ತಂತ್ರಜ್ಞಾನ (Technology) ಯುಗದಲ್ಲಿ ಅಭಿವೃದ್ಧಿಯಾಗುತ್ತಿದ್ದಂತೆ ಹೊಸ ಹೊಸ ಪರಿಕರಗಳು, ಹೊಸ ಹೊಸ ವಿಧಾನಗಳು ಪ್ರಸ್ತುತಿಗೆ ಬರುತ್ತಿವೆ. ಇದರಲ್ಲಿ ಚಾಟ್‌ಜಿಪಿಟಿ (ChatGPT) ಕೂಡ ಒಂದು. ಈಗೀಗ ಚಾಟ್‌ಜಿಪಿಟಿ ಬಳಕೆ ಹೆಚ್ಚುತ್ತಿದ್ದು ಮುಂದೊಂದು ದಿನ ಇದು ಶಿಕ್ಷಣ, ಉದ್ಯೋಗ (Job) , ತಂತ್ರಜ್ಞಾನ ಹೀಗೆ ಪ್ರತಿಯೊಂದು ಕ್ಷೇತ್ರದ ಮೇಲೂ ಪ್ರಭಾವ ಬೀರಲಿದೆಯೇ ಎಂಬ ಆತಂಕ ಉಂಟಾಗುತ್ತಿದೆ.
ಚಾಟ್‌ಜಿಪಿಟಿ ಬಳಸಿ ಪ್ರಬಂಧ ಬರೆದ ವಿದ್ಯಾರ್ಥಿ
ಓಪನ್‌ಎಐನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಾಟ್‌ಬಾಟ್ ಮೂಲಕ, ಬರೆದ 2,000 ಪದಗಳ ಪ್ರಬಂಧವನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಸ್ಕೂಲ್‌ನ ಎಂಬಿಎ ವಿದ್ಯಾರ್ಥಿ ಬರೆದಿದ್ದಾನೆ. ಈ ಘಟನೆ ಅನೇಕ ವಿಶ್ವವಿದ್ಯಾದಲಯದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಯಿತು.
ಮಾನವ ಕೌಶಲ್ಯ ಹಾಗೂ ಬುದ್ಧಿವಂತಿಕೆಗೆ ಚಾಟ್‌ಜಿಪಿಟಿ ಮುಂದೊಂದು ದಿನ ಕುತ್ತು ತರಬಹುದು ಎಂಬುದು ಇವರ ಅಂಜಿಕೆಯಾಗಿದೆ. ಅದೂ ಅಲ್ಲದೆ ವೃತ್ತಿ ಕ್ಷೇತ್ರಗಳಲ್ಲಿ ನೌಕರರು ಉದ್ಯೋಗಿಗಳ ಬದಲಿಗೆ ಚಾಟ್‌ಜಿಪಿಟಿಯೇ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವುದರಿಂದ ಕೈಗಾರಿಕೆಗಳಲ್ಲಿ ಮುಂದೊಂದು ದಿನ ಉದ್ಯೋಗ ನಷ್ಟ ಮಹತ್ತರವಾಗಿ ಕಾಡಬಹುದು ಎಂಬ ಭಯ ಕೂಡ ಇದ್ದೇ ಇದೆ.
ಇಂತಹ ಸಮಯದಲ್ಲಿ ವಿದ್ಯಾ ಸಂಸ್ಥೆಗಳು ಹಾಗೂ ಅಧ್ಯಾಪಕರು ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದೇ ಮುಖ್ಯ ಅಂಶವಾಗಿದೆ.
ವಿದ್ಯಾರ್ಥಿಗಳ ಕೌಶಲ್ಯವನ್ನು ಚಾಟ್‌ಜಿಪಿಟಿ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ
ವಿದ್ಯಾರ್ಥಿಗಳ ವಾಸ್ತವಿಕ ಜ್ಞಾನವನ್ನು ಪರೀಕ್ಷಿಸುವ ಪರೀಕ್ಷೆಗಳಲ್ಲಿ ಮಾತ್ರ ಉತ್ತೀರ್ಣರಾಗಲು ChatGPT ಸಹಕಾರಿಯಾಗುತ್ತದೆ ಎಂಬುದು ಹರಿಯಾಣದ ಅಶೋಕ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಸುಭಾಶಿಸ್ ಬ್ಯಾನರ್ಜಿ ಅಭಿಪ್ರಾಯವಾಗಿದೆ. ವಿದ್ಯಾರ್ಥಿಗಳ ಮೌಖಿಕ ಕಲಿಕೆಗೆ ಪ್ರಾಶಸ್ತ್ಯ ನೀಡಬೇಕು ಹಾಗೂ ವಿದ್ಯಾರ್ಥಿಗಳ ತಾರ್ಕಿಕತೆಯನ್ನು ಪರೀಕ್ಷಿಸುವುದರ ಮೇಲೆ ಹೆಚ್ಚು ಅವಲಂಬಿತರಾಗಬೇಕು ಎಂಬುದು ಅಶೋಕ್ ಮಾತಾಗಿದೆ.
ಸಂಶೋಧನಾ ಪ್ರಬಂಧಗಳನ್ನು ಸಲ್ಲಿಸಲು ಮತ್ತು ಪ್ರವೇಶ ಪರೀಕ್ಷೆಗಳನ್ನು ತೆರವುಗೊಳಿಸಲು ಅಗತ್ಯವಿರುವ ನಿರ್ಣಾಯಕ ಚಿಂತನೆ ಮತ್ತು ವಿಶ್ಲೇಷಣೆಯನ್ನು ಚಾಟ್‌ಜಿಪಿಟಿ ಬದಲಾಯಿಸಲು ಸಾಧ್ಯವಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ChatGPT ಸಹಾಯದಿಂದ ಉದ್ಯೋಗಿಗಳು ಹೇಗೆ ತಮ್ಮ ಕೆಲಸವನ್ನು ಬೇಗ ಮಾಡಿ ಮುಗಿಸಬಹುದು ಗೊತ್ತೇ?
ಚಾಟ್‌ಜಿಪಿಟಿ ನಂತರದ ಜಗತ್ತಿನಲ್ಲಿ ವೃತ್ತಿ ಆಯ್ಕೆ
ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹಾಗೂ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಲು ಚಾಟ್‌ಜಿಪಿಟಿ ಸಹಾಯ ಮಾಡುತ್ತಿದ್ದರೆ ಪರೀಕ್ಷಾ ವಿಧಾನ ಸರಿಯಾಗಿಲ್ಲ ಎಂಬುದು ಅಶೋಕ್ ಬ್ಯಾನರ್ಜಿ ಮಾತಾಗಿದೆ. ಓಪನ್ ಎಐ ಹಾಗೂ ಮೈಕ್ರೋಸಾಫ್ಟ್ ಬೇಜಾವಾಬ್ದಾರಿಯಾದ ಕಾರ್ಯನಿರ್ವಹಿಸುತ್ತಿದ್ದು ಸುತ್ತಲಿನ ನೈತಿಕ ಕಾಳಜಿಗಳನ್ನು ಪರಿಗಣಿಸದೆ ಸಾರ್ವಜನಿಕವಾಗಿ ಅಂತಹ ಸಾಧನವನ್ನು ಬಿಡುಗಡೆ ಮಾಡುವುದು ತಪ್ಪು ಎಂದು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಪರೀಕ್ಷಾ ಹಾಲ್‌ಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ನಿಷೇಧಿಸುವುದರ ಜೊತೆಗೆ ಚಾಟ್‌ಜಿಪಿಟಿ ಬಳಕೆಯನ್ನು ನಿಷೇಧಿಸುವ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು. ವಿದ್ಯಾರ್ಥಿಗಳು ಚಾಟ್‌ಜಿಪಿಟಿಯನ್ನೇ ಬಳಸುತ್ತಿದ್ದಾರೆ ಎಂದಾದಲ್ಲಿ ಅವರ ಅದನ್ನು ಬಳಸದಂತೆ ಮಾಡುವುದು ಶಿಕ್ಷಕರ ಕರ್ತವ್ಯವಾಗಿದೆ ಎಂದು ಗುರುಗ್ರಾಮ್‌ನ ಇಂಟರ್ನ್ಯಾಶನಲ್ ಸ್ಕೂಲ್‌ನ ವೈಸ್ ಪ್ರೆಸಿಡೆಂಟ್ ಕವಿತಾ ನಾಗ್‌ಪಾಲ್ ಮಾತಾಗಿದೆ.
ಚಾಟ್‌ಜಿಪಿಟಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಜಯಿಸಲು ಸಹಾಯ ಮಾಡುತ್ತದೆ ಎಂಬ ಮಾತು ಅಷ್ಟು ಸರಿಯಲ್ಲ ಏಕೆಂದರೆ ಮಕ್ಕಳಿಗೆ ಅವರ ಆಲೋಚನಾ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಒತ್ತಾಯಿಸಬೇಕು ಎಂದು ಕವಿತಾ ತಿಳಿಸಿದ್ದಾರೆ. ಪ್ರಶ್ನೆಗಳನ್ನು ಯೋಚಿಸಲು ಮತ್ತು ಪ್ರಶ್ನೆಗಳಿಗೆ ಉತ್ತರಿಸಲು ವಿದ್ಯಾರ್ಥಿಗಳಿಗೆ ಮನವೊಲಿಸುವ ರೀತಿಯಲ್ಲಿ ಪ್ರಶ್ನೆಗಳನ್ನು ಹೊಂದಿಸಬಹುದು ಎಂದು ಕವಿತಾ ತಿಳಿಸಿದ್ದಾರೆ.
ಚಾಟ್‌ಜಿಪಿಟಿ ಮುಂದಿನ ಭವಿಷ್ಯದ ವೃತ್ತಿಗೆ ಮಾರಕವೇ?
ಉದ್ಯೋಗ ಮಾರುಕಟ್ಟೆಯ ಮೇಲೆ ಜನರೇಟಿವ್ AI ಪ್ರಭಾವ ಎಷ್ಟರ ಮಟ್ಟಿಗೆ ಪ್ರಭಾವಶಾಲಿಯಾದುದು ಎಂಬುದನ್ನು ನೋಡಬೇಕಾಗಿದೆ ಎಂದು ಕ್ಯಾಲಿಫೋರ್ನಿಯಾ ಮೂಲದ ರಾಜ್ ನೀರವಣ್ಣನ್ ತಿಳಿಸುತ್ತಾರೆ.
ಚಾಟ್‌ಜಿಪಿಟಿ ವೃತ್ತಿಪರರಿಗೆ ಡೇಟಾ-ಚಾಲಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ, ವಿಷಯ ಬರವಣಿಗೆ, ಮಾರ್ಕೆಟಿಂಗ್ ಮತ್ತು ಪತ್ರಿಕಾ ಪ್ರಕಟಣೆಗಳನ್ನು ಬರೆಯುವ ಅಗತ್ಯ ಹುದ್ದೆಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ. ಚಾಟ್‌ಜಿಪಿಟಿ ಕೆಲಸವನ್ನು ಸರಳಗೊಳಿಸಲಿದೆ ಆದರೂ ಕೆಲವೊಂದು ಉದ್ಯೋಗಗಳನ್ನು ಚಾಟ್‌ಜಿಪಿಟಿ ಬದಲಾಯಿಸಲು ಸಾಧ್ಯವಿಲ್ಲದ ಮಾತಾಗಿದೆ ಎಂದು ರಾಜ್ ತಿಳಿಸುತ್ತಾರೆ.
ಉದ್ಯೋಗ ಸ್ಥಳದಲ್ಲಿ ಚಾಟ್‌ಜಿಪಿಟಿ ಬಳಸುವುದು
TeamLease HRtech ಮಾನವ ಬಂಡವಾಳ ನಿರ್ವಹಣಾ ಕಂಪನಿಯಾಗಿದ್ದು ಕೆಲಸದ ಸ್ಥಳದಲ್ಲಿ ಮಾನವ ಸಂಪನ್ಮೂಲ ಪ್ರಕ್ರಿಯೆಗಳನ್ನು ಸ್ವಯಂಚಾಲಿತಗೊಳಿಸಲು ಸಹಾಯ ಮಾಡುತ್ತದೆ ಎಂದು ಸಂಸ್ಥೆಯ ಸಿಇಒ ಸುಮಿತ್ ಸಬರ್ವಾಲ್ ತಿಳಿಸಿದ್ದಾರೆ. ಅರ್ಜಿದಾರರು ಹೊಂದಿರಬಹುದಾದ ಉದ್ಯೋಗ ವಿವರಣೆಯ ಕುರಿತು ಪ್ರಶ್ನೆಗಳಿಗೆ ಉತ್ತರಿಸಲು ಚಾಟ್‌ಜಿಪಿಟಿಯನ್ನು ಸಂಸ್ಥೆಯ ನೇಮಕಾತಿ ತಂಡಗಳು ಬಳಸಬಹುದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ