ಇನ್ನು ಕೆಲವೇ ತಿಂಗಳುಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ನಡೆಯಲಿದೆ. ಈಗಾಗಲೇ ರಾಜಕೀಯ ಪಕ್ಷಗಳು (Karnataka Political Parties) ಚುನಾವಣಾ ತಯಾರಿಯಲ್ಲಿ ತೊಡಗಿವೆ. ರಾಜಕೀಯ ಸಂಬಂಧಿತ ಎಲ್ಲರಿಗೂ ಈಗ ನಿರ್ಣಾಯಕ ಸಮಯ. ಇನ್ನು ನಿಮಗೂ ರಾಜಕೀಯ ವಿಷಯಗಳಲ್ಲಿ, ಚುನಾವಣೆಯಲ್ಲಿ ಆಸಕ್ತಿ ಇದೆಯೇ? ಹಾಗಿದ್ದರೆ ನೀವು ಈ ಕ್ಷೇತ್ರದಲ್ಲಿ ಒಳ್ಳೆಯ ವೃತ್ತಿಯನ್ನು (Career) ಕಂಡುಕೊಳ್ಳಬಹುದು. ಚುನಾವಣಾ ವಿಶ್ಲೇಷಕರಾಗುವ (Election Analyst) ಮೂಲಕ ಲಕ್ಷ ಲಕ್ಷ ಹಣ ಸಂಪಾದನೆ ಮಾಡಬಹುದು.
ಹಾಗಾದರೆ ಚುನಾವಣಾ ವಿಶ್ಲೇಷಕರಾಗುವುದು ಹೇಗೆ? ಈ ವೃತ್ತಿಗೆ ಬೇಕಾದ ಶೈಕ್ಷಣಿಕ ಹಿನ್ನೆಲೆ, ಅರ್ಹಗಳೇನು ಎಂಬುವನ್ನು ಇಲ್ಲಿ ತಿಳಿಸಲಾಗಿದೆ.
ವೃತ್ತಿ ಆಯ್ಕೆಗಳು ಹೀಗಿವೆ..
ನೀವು ರಾಜಕೀಯ ಪಕ್ಷದ ಕಾರ್ಯಕರ್ತರು, ಟಿಕೆಟ್ ಆಕಾಂಕ್ಷಿ ಅಥವಾ ರಾಜಕೀಯ ನಾಯಕರಾಗಬೇಕಿಲ್ಲ. ಇದಾರಚೆಗೂ ಚುನಾವಣಾ ಸಂಬಂಧಿಸಿದಂತೆ ಉದ್ಯೋಗಗಳಿವೆ. ಅವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮತದಾನ ಬಳಿಕ, ಚುನಾವಣಾ ಫಲಿತಾಂಶಕ್ಕೂ ಮುನ್ನ ಚುನಾವಣೋತ್ತರ ಸಮೀಕ್ಷೆ ಸಾಕಷ್ಟು ಮಹತ್ವವನ್ನು ಪಡೆದುಕೊಳ್ಳುತ್ತದೆ. ಈ ರೀತಿ ಸಮೀಕ್ಷೆ ನಡೆಸುವುದು ಸುಲಭದ ಮಾತಲ್ಲ. ಇದಕ್ಕೆ ಚುನಾವಣಾ ತಜ್ಞರ ಅಗತ್ಯವಿರುತ್ತದೆ. ನೀವು ಈ ಹುದ್ದೆಯನ್ನು ಆರಿಸಿಕೊಳ್ಳಬಹುದು.
ಚುನಾವಣಾ ತಜ್ಞರಾದವರು ಏನೆಲ್ಲಾ ಮಾಡಬೇಕು?
ಪ್ರತಿ ಚುನಾವಣೆಯೂ ವಿಭಿನ್ನ. ಎಲ್ಲಿ ಚುನಾವಣೆ ನಡೆಯುತ್ತದೆಯೋ ಅಲ್ಲಿ ಗ್ರೌಂಡ್ ವರ್ಕ್ ಮಾಡಬೇಕಾಗುತ್ತದೆ. ಅಂಕಿಅಂಶ, ಜನಾಭಿಪ್ರಾಯವನ್ನು ಸಂಗ್ರಹಿಸುವುದು ಚುನಾವಣಾ ತಜ್ಞರ ಕೆಲಸ.
ಚುನಾವಣಾ ಮೈತ್ರಿಗಳು, ಮತ ಕ್ರೂಢೀಕರಣ, ಮತ ವಿಭಜನೆ, ಅಭ್ಯರ್ಥಿಗಳ ರಣತಂತ್ರ ಎಲ್ಲವನ್ನೂ ವಿಶ್ಲೇಷಿಸಬೇಕಾಗುತ್ತದೆ. ಮಾಧ್ಯಮಗಳು, ಫ್ರೀಲ್ಯಾನ್ಸ್ ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳು ಈ ಕೆಲಸವನ್ನು ಮಾಡಲು ಚುನಾವಣಾ ತಜ್ಞರನ್ನು ನೇಮಿಸಿಕೊಳ್ಳುತ್ತವೆ.
ಈ ಶೈಕ್ಷಣಿಕ ಹಿನ್ನೆಲೆ ಇದ್ದವರು ಚುನಾವಣಾ ವಿಶ್ಲೇಷಕರಾಗಬಹುದು
ರಾಜ್ಯಶಾಸ್ತ್ರ ಬಿಎ, ಸಮಾಜಶಾಸ್ತ್ರ ಬಿಎ, ಸಂಖ್ಯಾಶಾಸ್ತ್ರದಲ್ಲಿ ಬಿಎ, ರಾಜ್ಯಶಾಸ್ತ್ರದಲ್ಲಿ ಎಂಎ, ಸಮಾಜಶಾಸ್ತ್ರದಲ್ಲಿ ಎಂಎ, ಅಂಕಿಅಂಶದಲ್ಲಿ ಎಂಎ, ರಾಜ್ಯಶಾಸ್ತ್ರದಲ್ಲಿ ಪಿಎಚ್ಡಿ ಮಾಡಿದವರು ಚುನವಣಾ ತಜ್ಞರಾಗಬಹುದು.
ಎಲ್ಲೆಲ್ಲಿ ಉದ್ಯೋಗಗಳು ಸಿಗುತ್ತವೆ?
ಈ ಕ್ಷೇತ್ರದಲ್ಲಿನ ವೃತ್ತಿಪರರು ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆಯುತ್ತಾರೆ. ಚುನಾವಣಾ ಸಮೀಕ್ಷೆ ಅಥವಾ ಸಂಶೋಧನಾ ಸಂಸ್ಥೆಗಳು, ಸುದ್ದಿ ವಾಹಿನಿಗಳು, ಮುದ್ರಣ ಮಾಧ್ಯಮ ಸಂಸ್ಥೆಗಳು, ಪ್ರಮುಖ ರಾಜಕೀಯ ಪಕ್ಷಗಳು ಮತ್ತು ಎನ್ಜಿಒಗಳಿಗೆ ಇದರ ಅಗತ್ಯವಿದೆ.
ಇದರ ಹೊರತಾಗಿ, ರಾಜಕೀಯ ಸಮಾಲೋಚನೆ, ಬೋಧನೆ, ಸಂಸದೀಯ ವ್ಯವಹಾರಗಳು ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಚುನಾವಣಾ ತಜ್ಞರಿಗೆ ಹೆಚ್ಚಿನ ಬೇಡಿಕೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ