• ಹೋಂ
  • »
  • ನ್ಯೂಸ್
  • »
  • Jobs
  • »
  • Career Guidance: ಪೈಲೆಟ್ ಆಗುವುದು ಹೇಗೆ? ಅರ್ಹತೆ, ಪರೀಕ್ಷೆ, ಟ್ರೈನಿಂಗ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

Career Guidance: ಪೈಲೆಟ್ ಆಗುವುದು ಹೇಗೆ? ಅರ್ಹತೆ, ಪರೀಕ್ಷೆ, ಟ್ರೈನಿಂಗ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಭಾರತದಲ್ಲಿ ಪೈಲಟ್ ಆಗಲು ಶೈಕ್ಷಣಿಕ ಅರ್ಹತೆ, ವಯಸ್ಸು, ದೈಹಿಕ ಸಾಮರ್ಥ್ಯ, ತರಬೇತಿ ಮತ್ತು ಪರವಾನಗಿ ಅಗತ್ಯತೆಗಳನ್ನು ಪೂರೈಸಬೇಕು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಹೀಗಿದೆ.

  • Share this:

ಮಾರ್ಚ್‌, ಏಪ್ರಿಲ್‌ ಎಂದರೆ ವಿದ್ಯಾರ್ಥಿಗಳಿಗೆ ಮಹತ್ತರ ಘಟ್ಟ. ಎಸ್‌ಎಸ್‌ಎಲ್‌ಸಿ (SSLC), ಪಿಯುಸಿ (PUC) ವಿದ್ಯಾರ್ಥಿಗಳು ಪರೀಕ್ಷೆ ಬರೆದು ಫಲಿತಾಂಶವನ್ನೂ ಪಡೆದು ಮಂದೇನು ಅಂತಾ ಯೋಚಿಸುತ್ತಾ ಇರುತ್ತಾರೆ. ಹೀಗೆ ಮುಂದೆ ಏನು ಮಾಡೋದು? ಅಂತಾ ಯೋಚಿಸುತ್ತಿರುವವರಿಗೆ ಇಲ್ಲೊಂದು ಅದ್ಭುತ ವೃತ್ತಿ ಅವಕಾಶದ (Career Options) ಬಗ್ಗೆ ಮಾಹಿತಿ ಇಲ್ಲಿದೆ.


ನೀವು ಪೈಲಟ್‌ ಆಗಬೇಕಾ?


ವಿಮಾನ ಎಂದರೆ ಎಲ್ಲರಿಗೂ ಒಂದು ಕುತೂಹಲ. ಒಮ್ಮೆಯಾದರೂ ಅದರಲ್ಲಿ ಪ್ರಯಾಣಿಸಬೇಕು ಎನ್ನುವ ಆಸೆ. ಬೇರೆ ಕೆಲಸ ಮಾಡುತ್ತಾ ಪ್ರತಿನಿತ್ಯ ವಿಮಾನದಲ್ಲಿ ಸಂಚರಿಸಲು ಆಗುವುದಿಲ್ಲ. ಆದರೆ ಪೈಲಟ್‌ ಆದ್ರೆ ಪ್ರತಿನಿತ್ಯ ಆಕಾಶದಲ್ಲಿ ಹಾರಬಹುದು. ಹಲವಾರು ಮಕ್ಕಳಿಗೆ ಮುಂದೇನಾಗ್ತೀಯ ಅಂತಾ ಕೇಳಿದರೆ ಅವರ ಪಟ್ಟಿಯಲ್ಲಿ ಪೈಲಟ್‌ ಆಯ್ಕೆ ಇರುತ್ತದೆ. ಹಾಗಾದರೆ ಪೈಲಟ್‌ ಆಗೋದು ಹೇಗೆ ಅಂತಾ ಇಲ್ಲಿ ನೋಡೋಣ.


ಭಾರತೀಯ ನಾಗರಿಕ ವಿಮಾನಯಾನ MRO ಮಾರುಕಟ್ಟೆಯು 2025 ರ ವೇಳೆಗೆ $4.33 Bn ಗೆ ಬೆಳೆಯುವ ನಿರೀಕ್ಷೆಯೊಂದಿಗೆ, ಮುಂದಿನ 20 ವರ್ಷಗಳಲ್ಲಿ ಭಾರತಕ್ಕೆ 31,000 ಪೈಲಟ್‌ಗಳು ಬೇಕಾಗಬಹುದು ಎಂದು ತಿಳಿಸಿದೆ.


ಇದಲ್ಲದೆ, 2022 ರ PWC ಇಂಡಿಯಾ ಅಧ್ಯಯನದ ಪ್ರಕಾರ, ಭಾರತೀಯ ನಾಗರಿಕ ವಿಮಾನಯಾನ ಉದ್ಯಮದಲ್ಲಿ ವಿಶ್ವದಲ್ಲೇ ಮೂರನೇ ಅತಿ ದೊಡ್ಡ ಉದ್ಯಮವಾಗಿದೆ. ಹೀಗಿರುವಾಗ ವಾಯುಯಾನ ಉದ್ಯಮ ಆಕಾಂಕ್ಷಿಗಳಿಗೆ ಉತ್ತಮ ಉದ್ಯೋಗ ಭರವಸೆ ನೀಡುವುದರಲ್ಲಿ ಅನುಮಾನವೇ ಇಲ್ಲ. ಈ ಕ್ಷೇತ್ರದಲ್ಲೂ ಹಲವಾರು ವೃತ್ತಿ ಅವಕಾಶಗಳಿವೆ.


ಅದರಲ್ಲಿ ಒಂದು ಪೈಲಟ್. ಇದೊಂದು ಸವಾಲು ಮತ್ತು ಲಾಭದಾಯಕ ವೃತ್ತಿಯಾಗಿದ್ದು, ಪಿಯುಸಿ ಮುಗಿಸಿದವರಿಗೆ ಒಂದೊಳ್ಳೆಯ ಕೆಲಸದ ಮತ್ತು ಕೋರ್ಸ್‌ ಆಯ್ಕೆಯಾಗಿದೆ. ಒಬ್ಬ ವಿದ್ಯಾರ್ಥಿ ಪೈಲಟ್‌ ಆಗಲು ಬಯಸಿದರೆ ಅವರಿಗೆ ಎರೆಡು ಆಯ್ಕೆಗಳಿವೆ. ಒಂದು, ಅವನು ಭಾರತೀಯ ವಾಯುಪಡೆಗೆ ಸೇರುವ ಮೂಲಕ, ಹಾಗೂ ಇನ್ನೊಂದು ವಾಣಿಜ್ಯ ಪೈಲಟ್‌ ಪರವಾನಿಗೆ ಪಡೆಯುವ ಮೂಲಕ ತನ್ನ ಕನಸನ್ನು ನನಸು ಮಾಡಿಕೊಳ್ಳುವುದಾಗಿದೆ.


ಪೈಲಟ್ ಆಗಲು ಏನು ಓದಿರಬೇಕು?


ಭಾರತದಲ್ಲಿ ಪೈಲಟ್ ಆಗಲು ಶೈಕ್ಷಣಿಕ ಅರ್ಹತೆ, ವಯಸ್ಸು, ದೈಹಿಕ ಸಾಮರ್ಥ್ಯ, ತರಬೇತಿ ಮತ್ತು ಪರವಾನಗಿ ಅಗತ್ಯತೆಗಳನ್ನು ಪೂರೈಸಬೇಕು. ಶೈಕ್ಷಣಿಕ ಅರ್ಹತೆ ಏನು ಅಂತಾ ನೋಡುವುದಾದರೆ, ದ್ವಿತೀಯ ಪಿಯುಸಿ ನಂತರ ಪೈಲಟ್‌ ಕೋರ್ಸ್‌ಗೆ ಪ್ರವೇಶ ಪಡೆಯಬಹುದಾಗಿದೆ. ಅಭ್ಯರ್ಥಿಗಳು ಭೌತಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್ ಕಡ್ಡಾಯ ವಿಷಯಗಳೊಂದಿಗೆ ದ್ವಿತೀಯ ಪಿಯುಸಿ ಮುಗಿಸಿರಬೇಕು.


ಪ್ರಾತಿನಿಧಿಕ ಚಿತ್ರ


ವಯೋಮಿತಿ


ವಾಣಿಜ್ಯ ಪೈಲಟ್ ಪರವಾನಗಿಗೆ (ಸಿಪಿಎಲ್) ಅಭ್ಯರ್ಥಿಗಳಿಗೆ 18 ವರ್ಷ ತುಂಬಿರಬೇಕು ಮತ್ತು ಖಾಸಗಿ ಪೈಲಟ್ ಪರವಾನಗಿ (ಪಿಪಿಎಲ್) ಗೆ ಕನಿಷ್ಠ 17 ವರ್ಷವಾಗಿರಬೇಕು. ಅಭ್ಯರ್ಥಿಗಳು ಮುಗಿಲೆತ್ತರಕ್ಕೆ ಪ್ರಯಾಣಿಸಲು ದೈಹಿಕವಾಗಿ ಸಮರ್ಥರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಸಂಪೂರ್ಣ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಪೈಲಟ್‌ ಆಕಾಂಕ್ಷಿಗಳಿಗೆ ದೈಹಿಕ ಪರೀಕ್ಷೆ ಕಡ್ಡಾಯವಾಗಿದ್ದು, ಇದಕ್ಕೆ ಸಂಬಂಧಿಸಿದ ವೈದ್ಯಕೀಯ ಪ್ರಮಾಣಪತ್ರವನ್ನು ಸಹ ಒದಗಿಸಬೇಕಾಗುತ್ತದೆ.


ಕೋರ್ಸ್‌


ದ್ವಿತೀಯ ಪಿಯುಸಿ ನಂತರ ಪೈಲಟ್‌ ಆಗಲು ಕೋರ್ಸ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ, ನೀವು ತರಬೇತಿ ಸಂಸ್ಥೆಗಳು ನಿಗದಿಪಡಿಸಿದ ಪ್ರವೇಶ ಪರೀಕ್ಷೆ, ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆಯನ್ನು ತೆರವುಗೊಳಿಸಬೇಕಾಗುತ್ತದೆ.


ಪರವಾನಗಿ ಪರೀಕ್ಷೆ


ಪೈಲಟ್ ಕಾರ್ಯನಿರ್ವಹಿಸಲು ಬಯಸುವ ಪರವಾನಗಿ ಮತ್ತು ವಿಮಾನದ ಪ್ರಕಾರವನ್ನು ಅವಲಂಬಿಸಿ ತರಬೇತಿ ಮತ್ತು ಪರವಾನಗಿ ಅಗತ್ಯತೆಗಳು ಸಹ ಬದಲಾಗುತ್ತವೆ. ಪೈಲಟ್‌ಗಳು ತಮ್ಮ ಪರವಾನಗಿಗಳನ್ನು ಪಡೆಯಲು ಲಿಖಿತ ಮತ್ತು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.


ಪರೀಕ್ಷೆ ಯಾವುವು?


ಭಾರತೀಯ ವಾಯುಪಡೆಯಲ್ಲಿ ಪೈಲಟ್‌ ಆಗಲು ಅಭ್ಯರ್ಥಿಗಳು, ಪೈಲಟ್‌ ಆಗಲು AFCAT, NDA, CDSE, NCC ಈ ಯಾವುದಾದರು ಒಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.




ಉದ್ಯೋಗ ಭರವಸೆ ಮತ್ತು ಆಯ್ಕೆ


ಭಾರತದಲ್ಲಿ ವಾಯುಯಾನ ಉದ್ಯಮದ ಬೆಳವಣಿಗೆಯು ವಿವಿಧ ವಲಯಗಳಲ್ಲಿ ಪೈಲಟ್‌ಗಳ ಬೇಡಿಕೆಯನ್ನು ಹೆಚ್ಚಿಸಿದೆ. ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳು ವಿಮಾನ ಪ್ರಯಾಣದ ಅಗತ್ಯವನ್ನು ಉಳಿಸಿಕೊಳ್ಳಲು ನಿರಂತರವಾಗಿ ಹೊಸ ಪೈಲಟ್‌ಗಳನ್ನು ನೇಮಿಸಿಕೊಳ್ಳುತ್ತಲೇ ಇವೆ.


ಇದರ ಜೊತೆಗೆ ಮಿಲಿಟರಿ, ಕಾರ್ಪೊರೇಟ್ ಮತ್ತು ಕಾರ್ಗೋ ವಲಯಗಳಲ್ಲೂ ಪೈಲಟ್‌ಗಳಿಗೆ ಅವಕಾಶಗಳಿವೆ. ಭಾರತದಲ್ಲಿ ವಿವಿಧ ರೀತಿಯ ಪೈಲಟ್ ವೃತ್ತಿಗಳು ಲಭ್ಯವಿವೆ, ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ಅವಶ್ಯಕತೆಗಳು ಮತ್ತು ಜವಾಬ್ದಾರಿಗಳನ್ನು ಹೊಂದಿದೆ.


ಪ್ರಯಾಣಿಕ ವಿಮಾನಗಳು, ಸರಕು ವಿಮಾನಗಳು ಮತ್ತು ಮೇಲ್ ವಿಮಾನಗಳಂತಹ ವಿವಿಧ ರೀತಿಯ ವಿಮಾನಗಳನ್ನು ನಿರ್ವಹಿಸಲು ಕಲಿಯುವುದರಿಂದ, ವಿಮಾನದ ಆಂತರಿಕ ಕಾರ್ಯವಿಧಾನಗಳನ್ನು ನಿರ್ವಹಿಸಲು ಪೈಲಟ್‌ಗಳು ಸಹ ಜವಾಬ್ದಾರರಾಗಿರುತ್ತಾರೆ. ಅಭ್ಯರ್ಥಿಗಳು ಯಾವ ರೀತಿಯ ಸ್ಟ್ರೀಮ್‌ಗಳು ಮತ್ತು ವಿಷಯಗಳನ್ನು ಅನುಸರಿಸುತ್ತಾರೆ ಎಂಬುದರ ಆಧಾರದ ಮೇಲೆ ಪೈಲಟ್‌ಗಳನ್ನು ಆಯ್ಕೆ ಮಾಡಲಾಗುತ್ತದೆ.




ಪೈಲಟ್‌ಗಳ ವಿವರ
ಏರ್‌ಲೈನ್ ಟ್ರಾನ್ಸ್‌ಪೋರ್ಟ್ ಪೈಲಟ್‌ಗಳು
ಖಾಸಗಿ ಪೈಲಟ್‌ಗಳು
ಏರ್ ಫೋರ್ಸ್ ಪೈಲಟ್‌ಗಳು
ಸ್ಪೋರ್ಟ್ ಪೈಲಟ್‌ಗಳು.


ಉದ್ಯೋಗವಕಾಶಗಳು


ತರಬೇತಿ ಪಡೆದ ಪರೀಕ್ಷೆ ಪಾಸ್‌ ಮಾಡಿದ ಅಭ್ಯರ್ಥಿಗಳು ಭಾರತೀಯ ವಾಯುಪಡೆ (IAF) ಸೇರಿ ಭಾರತೀಯ ಕೋಸ್ಟ್ ಗಾರ್ಡ್, ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF), ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಮುಂತಾದವು ಪೈಲಟ್ ಉದ್ಯೋಗ ಅವಕಾಶಗಳನ್ನು ನೀಡುತ್ತವೆ.


ವೇತನ


ಭಾರತದಲ್ಲಿ, ಪೈಲಟ್‌ಗೆ ಆರಂಭಿಕ ವೇತನವು ರೂ 12 ಲಕ್ಷದಿಂದ 15 ಲಕ್ಷದವರೆಗೆ ಇದೆ. ಈ ಕ್ಷೇತ್ರದಲ್ಲಿ ಅನುಭವಿ ಏವಿಯೇಟರ್‌ಗಳು 1 ಕೋಟಿ ರೂ.ವರೆಗೂ ಸಹ ಸಂಬಳ ಪಡೆದುಕೊಳ್ಳುತ್ತಿದ್ದಾರೆ. ಉತ್ತಮ ಸಂಬಳದ ಜೊತೆ ಪೈಲಟ್‌ಗಳು ಸಮಗ್ರ ವೈದ್ಯಕೀಯ ಮತ್ತು ವಿಮಾ ಪ್ರಯೋಜನಗಳನ್ನು ಹಾಗೆಯೇ ನಿವೃತ್ತಿ ಯೋಜನೆಗಳು ಮತ್ತು ಇತರ ಸವಲತ್ತುಗಳನ್ನು ಸಹ ಪಡೆಯುತ್ತಾರೆ.


ಇದನ್ನೂ ಓದಿ: Success Story: 21 ವರ್ಷಕ್ಕೇ ವಿಮಾನ ಹಾರಿಸಿದ ಮೊದಲ ಭಾರತೀಯ ಮಹಿಳೆ ಈಕೆ; ಸರಳಾ ಅವರ ಅದ್ಧೂರಿ ಸಾಧನೆ


ಭಾರತದಲ್ಲಿ ವಾಯುಯಾನ ಉದ್ಯಮದ ಬೆಳವಣಿಗೆ ಮತ್ತು ವಿವಿಧ ವಲಯಗಳಲ್ಲಿ ಪೈಲಟ್‌ಗಳ ಬೇಡಿಕೆಯು ಪೈಲಟ್‌ಗಳಿಗೆ ವೃತ್ತಿ ಅವಕಾಶಗಳನ್ನು ನೀಡುತ್ತದೆ ಎನ್ನಬಹುದು. FY 2024 ರಲ್ಲಿ ಭಾರತವು 140 ಮಿಲಿಯನ್ ವಾಯುಯಾನ ಪ್ರಯಾಣಿಕರನ್ನು ಹೊಂದುವ ನಿರೀಕ್ಷೆಯಿದೆ. ಒಟ್ಟಾರೆ ಬೆಳೆಯುತ್ತಿರುವ ಈ ಉದ್ಯಮದಲ್ಲಿ ಕೆಲಸಕ್ಕೆ ಸೇರಿಕೊಳ್ಳಲು ಬೇಕಾದ ತಯಾರಿಗಳನ್ನು ಈಗಿನಿಂದಲೇ ಆರಂಭಿಸಿದರೆ ನಿಮ್ಮ ವೃತ್ತಿ ಭವಿಷ್ಯ ಭದ್ರವಾಗಿರುತ್ತದೆ.

top videos
    First published: