ವೃತ್ತಿಜೀವನದಲ್ಲಿ (Career) ಅಭಿವೃದ್ಧಿ ಹೊಂದಬೇಕು ಎಂದಾದಲ್ಲಿ ಸಂಪರ್ಕಗಳು (Network) ಅಗತ್ಯವಾಗಿರುತ್ತದೆ. ಬೇರೆ ಕಂಪನಿಗಳಲ್ಲಿ ಒಳ್ಳೆಯ ಉದ್ಯೋಗಗಳನ್ನು (Jobs) ಪಡೆಯಲು, ಸಂಸ್ಥೆಗೆ ಉತ್ತಮ ಪ್ರಾಜೆಕ್ಟ್ಗಳು ದೊರೆಯುವಂತೆ ಮಾಡಲು, ರೆಕಮಂಡೇಶನ್ ನಡೆಸಲು ಹೀಗೆ ವೃತ್ತಿರಂಗದಲ್ಲಿ ನೀವು ಸಂಪಾದಿಸುವ ಸಂಪರ್ಕಗಳು ಅತಿಮುಖ್ಯ ಪಾತ್ರವಹಿಸುತ್ತವೆ. ಇಂತಹ ಸಂಪರ್ಕಗಳು ಆಕಸ್ಮಿಕವಾಗಿ ವೃತ್ತಿರಂಗದಲ್ಲಿ ದೊರೆಯುವಂತಹ ಸಂಪರ್ಕಗಳಾಗಿರುತ್ತವೆ.
ಉದಾಹರಣೆಗೆ ಲಿಂಕ್ಡ್ಇನ್ನಲ್ಲಿರುವ ಸಂಪರ್ಕಗಳು, ಟ್ವಿಟರ್, ಫೇಸ್ಬುಕ್ನ ಉದ್ಯೋಗ ಪುಟಗಳಲ್ಲಿ ದೊರೆಯುವ ಸಂಪರ್ಕಗಳು ಹೀಗೆ ಈ ಸಂಪರ್ಕಗಳನ್ನು ಪಟ್ಟಿಮಾಡಬಹುದು.
ವೃತ್ತಿರಂಗಕ್ಕೆ ಅನುಕೂಲಕರವಾಗಿರುವ ಸಂಪರ್ಕಗಳು
ಸಾಮಾಜಿಕ ಜಾಲತಾಣದ ಮೂಲಕ, ನಿಮ್ಮ ನಿಕಟ ಸ್ನೇಹಿತರ ಮೂಲಕ, ಸಹೋದ್ಯೋಗಿಯ ಮೂಲಕ, ಸಂಬಂಧಿಕರ ಮೂಲಕ ಹೀಗೆ ವೃತ್ತಿಜೀವನದಲ್ಲಿ ದೊರೆಯುವ ಈ ಸಂಪರ್ಕಗಳು ನಿಮ್ಮ ವೃತ್ತಿಜೀವನಕ್ಕೆ ಟರ್ನಿಂಗ್ ಪಾಯಿಂಟ್ ಆಗಿ ಪರಿವರ್ತನೆಗೊಳ್ಳಬಹುದು ಎಂಬುದು ಪರಿಣಿತರ ಅಭಿಪ್ರಾಯವಾಗಿದೆ.
ವೀಕರ್ ಟೈಸ್ ಎಂದರೇನು?
ಆಕಸ್ಮಿಕವಾಗಿ ಹಾಗೂ ವೃತ್ತಿತಾಣಗಳಲ್ಲಿ ನಿಮಗೆ ಪರಿಚಯವಾಗುವ ಕ್ಯಾಶುವಲ್ ವ್ಯಕ್ತಿ ಸಂಪರ್ಕಗಳನ್ನೇ ವೀಕರ್ ಟೈಸ್ ಎಂದು ಕರೆಯಲಾಗುತ್ತದೆ. ಮೇಲೆ ತಿಳಿಸಿದಂತೆ ಈ ವ್ಯಕ್ತಿಗಳ ಸಂಪರ್ಕಗಳು ನಿಮಗೆ ಯಾವುದಾದರೊಂದು ಮಾಧ್ಯಮದ ಮೂಲಕ ದೊರೆಯುತ್ತದೆ.
ಹೀಗೆ ಪರಿಚಯವಾಗುವ ವ್ಯಕ್ತಿಗಳು ನಿಮ್ಮ ನಿಕಟ ಸ್ನೇಹಿತರೇ ಆಗಬೇಕೆಂದೇನಿಲ್ಲ. ಆದರೆ ಅವರು ನೀಡುವ ಮಾಹಿತಿ, ಮಾಡುವ ಸಹಾಯ ನಿಮಗೆ ಒಂದಿಲ್ಲೊಂದು ರೀತಿಯಿಂದ ಸಹಕಾರಿಯಾಗಿರುತ್ತದೆ.
ಇನ್ನಷ್ಟು ಅವಕಾಶಗಳಿಗೆ ಸಹಕಾರಿ
ಇಂತಹ ಸಂಪರ್ಕಗಳು ಹೆಚ್ಚು ವೈವಿಧ್ಯಮಯ ಸಂಪರ್ಕ ಜಾಲಗಳ ಪರಿಚಯವನ್ನು ಮಾಡಿಕೊಡುತ್ತವೆ. ಅದೇ ರೀತಿ ವೃತ್ತಿರಂಗದಲ್ಲಿ ಇನ್ನಷ್ಟು ಅವಕಾಶಗಳನ್ನೊದಗಿಸಲು ಈ ಸಂಪರ್ಕಗಳು ನೆರವನ್ನೀಯುತ್ತವೆ ಎಂಬುದಾಗಿದೆ.
ಸಂಪರ್ಕಗಳನ್ನು ಆಯ್ಕೆಮಾಡುವಾಗ ಅನುಸರಿಸಬೇಕಾದ ಸಲಹೆಗಳೇನು?
ಹೊಸ ವರ್ಷದ ಸಮಯಗಳಲ್ಲಿ ಉತ್ತಮ ಉದ್ಯೋಗಗಳನ್ನು ಹುಡುಕುವುದು, ಉತ್ತಮ ಸಂಬಳವಿರುವ ಉದ್ಯೋಗದಲ್ಲಿ ನೆಲೆಗೊಳ್ಳುವುದು, ಹೀಗೆ ವೃತ್ತಿ ಭವಿಷ್ಯದಲ್ಲಿ ಅನೇಕ ಸುಧಾರಣೆಗಳನ್ನು ತರುವ ಇರಾದೆಯನ್ನು ಉದ್ಯೋಗಿಗಳು ಹೊಂದಿರುತ್ತಾರೆ.
ಆದರೆ ಇಂತಹ ಸಂಪರ್ಕಗಳನ್ನು ಆರಿಸುವಾಗ ಕೆಲವೊಂದು ಸಲಹೆಗಳನ್ನು ಪಾಲಿಸುವುದು ಒಳಿತು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಆ ಎಚ್ಚರಿಕೆಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ವೀಕರ್ ಟೈಸ್ಗಳನ್ನು ವೃತ್ತಿ ಜಾಲದಲ್ಲಿ ಮುಕ್ತವಾಗಿ ಬಳಸಿಕೊಳ್ಳಿ
ವೀಕರ್ ಟೈಸ್ ಎಂಬುದು ಸಂದರ್ಭೋಚಿತ ಸಂಪರ್ಕಗಳು ಹೀಗಾಗಿ ನಿಮ್ಮ ವೃತ್ತಿರಂಗದ ವಿಷಯದಲ್ಲಿ ಇಂತಹ ಆಯ್ಕೆಗಳನ್ನು ಮುಕ್ತ ಮನಸ್ಸಿನಿಂದ ಮಾಡಿ ಎಂಬುದು ತಜ್ಞರ ಸಲಹೆಯಾಗಿದೆ. ನಿಮಗೆ ಗೊತ್ತಿರುವ ಸಂಪರ್ಕಗಳನ್ನು ಆರಿಸಿಕೊಳ್ಳುವುದರ ಜೊತೆಗೆ ನಿಮಗೆ ಪರಿಚಿತರಲ್ಲದ ಸಂಪರ್ಕಗಳನ್ನು ನೆಟ್ವರ್ಕ್ಗೆ ಸೇರಿಸಿ.
ವೃತ್ತಿ ಸಮಾರಂಭಗಳಲ್ಲಿ ಹೆಚ್ಚು ಸಂಪರ್ಕ ಸಾಧಿಸಿಕೊಳ್ಳಿ
ಕೆರಿಯರ್ ಸೈಟ್ಗಳಿಗಿಂತಲೂ ವೃತ್ತಿ ಸಂಬಂಧಿತ ಸಭೆ ಸಮಾರಂಭಗಳಲ್ಲಿ ಇಂತಹ ಸಂಪರ್ಕಗಳನ್ನು ಹೆಚ್ಚುಚ್ಚು ಪರಿಚಯಿಸಿಕೊಳ್ಳಿ. ಕೋವಿಡ್ ಸಮಯದಲ್ಲಿ ಕಡಿಮೆಯಾಗಿದ್ದು ಉದ್ಯೋಗ ಸಮಾರಂಭಗಳು ಇದೀಗ ಹಿಂದಿನಂತೆ ಆರಂಭವಾಗಿವೆ. ಈ ಸಮಯದಲ್ಲಿ ಆದಷ್ಟು ಅವುಗಳ ಪ್ರಯೋಜನಗಳನ್ನು ಪಡೆದುಕೊಳ್ಳಿ.
ಯಾರನ್ನಾದರೂ ಭೇಟಿಯಾದ ಸಂದರ್ಭದಲ್ಲಿ ಅವರನ್ನು ಲಿಂಕ್ಡ್ಇನ್ ಅಥವಾ ಟ್ವಿಟರ್ ತಾಣಗಳಲ್ಲಿ ಸೇರಿಸಿಕೊಳ್ಳಿ ಇಲ್ಲದಿದ್ದರೆ ಅವರ ನೆಟ್ವರ್ಕಿಂಗ್ ಜಾಲಕ್ಕೆ ನೀವು ಸೇರ್ಪಡೆಗೊಳ್ಳಿ. ಈ ಸಂದರ್ಭದಲ್ಲಿ ನಿಮಗೆ ಸೂಕ್ತವಾಗಿರುವ ಉದ್ಯೋಗವಕಾಶದ ಪೋಸ್ಟ್ಗಳನ್ನು ಅವರು ತಾಣಗಳಲ್ಲಿ ಮಾಡಿದಾಗ ಈ ಬಗ್ಗೆ ನಿಮಗೆ ಮಾಹಿತಿ ದೊರೆಯುತ್ತದೆ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ.
ವೃತ್ತಿ ತಂತ್ರಗಳನ್ನು ಅರಿತುಕೊಳ್ಳಿ
ನಿಮ್ಮ ಉದ್ಯೋಗ ನೆಟ್ವರ್ಕ್ಗೆ ಹೆಚ್ಚು ಸಂಪರ್ಕಗಳನ್ನು ಸೇರಿಸುವುದರಿಂದ ಮಾತ್ರ ನಿಮ್ಮ ಉದ್ದೇಶ ಈಡೇರುವುದಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ. ನಿಮ್ಮ ನೆಟ್ವರ್ಕ್ನಲ್ಲಿ ಹೆಚ್ಚು ಪ್ರಭಾವಶಾಲಿಯಾಗಿರುವ ಸಂಪರ್ಕ/ವ್ಯಕ್ತಿ ಯಾರು ಎಂಬುದನ್ನು ಹುಡುಕಿ. ಅವರಿಗಿರುವ ಸಂಪರ್ಕಗಳು ಹಾಗೂ ಪ್ರಭಾವಗಳನ್ನು ಅವಲೋಕಿಸಿ.
ಇಂತಹ ವ್ಯಕ್ತಿಗಳನ್ನು ಭೇಟಿಮಾಡಿ ಹಾಗೂ ನಿಮ್ಮ ಉದ್ದೇಶ ಮತ್ತು ವೃತ್ತಿ ಗುರಿಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ನಿಮ್ಮ ವೃತ್ತಿಗೆ ಹೊಂದುವ ಸಂಪರ್ಕಗಳನ್ನು ಶಿಫಾರಸುಗಳನ್ನು ಅವರಿಂದ ಪಡೆದುಕೊಳ್ಳಿ.
ಉದ್ಯೋಗ ಮಾಹಿತಿ ಪಡೆದುಕೊಳ್ಳಿ
ಪರಿಚಯವಿಲ್ಲದ ಜನರಲ್ಲಿ ಉದ್ಯೋಗ ಸಂಬಂಧಿತ ಮಾಹಿತಿಗಳನ್ನು ಪಡೆದುಕೊಳ್ಳುವುದು ಹೇಗೆ ಎಂದು ಯೋಚಿಸದಿರಿ. ಯಾವುದೇ ಸಂಪರ್ಕವನ್ನು ನೆಟ್ವರ್ಕ್ಗೆ ಸೇರಿಸುವ ಮುನ್ನ ಅವರ ಪ್ರೊಫೈಲ್ಗಳು ಹಾಗೂ ಅವರಿಗಿರುವ ಕಾಂಟ್ಯಾಕ್ಟ್ಗಳನ್ನು ಪರಿಶೀಲಿಸುವುದು ಒಳಿತು ಎಂಬುದು ತಜ್ಞರು ನೀಡುವ ಕಿವಿಮಾತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ