• ಹೋಂ
  • »
  • ನ್ಯೂಸ್
  • »
  • Jobs
  • »
  • Job Offer: ಒಟ್ಟೊಟ್ಟಿಗೆ 2 ಜಾಬ್‌ ಆಫರ್‌ ಬಂದ್ರೆ ಒಂದನ್ನು ಆಯ್ಕೆ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್ ‌

Job Offer: ಒಟ್ಟೊಟ್ಟಿಗೆ 2 ಜಾಬ್‌ ಆಫರ್‌ ಬಂದ್ರೆ ಒಂದನ್ನು ಆಯ್ಕೆ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್ ‌

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನಿಮಗೂ ಹೀಗೆ ಒಟ್ಟೊಟ್ಟಿಗೆ ಉತ್ತಮ ಉದ್ಯೋಗದ ಎರಡೆರೆಡು ಆಫರ್‌ಗಳ ಬಂದರೆ ಹೇಗೆ ಅವೆರಡರಲ್ಲಿ ಒಂದನ್ನು ನಿರ್ಧರಿಸಬೇಕು ಎಂಬುದಕ್ಕೆ ಕೆಲ ಸಲಹೆಗಳು ಇವೆ.

  • Share this:

ಕೆಲವೊಮ್ಮೆ ಎರೆಡೆರೆಡು ಉದ್ಯೋಗಗಳು (Job) ಒಟ್ಟಿಗೆ ನಮ್ಮನ್ನರಸಿ ಬಂದು ಬಿಡುತ್ತವೆ. ಈ ವೇಳೆ ಯಾವುದನ್ನು ಆರಿಸಬೇಕು, ಯಾವುದನ್ನು ಬಿಡಬೇಕು ಅಂತಾ ಕೆಲ ಗೊಂದಲಗಳು (Confusion)ಇರುತ್ತವೆ. ಕೆಲವರು ವಾರ್ಷಿಕ ಸಂಬಳದ ಮೇಲೆ ಯಾವ ಕೆಲಸ ಬೆಸ್ಟ್‌ ಅಂತಾ ನಿರ್ಧರಿಸಿದರೆ, ಇನ್ನೂ ಕೆಲವರು ಕಂಫರ್ಟ್‌, ವೃತ್ತಿ ಭದ್ರತೆ, ಕಂಪನಿ ಹಿನ್ನೆಲೆ ಎಲ್ಲವನ್ನೂ ನೋಡುತ್ತಾರೆ. ಸಂಬಳ, ಪ್ರಯೋಜನಗಳು (Benefits), ಕಾರ್ಪೊರೇಟ್ ಪಾರ್ಕ್‌ಗಳು ಮತ್ತು ಆರೋಗ್ಯ (Health)  ಕ್ಷೇಮ ಕಾರ್ಯಕ್ರಮಗಳನ್ನು ಒಳಗೊಂಡಂತೆ ಪ್ರತಿ ಉದ್ಯೋಗದ ಕೊಡುಗೆಗಳನ್ನು ಸಂಪೂರ್ಣವಾಗಿ ಪರಿಗಣಿಸಲು ಉದ್ಯೋಗ ತಜ್ಞರು ಶಿಫಾರಸು ಮಾಡುತ್ತಾರೆ.


ನಿಮಗೂ ಹೀಗೆ ಒಟ್ಟೊಟ್ಟಿಗೆ ಉತ್ತಮ ಉದ್ಯೋಗದ ಎರಡೆರೆಡು ಆಫರ್‌ಗಳ ಬಂದರೆ ಹೇಗೆ ಅವೆರಡರಲ್ಲಿ ಒಂದನ್ನು ನಿರ್ಧರಿಸಬೇಕು ಎಂಬುದಕ್ಕೆ ಕೆಲ ಸಲಹೆಗಳು ಇವೆ.


ಎರಡು ಉದ್ಯೋಗದ ಆಫರ್‌ ಬಂದಾಗ ಒಂದು ಕೆಲಸವನ್ನು ಪರಿಗಣಿಸಲು ಕೆಲವು ಉಪಯುಕ್ತ ಸಲಹೆಗಳು ಇಲ್ಲಿವೆ.


* ಉದ್ಯೋಗದ ಪ್ಯಾಕೇಜ್ ಅನ್ನು ಮೌಲ್ಯಮಾಪನ ಮಾಡಿ
ಸಹಜವಾಗಿ ಒಬ್ಬರು ಎರಡು ಕೆಲಸಗಳಲ್ಲಿ ಒಂದನ್ನು ಆರಿಸುವಾಗ ಎರಡೂ ಕೆಲಸಗಳ ಪ್ಯಾಕೇಜ್‌ ಎಷ್ಟಿದೆ ಅಂತಾ ಮೊದಲಿಗೆ ಗಮನ ನೀಡುತ್ತಾರೆ. ಇದು ಆರ್ಥಿಕವಾಗಿ ನಿಮ್ಮನ್ನು ಸಬಲಗೊಳಿಸಲು ಉದ್ಯೋಗದಲ್ಲಿ ಖಂಡಿತ ಗಮನಿಸಬೇಕಾದ ಅಂಶವೇ ಸರಿ.ಎರಡು ಉದ್ಯೋಗದ ಆಫರ್‌ಗಳನ್ನು ಪರಿಶೀಲಿಸುವಾಗ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ಆದ್ಯತೆಗಳನ್ನು ಗುರುತಿಸಬೇಕು ಎಂದು ಉದ್ಯೋಗ ತಜ್ಞರು ಹೇಳುತ್ತಾರೆ.


* ಸರಿಯಾದ ಕೆಲಸವನ್ನು ಆಯ್ಕೆ ಮಾಡುವಾಗ ಉನ್ನತ ಗುಣಮಟ್ಟದ ಜೀವನಕ್ಕೆ ಆದ್ಯತೆ ನೀಡಿ
ಅಭ್ಯರ್ಥಿಗಳು ಸಂಬಳದ ಜೊತೆ ಅವರ ಜೀವನಶೈಲಿಗೆ ಆದ್ಯತೆ ನೀಡುವ ಕೆಲಸವನ್ನೂ ಸಹ ಪರಿಗಣಿಸಬೇಕು. ಅಂದರೆ ಕೆಲವು ಕೆಲಸಗಳಲ್ಲಿ ಬರೀ ಟಾರ್ಗೆಟ್‌, ಕೆಲಸಕ್ಕೆ ಪ್ರಯಾಣ ಮಾಡುವ ಸಮಯ ಹೀಗೆ ಅದು ಇದು ಅಂತಾ ನಮ್ಮ ಸ್ವಂತ ಕಾಳಜಿ ಮಾಡುವುದಕ್ಕೆ ಸಮಯವೇ ಇರುವುದಿಲ್ಲ.


ಇದನ್ನೂ ಓದಿ: Linkedinನಲ್ಲಿ ನಿಮ್ಮ ಪ್ರೊಫೈಲ್ ಹೆಚ್ಚು ಉದ್ಯೋಗಗಳನ್ನು ಆಕರ್ಷಿಸಬೇಕೆಂದರೆ ಈ 10 ಟಿಪ್ಸ್ ಫಾಲೋ ಮಾಡಿ


ಇದು ಒಬ್ಬರ ಲೈಫ್‌ಸ್ಟೈಲ್‌ ಅನ್ನೇ ಬದಲಿಸಬಹುದು. ಹೀಗಾಗಿ ಉನ್ನತ ಗುಣಮಟ್ಟದ ಜೀವನಕ್ಕೆ ಆದ್ಯತೆ ನೀಡುವಂತಹ ಕೆಲಸವನ್ನು ಗಣನೆಗೆ ತೆಗೆದುಕೊಳ್ಳಬೇಕು.


* ವೆಚ್ಚಗಳ ಪರಿಗಣನೆ
ಎರಡು ಕೆಲಸದ ಸ್ಥಳಗಳ ದೂರ, ಪ್ರಯಾಣ ವೆಚ್ಚ ಇವುಗಳನ್ನು ಸಹ ಪರಿಗಣಿಸಬೇಕಾಗುತ್ತದೆ. ಕೆಲಸದ ಸ್ಥಳ ದೂರವಿದ್ದಾಗ ಪ್ರಯಾಣ ಖಾತೆಗೆ ಹೆಚ್ಚು ವೆಚ್ಚವಾದರೆ ನಿಮ್ಮ ಸಂಬಳದ ಬಹುಪಾಲು ಅಲ್ಲೇ ವೆಚ್ಚವಾಗುತ್ತದೆ.


ಹೀಗಾಗಿ ಪ್ರಯಾಣ ದೂರವನ್ನು ಸಹ ಮುಖ್ಯವಾಗಿ ನೋಡಬೇಕು. ಜೊತೆಗೆ ಬಟ್ಟೆಯ ವೆಚ್ಚ, ಲೈಫ್‌ಸ್ಟೈಲ್‌ ನಿರ್ವಹಣೆ ಎಲ್ಲದರ ಖರ್ಚನ್ನು ಪರಿಗಣಿಸಿ ಯಾವ ಕೆಲಸ ಉತ್ತಮ ಎಂದು ನಿರ್ಧರಿಸಬೇಕು. ಈ ಅಂಶಗಳನ್ನು ನಿರ್ಧರಿಸುವಾಗ ನಿಮ್ಮ ಪ್ಯಾಕೇಜ್‌ ಮೇಲೆ ಇದು ಅವಲಂಬಿತವಾಗಿರುತ್ತದೆ.
* ಪ್ಯಾಕೇಜ್ ಮತ್ತು ಅದರ ಜೊತೆಗಿನ ಪ್ರಯೋಜನಗಳ ಆಧಾರದ ಮೇಲೆ ನಿರ್ಧರಿಸಿ
ಸಂಬಳದ ಜೊತೆಯೇ ಯಾವ ಕಂಪನಿ ಉತ್ತಮ ಪ್ಯಾಕೇಜ್‌ ಜೊತೆ ಒಳ್ಳೆಯ ಪಿಎಫ್‌ ಪಾಲಿಸಿ, ಹೆಲ್ತ್‌ ಇನ್ಶೂರೆನ್ಸ್‌ ಸೇರಿ ಉಚಿತ ಜಿಮ್‌ನಂತಹ ಸವಲತ್ತುಗಳನ್ನು ನೀಡುತ್ತದೆ ಎಂಬುದರ ಮೇಲೂ ನಿಮ್ಮ ಉದ್ಯೋಗವನ್ನು ನಿರ್ಧರಿಸಬೇಕಾಗುತ್ತದೆ.


ಕೆಲವು ಕಂಪನಿಗಳು ಮಾತ್ರ ತಮ್ಮ ಉದ್ಯೋಗದ ಕೊಡುಗೆಯಲ್ಲಿ ಪ್ರಯೋಜನಗಳ ಸಂಪೂರ್ಣ ವಿವರವನ್ನು ಒದಗಿಸುತ್ತವೆ, ಎಲ್ಲಾ ನೇಮಕಾತಿ ತಂಡಗಳು ಈ ಮಾಹಿತಿಯನ್ನು ಒಳಗೊಂಡಿರುವುದಿಲ್ಲ.


ಈ ವೇಳೆ ಈ ಎಲ್ಲಾ ಮಾಹಿತಿಗಳ ಬಗ್ಗೆ ಕೇಳಿ ತಿಳಿದುಕೊಂಡು ನೀವು ಒಂದು ಕೆಲಸವನ್ನು ನಿರ್ಧರಿಸಬೇಕು ಎನ್ನುತ್ತಾರೆ ಉದ್ಯೋಗ ತಜ್ಞರು.


* ಬೋನಸ್ ಪಾಲಿಸಿ ಪರಿಗಣಿಸಿ
ಸಂಬಳದ ಜೊತೆಗೆ ವರ್ಷಕ್ಕೊಮ್ಮೆ ಸಿಗುವ ಬೋನಸ್‌ ರಚನೆಯನ್ನು ಸಹ ಮುಖ್ಯವಾಗಿ ಪರಿಗಣಿಸಬೇಕಾಗುತ್ತದೆ. ಎರಡು ಉದ್ಯೋಗದಲ್ಲಿ ಒಂದು ಉದ್ಯೋಗವನ್ನು ಸ್ವೀಕರಿಸುವ ಮೊದಲು ನೀವು ನಿರೀಕ್ಷಿತ ಕಂಪನಿಯ ಬೋನಸ್ ಪಾಲಿಸಿಯ ಬಗ್ಗೆ ತಿಳಿಯಬೇಕು ಎಂದು ನೇಮಕ ಮಾಡುವ ತಜ್ಞರು ಸಲಹೆ ನೀಡುತ್ತಾರೆ.


* ಹೆಚ್ಚುವರಿ ಪರ್ಕ್‌ಗಳ ಬಗ್ಗೆ ಕೇಳಿ ನಿರ್ಧರಿಸಿ
ಮೇಲೆ ವಿವರಿಸಿರುವ ಅಂಶಗಳ ಜೊತಗೆ ಕಂಪನಿಯು ನೀಡುವ ಹೆಚ್ಚುವರಿ ಸವಲತ್ತುಗಳ ಆಧಾರದ ಮೇಲೆಯೂ ಕೆಲಸವನ್ನು ನಿರ್ಧರಿಸಬೇಕು. ಹೆಚ್ಚುವರಿ ಸವಲತ್ತು ಎಂದರೆ ಉಚಿತ ಜಿಮ್ ಸದಸ್ಯತ್ವ, ಮಾನಸಿಕ ಆರೋಗ್ಯ ಕಾರ್ಯಕ್ರಮಗಳು ಅಥವಾ ಸೆಲ್ ಫೋನ್ ಸ್ಟೈಪೆಂಡ್‌ಗಳಂತಹ ಸೇವೆಗಳನ್ನು ಕಂಪನಿಯು ಒದಗಿಸುತ್ತವೆ.


ನಿಮಗೆ ಬಂದ ಆಫರ್‌ಗಳಲ್ಲಿ ಯಾವ ಕಂಪನಿಗಳಿ ಈ ಎಲ್ಲಾ ಸೇವೆಯನ್ನು ನೀಡುತ್ತಿವೆ ಎಂದು ಪರಿಶೀಲಿಸಿ ನೀವು ಒಂದು ಕೆಲಸವನ್ನು ಆರಿಸಿಕೊಳ್ಳಬಹುದು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು