ಸ್ಪರ್ಧಾತ್ಮಕ ಲೋಕದಲ್ಲಿ ಕೌಶಲ್ಯಗಳನ್ನು(Soft Skills) ಕಲಿತರೆ ನಷ್ಟದ ಮಾತೇ ಇಲ್ಲ. ಇದು ನಿಮ್ಮ ವೃತ್ತಿ ಜೀವನದಲ್ಲಿ (Professional Life ) ನಿಮ್ಮನ್ನು ಉತ್ತಮ ಹುದ್ದೆಗಳಿಗೆ ಏರಲು ಮಹತ್ವದ ಪಾತ್ರ ವಹಿಸುತ್ತದೆ. ಕಾರ್ಪೋರೇಟ್ ಜಗತ್ತಿನಲ್ಲಿ ಎಕ್ಸೆಲ್ ( Microsoft Excel) ಅನ್ನೋದು ತುಂಬಾ ಮುಖ್ಯವಾದದ್ದು, ಉದ್ಯೋಗಿಗಳಿಗೆ ಎಕ್ಸೆಲ್ ಕಲಿಕೆ ಹತ್ತಾರು ಪ್ರಯೋಜನಗಳು ನೀಡುತ್ತದೆ. ಮುಖ್ಯವಾಗಿ ನಿಮ್ಮ ಕೆಲಸಗಳನ್ನು ಸುಲಭಗೊಳಿಸಿ ಸಮಯವನ್ನು ಉಳಿತಾಯ ಮಾಡುತ್ತದೆ.
ಏನಿದು ಎಕ್ಸೆಲ್?
ಮೈಕ್ರೋಸಾಫ್ಟ್ ಎಕ್ಸೆಲ್ ಎಂಬುದು Windows, macOS, Android ಮತ್ತು iOS ಗಾಗಿ ಮೈಕ್ರೋಸಾಫ್ಟ್ ಅಭಿವೃದ್ಧಿಪಡಿಸಿದ ಸ್ಪ್ರೆಡ್ಶೀಟ್ ಆಗಿದೆ. ಇದು ಲೆಕ್ಕಾಚಾರ ಅಥವಾ ಕಂಪ್ಯೂಟೇಶನ್ ಸಾಮರ್ಥ್ಯಗಳು, ಗ್ರಾಫಿಂಗ್ ಪರಿಕರಗಳು, ಪಿವೋಟ್ ಕೋಷ್ಟಕಗಳು ಮತ್ತು ಅಪ್ಲಿಕೇಶನ್ಗಳಿಗಾಗಿ ವಿಷುಯಲ್ ಬೇಸಿಕ್ ಎಂಬ ಮ್ಯಾಕ್ರೋ ಪ್ರೋಗ್ರಾಮಿಂಗ್ ಭಾಷೆಯನ್ನು ಒಳಗೊಂಡಿದೆ. ಇದು ಉದ್ಯೋಗಿಗಳಿಗೆ ಸುಲಭವಾಗಿ ಲೆಕ್ಕಾ ಮಾಡಲು, ಗ್ರಾಫ್, ಚಾರ್ಟ್ ತಯಾರಿಸಲು ಸಹಾಯ ಮಾಡುತ್ತದೆ.
ಉದ್ಯೋಗಿಗಳಿಗೆ ಎಕ್ಸೆಲ್ನ ಪ್ರಯೋಜನಗಳು
1) ಉದ್ಯೋಗಿಗಳ ಉತ್ಪಾದಕತೆ ಮತ್ತು ದಕ್ಷತೆಯನ್ನು ಸುಧಾರಿಸುವುದು
ದೊಡ್ಡ ಪ್ರಮಾಣದ ಡೇಟಾ ಮತ್ತು ಲೆಕ್ಕಾಚಾರಗಳನ್ನು ಮಾಡುವಾಗ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಉದ್ಯೋಗಿಗಳು ಹೆಚ್ಚು ಪರಿಣಾಮಕಾರಿಯಾಗಿರಲು ಎಕ್ಸೆಲ್ ಒಂದು ನಿರ್ಣಾಯಕ ಸಾಧನವಾಗಿದೆ.
ಎಕ್ಸೆಲ್ ಬಗೆಗಿನ ಹೆಚ್ಚಿನ ಜ್ಞಾನ ನಿಮ್ಮ ಕೆಲಸವನ್ನು ಇನ್ನಷ್ಟು ಸುಲಭಗೊಳಿಸುತ್ತದೆ ಮತ್ತು ಡೇಟಾವನ್ನು ಹೆಚ್ಚು ವೇಗವಾಗಿ ವಿಶ್ಲೇಷಿಸಲು ಅನುವು ಮಾಡಿಕೊಡುತ್ತದೆ. ಒಟ್ಟಾರೆ ಎಕ್ಸೆಲ್ ಕೆಲಸವನ್ನು ವೇಗವಾಗಿಸುವುದರ ಜೊತೆ ಉದ್ಯೋಗಿಗಳ ಉತ್ಪಾದಕತೆ ಮತ್ತು ದಕ್ಷತೆಯನ್ನು ಸುಧಾರಿಸುತ್ತದೆ.
ಲೆಕ್ಕಾಚಾರ ಸಮಯದಲ್ಲಿ ಎಕ್ಸೆಲ್ ಮತ್ತಷ್ಟು ಪ್ರಯೋಜನಕಾರಿಯಾಗಿದೆ. ಸುಧಾರಿತ ಎಕ್ಸೆಲ್ ವೈಶಿಷ್ಟ್ಯಗಳನ್ನು ಬಳಸಿಕೊಂಡು ನೀವು ಹೆಚ್ಚು ಅತ್ಯಾಧುನಿಕ ಲೆಕ್ಕಾಚಾರಗಳನ್ನು ಮಾಡಬಹುದು. ಒಮ್ಮೆ ನೀವು ನಿಮ್ಮ ಸೂತ್ರವನ್ನು ಟೈಪ್ ಮಾಡಿ ಮತ್ತು ನಿಮ್ಮ ಲೆಕ್ಕವನ್ನು ಪ್ರೋಗ್ರಾಮ್ ಮಾಡಿದ ನಂತರ, ಆ ಪ್ರೋಗ್ರಾಂ ಲೆಕ್ಕಾಚಾರಗಳನ್ನು ಮಾಡುತ್ತದೆ. ಇದರಿಂದಾಗಿ ನಿಮ್ಮ ಸಮಯ ಉಳಿತಾಯವಾಗುತ್ತದೆ ಮತ್ತು ನಿಖರವಾದ ಅಂಕಿಅಂಶಗಳು ದೊರೆಯುತ್ತವೆ.
ಇದನ್ನೂ ಓದಿ: Resume Tips-4: 2023ರಲ್ಲಿ ಕೆಲಸ ಸಿಗಲು ನಿಮ್ಮ ರೆಸ್ಯೂಮ್ನಲ್ಲಿ ಈ 8 ವಿಷಯಗಳು ಇರಲೇಬೇಕು
2) ಮೌಲ್ಯಯುತ ಉದ್ಯೋಗಿಯನ್ನಾಗಿ ಮಾಡುತ್ತದೆ
ಉದ್ಯೋಗಿಯ ದಕ್ಷತೆ, ಉತ್ತಮ ಶಿಕ್ಷಣ, ಕೌಶಲ್ಯ ಕಲೆಗಳು ಮತ್ತು ಜ್ಞಾನ ಕಂಪನಿಯಲ್ಲಿ ಅವರಿಗೆ ಒಂದೊಳ್ಳೆ ಸ್ಥಾನ ನೀಡುತ್ತದೆ. ಇದು ಮುಂದಿನ ಅವರ ವೃತ್ತಿ ಭವಿಸ್ಯಕ್ಕೆ ಸಹಾಯವಾಗುತ್ತದೆ.
ಹೀಗಾಗಿ ಉದ್ಯೋಗಿಗಳು ಸಂಸ್ಥೆಗೆ ತಮ್ಮ ಮೌಲ್ಯವನ್ನು ಹೆಚ್ಚಿಸುವ ವಿಧಾನಗಳನ್ನು ನಿರಂತರವಾಗಿ ಕಲಿಯುತ್ತಿರಬೇಕು. ಕೆಲಸದಲ್ಲಿ ಭದ್ರತೆ ಮತ್ತು ಪ್ರಗತಿಗಾಗಿ ನೀವು ಹೊಸ ಸಾಮರ್ಥ್ಯಗಳನ್ನು ಕಲಿಯಬೇಕು ಮತ್ತು ಕರಗತ ಮಾಡಿಕೊಳ್ಳಬೇಕು. ಅದರಲ್ಲಿ ಎಕ್ಸೆಲ್ ಕೂಡ ಒಂದು. ಈ ಕೌಶಲ್ಯ ಕೂಡ ಕಂಪನಿಯಲ್ಲಿ ನಿಮ್ಮನ್ನು ಉತ್ತಮ ಉದ್ಯೋಗಿಯನ್ನಾಗಿ ಮಾಡುತ್ತದೆ.
3) ನಿಮ್ಮನ್ನು ಉತ್ತಮ ಡೇಟಾ ಸಂಘಟಕರನ್ನಾಗಿ ಮಾಡುತ್ತದೆ
ಡೇಟಾವನ್ನು ಸಂಗ್ರಹಿಸಲು ಮತ್ತು ಸಂಘಟಿಸುವಲ್ಲಿ ಸ್ಪ್ರೆಡ್ಶೀಟ್ಗಳು ಜನಪ್ರಿಯ ಸಾಧನವಾಗಿದೆ. ಎಕ್ಸೆಲ್ ಅದರ ಮೂಲಭೂತ ರೂಪದಲ್ಲಿ ಸ್ಪ್ರೆಡ್ಶೀಟ್ ಸಾಫ್ಟ್ವೇರ್ ಆಗಿದೆ. ನಿಮ್ಮ ಎಲ್ಲಾ ಡೇಟಾವನ್ನು ನಿಖರವಾಗಿ ಜೋಡಿಸಲು ಇದು ನಿಮಗೆ ಅನುಮತಿಸುತ್ತದೆ ಮತ್ತು ನೀವು ಇಷ್ಟಪಡುವ ರೀತಿಯಲ್ಲಿ ಮಾಹಿತಿಯನ್ನು ವಿಂಗಡಿಸಲು ನಿಮಗೆ ಅನುಮತಿಸುತ್ತದೆ.
4) ನಿಮ್ಮ ಕೆಲಸವನ್ನು ತುಂಬಾ ಸುಲಭಗೊಳಿಸುತ್ತದೆ
ಎಕ್ಸೆಲ್ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ನಿಮ್ಮ ಕೆಲಸ ಸುಲಭವಾದಂತೆ. ಮೈಕ್ರೋಸಾಫ್ಟ್ ಎಕ್ಸೆಲ್ ಹಲವಾರು ಶಾರ್ಟ್ಕಟ್ಗಳನ್ನು ಹೊಂದಿದ್ದು ಅದು ನಿಮಗೆ ವೇಗವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.
ನಿಮ್ಮ ಎಕ್ಸೆಲ್ ಶೀಟ್ನಲ್ಲಿರುವ ಡೇಟಾವನ್ನು ವಿವಿಧ ಪರಿಕರಗಳಲ್ಲಿ ಬಳಸಲು ನಿಮಗೆ ಸಾಧ್ಯವಾಗುತ್ತದೆ, ಡೇಟಾವನ್ನು ಮರು-ನಮೂದಿಸುವ ಅಗತ್ಯವನ್ನು ಕಡಿಮೆ ಮಾಡುತ್ತದೆ. ಕೆಲಸ ಸುಲಭವಾದಾಗ ಉದ್ಯೀಗಿಗಳು ಸಹ ಸಹಜವಾಗಿ ಒತ್ತಡ ಮುಕ್ತರಾಗಿರುತ್ತಾರೆ, ಇದರಿಂದ ಕಂಪನಿಯ ಉತ್ಪಾದಕತೆ ಹೆಚ್ಚುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ