• Home
 • »
 • News
 • »
 • jobs
 • »
 • Career Guidance: ಇನ್​ವೆಸ್ಟ್​​ಮೆಂಟ್​ ಬ್ಯಾಂಕರ್ ಆಗುವುದು ಹೇಗೆ? ಕೋರ್ಸ್, ಬೇಕಿರುವ ಕೌಶಲ್ಯಗಳ ಮಾಹಿತಿ ಇಲ್ಲಿದೆ

Career Guidance: ಇನ್​ವೆಸ್ಟ್​​ಮೆಂಟ್​ ಬ್ಯಾಂಕರ್ ಆಗುವುದು ಹೇಗೆ? ಕೋರ್ಸ್, ಬೇಕಿರುವ ಕೌಶಲ್ಯಗಳ ಮಾಹಿತಿ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾರುಕಟ್ಟೆ ವಿಶ್ಲೇಷಣೆ, ಬ್ಯಾಂಕಿಂಗ್‌ಗೆ ಸಂಬಂಧಿಸಿದ ವಿಷಯಗಳಲ್ಲಿ ಅಭಿರುಚಿ ಉಳ್ಳವರು ಹೂಡಿಕೆ ಬ್ಯಾಂಕಿಂಗ್ ಅಥವಾ ಇನ್‌ವೆಸ್ಟ್‌ಮೆಂಟ್ ಬ್ಯಾಂಕಿಂಗ್‌  ವೃತ್ತಿಯನ್ನು ಆಯ್ಕೆಯನ್ನು ಮಾಡಬಹುದಾಗಿದೆ.

 • Trending Desk
 • 4-MIN READ
 • Last Updated :
 • Share this:

  ಯಾವುದೇ ವಿದ್ಯಾರ್ಥಿ (Student) ಮುಂದೆ ತನ್ನ ವೃತ್ತಿಜೀವನ (Career Life) ಸುಗಮವಾಗಿರಬೇಕೆಂದು ತನ್ನ ಕಲಿಕೆಯ ಪ್ರತಿಯೊಂದು ಹಂತದಲ್ಲೂ ಯೋಚಿಸಿ  ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಶಾಲಾ ವಿದ್ಯಾಭ್ಯಾಸದ ನಂತರ ಕಾಲೇಜುಗಳ ಮೆಟ್ಟಿಲೇರಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಾಗೂ ವೃತ್ತಿಪರ ಮಾರ್ಗಗಳನ್ನು (Career Guidance) ಆಯ್ಕೆಮಾಡಲು ಸುಲಭವಾಗುವಂತೆ ಈ ಅಂಕಣದ ಮೂಲಕ ಮಾಹಿತಿ ನೀಡಲಾಗಿದೆ.


  ಹೂಡಿಕೆ ಬ್ಯಾಂಕಿಂಗ್ ಹೇಗೆ ಉತ್ತಮ ವೃತ್ತಿ ಆಯ್ಕೆಯಾಗಿದೆ?


  ಮಾರುಕಟ್ಟೆ ವಿಶ್ಲೇಷಣೆ, ಬ್ಯಾಂಕಿಂಗ್‌ಗೆ ಸಂಬಂಧಿಸಿದ ವಿಷಯಗಳಲ್ಲಿ ಅಭಿರುಚಿ ಉಳ್ಳವರು ಹೂಡಿಕೆ ಬ್ಯಾಂಕಿಂಗ್ ಅಥವಾ ಇನ್‌ವೆಸ್ಟ್‌ಮೆಂಟ್ ಬ್ಯಾಂಕಿಂಗ್‌  ವೃತ್ತಿಯನ್ನು ಆಯ್ಕೆಯನ್ನು ಮಾಡಬಹುದಾಗಿದೆ. ಹೂಡಿಕೆ ಬ್ಯಾಂಕಿಂಗ್ ಅತ್ಯುತ್ತಮ ಅಂಶಗಳೊಂದಿಗೆ ಬಂದಿದ್ದು ಉನ್ನತ ಜೀವನಶೈಲಿ, ಉತ್ತಮ ವರಮಾನ ಹಾಗೂ ಚಿಂತೆ ಇಲ್ಲದ ವೃತ್ತಿಯಾಗಿದೆ.


  ಹೂಡಿಕೆ ಬ್ಯಾಂಕರ್ ಆಗಿ ನಿಮ್ಮ ಭವ್ಯ ಭವಿಷ್ಯದ ಕನಸು ನೀವು ಕಾಣುತ್ತಿದ್ದೀರಿ ಎಂದಾದಲ್ಲಿ ಇದಕ್ಕಾಗಿ ಕಠಿಣ ಪರಿಶ್ರಮ ಹಾಗೂ ಹೆಚ್ಚಿನ ಜ್ಞಾನವನ್ನು ನೀವು ಪಡೆದುಕೊಂಡಿರಬೇಕು. ಈ ವಿಷಯದ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.
  ಹೂಡಿಕೆ ಬ್ಯಾಂಕಿಂಗ್ ಎಂದರೇನು?


  ಬ್ಯಾಂಕಿಂಗ್ ಕಾರ್ಯಾಚರಣೆಯ ವಿಶೇಷ ವಿಭಾಗವಾಗಿ ಇನ್‌ವೆಸ್ಟ್‌ಮೆಂಟ್ ಬ್ಯಾಂಕಿಂಗ್ ಅನ್ನು ಉಲ್ಲೇಖಿಸಲಾಗುತ್ತದೆ. ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಬಂಡವಾಳ ಸಂಗ್ರಹಿಸಲು ಇಲ್ಲವೇ ಹಣಕಾಸು ನೆರವು ಒದಗಿಸಲು ಸಹಾಯ ಮಾಡುವ ವಿಭಾಗವಾಗಿದೆ.


  ಹೂಡಿಕೆದಾರರು ಹಾಗೂ ಭದ್ರತಾ ವಿತರಕರ ನಡುವೆ ಇವರು ಮಧ್ಯವರ್ತಿಯಾಗಿ ಕೆಲಸಮಾಡುತ್ತಾರೆ. ಹೊಸ ಸಂಸ್ಥೆಗಳು, ಸ್ಟಾರ್ಟಪ್‌ಗಳು ಸಾರ್ವಜನಿಕವಾಗಿ ಮುನ್ನಲೆಗೆ ಬರಲು ಅನುವು ಮಾಡಿಕೊಡುತ್ತಾರೆ. ಹೂಡಿಕೆ ಬ್ಯಾಂಕರ್‌ಗಳು ಆತ್ಮವಿಶ್ವಾಸಿಗಳಾಗಿರುವುದು ಮುಖ್ಯವಾಗಿದೆ. ಉದ್ಯೋಗದಾತರಿಗೆ ತಮ್ಮಲ್ಲಿರುವ ಅರಿವು ಹಾಗೂ ಬುದ್ಧಿಮತ್ತೆಯನ್ನು ಪ್ರದರ್ಶಿಸಬೇಕು ಹಾಗೂ ನಂಬಿಕೆ ಮೂಡುವಂತೆ ವರ್ತಿಸಬೇಕು.


  ವಿದ್ಯಾರ್ಹತೆಗಳೇನು? 


  ಇನ್‌ವೆಸ್ಟ್‌ಮೆಂಟ್ ಬ್ಯಾಂಕರ್ ಆಗಲು ಯಾವುದೇ ವಾಣಿಜ್ಯ ಅಥವಾ ಬ್ಯುಸಿನೆಸ್ ಸಂಬಂಧಿತ ಕ್ಷೇತ್ರಗಳಲ್ಲಿ ಪದವಿ ಹೊಂದಿರಬೇಕು.


  ಬಿ.ಕಾಮ್


  ಎಮ್‌ಬಿಎ


  ಸಿಎಫ್‌ಎ


  ಎಮ್‌.ಕಾಮ್


  ಹೂಡಿಕೆ ಬ್ಯಾಂಕಿಂಗ್‌ನಲ್ಲಿ ಆಸಕ್ತಿಯುಳ್ಳ ವಿದ್ಯಾರ್ಥಿಗಳು ವಾಣಿಜ್ಯ ಅಥವಾ ಕಲಾ ಕ್ಷೇತ್ರದಲ್ಲಿ ಶಿಕ್ಷಣ ಮುಗಿಸಿದ ನಂತರ ಇಂಟರ್ನ್‌ಶಿಪ್‌ ಹುದ್ದೆಯನ್ನು ಆರಂಭಿಸಬಹುದು. ಈ ಕ್ಷೇತ್ರದಲ್ಲಿ ಕೋರ್ಸ್ ಮುಂದುವರಿಸಲು ನೀವು 18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು.
  ಕೌಶಲ್ಯ : ಯಾವುದೇ ವೃತ್ತಿಯಲ್ಲಿ ಯಶಸ್ಸು ಲಭಿಸಲು ಆ ಕ್ಷೇತ್ರದಲ್ಲಿ ಪರಿಣಿತಿ ಹಾಗೂ ಕೌಶಲ್ಯವನ್ನು ಹೊಂದಿರುವುದು ಕಡ್ಡಾಯವಾಗಿದೆ. ಈ ಕ್ಷೇತ್ರ ಕೂಡ ಇದಕ್ಕೆ ಹೊರತಲ್ಲ. ಡೊಮೇನ್ ಹಾಗೂ ವೃತ್ತಿಗೆ ಸಂಬಂಧಿಸಿದ ಇನ್ನಿತರ ಕೌಶಲ್ಯಗಳಲ್ಲಿ ನೀವು ಸಿದ್ಧಹಸ್ತರಾಗಿರಬೇಕು.


  ಸಂವಹನ ಕೌಶಲ್ಯ: ಹೂಡಿಕೆ ಬ್ಯಾಂಕರ್ ಉತ್ತಮ ಮಾತುಗಾರನಾಗಿರಬೇಕು ಜೊತೆಗೆ ಉತ್ತಮ ಆಲಿಸುವವರೂ ಆಗಿರಬೇಕು. ಭಾಷೆಯ ಮೇಲೆ ಉತ್ತಮ ಹಿಡಿತವನ್ನು ಹೊಂದಿರಬೇಕು. ಸಂವಹನದಲ್ಲಿ ಪಾಂಡಿತ್ಯವಿರಬೇಕು.


  ಉತ್ತಮ ತಂಡದ ನಿರ್ವಾಹಕ: ಗ್ರಾಹಕರೊಂದಿಗೆ ವ್ಯವಹರಿಸುವಾಗ ವಿಶ್ವಾಸ ಮೂಡುವಂತಿರಬೇಕು. ಒಬ್ಬ ಉತ್ತಮ ತಂಡದ ನಿರ್ವಾಹಕ ಹಾಗೂ ನಾಯಕ ಎಂಬುದನ್ನು ಬಿಂಬಿಸಬೇಕು.


  ವಿಶ್ಲೇಷಣಾ ಕೌಶಲ್ಯ: ಸಂಸ್ಥೆಯಲ್ಲಿ ಯಾವುದೇ ಹೂಡಿಕೆಯ ವಿಷಯಕ್ಕೆ ಬರುವಾಗ ವಿಶ್ಲೇಷಕರು ಪ್ರಮುಖ ಪಾತ್ರವನ್ನು ಹೊಂದಿರುತ್ತಾರೆ. ಹೆಚ್ಚಿನ ಜವಬ್ದಾರಿ ಇರುತ್ತದೆ. ಸಂಸ್ಥೆಯ ಪರವಾಗಿ ವಿಶ್ಲೇಷಕರು ಹೂಡಿಕೆಯ ಎಲ್ಲಾ ವಿವರಗಳನ್ನು ದಾಖಲಿಸಬೇಕಾಗುತ್ತದೆ.


  ಡೊಮೈನ್ ಕೌಶಲ್ಯಗಳು


  ಸ್ಪ್ರೆಡ್‌ಶೀಟ್‌ಗಳ ರಚನೆ: ಭವಿಷ್ಯದ ಲೆಕ್ಕಾಚಾರ ಹಾಗೂ ಹಣಕಾಸು ಯೋಜನೆಗಳನ್ನು ನಿರ್ಧರಿಸುವಾಗ ಸಂಬಂಧಿತ ಸ್ಪ್ರೆಡ್‌ಶೀಟ್‌ಗಳ ರಚನೆಯಲ್ಲಿ ನಿಷ್ಣಾತರಾಗಿರಬೇಕು.


  ವೃತ್ತಿಗೆ ಬೇಕಾದ ಜ್ಞಾನ: ಪವರ್ ಪಾಯಿಂಟ್, ವರ್ಡ್, ಎಕ್ಸೆಲ್ ಮೊದಲಾದ ತಂತ್ರಜ್ಞಾನ ಕೌಶಲ್ಯಗಳನ್ನು ಇನ್‌ವೆಸ್ಟ್‌ಮೆಂಟ್ ಬ್ಯಾಂಕರ್‌ಗಳು ಅರಿತಿರಬೇಕು. ಕೆಲಸವನ್ನು ಸುಲಭಗೊಳಿಸುವ ಸಲಹೆಗಳನ್ನು ಅರಿತುಕೊಂಡಿರಬೇಕು.
  ಮಾರುಕಟ್ಟೆ ಡೇಟಾದ ಜ್ಞಾನ: ಮಾರುಕಟ್ಟೆ ಅಂಕಿಅಂಶಗಳ ತಿಳುವಳಿಕೆಯನ್ನು ಹೂಡಿಕೆ ಬ್ಯಾಂಕರ್ ಹೊಂದಿರಬೇಕು.


  ಗಣಿತ ಹಾಗೂ ಅಕೌಂಟ್ಸ್ ಜ್ಞಾನ: ಮಾರುಕಟ್ಟೆ ಹಾಗೂ ಅಕೌಂಟ್ಸ್ ಜ್ಞಾನವನ್ನು ಹೂಡಿಕೆ ಬ್ಯಾಂಕರ್ ಹೊಂದಿರಬೇಕು.


  ಹಣಕಾಸು ಪರಿಭಾಷೆಯ ತಿಳುವಳಿಕೆ: ಭದ್ರತಾ ಮೌಲ್ಯಮಾಪನ, ಆಸ್ತಿ ನಿರ್ವಹಣೆ, ಇಕ್ವಿಟಿ, ಸಾಲ ಮತ್ತು ಇತರ ಉತ್ಪನ್ನ ಸಾಧನಗಳಂತಹ ಹಣಕಾಸು ನಿಯಮಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವ ಅಗತ್ಯತೆ ಹೂಡಿಕೆ ಬ್ಯಾಂಕರ್‌ಗೆ ಇದೆ.

  Published by:Kavya V
  First published: