ಓದು (Education) ಮುಗಿದಾಗಿದೆ, ಒಂದು ಕೆಲಸ ಅಂತನೂ ಸಿಕ್ಕಿದೆ. ವಯಸ್ಸು 25 ದಾಟಿ ಮುಂದಕ್ಕೆ ಹೋಗುತ್ತಿದೆ. ನಾನು ಮಾಡುತ್ತಿರುವ ಉದ್ಯೋಗ (JOB) ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದೆ. ನನ್ನ ಕರಿಯರ್ (Career) ಎತ್ತ ಸಾಗುತ್ತಿದೆ. ನನ್ನ ವೃತ್ತಿಯಲ್ಲಿ ನಾನು ಯಶಸ್ವಿಯಾಗುತ್ತೇನೆ (Successful) ಎಂಬ ಪ್ರಶ್ನೆಗಳೆಲ್ಲಾ ಮೂಡಲು ಆರಂಭಿಸುತ್ತವೆ. ಹೌದು ವೃತ್ತಿ ಆರಂಭದಲ್ಲಿ ಕೆಲಸ ಸಿಕ್ಕರೆ ಸಾಕು, ಒಳ್ಳೆಯ ಸಂಬಳ ಬಂದರೆ ಸಾಕು, ಪ್ರತಿ ವರ್ಷ ಹೈಕ್ ದೊರೆತರೆ ಆಯಿತು ಎಂದುಕೊಳ್ಳುತ್ತಿದ್ದವರು ನೀವು. ಈಗ ಒಮ್ಮೆಲೆ ಸಕ್ಸಸ್ ಫುಲ್ ಆಗುವುದು ಹೇಗೆ ಎನಿಸುತ್ತದೆ.
ಈ ರೀತಿಯ ಯೋಚನೆಗಳು ಬರುವುದು ನಿಜಕ್ಕೂ ಉತ್ತಮ. ಪ್ರತಿಯೊಬ್ಬರು ತಮ್ಮ ವೃತ್ತಿಯ ಯಶಸ್ಸಿನ ಬಗ್ಗೆ ಮೊದಮೊದಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ತುಂಬಾನೇ ತಡವಾಗಿ ಹೋಗುತ್ತೆ. ವೃತ್ತಿಯಲ್ಲಿ ಯಶಸ್ಸು ಗಳಿಸುವುದು ಸುಲಭವಲ್ಲ, ಆದರೆ ನೀವು ಅಂದುಕೊಂಡಷ್ಟು ಕಷ್ಟವೂ ಅಲ್ಲ ಎಂಬುವುದನ್ನು ಮರೆಯಬೇಡಿ. ಮತ್ತೆ ಕರಿಯರ್ ಸಕ್ಸಸ್ ಮಂತ್ರ ಏನು? ಆ ಬಗ್ಗೆ ಇಲ್ಲಿ ತಿಳಿಸಲಾಗಿದೆ.
1) ನೀವು ಉದ್ಯೋಗ ಮಾಡುತ್ತಿರುವ ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಇದೆಯೇ?
ನೀವು ಒಂದು ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬಯಸಿದರೆ, ಆ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರುವುದು ಮುಖ್ಯ. ಆದರೆ ಕೇವಲ ಆಸಕ್ತಿ ಇದ್ದರೆ ಪ್ರಯೋಜನವಿಲ್ಲ. ಯಾವುದೇ ಕ್ಷೇತ್ರದಲ್ಲಿ ಮುನ್ನಡೆಯಲು, ಅಗತ್ಯ ಮತ್ತು ಸಮಯಕ್ಕೆ ಅನುಗುಣವಾಗಿ ತನ್ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅವಶ್ಯಕ.
2) ತಪ್ಪುಗಳನ್ನು ಒಪ್ಪಿಕೊಂಡು, ತಿದ್ದಿಕೊಂಡು ಹೋಗಬೇಕು
ನಿಮ್ಮ ಮನೋಭಾವವನ್ನು ಬದಲಿಸಿಕೊಳ್ಳಬೇಕು. ನೀವು ಮೊದಲು ಪ್ರಾಮಾಣಿಕ ಸ್ವಯಂ ವಿಶ್ಲೇಷಣೆಯನ್ನು ಮಾಡಬೇಕು. ಯಾವುದನ್ನು ಬದಲಾಯಿಸಬೇಕು ಮತ್ತು ಯಾವುದನ್ನು ಸುಧಾರಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ.
ಇದನ್ನೂ ಓದಿ: KPSC Exam 2023: KAS ಅಧಿಕಾರಿ ಆಗಲು ಈ ಅರ್ಹತೆಗಳಿರಬೇಕು, ಕನ್ನಡಿಗರೇ ಅವಕಾಶ ಕಳೆದುಕೊಳ್ಳಬೇಡಿ
3) ಗುರಿ ಇರಬೇಕು
ನಿಮ್ಮ ಕ್ಷೇತ್ರದಲ್ಲಿ ಯಾರನ್ನಾದರೂ ನಿಮ್ಮ ಮಾದರಿಯನ್ನಾಗಿ ಮಾಡಿಕೊಳ್ಳಿ. ಅವರ ಬಗ್ಗೆ ಓದಿ, ಅವರಂತೆ ವರ್ತಿಸಲು ಪ್ರಯತ್ನಿಸಿ. ಆದ್ದರಿಂದ ನೀವು ಸರಿಯಾದ ಮಾರ್ಗವನ್ನು ಕಂಡುಕೊಳ್ಳುವಿರಿ. ನಿಮ್ಮ ಬದಲಾದ ಕೆಲವು ಅಭ್ಯಾಸಗಳು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತಿವೆ ಎಂಬುದನ್ನು ಗುರುತಿಸಿ. ಅದಕ್ಕೆ ತಕ್ಕಂತೆ ನಡೆದುಕೊಳ್ಳಿ. ಯಾರಿಗೂ ಭಯಪಡಬೇಡಿ, ಯಾರನ್ನೂ ಕೆಟ್ಟದಾಗಿ ನಡೆಸಿಕೊಳ್ಳಬೇಡಿ. ನಿಮ್ಮಲ್ಲಿ ಒಳ್ಳೆಯ ಮನೋಭಾವವನ್ನು ಇಟ್ಟುಕೊಳ್ಳಿ.
4) ಒಳ್ಳೆಯ ಸ್ನೇಹ ಕೂಡ ಮ್ಯಾಟರ್ ಆಗುತ್ತೆ
ನಿಮ್ಮ ಸ್ನೇಹಿತರು ನಿಮ್ಮ ಸುಧಾರಣೆಗೆ ಅಡ್ಡಿಯಾಗುತ್ತಿದ್ದರೆ, ಅವರಿಂದ ದೂರ ಸರಿಯುವುದೇ ಲೇಸು. ಸರಿಯಾದ ಮನೋಭಾವ ಹೊಂದಿರುವ ವ್ಯಕ್ತಿಯೊಂದಿಗೆ ಸ್ನೇಹ ಮಾಡಿ. ನಿಮ್ಮಲ್ಲಿ ಸಕಾರಾತ್ಮಕ ಮನೋಭಾವವನ್ನು ತರಬೇಕು, ಇಲ್ಲದಿದ್ದರೆ ನಿಮ್ಮ ದೌರ್ಬಲ್ಯವು ನಿಮ್ಮನ್ನು ಪ್ರತಿ ಬಾರಿಯೂ ಸೋಲಿಸುತ್ತದೆ.
5) ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ
ಔದ್ಯೋಗಿಕ ಜೀವನಕ್ಕೆ ವ್ಯಕ್ತಿತ್ವ ವಿಕಸನ ತುಂಬಾನೇ ಮುಖ್ಯ. ವಿದ್ಯಾರ್ಥಿ ಜೀವನದಿಂದಲೇ ಕೋಪವನ್ನು ನಿಯಂತ್ರಿಸಲು ಕಲಿಯಿರಿ. ವ್ಯಕ್ತಿತ್ವ ವಿಕಸನಕ್ಕೂ ಗಮನ ಕೊಡಿ. ಇದಕ್ಕಾಗಿ ಧ್ಯಾನ ಅಥವಾ ಯೋಗ ಮಾಡುತ್ತಿರಿ. ಜೀವನ ಪರ್ಯಂತ ಈ ಅಭ್ಯಾಸವನ್ನು ಮುಂದುವರೆಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ