ನೀವು ಇತಿಹಾಸದ (History) ಒಂದು ನಿರ್ದಿಷ್ಟ ಘಟನೆಯ ಬಗ್ಗೆ ಅದರ ದಿನಾಂಕ, ಸಮಯ ಮತ್ತು ಸ್ಥಳವನ್ನು ನೆನಪಿಸಿಕೊಳ್ಳುವ ಪ್ರವೃತ್ತಿಯವರಾಗಿದ್ದೀರಾ? (Hobby) ಆ ಬಗ್ಗೆ ಖಚಿತಪಡಿಸಲು ನೀವು ಅದರ ಮೂಲಗಳನ್ನು ಪರಿಶೀಲಿಸುತ್ತೀರಾ? ಒದಗಿಸಿದ ಮಾಹಿತಿ ಸರಿಯಾಗಿದೆಯೇ ಅಥವಾ ಇಲ್ಲವೇ? ಇದು ಅಧಿಕೃತವೇ? ಎಂಬುದನ್ನು ಯೋಚಿಸುತ್ತೀರಾ? ಅಲ್ದೇ ಐತಿಹಾಸಿಕ ಘಟನೆಗಳ ಬಗ್ಗೆ ಕುತೂಹಲವುಳ್ಳವರಾಗಿದ್ದೀರಾ? ಹಾಗಿದ್ದರೆ ನೀವು ಮೌಖಿಕ ಇತಿಹಾಸಕಾರರಾಗಬಹುದು. (Oral Historian)
ಅಂದಹಾಗೆ ಇತಿಹಾಸಕಾರರಾಗಿರುವುದು ಸಂಪೂರ್ಣವಾಗಿ ವಿಭಿನ್ನ ವಿಷಯವಾಗಿದೆ. ನೀವು ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿದಾಗ ಇಂಥ ಪ್ರಶ್ನೆಗಳು ನಿಮ್ಮನ್ನು ಕಾಡಿದೆಯೇ? ಹೌದು ಎಂದಾದರೆ, ಮೌಖಿಕ ಇತಿಹಾಸಕಾರರ (ಓರಲ್ ಹಿಸ್ಟೋರಿಯನ್) ವೃತ್ತಿಜೀವನವನ್ನು ಆಯ್ಕೆ ಮಾಡುವುದು ನಿಮಗೆ ಉತ್ತಮ ವೃತ್ತಿ ಆಯ್ಕೆಯಾಗಿದೆ ಎನ್ನಬಹುದು.
ಏನಿದು ಮೌಖಿಕ ಇತಿಹಾಸ?
ಮೌಖಿಕ ಇತಿಹಾಸವು ಪ್ರಮುಖ ಘಟನೆಗಳ ಕುರಿತಾದ ಐತಿಹಾಸಿಕ ಮಾಹಿತಿಯ ಸಂಗ್ರಹಣೆ ಮತ್ತು ಅಧ್ಯಯನವಾಗಿದೆ. ಇದು ಆಡಿಯೋಟೇಪ್‌ಗಳು, ವಿಡಿಯೋ ಟೇಪ್‌ಗಳು ಅಥವಾ ಯೋಜಿತ ಸಂದರ್ಶನಗಳನ್ನು ಬಳಸಿ ದಾಖಲಿಸುವಂಥದ್ದು.
ಹಿಂದಿನ ಘಟನೆಗಳಲ್ಲಿ ಭಾಗವಹಿಸಿದ ಅಥವಾ ವೀಕ್ಷಿಸಿದ ಜನರೊಂದಿಗೆ ಈ ಸಂದರ್ಶನಗಳನ್ನು ನಡೆಸಲಾಗುತ್ತದೆ. ಅವರ ನೆನಪುಗಳು ಮತ್ತು ಗ್ರಹಿಕೆಗಳನ್ನು ಭವಿಷ್ಯದ ಪೀಳಿಗೆಗೆ ದಾಖಲೆಯಾಗಿ ಸಂರಕ್ಷಿಸುವಂಥದ್ದಾಗಿದೆ. ಮೌಖಿಕ ಇತಿಹಾಸವು ವಿವಿಧ ದೃಷ್ಟಿಕೋನಗಳಿಂದ ಮಾಹಿತಿಯನ್ನು ಪಡೆಯುತ್ತದೆ. ಇವುಗಳಲ್ಲಿ ಹೆಚ್ಚಿನವು ಲಿಖಿತ ಮೂಲಗಳಲ್ಲಿ ಕಂಡುಬರುವುದಿಲ್ಲ.
ಅಂದಹಾಗೆ ಆಂಚಲ್ ಮಲ್ಹೋತ್ರಾ ಒಬ್ಬ ಪ್ರಸಿದ್ಧ ಭಾರತೀಯ ಲೇಖಕರು ಮತ್ತು ಇತಿಹಾಸಕಾರರಾಗಿದ್ದು, ಇತಿಹಾಸಕಾರರಾಗಿ ತಮ್ಮ ಸುದೀರ್ಘ ಬರವಣಿಗೆಯ ಅನುಭವ ಹೊಂದಿದ್ದಾರೆ. ಇವರ ರೆಮ್ನಂಟ್ಸ್ ಆಫ್ ಎ ಸೆಪೆರೇಶನ್ ಹಾಗೂ ಇನ್ ದ ಲಾಂಗ್ವೇಜ್ ಆಫ್ ರೆಮೆಂಬರಿಂಗ್ ಬುಕ್ಸ್, 1947 ರ ವಿಭಜನೆಯ ಮಾನವ ಇತಿಹಾಸ ಮತ್ತು ಪೀಳಿಗೆಯ ಪ್ರಭಾವವನ್ನು ಪರಿಶೋಧಿಸುವ ಕೃತಿಗಳಾಗಿವೆ.
ಖ್ಯಾತ ಲೇಖಕರು ಮತ್ತು ಮೌಖಿಕ ಇತಿಹಾಸಕಾರ ಆಂಚಲ್ ಮಲ್ಹೋತ್ರಾ ಜೈಪುರ ಲಿಟರೇಚರ್ ಫೆಸ್ಟಿವಲ್ 2023ರಲ್ಲಿ ಮೌಖಿಕ ಇತಿಹಾಸಕಾರ ವೃತ್ತಿ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಮೌಖಿಕ ಇತಿಹಾಸಕಾರರು ಯಾರು?
ಮೌಖಿಕ ಇತಿಹಾಸಕಾರರು ಕೇವಲ ಇತಿಹಾಸವನ್ನು ದಾಖಲಿಸುವು ಮಾತ್ರವಲ್ಲ, ಬದಲಾಗಿ ಅದಕ್ಕಿಂತ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಏನಾಯಿತು ಎಂಬುದನ್ನು ನಿರ್ಧರಿಸುವುದರ ಜೊತೆಗೆ, ಅದು ಏಕೆ ಸಂಭವಿಸಿತು ಎಂಬುದನ್ನೂ ಅವರು ನಿರ್ಧರಿಸುತ್ತಾರೆ.
ಮೌಖಿಕ ಇತಿಹಾಸದ ಸಮಯದಲ್ಲಿ, ಜನರು ತಮ್ಮ ಅನುಭವಗಳನ್ನು ಇತರರಿಗೆ ಪ್ರಸ್ತುತಪಡಿಸುತ್ತಾರೆ ಮತ್ತು ಭವಿಷ್ಯದ ಪೀಳಿಗೆಗೆ ರವಾನಿಸುತ್ತಾರೆ. ಅಂದಹಾಗೆ ಮೌಖಿಕ ಇತಿಹಾಸಕಾರರಾಗಲು ಸಂದರ್ಶನಗಳು ಮತ್ತು ವ್ಯಾಪಕವಾದ ಸಂಶೋಧನೆಗಳು ಅವಶ್ಯಕ. "ಮೌಖಿಕ ಇತಿಹಾಸವೆಂದರೆ ಐತಿಹಾಸಿಕ ಘಟನೆಗಳನ್ನು ಕಂಡಂತಹ ಜನರ ಸಾಕ್ಷ್ಯವನ್ನು ಅವರದ್ದೇ ಸ್ವಂತ ಧ್ವನಿಯಲ್ಲಿ ದಾಖಲಿಸುವುದಾಗಿದೆ " ಎಂಬುದಾಗಿ ಮೌಖಿಕ ಇತಿಹಾಸಕಾರರಾದ ಆಂಚಲ್ ಮಲ್ಹೋತ್ರಾ ಹೇಳಿದರು.
'ಇನ್ ದಿ ಲಾಂಗ್ವೇಜ್ ಆಫ್ ರಿಮೆಂಬರಿಂಗ್' ಪುಸ್ತಕದಲ್ಲಿ ಮೌಖಿಕ ಇತಿಹಾಸವನ್ನು ಹೇಗೆ ಬಳಸಿದ್ದಾರೆ ಎಂಬ ಬಗ್ಗೆ ಅವರನ್ನು ಕೇಳಿದಾಗ "ವಿಭಜನೆಯಂತಹ ಘಟನೆಗಾಗಿ, ಸಾಂಪ್ರದಾಯಿಕ ನಿರೂಪಣೆಯ ವಿಧಾನಗಳು ಇನ್ನೂ ಅಸ್ತಿತ್ವದಲ್ಲಿ ಇರುವ ಕಾರಣ ಐತಿಹಾಸಿಕ ಘಟನೆಗಳಿಗೆ ನ್ಯಾಯ ಸಲ್ಲಿಸಲು ವಿಫಲವಾಗಿದೆ. ಮೌಖಿಕ ಇತಿಹಾಸ ಬಹುಶಃ ಅತ್ಯಂತ ಅಧಿಕೃತ ಮತ್ತು ವೈವಿಧ್ಯಮಯ ಮೂಲವಾಗಿದೆ" ಎಂಬುದಾಗಿ ಹೇಳಿದರು.
ಅಲ್ಲದೇ ಇದು ವಾಸ್ತವವಾಗಿ ಜನರೊಂದಿಗೆ ಸಂಪರ್ಕ ಸಾಧಿಸಲು, ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಆಂಚಲ್ ಹೇಳುತ್ತಾರೆ.
ಇದನ್ನೂ ಓದಿ: Career Tips: ಮಧ್ಯವಯಸ್ಸಿನಲ್ಲಿ ವೃತ್ತಿ ಬದಲಾಯಿಸುತ್ತಿದ್ದರೆ ಈ 5 ಉದ್ಯೋಗಗಳ ಆಯ್ಕೆ ಬೆಸ್ಟ್
ಶೈಕ್ಷಣಿಕ ಅರ್ಹತೆ ಏನಿರಬೇಕು?
ಮೌಖಿಕ ಇತಿಹಾಸಕಾರರಾಗಲು ಮೊದಲನೆಯದಾಗಿ ಇತಿಹಾಸ ಸ್ನಾತಕೋತ್ತರ ಪದವಿಯನ್ನು ಗಳಿಸಬೇಕು. ನಂತರ, ಸ್ನಾತಕೋತ್ತರ ಪದವಿಯೊಂದಿಗೆ ಮುಂದುವರಿಯಬಹುದು ಅಥವಾ ವಿಶೇಷತೆಯ ಕ್ಷೇತ್ರವನ್ನು ಆಯ್ಕೆ ಮಾಡಬಹುದು.
ನಂತರ ಅದರಲ್ಲಿ ಪರಿಣತಿಯನ್ನು ಹೊಂದಲು ನಿರ್ದಿಷ್ಟ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದು. ಅನಂತರ ನೀವು ನೇರವಾಗಿ ಐತಿಹಾಸಿಕ ದಾಖಲೆಯಲ್ಲಿ ತೊಡಗಿಸಿಕೊಳ್ಳಬಹುದು. ಒಟ್ಟಾರೆ, ಮೌಖಿಕ ಇತಿಹಾಸಕಾರ ವೃತ್ತಿಯು ವಿಶಿಷ್ಟವಾಗಿದ್ದು ಹಾಗೂ ಮುಂದಿನ ಪೀಳಿಗೆಗೆ ಇವು ಹಸ್ತಾಂತರಗೊಳ್ಳುವುದರಿಂದ ಹೆಚ್ಚು ಜವಾಬ್ದಾರಿಯುತವಾದ ವೃತ್ತಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ