ಕೆಲಸದಲ್ಲಿ ಯಶಸ್ಸು ( Successful at Work) ದೊರೆಯಬೇಕು ಹಾಗೂ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಬೇಕು ಎಂಬುದೇ ಹೆಚ್ಚಿನವರ ಕನಸಾಗಿರುತ್ತದೆ. ನೀವು ಮಾಡುತ್ತಿರುವ ಉದ್ಯೋಗದಲ್ಲಿ ಯಶಸ್ಸು ದೊರೆತರೆ ಮಾತ್ರ ನಿಮ್ಮ ಕನಸು ನನಸಾಗಲು ಸಾಧ್ಯ ಹಾಗೂ ಬಯಸಿದ ಬದುಕು ನಿಮ್ಮದಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ (Competitive World) ಉದ್ಯೋಗದಲ್ಲಿ ಪ್ರಗತಿ ಸಾಧಿಸಿಕೊಂಡು ಜೀವನದಲ್ಲಿ ಯಶಸ್ಸು ಪಡೆಯುವುದು ಅತಿಮುಖ್ಯವಾಗಿದೆ. ವೃತ್ತಿಯಲ್ಲಿ (Career) ಸಾಧಿಸುವುದು ಹಾಗೂ ಮಾನ್ಯತೆ ಪಡೆದುಕೊಳ್ಳುವುದು ವೃತ್ತಿಪರ ಉದ್ದೇಶದ ಮುಖ್ಯ ಅಂಶವಾಗಿದೆ.
ಹಾಗಿದ್ದರೆ, ಉದ್ಯೋಗದಲ್ಲಿ ಯಶಸ್ಸು ಸಾಧಿಸಿ ಜೀವನದಲ್ಲಿ ಮುಂದೆ ಬರಬೇಕು ಎಂಬುದು ನಿಮ್ಮ ಹಂಬಲವಾಗಿದ್ದರೆ ನಿಮಗಾಗಿ ಇಲ್ಲಿದೆ ಯಶಸ್ಸಿನ ಮಂತ್ರ.
1) ಯೋಜನೆಯ ನೇತೃತ್ವ ವಹಿಸಿಕೊಳ್ಳಿ
ಇಂದಿನ ವೃತ್ತಿ ಸುಧಾರಣೆಗಳು ಸಾಕಷ್ಟು ಪ್ರಗತಿ ಹೊಂದಿದ್ದು ಅಪಾಯಗಳನ್ನು ಎದುರಿಸುವ ಛಲಗಾರರನ್ನೇ ವಿಶ್ವ ಎದುರು ನೋಡುತ್ತಿದೆ. ಇಂದಿನ ಸ್ಪರ್ಧಾತ್ಮಕ ವೃತ್ತಿ ಜೀವನದಲ್ಲಿ ಹೊಸತರ ಆಲೋಚನೆಗಳು ಹಾಗೂ ಯೋಜನೆಗಳನ್ನು ಮುಂದಿಡುವವರೇ ಬೇಕಾಗಿದ್ದಾರೆ. ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಿ, ಅಂತೆಯೇ ಹೊಸ ಹೊಸ ಪರಿಹಾರ ಕಂಡುಕೊಳ್ಳಿ. ಬ್ಯುಸಿನೆಸ್‌ಗಾಗಿ ಹೊಸ ಅವಕಾಶಗಳನ್ನು ಬೆಳೆಸಿಕೊಳ್ಳಿ.
2) ನೀವೇ ಮೌಲ್ಯಮಾಪಕರಾಗಿ
ವೃತ್ತಿಜೀವನದ ಯಶಸ್ಸನ್ನು ಸಾಧಿಸಲು ಉತ್ತಮ ಮಾರ್ಗವೆಂದರೆ ನಿಮ್ಮ ಕಾರ್ಯಕ್ಷಮತೆಯನ್ನು ನಿರ್ಣಯಿಸುವುದು. ನಿಮ್ಮ ಗುರಿ ಹೊಂದಿಸಿ ಹಾಗೂ ಇದನ್ನು ತಲುಪಲು ಬೇಕಾದ ಕಾಲಾವಕಾಶ ನಿಶ್ಚಯಿಸಿ. ಗುರಿ ಸಾಧಿಸಲು ವಿವರವಾದ ಯೋಜನೆ ರಚಿಸಿ. ಗುರಿ ಸಾಧಿಸಲು ಎಷ್ಟು ಸಮಯ ಬೇಕು ಎಂಬುದನ್ನು ಲೆಕ್ಕಹಾಕಿ ಮತ್ತು ಮೌಲ್ಯಮಾಪನ ಮಾಡಿಕೊಳ್ಳಿ.
3) ಹೊಸದನ್ನು ಅರಿತುಕೊಳ್ಳುವ ಛಲಗಾರರಾಗಿ
ವೃತ್ತಿಜೀವನದಲ್ಲಿ ಏನನ್ನಾದರೂ ಸಾಧಿಸಲು ನಾಯಕರಾಗಿ ಹಾಗೂ ಹೊಸತನ್ನು ಕಲಿಯುವ ಛಲಗಾರಿಕೆ ನಿಮ್ಮಲ್ಲಿರಬೇಕು. ವೃತ್ತಿಜೀವನದಲ್ಲಿ ನಿಮ್ಮ ಪದವಿ ಶೈಕ್ಷಣಿಕ ಪ್ರಗತಿ ಮುಖ್ಯವಾಗುವುದಿಲ್ಲ. ಈ ಕ್ಷೇತ್ರದಲ್ಲಿ ಏನು ಸಾಧಿಸುತ್ತೀರಿ ಎಂಬುದು ಮುಖ್ಯವಾಗಿರುತ್ತದೆ.
4) ಅಗತ್ಯಗಳನ್ನು ಪೂರೈಸಿ
ನಿಮ್ಮ ಹೊಸ ಕೆಲಸದಲ್ಲಿ ಯಶಸ್ವಿಯಾಗಲು ಮತ್ತು ವೃತ್ತಿಜೀವನದ ಯಶಸ್ಸನ್ನು ಸಾಧಿಸಲು, ನಿಮ್ಮ ನಿರ್ವಾಹಕರು ಮತ್ತು ತಂಡಕ್ಕೆ ಯಾವುದರ ಅವಶ್ಯಕತೆ ಇದೆ ಎಂಬುದನ್ನು ನೀವು ಚೆನ್ನಾಗಿ ತಿಳಿದಿರಬೇಕು. ನಿಮ್ಮ ಮ್ಯಾನೇಜರ್‌ಗಿಂತ ಹೆಚ್ಚು ಯೋಚಿಸಿ. ಯಾವುದೇ ಹೊಸ ಯೋಜನೆಯ ನಾಯಕತ್ವ ತೆಗೆದುಕೊಳ್ಳಿ.
5) ಸಂವಹನ ಶೈಲಿ ಉತ್ತಮವಾಗಿರಲಿ
ಉದ್ಯೋಗಿ ಮತ್ತು ಸಂಸ್ಥೆಯ ಯಶಸ್ಸಿಗೆ ಸಂವಹನವು ಪ್ರಮುಖವಾಗಿದೆ. ಉತ್ತಮ ಸಂವಹನ ಕೌಶಲ್ಯ ನಿಮ್ಮ ವೃತ್ತಿಜೀವನಕ್ಕೆ ಆಧಾರ ಸ್ಥಂಭ ಎಂದೆನಿಸಿದೆ. ಉತ್ತಮ ಸಂವಹನ ಕೌಶಲ್ಯವನ್ನು ಬೆಳೆಸಿಕೊಳ್ಳಿ ಹಾಗೂ ಸೌಹಾರ್ದಯುತ ಪರಿಸರ ನಿರ್ಮಿಸಿಕೊಳ್ಳಿ.
6) ಸಾಧಿಸಲು ಗುರಿ ಹೊಂದಿರಿ
ಕಷ್ಟಪಟ್ಟು ಕೆಲಸ ಮಾಡುವುದಕ್ಕಾಗಿ ಅಥವಾ ಬ್ಯುಸಿಯಾಗಿರುವುದಕ್ಕಾಗಿ ನಿಮಗೆ ಹಣ ಸಿಗುವುದಿಲ್ಲ ಎಂಬುದನ್ನು ನೆನಪಿಡಿ. ನೀವು ಕಂಪನಿಯ ಗುರಿಗಳನ್ನು ಹೇಗೆ ತಲುಪಿದ್ದೀರಿ ಹಾಗೂ ನಿಮ್ಮ ಸಾಧನೆ ಏನು ಎಂಬುದು ಮುಖ್ಯವಾಗಿರುತ್ತದೆ, ಹಾಗಾಗಿ ಈ ದಿಸೆಯಲ್ಲಿ ಕಾರ್ಯನಿರ್ವಹಿಸಿ
7) ನೀವು ಏನು ಎಂಬುದನ್ನು ತೋರಿಸಿ, ಬಾಯಿಮಾತಲ್ಲಿ ಹೇಳಬೇಡಿ
ಕ್ರಿಯೆ ಮಾತಿಗಿಂತ ದೊಡ್ಡದು ಎಂಬ ಮಾತಿದೆ. ಅಂದರೆ ಬಾಯಲ್ಲಿ ಹೇಳುವುದಕ್ಕಿಂತ ಅದನ್ನು ಮಾಡಿ ತೋರಿಸುವುದರಲ್ಲಿ ಬೆಲೆ ಹೆಚ್ಚು ಎಂಬುದು ಇದರ ತಾತ್ಪರ್ಯವಾಗಿದೆ. ಹಾಗಾಗಿ ವಿಷಯಗಳ ಬಗ್ಗೆ ಬಡಾಯಿ ಕೊಚ್ಚುವ ಬದಲು ಅದನ್ನು ಸಾಧಿಸಿ ತೋರಿಸಿ.
8) ವಿಶ್ವಾಸ ಬೆಳೆಸಿಕೊಳ್ಳಿ
ನೀವು ಹೊಸ ಕೆಲಸವನ್ನು ಪ್ರಾರಂಭಿಸಿದಾಗ ಯಶಸ್ಸನ್ನು ಖಚಿತಪಡಿಸಿಕೊಳ್ಳಬೇಕಾದರೆ ವಿಶ್ವಾಸ ಬೆಳೆಸಿಕೊಳ್ಳುವುದು ಪ್ರಮುಖ ಸಲಹೆಗಳಲ್ಲಿ ಒಂದಾಗಿದೆ. ಸಹೋದ್ಯೋಗಿಗಳ ಹಾಗೂ ಮೇಲಾಧಿಕಾರಿಗಳ ನಂಬಿಕೆ ಬೆಳೆಸಿಕೊಳ್ಳುವುದು ಮುಖ್ಯವಾಗಿದೆ.
9) ಪರಿಹಾರಗಳನ್ನು ಹುಡುಕಿ
ಪ್ರತಿಯೊಬ್ಬರೂ ತಮ್ಮ ಸಮಸ್ಯೆಗಳನ್ನು ತಮ್ಮ ವ್ಯವಸ್ಥಾಪಕರ ಸಮಸ್ಯೆಗಳಾಗಿ ಪರಿವರ್ತಿಸಬಹುದು. ಸಮಸ್ಯೆ ಸೃಷ್ಟಿಸುವವರಲ್ಲ, ಬದಲಿಗೆ ಪರಿಹಾರ ಒದಗಿಸುವವರಾಗಿರಿ. ದೊಡ್ಡ ಉದ್ಯೋಗಿಗಳು ಸಮಸ್ಯೆಗಳನ್ನು ಪರಿಹರಿಸುತ್ತಾರೆ.
ಇದನ್ನೂ ಓದಿ: UPSC Success Story: ಯಾವುದೇ ಕೋಚಿಂಗ್ ಸಹಾಯವಿಲ್ಲದೆ ಮೊದಲ ಪ್ರಯತ್ನದಲ್ಲೇ IAS ಆದ ಸೌಮ್ಯ ಶರ್ಮಾ
10) ಸಹಾನುಭೂತಿಯಿಂದಿರಿ
ನೀವು ಉತ್ತಮ ಉದ್ಯೋಗಿ ಆಗುವ ನಿಟ್ಟಿನಲ್ಲಿ ನಿಮ್ಮ ಮ್ಯಾನೇಜರ್ ಮತ್ತು ಸಹೋದ್ಯೋಗಿಗಳು ತಮ್ಮ ಅತ್ಯುತ್ತಮ ಕೆಲಸವನ್ನು ಮಾಡುತ್ತಿದ್ದಾರೆ ಎಂಬ ಅರ್ಥಮಾಡಿಕೊಳ್ಳುವ ಗುಣ ನಿಮ್ಮಲ್ಲಿರಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ