• ಹೋಂ
  • »
  • ನ್ಯೂಸ್
  • »
  • Jobs
  • »
  • Beauty Parlour: ಈ ರೀತಿ ಬ್ಯೂಟಿ ಪಾರ್ಲರ್ ಶುರು ಮಾಡಿದ್ರೆ ಎಂದಿಗೂ ಲಾಸ್ ಆಗುವುದಿಲ್ಲ

Beauty Parlour: ಈ ರೀತಿ ಬ್ಯೂಟಿ ಪಾರ್ಲರ್ ಶುರು ಮಾಡಿದ್ರೆ ಎಂದಿಗೂ ಲಾಸ್ ಆಗುವುದಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗ್ರಾಹಕರು ಹೆಚ್ಚಾಗಿ ರಿಯಾಯಿತಿಗಳನ್ನು ಇಷ್ಟಪಡುತ್ತಾರೆ. ಹೊಸ ಗ್ರಾಹಕರನ್ನು ಆಕರ್ಷಿಸಲು ಮತ್ತು ಹಳಬರನ್ನು ಉಳಿಸಿಕೊಳ್ಳಲು ರಿಯಾಯಿತಿ ಕೊಡುಗೆಗಳಂತಹ ವ್ಯಾಪಾರ ಸೂತ್ರಗಳನ್ನು ಅಚ್ಚುಕಟ್ಟಾಗಿ ಬಳಸಿ.

  • Trending Desk
  • 3-MIN READ
  • Last Updated :
  • Share this:

    ಸೌಂದರ್ಯ, ಫ್ಯಾಶನ್‌ (Beauty and Fashion) ಕ್ಷೇತ್ರ ಅಷ್ಟು ಸುಲಭವಾಗಿ ಮುಗ್ಗರಿಸುವುದಿಲ್ಲ. ಮಾರುಕಟ್ಟೆಯಲ್ಲಿ ಈ ಎರಡೂ ಕ್ಷೇತ್ರಗಳು ಬೇಡಿಕೆಯಲ್ಲಿದ್ದು, ಸ್ವಂತ ಬ್ಯುಸಿನೆಸ್‌ (Own business) ಆರಂಭಿಸುವವರ ಕೈ ಹಿಡಿದು ಅವರ ಕನಸು ನನಸು ಮಾಡುತ್ತದೆ. ಸೌಂದರ್ಯ ಉದ್ಯಮಕ್ಕೆ ಬಂದರೆ ಭಾರತದಲ್ಲಿ ಬ್ಯೂಟಿ ಸಲೂನ್‌ಗಳು ಅಥವಾ ಬ್ಯೂಟಿ ಪಾರ್ಲರ್‌ಗಳಿಗೆ (Beauty Parlour) ಬರವೇ ಇಲ್ಲ ಎನ್ನುವಂತಾಗಿದೆ. ನಮ್ಮ ದೇಶದಲ್ಲಿ ಬ್ಯೂಟಿ ಸಲೂನ್ ವ್ಯಾಪಾರವು ಶೇಕಡಾ 35ರ ದರದಲ್ಲಿ ಏರುತ್ತಿದೆ.


    ಮುಂದಿನ ಕೆಲವು ವರ್ಷಗಳಲ್ಲಿ ಭಾರತದ ಬ್ಯೂಟಿ ವ್ಯಾಪಾರವು ಯುಎಸ್ ಮತ್ತು ಯುರೋಪಿಯನ್ ಮಾರುಕಟ್ಟೆಗಳಿಗಿಂತ ಎರಡು ಪಟ್ಟು ವೇಗವಾಗಿ ಅಭಿವೃದ್ಧಿ ಹೊಂದಲಿದೆ ಎಂದು ವರದಿಗಳು ಹೇಳುತ್ತವೆ.


    ಭರವಸೆಯ ಉದ್ಯಮ ಈ ಸಲೂನ್‌ ಮತ್ತು ಬ್ಯೂಟಿ ಪಾರ್ಲರ್‌


    ಮಹಿಳೆ-ಪುರಷರು ಎಂಬ ಭೇದವಿಲ್ಲದೇ ಎಲ್ಲರೂ ಸಹ ಈಗ ತಮ್ಮ ಸ್ವಂತ ಕಾಳಜಿ ಮಾಡಲು ಪಾರ್ಲರ್‌, ಸಲೂನ್‌ ಅಂತಾ ಮೊರೆ ಹೋಗುತ್ತಾರೆ. ಹೀಗಾಗಿ ಈ ಉದ್ಯಮ ಒಂದು ಭರವಸೆಯ ಉದ್ಯಮವಾಗಿ ಹೊರಹೊಮ್ಮುತ್ತಿದೆ. ಸಲೂನ್‌ ಮತ್ತು ಬ್ಯೂಟಿ ಪಾರ್ಲರ್‌ ಅನ್ನು ದೊಡ್ಡ ಮಟ್ಟದಲ್ಲಿ ಅಥವಾ ಸಣ್ಣ ಮಟ್ಟದಲ್ಲಿ ತೆರೆಯಬಹುದು. ಯಾವುದಾದರೂ ಸಣ್ಣ ವ್ಯವಹಾರವನ್ನು ಪ್ರಾರಂಭಿಸಬೇಕು ಅಂತಾ ಪ್ಲ್ಯಾನ್‌ ಮಾಡುತ್ತಿರುವವರಿಗೆ ಇದೇ ನೋಡಿ ಹೇಳಿ ಮಾಡಿಸಿದ ಬ್ಯುಸಿನೆಸ್‌ ಐಡಿಯಾ.


    Dos and Do nots Of Bridal Makeup everyone should know
    ಸಾಂದರ್ಭಿಕ ಚಿತ್ರ


    ಹಾಗಾದರೆ ಹೇಗೆ ಈ ಉದ್ಯಮ ಆರಂಭಿಸೋದು ಅಂತೀರಾ ಇಲ್ಲಿದೆ ನೋಡಿ, ಉದ್ಯಮ ಆರಂಭಕ್ಕೆ ಬೇಕಾದ ಕೆಲ ಟಿಪ್ಸ್


    ಮೊದಲಿಗೆ ಯೋಜನೆಯ ಕಂಪ್ಲೀಟ್‌ ಸ್ಕೆಚ್‌ ತಯಾರು ಮಾಡಿಕೊಳ್ಳಿ


    ಪ್ರತಿ ವ್ಯವಹಾರವನ್ನು ಪ್ರಾರಂಭಿಸುವ ಮೊದಲು ವಿವರವಾದ ಯೋಜನೆ ಮುಖ್ಯವಾಗಿದೆ. ಉತ್ತಮ ವ್ಯಾಪಾರ ಯೋಜನೆಯು ಬಜೆಟ್, ಮಾರ್ಕೆಟಿಂಗ್, ಮಾರುಕಟ್ಟೆ ಸಂಶೋಧನೆ, ಬೆಲೆ ಮತ್ತು ರಿಯಾಯಿತಿ, ಉತ್ಪನ್ನಗಳು ಇತ್ಯಾದಿಗಳಂತಹ ಪ್ರತಿಯೊಂದು ಘಟಕವನ್ನು ಹೊಂದಿರಬೇಕು.


    ಇದನ್ನೂ ಓದಿ: Career In Salon Industry: ಸಲೂನ್‌ ಇಂಡಸ್ಟ್ರಿಯಲ್ಲಿ ವೃತ್ತಿ ಆರಂಭಿಸಬೇಕೇ? ಇಲ್ಲಿದೆ ಹಂತ ಹಂತದ ಮಾಹಿತಿ


    ಹಣ, ತಿಂಗಳ ಬಾಡಿಗೆಗಳು, ಒಳಾಂಗಣಗಳು, ಉತ್ಪನ್ನಗಳು, ಗ್ರಾಹಕರು, ಹೂಡಿಕೆಯ ಮೇಲಿನ ಆದಾಯ ಮತ್ತು ಮಾಸಿಕ ಆದಾಯದಂತಹ ಎಲ್ಲಾ ಪ್ರಮುಖ ಅಂಶಗಳ ಬಗ್ಗೆ ಅವಲೋಕನ ಮಾಡಿ ಒಂದು ಸ್ಕೆಚ್‌ ಅನ್ನು ತಯಾರು ಮಾಡಬೇಕು. ನೀವು ಆರಂಭಿಸುವ ಉದ್ಯಮ ನೀವಿರುವ ಜಾಗದಲ್ಲಿ ಹೇಗಿದೆ? ಅಲ್ಲಿರುವ ಇತರ ಸಲೂನುಗಳ ಬೆಲೆ ಹೇಗಿದೆ ಹೀಗೆ ಎಲ್ಲವನ್ನೂ ಅವಲೋಕಿಸಬೇಕು.


    ಬೆಲೆ ಮತ್ತು ಸೇವೆಗಳ ಪ್ರಕಾರವನ್ನು ಗುರುತಿಸಿ


    ನಿಮ್ಮ ಗ್ರಾಹಕರನ್ನು ಗುರುತಿಸಿದ ನಂತರ, ನಿಮ್ಮ ಸಲೂನ್ ಮತ್ತು ಬ್ಯೂಟಿ ಪಾರ್ಲರ್ ನೀಡಬಹುದಾದ ಬೆಲೆಗಳು ಮತ್ತು ಸೇವೆಗಳನ್ನು ನೀವು 3 ವಿಧಗಳಾಗಿ ವಿಂಗಡಿಸಿ ನಿರ್ಧರಿಸಬೇಕು.
    * ಆರ್ಥಿಕತೆ: ಮೊದನೆಯದು ಆರ್ಥಿಕತೆ. ಇದು ಮೂಲ ಸೇವೆಗಳನ್ನು ಮಾತ್ರ ನೀಡುತ್ತದೆ ಮತ್ತು ಕಡಿಮೆ ಬೆಲೆಯ ವಿಭಾಗದಿಂದ ಉತ್ಪನ್ನಗಳನ್ನು ಬಳಸುತ್ತದೆ.


    * ವ್ಯಾಪಾರ: ಇದು ಮಧ್ಯಮ ಶ್ರೇಣಿಯ ಬೆಲೆಗಳನ್ನು ನೀಡುತ್ತದೆ ಆದರೆ ಹೆಚ್ಚಿನ ಗುಣಮಟ್ಟವನ್ನು ನೀಡುತ್ತದೆ. ಸಲಹೆ ಮತ್ತು ಸಮಾಲೋಚನೆಯನ್ನು ನೀಡಬಲ್ಲ ಹೆಚ್ಚಿನ ವೃತ್ತಿಪರ ಸಿಬ್ಬಂದಿಯನ್ನು ಹೊಂದಿರುತ್ತದೆ.
    * ಪ್ರೀಮಿಯಂ: ಇದು ಉನ್ನತ-ಮಟ್ಟದ ಸೇವೆಗಳನ್ನು ನೀಡುತ್ತದೆ, ಉನ್ನತ ದರ್ಜೆಯ ಪ್ರಮಾಣಪತ್ರಗಳು ಮತ್ತು ಡಿಪ್ಲೋಮಾಗಳೊಂದಿಗೆ ವೃತ್ತಿಪರರನ್ನು ನೇಮಿಸಿಕೊಳ್ಳುತ್ತದೆ, ಉನ್ನತ-ಮಟ್ಟದ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಇದು ಒಳಗೊಂಡಿರುತ್ತದೆ.


    ಗ್ರಾಹಕ ನಿಷ್ಠೆ
    ಕೆಲವು ಸಂದರ್ಭಗಳಲ್ಲಿ, ನಿಮ್ಮ ಬ್ಯೂಟಿ ಸಲೂನ್ ಯೋಜನೆ ವಿಫಲವಾಗಬಹುದು. ಆದ್ದರಿಂದ ಅದಕ್ಕೂ ಸಹ ಸಿದ್ಧವಾಗಿರಬೇಕು. "ಸಲೂನ್ ಆರಂಭಿಸುವವರು ತಮ್ಮ ನಿಜವಾದ ಗ್ರಾಹಕರನ್ನು ಗುರುತಿಸದಿದ್ದಾಗ ಹೀಗಾಗುತ್ತದೆ.


    ಆದ್ದರಿಂದ ಯಾವಾಗಲೂ ನಿಮ್ಮ ಸಾಮಾನ್ಯ ಗ್ರಾಹಕರನ್ನು ಗುರುತಿಸಲು ಪ್ರಯತ್ನಿಸಿ ಮತ್ತು ಕ್ಲೈಂಟ್ ನಿಷ್ಠೆಯನ್ನು ನಿರ್ಮಿಸಲು ಉತ್ತಮ ಡೀಲ್‌ಗಳು ಮತ್ತು ಪ್ರಚಾರವನ್ನು ನೀಡಲು ಪ್ರಯತ್ನಿಸಿ ಎಂದು ಅನುಭವಿ ಉದ್ಯಮಿ ಪವನ್ ರೆಡ್ಡಿ ಹೇಳುತ್ತಾರೆ.




    ಸ್ಥಳ
    ಸ್ಥಳ ನಿಮ್ಮ ಉದ್ಯಮಕ್ಕೆ ದೊಡ್ಡ ಪ್ಲಸ್‌ ಪಾಯಿಂಟ್‌, ಇದು ನಿಮ್ಮ ಉದ್ಯಮದ ಸೋಲು-ಗೆಲುವನ್ನು ನಿರ್ಧರಿಸುವ ಹಂತ. ಇಲ್ಲಿ ನೀವು ಆಯ್ಕೆ ಮಾಡುವ ಸ್ಥಳ ಗ್ರಾಹಕರಿಗೆ ಬರಲು ಅನುಕೂಲವಾಗಿರಬೇಕು ಮತ್ತು ಎಲ್ಲರಿಗೂ ಕಾಣುವಂತೆ ಸಲೂನ್‌ ಮತ್ತು ಬ್ಯೂಟಿ ಪಾರ್ಲರ್‌ ಇರಬೇಕು. ಎಲ್ಲೋ ಒಂದು ಮೂಲೆಯಲ್ಲಿದ್ದರೆ ಗ್ರಾಹಕರಿಗೆ ಅದನ್ನು ಗುರುತಿಸಲು ಅಸಾಧ್ಯವಾಗಬಹುದು.


    ಸಲೂನ್‌ ಮತ್ತು ಬ್ಯೂಟಿ ಪಾರ್ಲರ್‌ಗಳಿಗೆ ನೆಲ ಅಂತಸ್ತಿನ ಸ್ಥಳಗಳು ಸೂಕ್ತವಾಗಿರುತ್ತವೆ. ಸ್ಥಳ ಆಯ್ಕೆ ಮಾಡಿದ್ದಲ್ಲಿ ಇತರೆ ಪ್ರತಿಸ್ಪರ್ಧಿಗಳ ಬ್ಯುಸಿನೆಸ್‌ ಹೇಗೆ ನಡೆಯುತ್ತಿದೆ ಎಂದು ತಿಳಿಯುವುದು ಸಹ ಮುಖ್ಯ.


    ಬೆಲೆ ಮತ್ತು ರಿಯಾಯಿತಿಗಳು


    ಚೆನ್ನಾಗಿ ಕಾಣಲು ಬಯಸುವ ಗ್ರಾಹಕರು ಹಣವನ್ನು ಖರ್ಚು ಮಾಡಲು ಹೆದರುವುದಿಲ್ಲ. ನಿಮ್ಮ ಸಲೂನ್‌ಗೆ ಜನರನ್ನು ಕೊಂಡಿಯಾಗಿರಿಸಲು ನೀವು ಈ ಅಭ್ಯಾಸವನ್ನು ಬಳಸಿಕೊಳ್ಳಬಹುದು.




    ಗ್ರಾಹಕರು ಹೆಚ್ಚಾಗಿ ರಿಯಾಯಿತಿಗಳನ್ನು ಇಷ್ಟಪಡುತ್ತಾರೆ. ಹೊಸ ಗ್ರಾಹಕರನ್ನು ಆಕರ್ಷಿಸಲು ಮತ್ತು ಹಳಬರನ್ನು ಉಳಿಸಿಕೊಳ್ಳಲು ರಿಯಾಯಿತಿ ಕೊಡುಗೆಗಳಂತಹ ವ್ಯಾಪಾರ ಸೂತ್ರಗಳನ್ನು ಅಚ್ಚುಕಟ್ಟಾಗಿ ಬಳಸಿ.


    ಉತ್ಪನ್ನಗಳು


    ಸೌಂದರ್ಯ ಉತ್ಪನ್ನಗಳು, ಉಪಕರಣಗಳು, ತರಬೇತಿ ಪಡೆದ ಕೆಲಸಗಾರರು, ಒಳಾಂಗಣಗಳ ಮೇಲೆ ಯೋಚಿಸಿ ಹೂಡಿಕೆ ಮಾಡಿ. ಗ್ರಾಹಕರಿಗೆ ಯಾವಾಗಲೂ ಉತ್ತಮ ಸೇವೆಗಳನ್ನು ನೀಡುವ ಉದ್ದೇಶ ಇಟ್ಟುಕೊಳ್ಳಿ.


    all you need to know about beauty parlour stroke
    ಸಾಂದರ್ಭಿಕ ಚಿತ್ರ


    ಪರವಾನಗಿಗಳು


    ಸಲೂನ್ ಮತ್ತು ಪಾರ್ಲರ್‌ ಆರಂಭಿಸಲು ನಿಮಗೆ ಸ್ಥಳೀಯ ಸರ್ಕಾರದಿಂದ ಪರವಾನಗಿ ಅಗತ್ಯವಿದೆ. ವ್ಯಾಪಾರದ ಪ್ರದೇಶವನ್ನು ಅವಲಂಬಿಸಿ, ನಿಮಗೆ ಮುನ್ಸಿಪಲ್ ಕಾರ್ಪೊರೇಷನ್, ಜಿಎಸ್ಟಿ ಸಂಖ್ಯೆ, ವೃತ್ತಿಪರ ತೆರಿಗೆ ಪರವಾನಗಿಯಿಂದ ವ್ಯಾಪಾರ ಪರವಾನಗಿ ಬೇಕಾಗಬಹುದು.


    10,000 ರೂ.ಗಿಂತ ಹೆಚ್ಚಿನ ಸಂಬಳದ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ನಿಮಗೆ ವೃತ್ತಿಪರ ತೆರಿಗೆ ಪರವಾನಗಿ ಅಗತ್ಯವಿದೆ. ಸಲೂನ್ ನಡೆಸಲು ಅಗತ್ಯವಿರುವ ಅಗ್ನಿ ಸುರಕ್ಷತೆಯಂತಹ ಕೆಲವು ಇತರ ಪರವಾನಗಿಗಳೂ ಸಹ ಇವೆ.

    Published by:Kavya V
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು