ಕೆಲಸಕ್ಕಾಗಿ ನಡೆಯುವ ಸಂದರ್ಶನಗಳು (Job Interview) ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಗೂ (Candidates) ತುಂಬಾನೇ ಮುಖ್ಯ. ಜಾಬ್ ಇಂಟರ್ ವ್ಯೂ ಚೆನ್ನಾಗಿ ಆಗಬೇಕು, ಕೆಲಸ ಸಿಗಬೇಕು (Job Offer) ಅಂತಲೇ ಎಲ್ಲರು ಬಯಸುತ್ತಾರೆ. ಆದರೆ 10 ಜನ ಇಂಟರ್ ವ್ಯೂ ಅಟೆಂಡ್ ಆಗಿದ್ದರೆ, ಒಬ್ಬರಿಗೆ ಮಾತ್ರ ಕೆಲಸ ಸಿಗುತ್ತೆ. ನೀವು ಅಟೆಂಡ್ ಮಾಡಿದ ಇಂಟರ್ ವ್ಯೂನಲ್ಲಿ ನಿಮಗೆ ಕೆಲಸ ಸಿಗುತ್ತೋ, ಸಿಗಲ್ವೋ ಎಂದು ತಿಳಿಯುವುದು ಹೇಗೆ? ವಾರಗಟ್ಟಲೇ ಕಾಲ್ ಬರುತ್ತೆ ಎಂಬ ನಿರೀಕ್ಷೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಇಂಟರ್ ವ್ಯೂ ವಿಫಲವಾಗಿದೆ, ನಿಮಗೆ ಕೆಲಸ ಸಿಗುವುದು ಡೌಟ್ ಎಂದು ಮೊದಲೇ ನೀವು ತಿಳಿಯಬಹುದು.
ಸಂದರ್ಶನದ ಕೊನೆಯಲ್ಲಿ ಸಂದರ್ಶಕರು ಈ ವಾಕ್ಯಗಳನ್ನು ಹೇಳುತ್ತಾರೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿ. ಇಲ್ಲಿಯೇ ನಿಮಗೆ ಈ ಕೆಲಸ ಸಿಗುವುದಿಲ್ಲ ಎಂದು ಗೊತ್ತಾಗಿ ಬಿಡುತ್ತೆ. ಅನಗತ್ಯ ನಿರೀಕ್ಷೆ, ಕಾಯುವಿಕೆ ತಪ್ಪುತ್ತೆ. ಕೆಲಸ ಆಗಿಲ್ಲ ಎಂದು ಸೂಚಿಸುವ ಆ ವಾಕ್ಯಗಳು ಯಾವುವು ಎಂದು ತಿಳಿಯೋಣ ಬನ್ನಿ.
1) OK, ನೀವು ಹೊರಡಬಹುದು ನಾವಿನ್ನೂ ಸಾಕಷ್ಟು ಅಭ್ಯರ್ಥಿಗಳನ್ನು ಇಂಟರ್ ವ್ಯೂ ಮಾಡಬೇಕು ಎಂದು ಸಂದರ್ಶಕರು ಹೇಳುತ್ತಾರೆ. ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ. ಸರಿಯಾದ ಅಭ್ಯರ್ಥಿಯನ್ನು ನಾವು ಇನ್ನೂ ಹುಡುಕಲಿದ್ದೇವೆ. ನೀವು ನಮ್ಮ ಉದ್ಯೋಗಕ್ಕೆ ಸೂಕ್ತರಲ್ಲ ಎಂದು ಇದರ ಅರ್ಥ.
2) ನಾನು ನಿಮಗೆ ಕೆಲವು ಸಲಹೆಗಳನ್ನು ನೀಡಬಹುದೇ ಎಂದು ಸಂದರ್ಶಕರು ಹೇಳಿದರೆ, ಅವರಿಗೆ ನೀವು ಇಂಪ್ರೆಸ್ ಆಗಿಲ್ಲ. ನಿಮ್ಮಲ್ಲಿನ ಸ್ಕಿಲ್ಸ್ ಸಾಕಾಗೋದಿಲ್ಲ. ಮುಂದಿನ ಇಂಟರ್ ವ್ಯೂಗಳಲ್ಲಾದರೂ ತಿದ್ದಿಕೊಳ್ಳಲಿ ಎಂಬ ಉದ್ದೇಶವಿರಬಹುದು. ನೀವು ವಿಭಿನ್ನವಾಗಿ ಏನನ್ನಾದರೂ ಮಾಡದ ಹೊರತು ನೀವು ಅವರಿಂದ ಕೆಲಸ ಪಡೆಯಲು ಸಾಧ್ಯವಿಲ್ಲ ಎಂದು ಅರ್ಥ.
ಹೆಚ್ಚಿನ ಪ್ರಶ್ನೆಗಳಿಗೆ ನೀವು ಸರಿಯಾದ ಉತ್ತರ ನೀಡದಿದ್ದರೆ, ಆಗ ಸಂದರ್ಶಕರು ನಿಮಗೆ ಸಲಹೆಗಳನ್ನು ಕೊಡುತ್ತಾರೆ. ನೀವು ಸರಿಯಾಗಿ ಪ್ರಿಪೇರ್ ಆಗಿ ಬಂದಿಲ್ಲ ಎಂಬುವುದನ್ನು ನಿಮಗೆ ಮನದಟ್ಟು ಮಾಡಿಕೊಡಲು ಪ್ರಯತ್ನಿಸುತ್ತಾರೆ.
3) ನಾವು ಈ ಹುದ್ದೆಗೆ ಒಂದೊಳ್ಳೆ ಅಭ್ಯರ್ಥಿಯನ್ನು ಹುಡುಕುತ್ತಿದ್ದೇವೆ. ನೋಡೋಣ ಮುಂದೆ ನಿಮಗೆ ಹೇಳ್ತೇವೆ ಎಂದರೆ, ನೀವು ಆ ಸೂಕ್ತ ವ್ಯಕ್ತಿ ಅಲ್ಲ ಎಂದು ಅರ್ಥ. ನಿಮಗಿಂತಲೂ ಹೆಚ್ಚಿನ ಪ್ರತಿಭೆ ಇರುವ ಅಭ್ಯರ್ಥಿಗಳನ್ನು ನೋಡುತ್ತಿರುವುದಾಗಿ ಪರೋಕ್ಷವಾಗಿ ಅವರು ಹೇಳುತ್ತಿದ್ದಾರೆ ಎಂದು ನೀವು ಅರ್ಥ ಮಾಡಿಕೊಳ್ಳಬೇಕು.
ಇದನ್ನೂ ಓದಿ: Interview Tips-11: ಸಂದರ್ಶನದಲ್ಲಿ ಕೇಳುವ 7 ಅತ್ಯಂತ ಕಠಿಣ ಪ್ರಶ್ನೆಗಳಿವು, ಮೊದಲೇ ತಯಾರಾಗಿರಿ
ಹೆಚ್ಚಿನ ನೇಮಕಾತಿ ನಿರ್ವಾಹಕರು ಅಭ್ಯರ್ಥಿಗಳ ಭಾವನೆಗಳನ್ನು ನೋಯಿಸಲು ಇಷ್ಟಪಡುವುದಿಲ್ಲ. ಆಗ ನಾವು ಎಲ್ಲರನ್ನು ನೇಮಿಸಿಕೊಳ್ಳಲು ಸಾಧ್ಯವಿಲ್ಲ. ಉತ್ತಮ ಅಭ್ಯರ್ಥಿಗಳನ್ನು ಮಾತ್ರ ನೇಮಿಸಿಕೊಳ್ಳುತ್ತಾರೆ ಎಂದು ಹೇಳುತ್ತಾರೆ.
4) We’ll be in touch: ಸರಳವಾಗಿ ಈ ವಾಕ್ಯವನ್ನು ಅರ್ಥ ಮಾಡಿಕೊಳ್ಳುವುದಾದರೆ. ನಿಮಗೆ ಹೇಳುತ್ತೇವೆ, ಸಂಪರ್ಕದಲ್ಲಿ ಇರಿ ನಿಮಗೆ ಮಾಹಿತಿ ಸಿಗುತ್ತೆ ಎಂದು ಅರ್ಥ. ನಾವು ಸಂಪರ್ಕದಲ್ಲಿರುತ್ತೇವೆ ಎಂದು ಹೇಳಿದರೆ, ನಾನು ನಿಮ್ಮ ಭಾವನೆಗಳನ್ನು ನೋಯಿಸಲು ಬಯಸುವುದಿಲ್ಲ, ಆದರೆ ನಿಮಗೆ ಕೆಲಸವನ್ನು ನೀಡುವ ಉದ್ದೇಶವಿಲ್ಲ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಿ.
5) ನೋಡೋಣ ಈ ಸಲ ಅಲ್ಲದಿದ್ದರೂ, ಮುಂದೆ ಕೆಲಸ ಖಾಲಿ ಇದ್ದಾಗ ನಿಮಗೆ ತಿಳಿಸುತ್ತೇವೆ ಎನ್ನುತ್ತಾರೆ. ಅಂದರೆ ಈಗ ಅವರು ನಿಮಗೆ ಕೆಲಸ ಕೊಡುತ್ತಿಲ್ಲ ಎಂಬುವುದನ್ನು ನೀವು ಅಲ್ಲಿಯೇ ತಿಳಿದುಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ