• ಹೋಂ
 • »
 • ನ್ಯೂಸ್
 • »
 • Jobs
 • »
 • Career Secret: 9 to 5 ಜಾಬ್ ಬಿಟ್ಟವರೇ ಇಂದು ದೊಡ್ಡ ಶ್ರೀಮಂತರಾಗಿರೋದು! ಏನಿದು ವೃತ್ತಿ ರಹಸ್ಯ?

Career Secret: 9 to 5 ಜಾಬ್ ಬಿಟ್ಟವರೇ ಇಂದು ದೊಡ್ಡ ಶ್ರೀಮಂತರಾಗಿರೋದು! ಏನಿದು ವೃತ್ತಿ ರಹಸ್ಯ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಇಂದಿನ ಶ್ರೀಮಂತರಲ್ಲಿ ಒಂದು ಸಾಮಾನ್ಯವಾದ ವಿಷಯವೆಂದರೆ ಅವರೆಲ್ಲರೂ ತಮ್ಮ ವೃತ್ತಿಜೀವನದ ಮಧ್ಯದಲ್ಲಿ ಉದ್ಯೋಗಗಳನ್ನು ತೊರೆದವರಾಗಿದ್ದಾರೆ. ಜೀವನದಲ್ಲಿ ನಿಜವಾಗಿಯೂ ಯಶಸ್ವಿಯಾಗಲು , ಸಂಪತ್ತನ್ನು ಗಳಿಸಲು ಇದೊಂದೇ ಮಾರ್ಗ ಎಂದು ಅವರು ಭಾವಿಸಿದ್ದರು.

 • Trending Desk
 • 5-MIN READ
 • Last Updated :
 • Share this:

  ಕೆಲವರು ತಮ್ಮ ಜೀವನದಲ್ಲಿ ವೃತ್ತಿಯಲ್ಲಿ (Career) ಸಿಕ್ಕ ಸಂಬಳ (Salary) ಸಾಕು ಅಂತ ಅಷ್ಟರಲ್ಲಿಯೇ ಜೀವನ ಸಾಗಿಸುತ್ತಿರುತ್ತಾರೆ. ಇನ್ನೂ ಕೆಲವರು ತಮ್ಮ ವೃತ್ತಿಜೀವನದಲ್ಲಿ ಎಷ್ಟೇ ಕೆಲಸ ಮಾಡಿದರೂ ಸಹ ಶ್ರೀಮಂತರಾಗಲು (Rich) ತುಂಬಾನೇ ಕಷ್ಟ ಪಡುತ್ತಿರುತ್ತಾರೆ ಅಂತ ಹೇಳಬಹುದು. ಇಲ್ಲಿ ಐದು ವರ್ಷಗಳಲ್ಲಿ 233 ಮಿಲಿಯನೇರ್ ಗಳನ್ನು ಅಧ್ಯಯನ ಮಾಡಿ ಮತ್ತು ಅವರ ಯಶಸ್ಸಿಗೆ ಏನು ಕಾರಣ ಅಂತ ತಿಳಿದುಕೊಳ್ಳುವುದಕ್ಕೆ ಪ್ರಯತ್ನಪಟ್ಟಿದ್ದಾರಂತೆ ಅಕೌಂಟೆಂಟ್ ಮತ್ತು ಹಣಕಾಸು ಯೋಜನೆಕಾರರಾದ ಟಾಮ್ ಕೋರ್ಲೆ. ಆ ಯಶಸ್ವಿ ಜನರ ಅಭ್ಯಾಸಗಳ ಮತ್ತು ವಿಚಾರಗಳ ಬಗ್ಗೆ ಇವರು ತಿಳಿದುಕೊಂಡಿದ್ದಾರೆ ನೋಡಿ.


  ಅಧ್ಯಯನದಲ್ಲಿ 51 ಪ್ರತಿಶತದಷ್ಟು ಉದ್ಯಮಿಗಳಾಗಿದ್ದು, 28 ಪ್ರತಿಶತದಷ್ಟು ಜನರು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗಿನ ಉದ್ಯೋಗಗಳನ್ನು ಹೊಂದಿದ್ದರು. ಜ18 ಪ್ರತಿಶತದಷ್ಟು ಜನರು ದೊಡ್ಡ ಕಂಪನಿಗಳಲ್ಲಿ ಹಿರಿಯ ಮಟ್ಟದ ಕಾರ್ಯನಿರ್ವಾಹಕರಾಗಿದ್ದರು.


  ಆದರೆ ಅವರೆಲ್ಲರಲ್ಲಿಯೂ ಒಂದು ಸಾಮಾನ್ಯವಾದ ವಿಷಯವೆಂದರೆ ಅವರು ತಮ್ಮ ವೃತ್ತಿಜೀವನದ ಮಧ್ಯದಲ್ಲಿ ಉದ್ಯೋಗಗಳನ್ನು ತೊರೆದವರಾಗಿದ್ದರು. ಅವರು ಜೀವನದಲ್ಲಿ ನಿಜವಾಗಿಯೂ ಯಶಸ್ವಿಯಾಗಲು , ಸಂಪತ್ತನ್ನು ಗಳಿಸಲು ಇದೊಂದೇ ಮಾರ್ಗ ಎಂದು ಅವರು ಭಾವಿಸಿದರು. ಕೆಲವರು ತಮ್ಮದೇ ಆದ ವ್ಯವಹಾರಗಳನ್ನು ಶುರು ಮಾಡಿದರೆ, ಇನ್ನೂ ಕೆಲವರು ತಮ್ಮ ವೃತ್ತಿಯಲ್ಲಿ ಹೆಚ್ಚಿನ ಬೆಳವಣಿಗೆಯ ಅವಕಾಶಗಳನ್ನು ಮತ್ತು ಹೆಚ್ಚಿನ ಸಂಬಳವನ್ನು ನೀಡುವ ಬೇರೆ ರೀತಿಯ ಪಾತ್ರಗಳನ್ನು ಕಂಡುಕೊಂಡರು.


  ಅನೇಕ ಜನರಿಗೆ ತಮ್ಮ ಉದ್ಯೋಗವನ್ನು ತೊರೆಯಲು ನಿರ್ಧರಿಸುವಂತೆ ಮಾಡಿದ ಅತ್ಯಂತ ಸಾಮಾನ್ಯ ಕಾರಣಗಳು ಇಲ್ಲಿವೆ ನೋಡಿ.


  ಕೆಲಸದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳದಿರುವುದು


  ಟಾಮ್ ಅವರ ಅಧ್ಯಯನದಲ್ಲಿ ಮಿಲಿಯನೇರ್ ಗಳು ಯಾವಾಗಲೂ ನೀರಸವಾದ ಮತ್ತು ಪುನರಾವರ್ತಿತ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ಭಾವಿಸುತ್ತಿದ್ದರು. ಒಬ್ಬ ವ್ಯಕ್ತಿಯು ಕಂಟೇನರ್ ಶಿಪ್ಪಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಅವರನ್ನು ತುಂಬಾನೇ ಕಡಿಮೆ ಬಳಸಿಕೊಳ್ಳುತ್ತಿದ್ದಾರೆ ಅಂತ ಅವರಿಗೆ ಅನ್ನಿಸಿದೆ. ಕೊನೆಗೆ ಇನ್ನೊಂದು ಕಂಪನಿಗೆ ಸೇರಲು ಈ ಕಂಪನಿಯ ಕೆಲಸವನ್ನು ಬಿಟ್ಟರು.


  list of high paying jobs which does not need degree certificate


  ನಂತರ ಆ ಉದ್ಯೋಗಿ ಬೇರೆಯವರೊಂದಿಗೆ ಸೇರಿಕೊಂಡು ಒಟ್ಟಿಗೆ, ಅಂತರರಾಷ್ಟ್ರೀಯ ಕಂಟೇನರ್ ಶಿಪ್ಪಿಂಗ್ ಕಂಪನಿಯ ಹೊಸ ಯುಎಸ್ ಶಾಖೆಯನ್ನು ಪ್ರಾರಂಭಿಸಿದರು. ಇಂದು, ಅವರು ಬಹುಕೋಟಿ ಡಾಲರ್ ಕಂಪನಿಯಲ್ಲಿ ಕಾರ್ಯನಿರ್ವಾಹಕರಾಗಿದ್ದಾರೆ.


  ಕೆಟ್ಟ ಮನಸ್ಥಿತಿಯ ಬಾಸ್ ಗಳನ್ನು ಹೊಂದಿದ್ದರು


  ಸ್ವಾರ್ಥಿ, ಅಹಂಕಾರಿ ಅಥವಾ ನಿಮ್ಮ ಅಭಿಪ್ರಾಯಗಳಲ್ಲಿ ಕಡಿಮೆ ಆಸಕ್ತಿ ಹೊಂದಿರುವ ವ್ಯವಸ್ಥಾಪಕರು ನಿಮ್ಮ ಗಳಿಕೆಯ ಸಾಮರ್ಥ್ಯವನ್ನು ತಲುಪಲು ನಿಮಗೆ ಸಹಾಯ ಮಾಡುವುದಿಲ್ಲ.


  ಒಬ್ಬ ಮಿಲಿಯನೇರ್ ತನ್ನ ಮೊದಲ ಕೆಲಸದಲ್ಲಿ ಮ್ಯಾನೇಜರ್ ವೊಬ್ಬರಿಂದ ತುಂಬಾನೇ ಬೇಸರಗೊಂಡಿದ್ದರು ಎಂದು ಹೇಳಿದರು. ಅವರು ಕೆಲಸದ ಬಗ್ಗೆ ಹೇಳುವ ಬದಲು ಅವರ ಕೆಲಸವನ್ನು ಸದಾ ಕಟುವಾಗಿ ಟೀಕಿಸುತ್ತಿದ್ದರು. ಅವರು ಅದರಿಂದ ಬೇಸತ್ತು ತಮ್ಮದೇ ಆದ ಮನೆ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಲು ಹೊರಟರು, ಅದೇ ರೀತಿ ಭಾವಿಸಿದ ಹಲವಾರು ಪ್ರಮುಖ ಉದ್ಯೋಗಿಗಳನ್ನು ತಮ್ಮೊಂದಿಗೆ ಕರೆದೊಯ್ದರು. ಪ್ರಸ್ತುತ ಅವರ ಕಂಪನಿಯು ಇಂದು ಯಶಸ್ವಿ ಮನೆ ನಿರ್ಮಾಣಗಾರನಾಗಿ ಬೆಳೆದಿದೆ, ಸಂಸ್ಥಾಪಕರನ್ನು ತುಂಬಾ ಶ್ರೀಮಂತರನ್ನಾಗಿ ಮಾಡಿದೆ


  ಈ ಕಚೇರಿ ಕೆಲಸದ ಸಂಸ್ಕೃತಿಗೆ ಹೆದರುತ್ತಿದ್ದರು


  ಕಚೇರಿಗಳಲ್ಲಿ ನಡೆಯುವ ದುರುದ್ದೇಶಪೂರಿತ ಗಾಸಿಪ್ ಗಳಿಂದ ಕೂಡಿರುವ ಆ ವ್ಯವಸ್ಥೆ ಅನೇಕರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಇಂತಹ ಕಚೇರಿಗೆ ಪ್ರತಿದಿನ ಕೆಲಸಕ್ಕೆ ಹೋಗುವಾಗ ಯಾರಿಗಾದರೂ ಆತಂಕದ ಭಾವನೆ ಬಂದೆ ಬರುತ್ತದೆ. ಅಕೌಂಟಿಂಗ್ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿದ್ದ ಒಬ್ಬ ವ್ಯಕ್ತಿಯ ಜೀವನದಲ್ಲಿ ಸಹ ಇದೇ ರೀತಿಯಾದ ಘಟನೆ ನಡೆದಿತ್ತು.


  ಕೆಟ್ಟ ಕಚೇರಿಯ ಪರಿಸರದಿಂದಾಗಿ ಅವರು ಅಂತಿಮವಾಗಿ ಕೆಲಸ ಬಿಟ್ಟು ಹೊರಟು ಹೋದರು. ತಿಂಗಳುಗಳ ಉದ್ಯೋಗ ಸಂದರ್ಶನದ ನಂತರ, ಅವರು ಪ್ರತಿಸ್ಪರ್ಧಿ ಸಂಸ್ಥೆಯಲ್ಲಿ ಹೊಸ ಕೆಲಸವನ್ನು ಪಡೆದರು, ಅಲ್ಲಿ ಅವರು ಬರೀ ಉದ್ಯೋಗಿ ಆಗಿರದೆ ಪಾಲುದಾರರು ಸಹ ಆದರು.
  ಅನೇಕ ವರ್ಷಗಳು ಕಳೆದರೂ ವೇತನ ಹೆಚ್ಚಳ ಮಾಡದೆ ಇರುವುದು


  ಎಷ್ಟೇ ವರ್ಷಗಳ ಕಾಲ ಕೆಲಸ ಮಾಡಿದರೂ ಸಹ ವೇತನದಲ್ಲಿ ಸ್ವಲ್ಪವೂ ಹೆಚ್ಚು ಮಾಡದೆ ಇದ್ದಾಗ, ಉದ್ಯೋಗಿಗೆ ಕೆಲಸ ಮಾಡಲು ತುಂಬಾನೇ ಬೇಸರವಾಗುತ್ತದೆ. ಆಗ ಆ ಉದ್ಯೋಗಿ ಮತ್ತೊಂದು ಕೆಲಸವನ್ನು ಹುಡುಕಲು ಪ್ರಾರಂಭಿಸುತ್ತಾರೆ. ಅವರು ಬಯಸಿದ ಜೀವನಶೈಲಿಯನ್ನು ಮತ್ತು ಮನೆ ಖರೀದಿಸಲು ಸಾಕಷ್ಟು ಹಣವನ್ನು ಉಳಿಸಲು ಸಾಧ್ಯವಾಗದೆ ಇದ್ದಾಗ ಬೇರೆ ಜಾಸ್ತಿ ಸಂಬಳ ಕೊಡುವ ಕೆಲಸವನ್ನು ಆರಿಸಿಕೊಂಡು ಹೋಗುತ್ತಾರೆ. ದೊಡ್ಡ ಕಾರ್ ಡೀಲರ್ಶಿಪ್ ನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿಯು ತನ್ನ ಮಾಲೀಕನ ವಿರುದ್ಧ ಒಬ್ಬರೇ ಮುಷ್ಕರ ನಡೆಸಲು ನಿರ್ಧರಿಸಿ ಕೆಲಸ ಬಿಟ್ಟರು.


  ನಂತರ ಅವರ ಕುಟುಂಬ ಮತ್ತು ಸ್ನೇಹಿತರು ಹಣವನ್ನು ಹೂಡಿಕೆ ಮಾಡಿರುವ ಒಂದು ಕಂಪನಿಯಲ್ಲಿ ಕೆಲಸ ಶುರು ಮಾಡಿದರು. ನಂತರ ತಮ್ಮದೇ ಆದ ಡೀಲರ್ಶಿಪ್ ಅನ್ನು ಪ್ರಾರಂಭಿಸಿದರು ಮತ್ತು ಅದನ್ನು ಫ್ರ್ಯಾಂಚೈಸ್ ಮಾಡಿದರು, ಇದರಿಂದ ತುಂಬಾನೇ ಹಣ ಗಳಿಸಿ ಶ್ರೀಮಂತರಾದರು.


  ಕೆಲಸಕ್ಕೆ ಅಂತ ತುಂಬಾ ದೂರ ಪ್ರಯಾಣಿಸುವುದು


  ನನ್ನ ಅಧ್ಯಯನದಲ್ಲಿ ಸ್ವಯಂ ನಿರ್ಮಿತ ಮಿಲಿಯನೇರ್ ಒಬ್ಬರು ಕೆಲಸ ಮಾಡುವಾಗ ನ್ಯೂಜೆರ್ಸಿಯಲ್ಲಿರುವ ತನ್ನ ಮನೆಯಿಂದ ನ್ಯೂಯಾರ್ಕ್ ನಗರಕ್ಕೆ ಪ್ರಯಾಣ ಮಾಡಬೇಕಿತ್ತು. ಅದು ಅವರಿಗೆ ತುಂಬಾನೇ ಆಯಾಸವನ್ನು ಉಂಟುಮಾಡುತ್ತಿತ್ತು. ಆದ್ದರಿಂದ ಅವರು ತಮ್ಮ ಮನೆಗೆ ಹತ್ತಿರವಾಗಿರುವ ಕೆಲಸವನ್ನು ಹುಡುಕಲು ನಿರ್ಧರಿಸಿದರು.


  ಇದನ್ನೂ ಓದಿ: Success Story: ಉದ್ಯೋಗ ಮಾಡ್ತೀನಿ ಅಂದಿದ್ದಕ್ಕೆ ಮನೆಯಿಂದ ಹೊರ ಹಾಕಿದ್ರು; ಹಳ್ಳಿ ಹುಡ್ಗಿ ಈಗ ದುಬೈನಲ್ಲಿ ಗಗನಸಖಿ


  ಅವರು ನ್ಯೂಜೆರ್ಸಿ ಮೂಲದ ಫಾರ್ಮಾಸ್ಯುಟಿಕಲ್ ಉದ್ಯಮದಲ್ಲಿ ಮತ್ತೊಂದು ಕೆಲಸವನ್ನು ಪಡೆದರು ಮತ್ತು ಅದು ಫಲ ನೀಡಿತು. ಆ ಕೆಲಸದಲ್ಲಿ ಉನ್ನತ ಸ್ಥಾನಕ್ಕೆ ಏರಿದರು ಮತ್ತು ಅಪಾರವಾದ ಹಣವನ್ನು ಸಹ ಗಳಿಸಿದರು.


  ಅರಿಸಿಕೊಂಡ ವೃತ್ತಿಜೀವನ ಸ್ಥಿರವಾಗಿರಲಿಲ್ಲ


  ಒಬ್ಬ ಐಟಿ ವೃತ್ತಿಪರರು ತಮ್ಮ ಹೆಣಗಾಡುತ್ತಿರುವ ಉತ್ಪಾದನಾ ಕಂಪನಿಯನ್ನು ತೊರೆದು ರಿಯಾಯಿತಿ ಆನ್ಲೈನ್ ಬ್ರೋಕರೇಜ್ ಸೇವೆಗಳನ್ನು ನೀಡುವ ಹೊಸ ವ್ಯವಹಾರಕ್ಕೆ ಸೇರಿದರು.


  ಆ ಸಮಯದಲ್ಲಿ, ಇದು ತುಲನಾತ್ಮಕವಾಗಿ ಹೊಸ ಉದ್ಯಮವಾಗಿತ್ತು. ಆದರೆ ಈ ಕೆಲಸವನ್ನು ಪ್ರಯತ್ನಿಸಿದ್ದು ಯೋಗ್ಯವಾಗಿತ್ತು. ಕಂಪನಿಯು ಅಭಿವೃದ್ಧಿ ಹೊಂದುತ್ತಿದ್ದಂತೆ, ಅವನು ಸಹ ಅಭಿವೃದ್ದಿ ಹೊಂದಿದನು. ನಿಮ್ಮ ಕೌಶಲ್ಯಗಳು ನೀವು ಯೋಚಿಸುವುದಕ್ಕಿಂತ ಹೆಚ್ಚಾಗಿರುತ್ತವೆ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.

  Published by:Kavya V
  First published: