ಕಲಾ ಕ್ಷೇತ್ರ (Art Field) ಇತರ ಕ್ಷೇತ್ರಗಳಿಗಿಂತ ತುಂಬಾ ಭಿನ್ನವಾಗಿರುವ ಕ್ಷೇತ್ರವಾಗಿದೆ. ಕುಂಚದಲ್ಲಿ ಚಿತ್ರ ಬಿಡಿಸುವ ಕ್ರಿಯಾತ್ಮಕತೆ ಸುಲಭದಲ್ಲಿ ಯಾರಿಗೂ ಒಲಿಯುವಂತಹದ್ದಲ್ಲ. ಕಲಾವಿದರಾಗಿ (Artist) ವೃತ್ತಿಜೀವನ (Career) ಆರಂಭಿಸುವುದು ನಿಮ್ಮ ಇರಾದೆಯಾದಲ್ಲಿ ಇದಕ್ಕಾಗಿ ಹಲವಾರು ತಂತ್ರಜ್ಞಾನ ಕೋರ್ಸ್ಗಳನ್ನು ಮಾಡಬಹುದಾಗಿದೆ. ಗ್ರಾಫಿಕ್ ಡಿಸೈನರ್ ಆಗಿ ಅನಿಮೇಟರ್ ಆಗಿ, ಕಲಾ ಶಿಕ್ಷಕರಾಗಿ, ಕಲಾವಿದರಾಗಿ ನಿಮ್ಮೊಳಗಿನ ಕಲಾ ಕ್ರಿಯಾತ್ಮಕತೆಯನ್ನು ನೀವು ಬಹಿರಂಗಪಡಿಸಿಕೊಳ್ಳಬಹುದಾಗಿದೆ.
ಕಲಾ ಕ್ಷೇತ್ರದಲ್ಲಿದೆ ವೈವಿಧ್ಯತೆ
ಈ ಕ್ಷೇತ್ರದಲ್ಲಿ ವೈವಿಧ್ಯತೆ ಇರುತ್ತದೆ ಹಾಗೂ ಉದ್ಯೋಗಗಳಿಗೂ ಕಲಾ ರಂಗ ಸೂಕ್ತವಾದ ವೇದಿಕೆಯಾಗಿದೆ. ಶಿಕ್ಷಣ, ಮಾರುಕಟ್ಟೆ ಹೀಗೆ ಕ್ರಿಯಾತ್ಮಕವಾಗಿರುವ ಯಾವುದೇ ವಿಭಾಗದಲ್ಲಿ ನಿಮ್ಮ ವೃತ್ತಿಯನ್ನು ಆರಂಭಿಸಬಹುದು. ಹಾಗಿದ್ದರೆ ಕಲಾ ಸಂಬಂಧಿತ ಉದ್ಯೋಗಗಳು ಯಾವುವು ಅವುಗಳ ವಿವರ ಇಲ್ಲಿದೆ ನೋಡಿ.
1) ಫೈನ್ ಆರ್ಟಿಸ್ಟ್ ಆಗಿ ವೃತ್ತಿಜೀವನ
ಫೈನ್ ಆರ್ಟಿಸ್ಟ್ಗಳೆಂದರೆ ಚಿತ್ರಕಲೆ, ಮರದ ಮೇಲೆ ವಿನ್ಯಾಸ ಮೂಡಿಸುವವರು, ಮೆಟಲ್ ಹಾಗೂ ವಸ್ತ್ರಗಳ ಮೇಲೆ ಚಿತ್ರಕಲೆಗಳನ್ನು ರೂಪಿಸುವವರಾಗಿದ್ದಾರೆ. ತಮ್ಮ ಚಿತ್ರಕಲೆಗಳನ್ನು ಮಾರಾಟ ಮಾಡುವ ಮೂಲಕ ಅಥವಾ ಕಲಾ ಗ್ಯಾಲರಿಗಳಲ್ಲಿ ಅವುಗಳನ್ನು ಪ್ರದರ್ಶನಕ್ಕಿರಿಸುವ ಮೂಲಕ ಹಣ ಸಂಪಾದಿಸಬಹುದಾಗಿದೆ.
ಕಲಾ ವಿಭಾಗದಲ್ಲಿ ಯಾವುದೇ ಶಿಕ್ಷಣ ಅರ್ಹತೆಗಳನ್ನು ಪಡೆದುಕೊಳ್ಳುವುದು ಕಡ್ಡಾಯವಲ್ಲದಿದ್ದರೂ ಸಂಸ್ಥೆಗಳಲ್ಲಿ ಕೆಲಸ ಮಾಡುವುದಕ್ಕೆ ಪದವಿ ಅಗತ್ಯವಿರುತ್ತದೆ.
2) ಆರ್ಟ್ ಗ್ಯಾಲರಿ ಕ್ಯುರೇಟರ್
ಗ್ಯಾಲರಿಗಳು, ವಸ್ತುಸಂಗ್ರಹಾಲಯ ಹಾಗೂ ಇನ್ನಿತರ ಸ್ಥಳಗಳಲ್ಲಿ ಕಲಾ ಪ್ರದರ್ಶನಗಳನ್ನು ಆಯೋಜಿಸಲು ಕ್ಯುರೇಟರ್ (ಮೇಲ್ವಿಚಾರಕರು) ಜವಬ್ದಾರರಾಗಿರುತ್ತಾರೆ. ಪ್ರದರ್ಶನಗಳನ್ನು ಯೋಜಿಸಲು ಮತ್ತು ನಿರ್ಮಿಸಲು ಕ್ಯಾಟಲಾಗ್ ರಚನೆಗಳಂತಹ ಕೆಲಸವನ್ನು ಮಾಡಬಹುದು. ಕಲಾ ಇತಿಹಾಸದ ಬಗ್ಗೆ ಸೂಕ್ತ ಜ್ಞಾನವನ್ನು ಮೇಲ್ವಿಚಾರಕರು ಹೊಂದಿರಬೇಕು
3) ಇಲ್ಲುಸ್ಟ್ರೇಟರ್
ಪುಸ್ತಕದ ಕವರ್ಗಳು, ನಿಯತಕಾಲಿಕೆಗಳು, ಜಾಹೀರಾತುಗಳು, ಶುಭಾಶಯ ಪತ್ರಗಳು, ಪೋಸ್ಟರ್ಗಳು ಮತ್ತು ಅನಿಮೇಷನ್ಗಳನ್ನು ರಚಿಸಲು ಆರ್ಟ್ ಇಲ್ಲುಸ್ಟ್ರೇಟರ್ಗಳು ತಮ್ಮ ಚಿತ್ರಕಲಾ ಕೌಶಲ್ಯಗಳನ್ನು ಬಳಸಿಕೊಳ್ಳುತ್ತಾರೆ.
ಒಬ್ಬ ಇಲ್ಲುಸ್ಟ್ರೇಟರ್ ಸಾಫ್ಟ್ವೇರ್ ಪರಿಕರಗಳನ್ನು ಬಳಸಿ ವಿನ್ಯಾಸಗಳನ್ನು ಮೂಡಿಸಬಹುದು. ಇಲ್ಲುಸ್ಟ್ರೇಟರ್ಗಳು ಸ್ವಂತವಾಗಿ ಉದ್ಯೋಗ ಆರಂಭಿಸಬಹುದು ಇಲ್ಲವೇ ಯಾವುದಾದರೂ ಸಂಸ್ಥೆಗಳಲ್ಲಿ ಉತ್ತಮ ವೇತನದ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ.
4) ಕಲಾ ನಿರ್ದೇಶಕರು
ಚಲನಚಿತ್ರ, ಜಾಹೀರಾತು ಅಥವಾ ದೂರದರ್ಶನ ಕಾರ್ಯಕ್ರಮದಂತಹ ದೃಶ್ಯ ಹಾಗೂ ಸೌಂದರ್ಯ ಶೈಲಿಯನ್ನು ನಿರ್ಮಿಸಲು ಕಲಾ ನಿರ್ದೇಶಕರು ಜವಾಬ್ದಾರರಾಗಿರುತ್ತಾರೆ. ಯೋಜನೆಗಾಗಿ ದೃಶ್ಯ ಕಲ್ಪನೆಗಳನ್ನು ಕಾರ್ಯಗತಗೊಳಿಸಲು ಅವರು, ಕಲಾವಿದರು ಮತ್ತು ವಿನ್ಯಾಸಕರ ಗುಂಪಿನೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಕಲಾ ನಿರ್ದೇಶಕರು ಹೆಚ್ಚಿನ ನಾಯಕತ್ವ ಗುಣಗಳು ಹಾಗೂ ಸಂವಹನ ಕೌಶಲ್ಯವನ್ನು ಹೊಂದಿರುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: MBA in Tea Management: ಟೀ ಮ್ಯಾನೇಜ್ಮೆಂಟ್ನಲ್ಲಿ ಎಂಬಿಎ ಮಾಡಿದವರಿಗೆ ಲಕ್ಷ ಲಕ್ಷ ಸಂಬಳದ ಉದ್ಯೋಗ
5) ಆರ್ಟ್ ಥೆರಪಿಸ್ಟ್
ಮಾನಸಿಕ ಅಸ್ವಸ್ಥತೆ, ಸಂವಹನ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಥೆರಪಿಸ್ಟ್ಗಳು ಚೇತರಿಕೆಯನ್ನು ನೀಡುತ್ತಾರೆ. ಭಾವನೆಗಳನ್ನು ಅರ್ಥೈಸಿಕೊಳ್ಳಲು ಹಾಗೂ ಮುಂದಿನ ಜೀವನವನ್ನು ಸಮಸ್ಯೆಗಳಿಲ್ಲದೆ ಸಾಗಿಸಲು ಚಿಕಿತ್ಸಕರು ಇಂತಹ ಮನೋರೋಗಿಗಳಿಗೆ ಸಹಾಯಕರಾಗುತ್ತಾರೆ.
ಮನೋವಿಜ್ಞಾನ ಅಥವಾ ಸಾಮಾಜಿಕ ಕಾರ್ಯದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಕಲಾ ಚಿಕಿತ್ಸಕರಿಗೆ ಸಾಮಾನ್ಯವಾಗಿ ವಿಶೇಷ ಪದವಿ ಅಗತ್ಯವಿರುತ್ತದೆ. ಮುಖ್ಯವಾಗಿ ಆಸ್ಪತ್ರೆ ಹಾಗೂ ಪುನರ್ವಸತಿ ಕೇಂದ್ರಗಳಲ್ಲಿ ಕೆಲಸ ಮಾಡಿದ ಅನುಭವ ಇರಬೇಕಾಗುತ್ತದೆ.
6) ಅನಿಮೇಟರ್ / ಗ್ರಾಫಿಕ್ ಡಿಸೈನರ್
ಅನಿಮೇಟರ್ಗಳು ಮತ್ತು ಗ್ರಾಫಿಕ್ ವಿನ್ಯಾಸಕರು, ಸಾಮಾನ್ಯವಾಗಿ ರೇಖಾಚಿತ್ರಗಳು ಮತ್ತು ಗ್ರಾಫಿಕ್ಸ್ ಮೂಲಕ ಸುಂದರ ಲೋಕವನ್ನೇ ಸೃಷ್ಟಿಸುತ್ತಾರೆ. ಈ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿದವರು ಚಲನಚಿತ್ರಗಳು, ವಿಡಿಯೋ ಗೇಮ್ಸ್, ಜಾಹೀರಾತು, ಮಾರ್ಕೆಟಿಂಗ್ ಮತ್ತು ಪ್ರಕಾಶನದಂತಹ ಯೋಜನೆಗಳಲ್ಲಿ ಉದ್ಯೋಗ ಕಂಡುಕೊಳ್ಳಬಹುದು.
7) ಕಲಾಶಿಕ್ಷಕರು/ಉಪನ್ಯಾಸಕರು
ಪ್ರಾಥಮಿಕ, ಮಾಧ್ಯಮಿಕ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕಲಾಶಿಕ್ಷಕರು ಅಥವಾ ಉಪನ್ಯಾಸಕರಾಗಿ ವೃತ್ತಿಜೀವನವನ್ನು ಆರಂಭಿಸಬಹುದಾಗಿದೆ. ಕಲಾ ಪದವಿ ಹಾಗೂ ಬೋಧನಾ ಅರ್ಹತೆಯನ್ನು ಪಡೆಯುವುದು ಕಡ್ಡಾಯವಾಗಿದೆ. ಇನ್ನು ಶಿಕ್ಷಣ ರಂಗದಲ್ಲಿ ಮುಂದುವರಿಯುತ್ತೀರಿ ಎಂದಾದಲ್ಲಿ ಇದಕ್ಕಾಗಿ ಬೇರೆ ಬೇರೆ ಕೋರ್ಸ್ಗಳನ್ನು ಮಾಡಬಹುದಾಗಿದೆ. ಸಂಸ್ಥೆಗಳಲ್ಲಿ ಕೆಲಸ ಮಾಡಲು ಅನುಭವ ಕೂಡ ಇರಬೇಕಾಗಿರುವುದು ಅತ್ಯವಶ್ಯಕವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ