶರ್‌ ಕುಕ್ಕರ್‌ !


    ಸೆರೀನ್ ಅವರ್ ಕೌನ್ಸೆಲಿಂಗ್ ಮತ್ತು ಕೆರಿಯರ್ ಅಡ್ವೈಸ್ ಕನ್ಸಲ್ಟೆನ್ಸಿಯ ಸ್ಥಾಪಕರಾದ ಶೆರೆನ್ ಅಫ್ತಾಬ್ ಅವರು, “ಇಂದು ಮಕ್ಕಳು ಒತ್ತಡದ ಕುಕ್ಕರ್ ಪರಿಸ್ಥಿತಿಯಲ್ಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳ ಬಗ್ಗೆ ಆಸಕ್ತಿ ಹೊಂದಿದ್ದಾರಾ ? ಪರೀಕ್ಷೆಯನ್ನು ಹೇಗೆ ಎದುರಿಸುತ್ತಾರೆ ? ಎಂಬುದರ ಬಗ್ಗೆ ನಾನು ಆಗಾಗ ಕೇಳುತ್ತೇನೆ.


    ಇದು ಅವರ ಆಲೋಚನಾ ಪ್ರಕ್ರಿಯೆ, ಕಲಿಕೆಯ ಮಾದರಿಗಳ ಬಗ್ಗೆ ಒಳನೋಟವನ್ನು ನೀಡುತ್ತವೆ. ಯಾವುದರಲ್ಲಿ ಅವರಿಗೆ ಹೆಚ್ಚು ಕೌಶಲ್ಯವಿಲ್ಲವೋ ಅಂಥ ಕೆಲಸಗಳನ್ನು ಮಾಡುವುದಕ್ಕೆ ಅವರು ಆತಂಕ ಪಡುತ್ತಾರೆ. ಅರ್ಥವಾಗದ ಆಯ್ಕೆಗಳನ್ನು ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ" ಎಂಬುದಾಗಿ ಅಫ್ತಾಬ್ ಹೇಳುತ್ತಾರೆ.


    ವೃತ್ತಿ ಕೌನ್ಸೆಲಿಂಗ್ ಕೇವಲ ವಿದ್ಯಾರ್ಥಿಗಳಿಗೆ ಅಲ್ಲ!


    ಬಹಳಷ್ಟು ಜನರಿಗೆ ಶಾಲಾ ವರ್ಷಗಳ ನಂತರವೂ ವೃತ್ತಿಯ ಬಗ್ಗೆ ಗೊಂದಲ ಮತ್ತು ಆತಂಕ ನಿಲ್ಲುವುದಿಲ್ಲ. ನೀವು ಒಂದು ಕೆಲಸ ಅಥವಾ ಒಂದು ಲೆವೆಲ್‌ ನಲ್ಲಿ ಕೆಲಸ ಮಾಡುತ್ತಿರಬಹುದು. ಕೆಲವೊಮ್ಮೆ ಅದರಿಂದ ಮುಕ್ತರಾಗಲು ಬಯಸಬಹುದು. ಜೀವನಶೈಲಿಯಲ್ಲಿನ ಬದಲಾವಣೆಯಿಂದಾಗಿ ನಿಮ್ಮ ವೃತ್ತಿ ಜೀವನದ ಗುರಿಗಳು ಬದಲಾಗಿರಬಹುದು. ಹಾಗಾಗಿ ನಿಮ್ಮ ಹೊಸ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುವ ಹೊಸ ಮಾರ್ಗವನ್ನು ಹೊಂದಿಸಲು ವೃತ್ತಿ ಕೌನ್ಸೆಲಿಂಗ್‌ ನಿಮಗೆ ಸಹಾಯ ಮಾಡುತ್ತದೆ.




    ವೃತ್ತಿ ಸಲಹೆಗಾರರನ್ನು ಆಯ್ಕೆ ಮಾಡುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು


    • ವಿಮರ್ಶೆಗಳನ್ನು ಓದಿ, ಶಿಫಾರಸುಗಳನ್ನು ಕೇಳಿ. ಅಲ್ಲದೆ, ಕರಿಯರ್‌ ಕೌನ್ಸಿಲರ್‌ ಆದವರ ಪರಿಣತಿಯ ಕ್ಷೇತ್ರವು ನಿಮ್ಮ ಆಸಕ್ತಿಯ ಕ್ಷೇತ್ರದೊಂದಿಗೆ ಹೊಂದಿಕೆಯಾಗುತ್ತದೆಯೇ ಎಂದು ತಿಳಿದುಕೊಳ್ಳಿ. ಅವರು ನಿಮ್ಮ ವೃತ್ತಿಜೀವನದ ಗುರಿಗಳನ್ನು ಹೋಲುವಂಥ ಜನರಿಗೆ ಮಾರ್ಗದರ್ಶನ ನೀಡಿದ್ದರೆ ಇನ್ನೂ ಒಳ್ಳೆಯದು.


    • ವೃತ್ತಿ ಸಲಹೆಗಾರರು ತಮ್ಮ ಗ್ರಾಹಕರನ್ನು ಹೇಗೆ ನಿರ್ಣಯಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಿ. ಅವರು ಏನು ಮಾಡುತ್ತಾರೆ ಮತ್ತು ಏಕೆ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ನಿಮಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.


    • ನಿಮ್ಮ ನಡುವೆ ಇರುವ ಅಡೆತಡೆಗಳನ್ನು ಗುರುತಿಸಲು ಮತ್ತು ನೀವು ಸರಿಯಾದ ವೃತ್ತಿಯನ್ನು ಪಡೆದುಕೊಳ್ಳಲು ಅವರು ಹೇಗೆ ಸಹಾಯ ಮಾಡುತ್ತಾರೆ ಎಂಬುದನ್ನು ತಿಳಿಯಿರಿ.


    ಇದನ್ನೂ ಓದಿ: Career Tips: ಈ ಸಪ್ತ ಸೂತ್ರ ಪಾಲಿಸಿದರೆ ವೃತ್ತಿಜೀವನದಲ್ಲಿ ಸುಲಭವಾಗಿ ಸಕ್ಸಸ್ ಸಿಗುತ್ತೆ


    • ನಿಮಗೆ ಸೂಕ್ತವಾದ ಸಮಾಲೋಚನೆಯ ಪ್ರಕಾರವನ್ನು ತಿಳಿದುಕೊಳ್ಳಿ. ನಿಮಗೆ ವೈಯಕ್ತಿಕ ಅವಧಿಗಳನ್ನು ನೀಡುವ ಸಲಹೆಗಾರರು ಬೇಕಾ ಅಥವಾ ಗ್ರುಪ್‌ ಪ್ಯಾಕೇಜ್‌ಗಳನ್ನು ನೀಡುವ ಸಲಹೆಗಾರರು ಬೇಕಾ ಎಂದು ನಿರ್ಧರಿಸಿ.


    • ಕರಿಯರ್‌ ಕೌನ್ಸಿಲರ್‌ ಆದವರು ನಿಮ್ಮ ವ್ಯಕ್ತಿತ್ವಕ್ಕೆ ಹೊಂದಿಕೆಯಾಗುತ್ತಾರೆಯೇ ಎಂದು ತಿಳಿದುಕೊಳ್ಳಿ. ಏಕೆಂದರೆ ಎಲ್ಲರ ವ್ಯಕ್ತಿತ್ವವು ವಿಭಿನ್ನವಾಗಿರುವಾಗ, ನೀವು ಸರಿಯಾದ ವೃತ್ತಿ ಸಲಹೆಗಾರರನ್ನು ಆಯ್ಕೆ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ.

    Published by:Kavya V
    First published: