ಎಲ್ಲಾ ಕ್ಷೇತ್ರಗಳಲ್ಲೂ ಈಗ ಉದ್ಯೋಗ ಕಡಿತ (Layoffs) ನಡೆಯುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಗೂಗಲ್, ಮೆಟಾ, ಮೈಕ್ರೋಸಾಫ್ಟ್ ಮುಂತಾದ ದೈತ್ಯ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸಿವೆ. ಆದ್ದರಿಂದ ಅಂಥ ಸಾವಿರಾರು ಜನರು ಹೊಸ ಉದ್ಯೋಗದ ಹುಡುಕಾಟದಲ್ಲಿದ್ದಾರೆ (Job Searching). ಆದರೆ ಕೆಲಸದಿಂದ ತೆಗೆದುಹಾಕಿರುವ ವಿಷಯದ ಬಗ್ಗೆ ಅನೇಕರು ಆತಂಕ, ಅವಮಾನವನ್ನು ಅನುಭವಿಸಬಹುದು. ಆದರೆ ವೃತ್ತಿ ತರಬೇತುದಾರು (Career Coach) ಇದರಲ್ಲಿ ಅವಮಾನ ತರುವಂಥ ವಿಷಯವೇನಿಲ್ಲ ಎಂಬುದಾಗಿ ಹೇಳುತ್ತಾರೆ.
ವೃತ್ತಿ ತರಬೇತುದಾರ ಮಾರ್ಗರೆಟ್ ಬುಜ್ ಅವರು, ಸಾಮಾನ್ಯವಾಗಿ ಇದು ವೈಯಕ್ತಿಕವಲ್ಲದ ಕಾರಣದಿಂದ ವಜಾಗೊಂಡಿರುವುದಲ್ಲ. ಹೀಗಾಗಿ ಕೆಲಸ ಕಳೆದುಕೊಂಡಿರುವ ಬಗ್ಗೆ ಕೀಳಿರಿಮೆಪಡಬೇಕಾದಂಥದ್ದು ಏನೂ ಇಲ್ಲ ಎಂದು ಹೇಳುತ್ತಾರೆ. ಇನ್ನು ಕರಿಯಲ್ ಬಿಲ್ಡರ್‌ನಲ್ಲಿ ಸಂವಹನದ ಉಪಾಧ್ಯಕ್ಷರಾದ ಸಾರಾ ಸ್ಕಿರ್‌ಬೋಲ್ ಅವರು ಉದ್ಯೋಗ ನೀಡುವವರು ವಜಾಗೊಳಿಸುವಿಕೆಯನ್ನು ಋಣಾತ್ಮಕವಾಗಿ ನೋಡುವುದಿಲ್ಲ. ಲೇಆಫ್ ಉದ್ಯೋಗಿಗಳ ತಪ್ಪಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬುದಾಗಿ ಅಭಿಪ್ರಾಯ ಪಡುತ್ತಾರೆ.
ಹಾಗಿದ್ರೆ ನೀವು ವಜಾಗೊಂಡಿದ್ದರೆ ಹೊಸ ಉದ್ಯೋಗ ಹುಡುಕಲು ಆರಂಭಿಸಿದ್ದರೆ ಸಂದರ್ಶನದಲ್ಲಿ ಈ ವಿಷಯವನ್ನು ಹೇಗೆ ಹೇಳಬೇಕು.. ಈ ಬಗ್ಗೆ ಉದ್ಯೋಗ ಸಂದರ್ಶನದಲ್ಲಿ ಹೇಗೆ ಚರ್ಚೆ ಮಾಡಬೇಕು ಎಂಬುವುದರ ಕುರಿತ ಸಲಹೆಗಳು ಇಲ್ಲಿವೆ.
1. ಪರಿಸ್ಥಿತಿಯ ಬಗ್ಗೆ ಪ್ರಾಮಾಣಿಕವಾಗಿರಿ: ಸಂದರ್ಶನದಲ್ಲಿ ವಜಾಗೊಳಿಸುವುದರ ಬಗ್ಗೆ ಪ್ರಾಮಾಣಿಕವಾಗಿರುವುದು ಮುಖ್ಯ. ಏಕೆಂದರೆ ಇದು ನಿಮ್ಮ ವೈಯಕ್ತಿಕ ನಿರ್ಧಾರವಲ್ಲ ಎಂಬುದನ್ನು ಹೈರಿಂಗ್ ಮ್ಯಾನೇಜರ್ ತಿಳಿದಿರಬೇಕು.
ಸಾರಾ ಸ್ಕಿರ್ಬೀಲ್ ಅವರು, "ಆರ್ಥಿಕತೆಯ ಪ್ರಸ್ತುತ ಸ್ಥಿತಿಯಿಂದಾಗಿ ನಿಮ್ಮನ್ನು ವಜಾಗೊಳಿಸಿದ್ದರೆ, ಪ್ರಾಮಾಣಿಕವಾಗಿರಿ. ನಿಮ್ಮ ಸಾಮರ್ಥ್ಯ ಕೊರತೆಯಿಂದ ಅವರು ನಿಮ್ಮನ್ನು ತೆಗೆದು ಹಾಕಿಲ್ಲ ಎಂಬುದನ್ನು ಸ್ಪಷ್ಟವಾಗಿ ಅವರಿಗೆ ತಿಳಿಸಿ ಎಂದು ಹೇಳಿದ್ದಾರೆ. ಆದ್ದರಿಂದ ನಿರ್ಧಾರದ ಹಿಂದಿನ ಸಂದರ್ಭಗಳನ್ನು ವಿವರಿಸುವುದು ಹೆಚ್ಚಿನ ಸ್ಪಷ್ಟತೆ ನೀಡಬಹುದು.
ಇದನ್ನೂ ಓದಿ: Interview Tips-25: ಉದ್ಯೋಗ ಸಂದರ್ಶನದಲ್ಲಿ ನಿಮ್ಮ ಪರಿಚಯ ಮಾಡಿಕೊಡುವಾಗ ಈ ತಪ್ಪುಗಳನ್ನು ಮಾಡಬೇಡಿ
2. ಧನಾತ್ಮಕವಾಗಿರಿ : ವಜಾಗೊಳಿಸುವಿಕೆ ಅಸಮಾಧಾನದ ವಿಷಯವಾಗಿದ್ದರೂ ಪಾಸಿಟಿವ್ ವಿಷಯಗಳ ಮೇಲೆ ಗಮನ ನೀಡಲು ಇದು ಅನುವು ಮಾಡಿಕೊಡುತ್ತದೆ ಎಂಬುದಾಗಿ ಸಾರಾ ಹೇಳುತ್ತಾರೆ. ಸಂದರ್ಶನದ ವೇಳೆ "ನಿಮ್ಮ ಕೌಶಲ್ಯಗಳು ಮತ್ತು ನಿಮ್ಮ ಸಾಧನೆಗಳು ಮತ್ತು ನಿಮ್ಮ ಸಂಸ್ಥೆಗಾಗಿ ನೀವು ಏನು ಮಾಡಿದ್ದೀರಿ ಎಂಬುದರ ಕುರಿತು ವಿವರಿಸಿ ಹೊರತಾಗಿ ತನ್ನನ್ನು ಕೆಲಸದಿಂದ ತೆಗೆಯಲಾಗಿದೆ ಎಂಬುದನ್ನೇ ಮತ್ತೆ ಮತ್ತೆ ವಿವರಿಸುವ ಅಗತ್ಯವಿಲ್ಲ.
3. ನೀವು ಏನು ಮಾಡಿದ್ದೀರಿ ಎಂಬುದನ್ನು ಹೈಲೈಟ್ ಮಾಡಿ: ಹಿರಿಯ ಮತ್ತು ಕಾರ್ಯನಿರ್ವಾಹಕ ಸ್ಥಾನಗಳು ಬರಲು ಕಷ್ಟ ಪಡಬೇಕಾಗುತ್ತದೆ. ಅದನ್ನು ಸಂದರ್ಶನದಲ್ಲಿ ವಿವರಿಸಿ. "ನೀವು ಮ್ಯಾನೇಜಿಂಗ್ ಡೈರೆಕ್ಟರ್ ಸ್ಥಾನದಲ್ಲಿದ್ದರೆ, ಈ ಉದ್ಯೋಗಗಳು ಎಲ್ಲೆಡೆ ಖಾಲಿ ಇರುವುದಿಲ್ಲ. ಅದನ್ನು ಪಡೆಯಲು ಸಮಯ ಹಿಡಿಯುತ್ತದೆ. ವಿಶೇಷವಾಗಿ ಎಕ್ಸಿಕ್ಯೂಟಿವ್ ಉದ್ಯೋಗ ಹುಡುಕಾಟವು ಆರರಿಂದ ಒಂಬತ್ತು ತಿಂಗಳುಗಳನ್ನು ತೆಗೆದುಕೊಳ್ಳಬಹುದು" ಎಂಬುದಾಗಿ ಬುಜ್ ಹೇಳುತ್ತಾರೆ.
ಅಲ್ಲದೇ ನೀವು ಉದ್ಯೋಗವಿಲ್ಲದೇ ಖಾಲಿ ಇರುವ ಸಮಯದಲ್ಲಿ ಏನು ಮಾಡುತ್ತಿದ್ದಿರಿ ಎಂದು ಸಂದರ್ಶಕರು ಕೇಳಬಹುದು. ಆ ಸಮಯದಲ್ಲಿ ನಿಮ್ಮ ಕೌಶಲ್ಯಗಳನ್ನು ಅಪ್‌ಗ್ರೇಡ್ ಮಾಡಲು ನೀವು ಪ್ರಯತ್ನಿಸುತ್ತಿರುವುದನ್ನು ಹೇಳಬಹುದು.
4. ನಿಮ್ಮ ಹಳೆಯ ಕಂಪನಿಯನ್ನು ತೆಗಳಬೇಡಿ: ನಿಮ್ಮ ಹಳೆಯ ಕಂಪನಿಯ ಬಗ್ಗೆ ಮಾತನಾಡುವಾಗ ನೀವು "ತಟಸ್ಥ ಅಥವಾ ಪಾಸಿಟಿವ್ ಟೋನ್" ಅಲ್ಲೇ ಮಾತಾಡಬೇಕು ಎಂಬುದಾಗಿ ಬುಜ್ ಸಲಹೆ ನೀಡುತ್ತಾರೆ. ನಿಮ್ಮ ಹಳೆಯ ಕಂಪನಿಯಲ್ಲಿ ನಿಮ್ಮ ಅನುಭವ ಕೆಟ್ಟದಾಗಿದ್ದರೂ, ಲೇಆಫ್ ಭಯಾನಕ ಅನುಭವವಾಗಿದ್ದರೂ ಅದನ್ನು ಇಂಟರ್ವ್ಯೂನಲ್ಲಿ ಹೇಳಬೇಡಿ.
ನಿಮ್ಮ ಹಳೆಯ ಮೇಲಾಧಿಕಾರಿಗಳು ಅಥವಾ ಸಹೋದ್ಯೋಗಿಗಳ ಬಗ್ಗೆ ಯಾವುದೇ ರೀತಿಯ ನೆಗೆಟಿವ್ ಅಂಶಗಳನ್ನುಮಾತನಾಡಬೇಡಿ. ಏಕೆಂದರೆ ಭವಿಷ್ಯದಲ್ಲಿ ನೀವು ಅವರ ಬಗ್ಗೆ ಅದೇ ರೀತಿ ಮಾತನಾಡಬಹುದು ಎಂದು ಸಂದರ್ಶನಕಾರರು ಭಾವಿಸಬಹುದು.
5. ಸಂಬಂಧಗಳನ್ನು ಕಾಪಾಡಿಕೊಳ್ಳಿ: ನಿಮ್ಮನ್ನು ಲೇಆಫ್ ಮಾಡಿದ ಕಂಪನಿಯ ಜೊತೆಗೆ ಉತ್ತಮ ಸಂಬಂಧವಿದೆ ಎಂದು ತೋರಿಸಿಕೊಳ್ಳುವುದು ಯಾವಾಗಲೂ ಒಳ್ಳೆಯದು.
ಆದ್ದರಿಂದ ಹಳೆಯ ಕಂಪನಿಯ ಜೊತೆಗೆ ಉತ್ತಮ ಸಂಬಂಧ ಹೊಂದಿರುವುದನ್ನು ಹೈಲೈಟ್ ಮಾಡಿ. ನೀವು ಅಲ್ಲಿ ಒಳ್ಳೆಯ ಅನುಭವ ಹೊಂದಿರುವುದು ಹಾಗೂ ಆ ಕಂಪನಿಯ ಬಗ್ಗೆ ಪಾಸಿಟಿವ್ ಆಗಿ ಮಾತನಾಡುವುದು ಖಂಡಿತವಾಗಿಯೂ ಉತ್ತಮ ಪ್ರಭಾವ ಬೀರುತ್ತದೆ ಎಂಬುದಾಗಿ ಬುಜ್ ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ