• ಹೋಂ
  • »
  • ನ್ಯೂಸ್
  • »
  • Jobs
  • »
  • CMA Course ಮಾಡಿದ್ರೆ ಅಕೌಂಟಿಂಗ್ ಕ್ಷೇತ್ರದಲ್ಲಿ ದೊಡ್ಡ ಸಂಬಳದ ಉದ್ಯೋಗಗಳು ಸಿಗೋದು ಗ್ಯಾರೆಂಟಿ

CMA Course ಮಾಡಿದ್ರೆ ಅಕೌಂಟಿಂಗ್ ಕ್ಷೇತ್ರದಲ್ಲಿ ದೊಡ್ಡ ಸಂಬಳದ ಉದ್ಯೋಗಗಳು ಸಿಗೋದು ಗ್ಯಾರೆಂಟಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನೀವು ಅಕೌಂಟಿಂಗ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬಯಸಿದರೆ, CMA ಕೋರ್ಸ್ ಮಾಡುವುದು ನಿಮಗೆ ಹಲವಾರು ಹೊಸ ಉದ್ಯೋಗವಕಾಶಗಳನ್ನು ನೀಡುತ್ತದೆ.

  • Trending Desk
  • 3-MIN READ
  • Last Updated :
  • Share this:

    ಇಂದಿನ ಕಾಲದಲ್ಲಿ ಉದ್ಯೋಗ (Job) ಎಂಬುದು ಸಂಪಾದನೆಯ (Earnings) ಗುರಿಯನ್ನು ಮಾತ್ರವೇ ಹೊಂದಿರದೆ ವ್ಯಕ್ತಿಗೆ ಪ್ರತಿಷ್ಠೆ ಹಾಗೂ ಖ್ಯಾತಿಯನ್ನು ತಂದುಕೊಡುವಲ್ಲಿ ಮಹತ್ತರವಾಗಿರಬೇಕು ಎಂದೆನಿಸಿದೆ. ಉದ್ಯೋಗ ಹುಡುಕುವ (Job Search) ಪ್ರತಿಯೊಬ್ಬ ಅಭ್ಯರ್ಥಿಯು ತನ್ನ ಉದ್ಯೋಗ ಹಣ ಮಾತ್ರವಲ್ಲದೆ ಬೇರೆ ಇನ್ನಾವ ಸವಲತ್ತುಗಳನ್ನು ಒದಗಿಸುತ್ತದೆ ಎಂಬುದನ್ನು ಲೆಕ್ಕಹಾಕುತ್ತಾರೆ.  ಖ್ಯಾತಿ ಹಾಗೂ ಉತ್ತಮ ಸಂಬಳ ಎರಡನ್ನೂ ಉದ್ಯೋಗ ನೀಡಬೇಕು ಎಂದೇ ಬಯಸುತ್ತಾರೆ.


    ಸರ್ಟಿಫೈಡ್ ಮ್ಯಾನೇಜ್‌ಮೆಂಟ್ ಅಕೌಂಟೆಂಟ್ ಏನಿದು ಹುದ್ದೆ?


    ಹಣಕಾಸು ಜಗತ್ತಿನಲ್ಲಿ, ಸರ್ಟಿಫೈಡ್ ಮ್ಯಾನೇಜ್‌ಮೆಂಟ್ ಅಕೌಂಟೆಂಟ್ ಅಥವಾ CMA ಹುದ್ದೆಯು ಪ್ರತಿಷ್ಠಿತ ಹಾಗೂ ಮೌಲ್ಯಯುತ ಎಂದೆನಿಸಿದೆ. ಇದು CPA ಮತ್ತು CFP ಯೊಂದಿಗೆ ಸಮಾನವಾಗಿರುವ ಉದ್ಯೋಗಾರ್ಹತೆಗಳಲ್ಲಿ ಒಂದಾಗಿದೆ. CMA ಕೋರ್ಸ್ ಅಂತರಾಷ್ಟ್ರೀಯವಾಗಿ ಗುರುತನ್ನು ಪಡೆದುಕೊಂಡಿದೆ. ನೀವು ಅಕೌಂಟಿಂಗ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬಯಸಿದರೆ, CMA ಕೋರ್ಸ್ ಮಾಡುವುದು ನಿಮಗೆ ಹಲವಾರು ಹೊಸ ಉದ್ಯೋಗವಕಾಶಗಳನ್ನು ನೀಡುತ್ತದೆ.




    ನೀವೇಕೆ ಸಿಎಂಎ ಆಗಬೇಕು? 


    CMA ಯಾವ ಜವಾಬ್ದಾರಿಗಳನ್ನು ಹೊಂದಿದೆ? ಈ ಉದ್ಯೋಗಾರ್ಹತೆಗೆ ಇಷ್ಟೊಂದು ಮಾನ್ಯತೆ ಏಕಿದೆ? ಹಾಗೂ CMA ನಂತಹ ವೃತ್ತಿ ಆಯ್ಕೆಯನ್ನು ಮಾಡಿದಲ್ಲಿ ಪಡೆಯುವ ಪ್ರಯೋಜನಗಳೇನು? ಎಂಬುದಕ್ಕೆ ಉತ್ತರ ಈ ಲೇಖನದಲ್ಲಿದೆ.


    ಈ ಪ್ರತಿಷ್ಠಿತ ವೃತ್ತಿ ಮಾರ್ಗಕ್ಕೆ ಸಂಬಂಧಿಸಿದ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಲು ಇಲ್ಲಿ ಕೊಟ್ಟಿರುವ ಅಂಶಗಳು ಸಹಕಾರಿ ಎಂದೆನಿಸಿದೆ. ಈ ಹುದ್ದೆಯ ಬಗ್ಗೆ ಇನ್ನಷ್ಟು ಅಂಶಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.


    ವ್ಯಾಪಾರದ ಜಗತ್ತನ್ನು ಪ್ರವೇಶಿಸಲು ನಿಮಗೆ ಸಹಾಯ ಮಾಡುತ್ತದೆ


    CMA ಒಂದು ಅತ್ಯುನ್ನತ ಉದ್ಯೋಗಾರ್ಹತೆಯಾಗಿದೆ. ಆದ್ದರಿಂದ ಈ ಕ್ಷೇತ್ರಕ್ಕೆ ಪ್ರವೇಶಿಸುವ ಜನರು ಆರ್ಥಿಕ ಮತ್ತು ಉದ್ಯಮಶೀಲತೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಪ್ರದರ್ಶಿಸಬೇಕು.


    ಇದನ್ನೂ ಓದಿ: Career Guidance: ವಿಡಿಯೋ ಗೇಮ್ ಅನಿಮೇಷನ್​​ನಲ್ಲಿ ಕರಿಯರ್ ರೂಪಿಸಿಕೊಳ್ಳುವುದು ಹೇಗೆ?


    ನಿರ್ವಹಣೆ ಮತ್ತು ವೆಚ್ಚದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹೆಚ್ಚು ಗಮನಹರಿಸುತ್ತದೆ. ವ್ಯವಹಾರವನ್ನು ನಡೆಸುವ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ. ವ್ಯಾಪಾರ ಲೋಕದಲ್ಲಿನ ಕುಂದು ಕೊರತೆಗಳ ಬಗ್ಗೆ ಗಮನಹರಿಸಲು ಈ ವೃತ್ತಿ ಸಹಕಾರಿಯಾಗಿದೆ.


    ನೀವು ಉತ್ತಮವಾಗಿ ಗಳಿಸುತ್ತೀರಿ ಮತ್ತು ವೃತ್ತಿಪರವಾಗಿ ಬೆಳೆಯುತ್ತೀರಿ


    ಉದ್ಯೋಗ ಎಂದರೆ ಅದರಲ್ಲಿ ಗಳಿಕೆಯೂ ಇರಬೇಕು ಹಾಗೂ ವೃತ್ತಿ ಅಭಿವೃದ್ಧಿ ಕೂಡ ಇರಬೇಕು. CMA ಇದೆರಡನ್ನೂ ನಿಮಗೆ ದೊರಕಿಸಿಕೊಡುತ್ತದೆ. CMA ಗಳು ಇತರ ಅಕೌಂಟೆಂಟ್‌ಗಳಿಗಿಂತ ಹೆಚ್ಚು ಗಳಿಸುತ್ತಾರೆ. ನಿಮ್ಮ ಸಂಬಳವು ಮೂಲ ವ್ಯವಹಾರ ಪದವಿ ಹೊಂದಿರುವ ಅಕೌಂಟೆಂಟ್‌ಗಳ ಸರಾಸರಿ ವೇತನಕ್ಕಿಂತ 62% ಹೆಚ್ಚಾಗಿರುತ್ತದೆ.


    ಉದ್ಯೋಗಿಗಳು ವ್ಯವಸ್ಥಾಪಕ ಮಟ್ಟಕ್ಕೆ ಹೋಗುವ ಅರ್ಹತೆಯನ್ನು ಪಡೆದುಕೊಂಡಿರುತ್ತಾರೆ. ಸರಿಯಾದ ಅನುಭವದೊಂದಿಗೆ, ಅವರು ಉನ್ನತ ಮಟ್ಟದ ನಿರ್ವಹಣೆಯ ಭಾಗವಾಗಲು ಉತ್ತಮ ಅರ್ಹತೆ ಹೊಂದಿರುತ್ತಾರೆ.




    ಅಂತರರಾಷ್ಟ್ರೀಯ ವಿಶ್ವಾಸಾರ್ಹತೆಯನ್ನು ಪಡೆಯಲು ಉದ್ಯೋಗಿಗೆ ಸಹಾಯ ಮಾಡುತ್ತದೆ


    ಭಾರತದಲ್ಲಿ CMA ವೃತ್ತಿಜೀವನವು ಅತ್ಯಂತ ವಿಶಿಷ್ಟವಾಗಿರಬಹುದು, ಆದರೆ ಇದು ಇತರ ದೇಶಗಳಲ್ಲಿಯೂ ಅಷ್ಟೇ ಪ್ರತಿಷ್ಠಿತವಾಗಿದೆ. CMA ಕೋರ್ಸ್ ನಿಮಗೆ ಜಗತ್ತಿನಾದ್ಯಂತ ವೃತ್ತಿಪರ ಗೌರವ ಮತ್ತು ವಿಶ್ವಾಸಾರ್ಹತೆಯನ್ನು ಪಡೆಯಲು ಸಹಾಯ ಮಾಡುತ್ತದೆ.


    ಹೊಸ CMA ವೃತ್ತಿ ಆಯ್ಕೆಮಾಡಿಕೊಳ್ಳುವವರ ಸಂಖ್ಯೆಯು 2020-2022 ರಿಂದ ಜಾಗತಿಕವಾಗಿ 17% ರಷ್ಟು ಸುಧಾರಣೆ ಕಂಡಿದೆ. ಇದಲ್ಲದೆ, ನೀವು ಸ್ಥಳೀಯವಾಗಿ ಮತ್ತು ಅಂತರಾಷ್ಟ್ರೀಯವಾಗಿ ಯಾವುದೇ ಹೆಚ್ಚುವರಿ ಅರ್ಹತೆಗಳಿಲ್ಲದೆ ಎಲ್ಲಿ ಬೇಕಾದರೂ ಕೆಲಸ ಮಾಡಬಹುದು. ನೀವು ಮಾಡಬೇಕಾಗಿರುವುದು ಪರೀಕ್ಷೆಯ ಎರಡು ವಿಭಾಗಗಳಲ್ಲಿ ಉತ್ತೀರ್ಣರಾಗುವುದು.


    ಪ್ರಾತಿನಿಧಿಕ ಚಿತ್ರ


    ಫಾರ್ಚೂನ್ 500 ಕಂಪನಿಗಳಲ್ಲಿ ಉದ್ಯೋಗ ಖಂಡಿತ ಖಾತ್ರಿ


    ನೀವು ಉನ್ನತ ಉದ್ಯೋಗ ಮಟ್ಟಕ್ಕೆ ಏರಲು ಮತ್ತು ನಿರ್ವಹಣೆ ಮತ್ತು ಹಣಕಾಸು ಜಗತ್ತಿನ ಪ್ರಾಬಲ್ಯತೆ ಸಾಧಿಸಲು ಬಯಸುವವರಾಗಿದ್ದರೆ CMA ಅತ್ಯುತ್ತಮ ವಿಧಾನವಾಗಿದೆ.


    ಇಮಾರ್ಟಿಕಸ್ ಲರ್ನಿಂಗ್‌ನ CMA ಕೋರ್ಸ್‌ನೊಂದಿಗೆ, ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು ಜಗತ್ತಿನಲ್ಲಿ ನಾಯಕತ್ವದ ಪಾತ್ರಗಳನ್ನು ವಹಿಸಲು ವ್ಯಾಪಕವಾಗಿ ಅಗತ್ಯವಿರುವ 12 ಪ್ರಮುಖ ಕೌಶಲ್ಯಗಳನ್ನು ನೀವು ಕರಗತ ಮಾಡಿಕೊಳ್ಳುವ ಅವಕಾಶವನ್ನು ಪಡೆಯುತ್ತೀರಿ. ನೀವು ಫಾರ್ಚೂನ್ 500 ಕಂಪನಿಗಳಲ್ಲಿ ಉದ್ಯೋಗವನ್ನು ಪಡೆಯಬಹುದು.

    Published by:Kavya V
    First published: