• ಹೋಂ
  • »
  • ನ್ಯೂಸ್
  • »
  • Jobs
  • »
  • Free UPSC Coaching ಕೇಂದ್ರಗಳನ್ನು ನಡೆಸುತ್ತಿರುವ ರಾಜ್ಯ ಸರ್ಕಾರಗಳು ಖಾಸಗಿ ಕೇಂದ್ರಗಳಿಗಿಂತ ಹೇಗೆ ಭಿನ್ನ? ಇಲ್ಲಿದೆ ಮಾಹಿತಿ

Free UPSC Coaching ಕೇಂದ್ರಗಳನ್ನು ನಡೆಸುತ್ತಿರುವ ರಾಜ್ಯ ಸರ್ಕಾರಗಳು ಖಾಸಗಿ ಕೇಂದ್ರಗಳಿಗಿಂತ ಹೇಗೆ ಭಿನ್ನ? ಇಲ್ಲಿದೆ ಮಾಹಿತಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮಹಾರಾಷ್ಟ್ರ 1976 ರಲ್ಲಿ ಮತ್ತು ಕೇರಳ 1989 ರಲ್ಲಿ ಇದನ್ನು ಪ್ರಾರಂಭಿಸಿದರೆ, ದೆಹಲಿ, ಉತ್ತರ ಪ್ರದೇಶ, ಕರ್ನಾಟಕ, ಗುಜರಾತ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ಇತ್ತೀಚಿನ ವರ್ಷಗಳಲ್ಲಿ ಅಭ್ಯರ್ಥಿಗಳಿಗೆ ಸಹಾಯವಾಗುವ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ.

  • Share this:

ಖಾಸಗಿ ಯುಪಿಎಸ್‌ಸಿ ಕೋಚಿಂಗ್ (Coaching) ಸೆಂಟರ್‌ಗಳು ದೇಶದಲ್ಲಿ ಉದ್ಯಮವಾಗಿ ಮಾರ್ಪಟ್ಟಿದ್ದು ಹಗಲು ದರೋಡೆಯಂತೆ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಶುಲ್ಕಗಳು, ಕೇಂದ್ರಗಳು ವಿಧಿಸುವ ನೀತಿ ನಿಯಮಗಳು ಈ ಎಲ್ಲಾ ಕಾರಣಗಳಿಂದಾಗಿ ಬಡ ವಿದ್ಯಾರ್ಥಿಗಳಿಗೆ ತರಬೇತಿ (Training) ಕೇಂದ್ರಗಳಲ್ಲಿ ತರಬೇತಿ ಪಡೆಯುವುದು ಎಂಬುದು ಗಗನ ಕುಸುಮವಾಗಿ ಮಾರ್ಪಟ್ಟಿದೆ. ಇದಕ್ಕಾಗಿಯೇ ಕೆಲವೊಂದು ರಾಜ್ಯಗಳು ವಿದ್ಯಾರ್ಥಿಗಳಿಗಾಗಿ (Students) ತಮ್ಮದೇ ಆದ ಕೋಚಿಂಗ್ ಕೇಂದ್ರಗಳನ್ನು ನಡೆಸುತ್ತಿದ್ದು ಪರೀಕ್ಷಾರ್ಥಿಗಳ ಆಸೆಗಳನ್ನು ಕೈಗೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅವಕಾಶವನ್ನೊದಗಿಸುತ್ತಿವೆ.


ಯುಪಿಎಸ್‌ಸಿ ಅಭ್ಯರ್ಥಿಗಳಿಗೆ ಉಚಿತ ಕೋಚಿಂಗ್


ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ದೆಹಲಿ ಮೊದಲಾದ ರಾಜ್ಯಗಳು ಉಚಿತವಾಗಿ ಕೋಚಿಂಗ್ ಸೆಂಟರ್‌ಗಳನ್ನು ನಡೆಸುತ್ತಿದ್ದು ಉಚಿತ ತರಗತಿಗಳು, ಅಧ್ಯಯನ ಬೋಧನಾ ಸಾಮಾಗ್ರಿಗಳು ಹಾಗೂ ನುರಿತ ಐಎಎಸ್ ಅಧಿಕಾರಿಗಳಿಂದ ಬೋಧನೆ ಮೊದಲಾದ ಸೌಲಭ್ಯಗಳನ್ನು ಆಕಾಂಕ್ಷಿಗಳಿಗೆ ಕಲ್ಪಿಸಿವೆ.


ಈ ಕೋಚಿಂಗ್ ಸೆಂಟರ್‌ಗಳಲ್ಲಿ ತರಬೇತಿ ಪಡೆಯುವ ಹಲವಾರು ವಿದ್ಯಾರ್ಥಿಗಳು ತಮ್ಮೂರಿನಿಂದ ಪ್ರಯಾಣಿಸಿ ಕೋಚಿಂಗ್ ಕೇಂದ್ರಗಳನ್ನು ತಲುಪುತ್ತಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವು ಫೆಬ್ರವರಿ 2021 ರಲ್ಲಿ ಆರಂಭಿಸಿದ ಮುಖ್ಯಮಂತ್ರಿ ಅಭ್ಯುದಯ ಯೋಜನೆಯಡಿಯಲ್ಲಿ ಕೋಚಿಂಗ್ ಸೆಂಟರ್‌ಗಳನ್ನು ತೆರೆದಿದೆ.


ದುಬಾರಿ ಶುಲ್ಕ ಪಾವತಿಸುವುದಕ್ಕಿಂತ ಉಚಿತ ಕೋಚಿಂಗ್ ಸೆಂಟರ್ ಉತ್ತಮವಾಗಿದೆ


ಇಂತದ್ದೇ ಕೋಚಿಂಗ್ ಸೆಂಟರ್‌ಗಳಲ್ಲಿ ತರಬೇತಿ ಪಡೆಯುತ್ತಿರುವ ದೀಕ್ಷಾ ಇಂತಹ ಸೆಂಟರ್‌ಗಳಿಂದ ನಮ್ಮಂತಹ ಬಡವರಿಗೆ ತುಂಬಾ ಸಹಾಯವಾಗಿದೆ ಎಂದು ತಿಳಿಸಿದ್ದಾರೆ. ಬಡ ರೈತರ ಮಗಳಾಗಿರುವ ದೀಕ್ಷಾ ಖಾಸಗಿ ಸಂಸ್ಥೆಗಳಲ್ಲಿ ದುಬಾರಿ ಶುಲ್ಕ ಪಾವತಿಸಿ ಕೋಚಿಂಗ್ ಪಡೆಯುವ ಸ್ಥಿತಿಯಲ್ಲಿಲ್ಲ ಎಂದು ತಿಳಿಸಿದ್ದಾರೆ. ಯುಪಿಎಸ್‌ಸಿಗೆ ತಯಾರಾಗಲು ಮತ್ತು ಭಾರತೀಯ ನಾಗರಿಕ ಸೇವೆಗಳ ಶ್ರೇಣಿಗೆ ಸೇರಲು ದೀಕ್ಷಾ ತಮ್ಮ ಕಾಲೇಜಿನ ಇನ್ನುಳಿದ ಸಮಯವನ್ನು ಬಳಸಿಕೊಂಡು ಅಧ್ಯಯನ ನಡೆಸುತ್ತಿದ್ದಾರೆ ಅಂತೆಯೇ ಉಚಿತ ತರಗತಿಗಳ ಪ್ರಯೋಜನವನ್ನು ದೆಹಲಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಓಪನ್ ಲರ್ನಿಂಗ್‌ನ ಬಿಕಾಂ ವಿದ್ಯಾರ್ಥಿನಿ ದೀಕ್ಷಾ ಪಡೆದುಕೊಳ್ಳುತ್ತಿದ್ದಾರೆ.


ಇದನ್ನೂ ಓದಿ: Second PUC Exam ಮುಗಿಯುತ್ತಿದ್ದಂತೆ ಈ ಪಾರ್ಟ್ ಟೈಂ ಜಾಬ್​ಗಳಿಂದ ಕೈ ತುಂಬಾ ಸಂಪಾದಿಸಿ


ರಾಜ್ಯಗಳು ಪ್ರಸ್ತುತಪಡಿಸಿರುವ ಯೋಜನೆಗಳು


ಇಂದು, ಭಾರತದ 10 ಕ್ಕೂ ಹೆಚ್ಚು ರಾಜ್ಯಗಳು ಕೈಗೆಟುಕುವ ದರದಲ್ಲಿ UPSC ಕೋಚಿಂಗ್ ಸೆಂಟರ್‌ಗಳನ್ನು ನಡೆಸುತ್ತಿವೆ ಅಥವಾ ಹಿಂದುಳಿದವರಿಗೆ ಅರ್ಹತೆ ಆಧಾರಿತ ವಿದ್ಯಾರ್ಥಿವೇತನವನ್ನು ನೀಡುತ್ತಿವೆ.


ಎಲ್ಲಾ ಸರ್ಕಾರಗಳು ತಮ್ಮ ರಾಜ್ಯದ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ನಾಗರಿಕ ಸೇವಕರಾಗಲು ಮತ್ತು ಈ ಬೆಳವಣಿಗೆಯನ್ನು ಹೆಚ್ಚಿಸಲು ಬಯಸುತ್ತವೆ. ಆದ್ದರಿಂದಲೇ ಈಗ ಪ್ರತಿಯೊಂದು ರಾಜ್ಯವೂ ಇಂತಹ ಯೋಜನೆಗಳನ್ನು ರೂಪಿಸುತ್ತಿದೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಟಿ.ಆರ್.ರಘುನಂದನ್ ತಿಳಿಸಿದ್ದಾರೆ.




ಮಹಾರಾಷ್ಟ್ರ 1976 ರಲ್ಲಿ ಮತ್ತು ಕೇರಳ 1989 ರಲ್ಲಿ ಇದನ್ನು ಪ್ರಾರಂಭಿಸಿದರೆ, ದೆಹಲಿ, ಉತ್ತರ ಪ್ರದೇಶ, ಕರ್ನಾಟಕ, ಗುಜರಾತ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ಇತ್ತೀಚಿನ ವರ್ಷಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ.


ಸೌಲಭ್ಯಗಳು, ಶಿಕ್ಷಕರ ಬೋಧನಾ ಗುಣಮಟ್ಟ


ಉತ್ತಮ ಶಿಕ್ಷಕರನ್ನು ಪಡೆಯುವುದು ಒಂದು ಸವಾಲಾಗಿದೆ ಏಕೆಂದರೆ ಖಾಸಗಿ ಕೋಚಿಂಗ್ ಸೆಂಟರ್‌ಗಳು ನೀಡುವ ರೀತಿಯ ಸಂಬಳವನ್ನು ರಾಜ್ಯಗಳು ಪಾವತಿಸಲು ಸಾಧ್ಯವಿಲ್ಲ. ಅಭ್ಯುದಯ ಯೋಜನೆಯಡಿಯಲ್ಲಿ, ಯುಪಿ ಸರ್ಕಾರವು ರಾಜ್ಯದ ಎಲ್ಲಾ 75 ಜಿಲ್ಲೆಗಳಲ್ಲಿ ಉಚಿತ ಕೋಚಿಂಗ್ ಸೆಂಟರ್‌ಗಳನ್ನು ಹೊರತಂದಿದೆ.


ಇವುಗಳಲ್ಲಿ ಎಪ್ಪತ್ತು ಕೇಂದ್ರಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ ಮತ್ತು ಭೌತಿಕ ತರಗತಿಗಳನ್ನು ಹೊಂದಿವೆ, ಆದರೂ ಕೆಲವು ಹೈಬ್ರಿಡ್ ಮಾದರಿಗಳನ್ನು ನೀಡುತ್ತವೆ. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಸರಾಸರಿ ವಿದ್ಯಾರ್ಥಿಗಳ ದಾಖಲಾತಿ 50-100 ರಷ್ಟಿದೆ. ಯುಪಿಯ ಅಭ್ಯುದಯ್ ಯೋಜನೆಯು ಬಹುಶಃ ಭಾರತದಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ರಾಜ್ಯ-ಚಾಲಿತ ಉಪಕ್ರಮವಾಗಿದೆ.


ವಿಭಿನ್ನ ರಾಜ್ಯಗಳು, ವಿಭಿನ್ನ ಮಾದರಿಗಳು


ಹೆಚ್ಚಿನ ರಾಜ್ಯಗಳು ಎರಡು ರೀತಿಯ ಮಾದರಿಗಳನ್ನು ಅನುಸರಿಸುತ್ತವೆ ಒಂದು ಅವರು ಸರ್ಕಾರಿ-ಚಾಲಿತ ಸಂಸ್ಥೆಗಳಲ್ಲಿ ಉಚಿತ ಅಥವಾ ಸಬ್ಸಿಡಿ ತರಬೇತಿಯನ್ನು ನೀಡುತ್ತಾರೆ. ಮತ್ತು ಇನ್ನೊಂದರಲ್ಲಿ, ಅವರು ಖಾಸಗಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಶುಲ್ಕವನ್ನು ಪ್ರಾಯೋಜಿಸುತ್ತಾರೆ. ಆದರೆ ಹೆಚ್ಚು ಪ್ರಭಾವ ಬೀರಿರುವುದು ಮೊದಲ ಮಾದರಿಯಾಗಿದೆ.


ಪಶ್ಚಿಮ ಬಂಗಾಳದಲ್ಲಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 2014 ರಲ್ಲಿ ಆರಂಭಿಸಿದ ಕೋಲ್ಕತ್ತಾದ ಸತ್ಯೇಂದ್ರ ನಾಥ್ ಟ್ಯಾಗೋರ್ ಸಿವಿಲ್ ಸರ್ವೀಸಸ್ ಸ್ಟಡಿ ಸೆಂಟರ್ (SNTCSSC) ನಲ್ಲಿ ಸುಮಾರು ವರ್ಷ ಅವಧಿಯ ಕೋರ್ಸ್‌ಗೆ ವಿದ್ಯಾರ್ಥಿಗಳಿಗೆ ತಿಂಗಳಿಗೆ ರೂ 500-ರಿಂದ 1,000 ಶುಲ್ಕ ವಿಧಿಸಲಾಗುತ್ತದೆ. ಶುಲ್ಕವು ಹಾಸ್ಟೆಲ್ ವಸತಿ, ತರಬೇತಿ ಮತ್ತು ಅಧ್ಯಯನ ಸಾಮಗ್ರಿಗಳನ್ನು ಒಳಗೊಂಡಿದೆ.


ಪ್ರತಿ ವರ್ಷ, ಖಾಸಗಿ ಕೋಚಿಂಗ್ ಸಂಸ್ಥೆಗಳು ಐಎಎಸ್ ಅಧಿಕಾರಿಗಳಾಗುವ ಕನಸು ಹೊಂದಿರುವ ಲಕ್ಷಾಂತರ ಯುವಕ-ಯುವತಿಯರಿಗೆ ಯಶಸ್ವಿ ವಿದ್ಯಾರ್ಥಿಗಳ ಪರಿಚಯ ಮಾಡಿಸುತ್ತಾರೆ. ಈ ಸಂಸ್ಥೆಗಳು ದೆಹಲಿಯ ಕರೋಲ್ ಬಾಗ್ ಮತ್ತು ಮುಖರ್ಜಿ ನಗರದ ಬೀದಿಗಳಲ್ಲಿ ಬೃಹತ್ ಹೋರ್ಡಿಂಗ್‌ಗಳಲ್ಲಿ ಅಂತಹ 'ಯಶಸ್ಸಿನ ಕಥೆಗಳನ್ನು' ಉಲ್ಲೇಖಿಸುತ್ತಾರೆ.


ಸರ್ಕಾರ ನಡೆಸುವ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳು ತಮ್ಮನ್ನು ತಾವು ಬಹಿರಂಗವಾಗಿ ಮಾರುಕಟ್ಟೆ ಮಾಡಿಕೊಳ್ಳುವುದಿಲ್ಲ, ಆದರೆ ಈ ನಿರೂಪಣೆಯ ಭಾಗವಾಗಲು ಬಯಸುತ್ತವೆ.

First published: