• ಹೋಂ
  • »
  • ನ್ಯೂಸ್
  • »
  • Jobs
  • »
  • Web Developer: 2nd PU ಬಳಿಕ ವೆಬ್ ಡೆವಲಪ್​ಮೆಂಟ್​ ಕೋರ್ಸ್ ಮಾಡಿದ್ರೆ, ಸಂಬಳ ಲಕ್ಷಗಳಲ್ಲಿ ಇರುತ್ತೆ

Web Developer: 2nd PU ಬಳಿಕ ವೆಬ್ ಡೆವಲಪ್​ಮೆಂಟ್​ ಕೋರ್ಸ್ ಮಾಡಿದ್ರೆ, ಸಂಬಳ ಲಕ್ಷಗಳಲ್ಲಿ ಇರುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Web Development Courses: ಇತ್ತೀಚಿನ ದಿನಗಳಲ್ಲಿ ವೆಬ್ ಡೆವಲಪರ್ ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ವೆಬ್ ಡೆವಲಪ್ ಮೆಂಟ್ ಕೋರ್ಸ್ ಮಾಡಿದ್ರೆ ಸಾಕು ಸಂಬಳ ಲಕ್ಷಗಳಲ್ಲಿ ಇರುತ್ತೆ. ವೆಬ್ ಡೆವಲಪರ್ ಆಗಲು ಹೆಚ್ಚಿನ ಓದು, ಸಮಯ ಬೇಕಿಲ್ಲ. ವೆಬ್ ಡೆವಲಪ್ ಮೆಂಟ್ ಕೋರ್ಸ್ ಅನ್ನು 6 ತಿಂಗಳು ಅಥವಾ 1 ವರ್ಷದಲ್ಲೇ ಮಾಡಬಹುದು.

ಮುಂದೆ ಓದಿ ...
  • Share this:

ಡಿಜಿಟಲ್ ಯುಗದ (Digital World) ಹಿಂದೆಂದಿಗಿಂತಲೂ ಬೃಹತಾಕಾರವಾಗಿ ಬೆಳೆಯುತ್ತಿದೆ. ಸರ್ಕಾರಿ ಸಂಸ್ಥೆಗಳು, ಖಾಸಗಿ ಕಂಪನಿಗಳು, ಶಾಲೆಗಳು, ಕಾಲೇಜುಗಳು, ಜನರು ಸಹ ಈಗ ತಮ್ಮ ವೈಯಕ್ತಿಕ ವೆಬ್‌ಸೈಟ್‌ಗಳನ್ನು (Websites) ಹೊಂದಲು ಬಯಸುತ್ತಿದ್ದಾರೆ. ಹೀಗಾಗಿ ಇದನ್ನು ಸೃಷ್ಟಿಸುವ ವೃತ್ತಿಪರ ವೆಬ್​ ಡೆವಲಪರ್​ ಗಳಿಗೆ (Web Developers) ಬೇಡಿಕೆಯೂ ಹೆಚ್ಚುತ್ತಿದೆ. ನೀವು ಕಂಪ್ಯೂಟರ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದರೆ, ನೀವು ವೆಬ್ ಅಭಿವೃದ್ಧಿಯಲ್ಲಿ ಕರಿಯರ್​ ಅನ್ನು ಸೃಷ್ಟಿಸಿಕೊಳ್ಳಬಹುದು.


ಇತ್ತೀಚಿಗಿನ ದಿನಗಳಲ್ಲಿ ವೆಬ್​ ಡೆವಲಪರ್​ ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ವೆಬ್​ ಡೆವಲಪ್​ ಮೆಂಟ್​ ಕೋರ್ಸ್​ ಮಾಡಿದ್ರೆ ಸಾಕು ಸಂಬಳ ಲಕ್ಷಗಳಲ್ಲಿ ಇರುತ್ತೆ. ವೆಬ್​ ಡೆವಲಪರ್ ಆಗಲು ಹೆಚ್ಚಿನ ಓದು, ಸಮಯ ಬೇಕಿಲ್ಲ. ವೆಬ್​ ಡೆವಲಪ್​​​​​​​ ಮೆಂಟ್​ ಕೋರ್ಸ್​ ಅನ್ನು 6 ತಿಂಗಳು ಅಥವಾ 1 ವರ್ಷಗಳಲ್ಲೇ ಮಾಡಬಹುದು.


ವೆಬ್ ಡೆವಲಪ್‌ಮೆಂಟ್ ಸೆಕ್ಟರ್‌ನಲ್ಲಿ ಉದ್ಯೋಗಾವಕಾಶಗಳ ಕೊರತೆಯೇ ಇಲ್ಲ.  ನೀವು ನಿಮ್ಮ ಸ್ವಂತ ವ್ಯವಹಾರವನ್ನು ಸಹ ಪ್ರಾರಂಭಿಸಬಹುದು. ಇದಕ್ಕಾಗಿ ಅನೇಕ ಸರ್ಟಿಫಿಕೇಟ್, ಡಿಪ್ಲೊಮಾ ಮತ್ತು ಡಿಗ್ರಿ ಕೋರ್ಸ್‌ಗಳು ಲಭ್ಯವಿದೆ. ಸಮಯ ಮತ್ತು ಹಣದ ಕೊರತೆ ಇದ್ದವರು ಸರ್ಟಿಫಿಕೇಟ್ ಕೋರ್ಸ್ ಮಾಡಬಹುದು. ಕೋರ್ಸ್​ ಬಳಿಕ ಉದ್ಯೋಗವನ್ನು ಶುರು ಮಾಡಬಹುದು.


ವೆಬ್ ಡೆವಲಪರ್ ಕೆಲಸವೇನು?


ವೆಬ್ ಡೆವಲಪರ್‌ನ ಬೇಸಿಕ್​ ಕೆಲಸವೆಂದರೆ ವೆಬ್‌ಸೈಟ್ ಅನ್ನು ರಚಿಸುವುದು, ಅದನ್ನು ಸರ್ವರ್‌ಗೆ ಸಂಪರ್ಕಿಸುವುದು, ಅದನ್ನು ನಿರ್ವಹಿಸುವುದು ಇತ್ಯಾದಿ. ಕೆಲವು ಡೆವಲಪರ್‌ಗಳು ಈ ಕೆಲಸದ ಜೊತೆಗೆ ಸಾಮಾಜಿಕ ಮಾಧ್ಯಮ ನಿರ್ವಹಣೆಯ ಕೆಲಸವನ್ನೂ ಮಾಡುತ್ತಾರೆ.


Google Digital Marketing


ಯಾವ ರೀತಿಯ ಕೋರ್ಸ್​ಗಳನ್ನು ಮಾಡಬಹುದು?


ಸರ್ಟಿಫಿಕೇಟ್​ ಕೋರ್ಸ್​ಗಳು, ಐಟಿಐ, ಡಿಪ್ಲೊಮಾ, BCA, ಬಿಎಸ್ಸಿ-ಐಟಿ, ಬಿ.ಟೆಕ್-ಐ.ಟಿಯಲ್ಲಿಯೂ ನೀವು ವೆಬ್​ ಡೆವಲಪಿಂಗ್​ ಕಲಿಯಬಹುದು. ಯುವಕರು ಎಲ್ಲಿಂದ ಬೇಕಾದರೂ ಸರ್ಟಿಫಿಕೇಟ್ ಕೋರ್ಸ್ ಮಾಡಬಹುದು. ಇದು ಆರು ತಿಂಗಳಿಂದ ಒಂದು ವರ್ಷದವರೆಗೆ ಇರುತ್ತದೆ. ನೀವು ಕಲಿಯುವ ಬಯಕೆಯನ್ನು ಹೊಂದಿದ್ದರೆ, ನಿಮ್ಮ ವ್ಯವಹಾರವನ್ನು ಮಾಡಲು ಬಯಸಿದರೆ ಇದು ಅತ್ಯುತ್ತಮ ಮಾಧ್ಯಮವಾಗಿದೆ. ಏಕೆಂದರೆ ಕಡಿಮೆ ಸಮಯ ಮತ್ತು ಹಣದಲ್ಲಿ ಒಳ್ಳೆಯ ಉದ್ಯೋಗ ಪಡೆಯಬಹುದು. ಐಟಿಐ ಮತ್ತು ಡಿಪ್ಲೊಮಾ ಸಾಮಾನ್ಯವಾಗಿ ಎರಡು ವರ್ಷ ಮತ್ತು ಮೂರು ವರ್ಷಗಳ ಕೋರ್ಸ್‌ಗಳಾಗಿವೆ.
ಸೆಕೆಂಡ್​ ಪಿಯು ನಂತರ ಕೋರ್ಸ್‌ಗಳನ್ನು ಮಾಡಬಹುದು


ನೀವು ಸೆಕೆಂಟ್​ ಪಿಯು ಮಾಡಿದ್ದರೆ, ಸರ್ಟಿಫಿಕೇಟ್​ ಕೋರ್ಸ್​ ಮಾಡಬಹುದು. ಬಿಸಿಎ, ಬಿಎಸ್ಸಿ ಮೂರು ವರ್ಷ ಮತ್ತು ಬಿಟೆಕ್ ನಾಲ್ಕು ವರ್ಷಗಳ ಕೋರ್ಸ್. ಈ ಮೂರು ಕೋರ್ಸ್‌ಗಳನ್ನು ಮಾಡುವುದರಿಂದ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಬಹುದು. ಏಕೆಂದರೆ ಉದ್ಯೋಗಕ್ಕೆ ಜ್ಞಾನದ ಜೊತೆಗೆ ಪದವಿಯೂ ಬೇಕು. BCA, BSC ಮಾಡಲು, ನಿಮ್ಮ ಸುತ್ತಲಿನ ಕಾಲೇಜುಗಳನ್ನೇ ನೀವು ಆಯ್ಕೆ ಮಾಡಬಹುದು. ಏಕೆಂದರೆ ಇವು ಸಾಮಾನ್ಯ ಕೋರ್ಸ್‌ಗಳಾಗಿದ್ದು, ಸುಲಭವಾಗಿ ಎಲ್ಲೆಡೆ ಲಭ್ಯವಿದೆ.


ಇದನ್ನೂ ಓದಿ: Career Tips: ಡಿಗ್ರಿ ಜೊತೆಗೆ ಈ ಮೂರರಲ್ಲಿ 1 ಕೋರ್ಸ್ ಮಾಡಿದ್ರೂ ಬೇಗ ಒಳ್ಳೆಯ ಉದ್ಯೋಗ ಸಿಗುತ್ತೆ


ವೆಬ್ ಡೆವಲಪರ್‌ನ ಆರಂಭಿಕ ವೇತನವು ಸುಮಾರು 1.8 ಲಕ್ಷದಿಂದ ಪ್ರಾರಂಭವಾಗಬಹುದು. ನಿಮಗೆ ಅನುಭವ ಹೆಚ್ಚಿದಂತೆ ಸಂಬಳ ಹೆಚ್ಚಾಗುತ್ತದೆ. ನಿಮ್ಮ ಕಠಿಣ ಪರಿಶ್ರಮ ಆಧಾರದ ಮೇಲೆ ನೀವು ಇನ್ನೂ ಹೆಚ್ಚಿನದ್ದನ್ನು ಗಳಿಸಬಹುದು.

Published by:Kavya V
First published: