• ಹೋಂ
 • »
 • ನ್ಯೂಸ್
 • »
 • Jobs
 • »
 • Dance Choreography: ನೃತ್ಯ ನಿಮ್ಮ ಆಸಕ್ತಿಯಾಗಿದ್ದರೆ ಅದನ್ನು ಈ ರೀತಿ ಲಾಭದಾಯಕ ವೃತ್ತಿಯನ್ನಾಗಿಸಿಕೊಳ್ಳಿ

Dance Choreography: ನೃತ್ಯ ನಿಮ್ಮ ಆಸಕ್ತಿಯಾಗಿದ್ದರೆ ಅದನ್ನು ಈ ರೀತಿ ಲಾಭದಾಯಕ ವೃತ್ತಿಯನ್ನಾಗಿಸಿಕೊಳ್ಳಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನಿಮಗೆ ನೃತ್ಯ ಕಲೆ ಗೊತ್ತಿದ್ದರೆ ಇತರರಿಗೆ ನೃತ್ಯವನ್ನು ಕಲಿಸಿಕೊಡುವ ಮೂಲಕ ವೃತ್ತಿಜೀವನವನ್ನು ಆರಂಭಿಸಬಹುದಾಗಿದೆ. ಈ ಕ್ಷೇತ್ರದಲ್ಲಿ ಫಿಟ್‌ನೆಸ್ ಡ್ಯಾನ್ಸರ್ ಆಗಿ ಜಿಮ್‌ಗಳಲ್ಲಿ ಕೆಲಸ ಮಾಡಬಹುದು. ನಿಮ್ಮದೇ ಡ್ಯಾನ್ಸಿಂಗ್ ಸ್ಟುಡಿಯೋವನ್ನು ಕೂಡ ತೆರೆಯಬಹುದು.

 • Share this:

  ಕೈ ತುಂಬಾ ಸಂಪಾದಿಸಬೇಕು (Earning) ಎಂಬುದು ನಿಮ್ಮ ಆಶಯವಾಗಿದ್ದರೆ ಅದಕ್ಕಾಗಿಯೇ ಹಲವಾರು ಕ್ಷೇತ್ರಗಳಲ್ಲಿ ಅವಕಾಶದ (Opportunity) ಬಾಗಿಲುಗಳು ತೆರೆದುಕೊಂಡಿರುತ್ತವೆ, ಇದಕ್ಕಾಗಿ ಸೂಕ್ತ ಹುಡುಕಾಟವನ್ನು ನಾವು ಮಾಡಬೇಕು ಅಷ್ಟೇ. ಯೋಗ, ಫಿಟ್‌ನೆಸ್, ಜೂಂಬಾ, ನ್ಯೂಟ್ರಿಶಿಯನ್, ಕ್ಲಾಸಿಕಲ್ ನೃತ್ಯ ತರಗತಿಗಳು, ಕಥಕ್  ಹೀಗೆ ಕಲಾಕ್ಷೇತ್ರಗಳಲ್ಲಿ ಕೂಡ ಕೈತುಂಬಾ ಸಂಪಾದಿಸುವ ಉದ್ಯೋಗವನ್ನು (Jobs) ಯಾರು ಬೇಕಾದರೂ ಹುಡುಕಬಹುದಾಗಿದೆ ಹಾಗೂ ಈ ರಂಗದಲ್ಲಿ ವೃತ್ತಿಗಾಗಿ (Career Opportunity) ವಿಫುಲ ಅವಕಾಶಗಳೂ ಇವೆ.


  ನಿಮಗೆ ನೃತ್ಯ ಇಷ್ಟ ಎಂದಾದಲ್ಲಿ ಇತರರಿಗೆ ನೃತ್ಯವನ್ನು ಕಲಿಸಿಕೊಡುವ ಮೂಲಕ ವೃತ್ತಿಜೀವನವನ್ನು ಆರಂಭಿಸಬಹುದಾಗಿದೆ. ಈ ಕ್ಷೇತ್ರದಲ್ಲಿ ಫಿಟ್‌ನೆಸ್ ಡ್ಯಾನ್ಸರ್ ಆಗಿ ಜಿಮ್‌ಗಳಲ್ಲಿ ಕೆಲಸ ಮಾಡುವುದು ಅಲ್ಲದೇ ನಿಮ್ಮದೇ ಡ್ಯಾನ್ಸಿಂಗ್ ಸ್ಟುಡಿಯೋವನ್ನು ತೆರೆಯಬಹುದು. ಇನ್ನು ಕೊರಿಯೋಗ್ರಾಫರ್ ಆಗಿ ಕೂಡ ಉದ್ಯೋಗವನ್ನು ಆರಂಭಿಸಬಹುದಾಗಿದೆ.


  ನೃತ್ಯ ನಿರ್ದೇಶಕ, ಸಂಯೋಜಕ, ಹೀಗೆ ಬೇರೆ ಬೇರೆ ಸ್ತರಗಳಲ್ಲಿ ಬೆಳೆಯುವ ಅವಕಾಶ ಕೂಡ ಈ ಕ್ಷೇತ್ರದಲ್ಲಿ ದೊರೆಯುತ್ತದೆ. ಕೊರಿಯೋಗ್ರಾಫರ್‌ಗೂ ಕೂಡ ಇಂದು ವಿಫುಲ ಅವಕಾಶಗಳಿದ್ದು ಟಿವಿ, ಚಲನಚಿತ್ರಗಳು, ಸಂಗೀತ ವೀಡಿಯೊಗಳು, ಸ್ಟೇಜ್ ಶೋಗಳು ಮತ್ತು ವಿವಾಹ ಸಮಾರಂಭಗಳಲ್ಲಿ ನೃತ್ಯ ತರಬೇತಿ ನೀಡುವುದು ಮೊದಲಾದ ಚಟುವಟಿಕೆಗಳನ್ನು ನಿರ್ವಹಿಸಬಹುದಾಗಿದೆ.


  ಅಗತ್ಯವಾಗಿ ಬೇಕಾದ ಕೌಶಲ್ಯಗಳು


  ಕೊರಿಯೋಗ್ರಾಫರ್ ಆಗಿ ವೃತ್ತಿ ಮುಂದುವರಿಸಲು ನೀವು ಬಯಸುವುದಾದರೆ ವಿವಿಧ ನೃತ್ಯ ಫಾರ್ಮ್‌ಗಳಲ್ಲಿ ತರಬೇತಿಯನ್ನು ಹೊಂದಿರಬೇಕು. ಸ್ವಯಂ-ಶಿಸ್ತು, ನಿರಂತರತೆ ಮತ್ತು ನಿರ್ಧಾರ, ನಿಶ್ಚಯ, ಲಯ ಮತ್ತು ಬೀಟ್‌ನ ಮೂಲ ಪ್ರಜ್ಞೆ, ನಮ್ಯತೆ, ಸಂಗೀತದ ಮೇಲಿನ ಪ್ರೀತಿ, ಬೋಧನೆ ಕೊರಿಯೋಗ್ರಾಫರ್‌ನಲ್ಲಿರಬೇಕು. ಟಿವಿ, ಫಿಲ್ಮ್ ಮತ್ತು ಮ್ಯೂಸಿಕ್ ವಿಡಿಯೋ ನೃತ್ಯ ಸಂಯೋಜಕರು ಹಾಡಿನ ಪರಿಸ್ಥಿತಿ, ಕ್ಯಾಮೆರಾ ನಿಯೋಜನೆ, ಲಘು ಧ್ವನಿ ಇತ್ಯಾದಿಗಳ ಬಗ್ಗೆ ತಿಳಿದಿರಬೇಕು.


  Dance class:
  ಸಾಂದರ್ಭಿಕ ಚಿತ್ರ


  ನೃತ್ಯ ಸಂಯೋಜಕನಾಗಲು ನೃತ್ಯದ ಜ್ಞಾನ ಮಾತ್ರ ಸಾಕಾಗುವುದಿಲ್ಲ. ಸಂಪೂರ್ಣ ಹಾಡಿನ ಲಯಗಾರಿಕೆಯನ್ನು ಅರಿತುಕೊಂಡು ನೃತ್ಯ ಹೇಳಿಕೊಡುವ ಪಕ್ವತೆಯನ್ನು ಹೊಂದಿರಬೇಕು. ಒಟ್ಟಿನಲ್ಲಿ ಕ್ರಿಯಾತ್ಮಕತೆ ಹಾಗೂ ಸೃಜನಾತ್ಮಕತೆ ಒಬ್ಬ ಕೊರಿಯೋಗ್ರಾಫರ್‌ನಲ್ಲಿರಬೇಕು.


  ಕೊರಿಯೋಗ್ರಾಫರ್ ಹೇಗಿರಬೇಕು?


  ಕೊರಿಯೋಗ್ರಾಫರ್ ತಮ್ಮ ಆಲೋಚನೆಗಳು ಮತ್ತು ಸೂಚನೆಗಳನ್ನು ನರ್ತಕರಿಗೆ ಪರಿಣಾಮಕಾರಿಯಾಗಿ ಸಂವಹನ ಮಾಡಲು ಶಕ್ತರಾಗಿರಬೇಕು. ಅವರು ಒತ್ತಡವನ್ನು ಚೆನ್ನಾಗಿ ನಿಭಾಯಿಸಬೇಕು, ದೈಹಿಕವಾಗಿ ಮತ್ತು ಮಾನಸಿಕವಾಗಿ ಹೊಂದಿಕೊಳ್ಳಬೇಕು.  ಸಮಯಪ್ರಜ್ಞರಾಗಿರಬೇಕು ಮತ್ತು ದೀರ್ಘಕಾಲ ಕೆಲಸ ಮಾಡಲು ಸಿದ್ಧರಾಗಿರಬೇಕು.


  ಯಶಸ್ಸು ಗಳಿಸಬೇಕು ಎಂದಾದರೆ ವಿಶೇಷ ಜ್ಞಾನವನ್ನು ಪಡೆದುಕೊಳ್ಳುವುದನ್ನು ಎಂದಿಗೂ ನಿಲ್ಲಿಸಬಾರದು. ನೃತ್ಯಗಾರರು ಮರುಶೋಧನೆ, ನವೀಕರಿಸುವುದು ಮತ್ತು ಕಲಿಯುವುದನ್ನು ಮುಂದುವರಿಸಬೇಕು.


  ಈ ನಿಟ್ಟಿನಲ್ಲಿ ಮುಂದುವರಿಯಬೇಕೆಂದು ಬಯಸುವ ಜನರು ತಮ್ಮನ್ನು ತಾವು ನವೀಕರಿಸಿಕೊಳ್ಳುತ್ತಾರೆ ಮತ್ತು ಜನಪ್ರಿಯ ನೃತ್ಯ ಪ್ರಕಾರಗಳನ್ನು ಕಲಿಯುತ್ತಲೇ ಇರುತ್ತಾರೆ ಎಂದು ಮುಂಬೈ ಮೂಲದ ಸಂಯೋಜಕರಾದ ಮತ್ತು ಈವೆಂಟ್ ಪ್ಲಾನರ್ ತೃಪ್ತಿ ಶಾ ಮಾತಾಗಿದೆ.
  ಕೊರಿಯೋಗ್ರಾಫರ್‌ ಆದವರಲ್ಲಿರಬೇಕಾದ ಜ್ಞಾನ


  ಔಪಚಾರಿಕ ನೃತ್ಯ ಶಿಕ್ಷಣವು ನೃತ್ಯದ ತಾಂತ್ರಿಕ ಅಂಶಗಳಲ್ಲಿ ದೃಢವಾದ ಅಡಿಪಾಯವನ್ನು ಹಾಕಿಕೊಡುತ್ತದೆ, ಜೊತೆಗೆ ವಿಭಿನ್ನ ನೃತ್ಯ ಶೈಲಿಗಳು, ಚಲನೆಗಳು ಮತ್ತು ತಂತ್ರಗಳ ಬಗ್ಗೆ ತಿಳಿಯಲು ಅವಕಾಶಗಳನ್ನು ಒದಗಿಸುತ್ತದೆ. ನೃತ್ಯ ಸಂಯೋಜನೆಯನ್ನು ರಚಿಸಲು ಮತ್ತು ಕಾರ್ಯಗತಗೊಳಿಸಲು ಅಗತ್ಯವಾದ ಕೌಶಲ್ಯ ಮತ್ತು ಜ್ಞಾನವನ್ನು ಅಭಿವೃದ್ಧಿಪಡಿಸಲು ಇದು ಸಹಾಯ ಮಾಡುತ್ತದೆ.


  ನೃತ್ಯ ಚಲನೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಶಾಸ್ತ್ರೀಯ, ಪಾಶ್ಚಿಮಾತ್ಯ ಮತ್ತು ಸಮಕಾಲೀನ ರೂಪಗಳಂತಹ ವಿವಿಧ ನೃತ್ಯ ಶೈಲಿಗಳನ್ನು ಕೊರಿಯಾಗ್ರಾಫರ್ ಅರಿತುಕೊಳ್ಳಬೇಕು ಎಂದು ತೃಪ್ತಿ ಸಲಹೆ ನೀಡುತ್ತಾರೆ.


  ಇದನ್ನೂ ಓದಿ: High Salary Jobs: ವರ್ಷಕ್ಕೆ 50 ರಿಂದ 80 ಲಕ್ಷ ರೂ. ಸ್ಯಾಲರಿ ಪ್ಯಾಕೇಜ್ ಬೇಕೆಂದರೆ ಈ ಉದ್ಯೋಗಗಳನ್ನು ಆರಿಸಿಕೊಳ್ಳಿ


  ಇತರ ನರ್ತಕರು, ನೃತ್ಯ ನಿರ್ದೇಶಕರು ಮತ್ತು ನೃತ್ಯ ಕಂಪನಿಗಳೊಂದಿಗೆ ಒಳ್ಳೆಯ ಸಂಪರ್ಕ ಸಾಧಿಸುವುದು ಕೂಡ ವೃತ್ತಿಜೀವನದ ಮುಂದಿನ ಹಂತಕ್ಕೆ ಉತ್ತಮ ಆಯ್ಕೆ ಎಂದು ತೃಪ್ತಿ ಸೂಚಿಸಿದ್ದಾರೆ. ಅಸಿಸ್ಟೆಂಟ್ ಕೊರಿಯೋಗ್ರಾಫರ್ ಆಗಿ ಮೊದಲಿಗೆ ವೃತ್ತಿಜೀವನವನ್ನು ಆರಂಭಿಸಿ ಎಂದು ತೃಪ್ತಿ ಸಲಹೆ ನೀಡುತ್ತಾರೆ.


  ನೃತ್ಯ ಸಂಯೋಜಕರಾಗಿ ಯಶಸ್ವಿಯಾಗಲು ಸೃಜನಶೀಲತೆ, ಕಲ್ಪನೆ ಮತ್ತು ಕಲಾತ್ಮಕ ದೃಷ್ಟಿ ಅಗತ್ಯವಿರುತ್ತದೆ. ಅದು ಸ್ವಯಂ-ಕಲಿಕೆ, ನೃತ್ಯ ಕೌಶಲ್ಯ ಮತ್ತು ಸುಧಾರಣೆಯನ್ನು ಹೆಚ್ಚಿಸುತ್ತದೆ ಎಂಬುದು ತೃಪ್ತಿ ಅವರ ಅಭಿಮತವಾಗಿದೆ.

  Published by:Kavya V
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು