ಕೋವಿಡ್ (Covid) ಸಾಂಕ್ರಾಮಿಕ ರೋಗದಿಂದಾಗಿ ಭಾರತದಲ್ಲಿ ಆರೋಗ್ಯ ಉದ್ಯಮವು (Healthcare Industry) ಅಭೂತಪೂರ್ವ ಬೆಳವಣಿಗೆಯನ್ನು ಕಂಡಿದೆ ಅನ್ನೋದನ್ನು ಒಪ್ಪಿಕೊಳ್ಳಲೇಬೇಕು. ಈಗ ಸಾಂಕ್ರಾಮಿಕ ರೋಗ ಕಡಿಮೆ ಆಗಿದ್ದರೂ ಆ ಸಮಯದಲ್ಲಿ ಉಂಟಾಗಿದ್ದ ಭೀಕರತೆಯು ಜನರಿಗೆ ಆರೋಗ್ಯ ಹಾಗೂ ಯೋಗಕ್ಷೇಮದ (Health care) ಮಹತ್ವವನ್ನು ಮನಗಾಣಿಸಿಕೊಟ್ಟಿದೆ.
ಇದರಿಂದ ವೈದ್ಯರು ಮತ್ತು ದಾದಿಯರಂತಹ ಪ್ರಮುಖ ಆರೋಗ್ಯ ವೃತ್ತಿಪರರಿಗೆ ಮಾತ್ರವಲ್ಲದೆ ಇಡೀ ಆರೋಗ್ಯ ಕ್ಷೇತ್ರದ ನಿರ್ವಹಣಾ ಹುದ್ದೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಇತ್ತೀಚಿನ ವರದಿಯ ಪ್ರಕಾರ, ಭಾರತದ ಆರೋಗ್ಯ ಉದ್ಯಮವು 2030ರ ವೇಳೆಗೆ 12 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಲು ಸಿದ್ಧವಾಗಿದೆ.
ಹೆಲ್ತ್‌ಕೇರ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ನಿರ್ಮಿಸಲು ಬಯಸುವ ವಿದ್ಯಾರ್ಥಿಗಳಿಗೆ ಆಕರ್ಷಕ ಉದ್ಯಮವಾಗಿದೆ. ಸದ್ಯ ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ಮಾಡಬಹುದಾದ ಟಾಪ್ 4 ವೃತ್ತಿಗಳು ಹೀಗಿವೆ.
1. ಹೆಲ್ತ್‌ಕೇರ್ ವ್ಯಾಪಾರ ವಿಶ್ಲೇಷಕ: ಭಾರತದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡಲು ಬಯಸುವ ಯಾರಾದರೂ ಮಾಡಲು ಬಯಸುವಂಥ ವೃತ್ತಿಯಾಗಿದೆ. ಡೇಟಾ ವಿಶ್ಲೇಷಣೆ, ಸಂಶೋಧನಾ ಸಾಮರ್ಥ್ಯಗಳು ಮತ್ತು ಹಣಕಾಸು ಜೊತೆಗೆ ಸುಧಾರಿತ ನಿರ್ವಹಣಾ ಕೌಶಲ್ಯಗಳ ಸಂಯೋಜನೆಯನ್ನು ಈ ಕೆಲಸ ಒಳಗೊಂಡಿರುತ್ತದೆ.
ಉತ್ತಮ ಹೆಲ್ತ್ ಕೇರ್ ಬ್ಯುಸಿನೆಸ್ ಅನಾಲಿಸ್ಟ್‌ಗಳು ಆರೋಗ್ಯ ಸಂಸ್ಥೆಗಳಿಗೆ ಕ್ರಮಬದ್ಧ ಒಳನೋಟಗಳನ್ನು ಪಡೆಯಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಾರೆ.
2. ಬ್ಯುಸಿನೆಸ್ ಡೆವೆಲಪ್‌ಮೆಂಟ್ ಮ್ಯಾನೇಜರ್ : ವ್ಯಾಪಾರ ಅಭಿವೃದ್ಧಿಯು ಪ್ರತಿಯೊಂದು ಉದ್ಯಮದ ಅವಿಭಾಜ್ಯ ಅಂಗ. ಆಸ್ಪತ್ರೆಗಳ ಗ್ರಾಹಕರೊಂದಿಗೆ ದೀರ್ಘಾವಧಿಯ ಸಂಪರ್ಕವನ್ನು ಅಭಿವೃದ್ಧಿಪಡಿಸಲು, ಹೊಸ ಗ್ರಾಹಕರನ್ನು ತರಲು ಮತ್ತು ವೈದ್ಯರು ಮತ್ತು ಶಸ್ತ್ರಚಿಕಿತ್ಸಕರಂತಹ ಪ್ರಮುಖ ಆರೋಗ್ಯ ವೃತ್ತಿಪರರೊಂದಿಗೆ ಸಂಬಂಧಗಳನ್ನು ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಬ್ಯುಸಿನೆಸ್ ಡೆವೆಲಪ್‌ಮೆಂಟ್ ಮ್ಯಾನೇಜರ್ ಬೇಕಾಗುತ್ತಾರೆ.
ಇವರು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ. ಹೆಲ್ತ್‌ಕೇರ್ ಉದ್ಯಮವು ಸೂಕ್ಷ್ಮವಾಗಿರುವ ಕಾರಣ ಈ ಉದ್ಯಮದಲ್ಲಿ ವಿಶೇಷವಾದ ಸಮಾಲೋಚನಾ ಕೌಶಲ್ಯಗಳ ಅಭಿವೃದ್ಧಿಯ ಅಗತ್ಯವಿರುತ್ತದೆ.
3. ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಮ್ಯಾನೇಜರ್: ಆಸ್ಪತ್ರೆ ನಿರ್ವಹಣೆಗೆ ಕಚ್ಚಾ ಸಾಮಗ್ರಿಗಳು, ಔಷಧಿಗಳು, ವೈದ್ಯಕೀಯ ಉಪಕರಣಗಳು ಮುಂತಾದವುಗಳನ್ನು ನಿರ್ವಹಿಸಲು ಬಲವಾದ ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ ತಂಡದ ಅಗತ್ಯವಿರುತ್ತದೆ.
ಆರೋಗ್ಯ ರಕ್ಷಣೆಯಲ್ಲಿ, ಪೂರೈಕೆ ಸರಪಳಿ ನಿರ್ವಹಣೆಯನ್ನು ಸ್ಥಾಪಿಸುವುದು ನಿರ್ಣಾಯಕ ಅಂಶವಾಗಿದೆ. ಒಂದು ಸಣ್ಣ ಸಮಸ್ಯೆ ಕೂಡ ರೋಗಿಗಳ ಜೀವನದ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ, ಹೆಚ್ಚುತ್ತಿರುವ ಜಾಗೃತಿಯೊಂದಿಗೆ, ಸಂಸ್ಥೆಗಳು ಪರಿಸರ ಸ್ನೇಹಿ ಪರಿಹಾರಗಳು, ಅತ್ಯುತ್ತಮ-ದರ್ಜೆಯ ತಂತ್ರಜ್ಞಾನಗಳು ಲಭ್ಯವಿದೆ.
ಅಲ್ಲದೇ ಅವು ಕಡಿಮೆ ವೆಚ್ಚದಲ್ಲಿಯೂ ಸಿಗುತ್ತವೆ. ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ವಿದ್ಯಾರ್ಥಿಯು ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿಯಲ್ಲಿ ಕೆಲಸವನ್ನು ಆರಿಸಿಕೊಳ್ಳಬಹುದು.
4. ಆರೋಗ್ಯ ಉದ್ಯಮಿ: ಭಾರತದಲ್ಲಿ 5000 ಕ್ಕೂ ಹೆಚ್ಚು ಹೆಲ್ತ್‌ಕೇರ್ ಸ್ಟಾರ್ಟ್‌ಅಪ್‌ಗಳಿವೆ. ಈ ವಲಯದಲ್ಲಿ ನಾವೀನ್ಯತೆಯ ಅಗತ್ಯವಿರುವುದರಿಂದ ಹೆಲ್ತ್‌ಕೇರ್ ಉದ್ಯಮದಲ್ಲಿ ಛಾಪು ಮೂಡಿಸಲು ನೋಡುತ್ತಿರುವ ಉದಯೋನ್ಮುಖ ಉದ್ಯಮಿಗಳಿಗೆ ಇದು ಸೂಕ್ತವಾದ ಕ್ಷೇತ್ರವಾಗಿದೆ.
ಇದನ್ನೂ ಓದಿ: Courses after 2nd PUC: ಸೆಕೆಂಡ್ ಪಿಯು ಬಳಿಕ ಯಾವ ಡಿಗ್ರಿ ಓದೋದು ಎಂಬ ಗೊಂದಲವೇ, ಇಲ್ಲಿದೆ ನೋಡಿ 7 ಆಯ್ಕೆಗಳು
ಹೆಲ್ತ್‌ಕೇರ್ ಉದ್ಯಮದಲ್ಲಿ ಛಾಪು ಮೂಡಿಸಲು ನೋಡುತ್ತಿರುವ ಉದಯೋನ್ಮುಖ ಉದ್ಯಮಿಗಳಿಗೆ, ವಲಯದ ಒಟ್ಟಾರೆ ತಿಳುವಳಿಕೆ ಮತ್ತು ಪ್ರತಿ ವಿಭಾಗವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಸ್ನಾತಕೋತ್ತರ ಪದವಿಗಿಂತಲೂ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಪದವಿಯಲ್ಲಾದರೆ ಅವರ ಅನುಭವದ ತರಗತಿಯ ಕಲಿಕೆ, ಉದ್ಯಮ ತಜ್ಞರೊಂದಿಗೆ ಸಂವಹನ, ಅಂತರರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ, ನಾವೀನ್ಯತೆ ಮಾರ್ಗದರ್ಶನವನ್ನು ಒಳಗೊಂಡಿರುತ್ತದೆ.
ಇವಿಷ್ಟು ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ವಿದಾರ್ಥಿಗಳಿಗಿರುವ ವೃತ್ತಿ ಆಯ್ಕೆಗಳಾಗಿವೆ. ಒಟ್ಟಾರೆ, ಈ ಆರೋಗ್ಯ ಕ್ಷೇತ್ರವನ್ನು ನೀವು ಆರಿಸಿಕೊಳ್ಳುತ್ತೀರಿ ಎಂದಾದಲ್ಲಿ ಈ ನಾಲ್ಕು ಅತ್ಯುನ್ನತ ವೃತ್ತಿ ಆಯ್ಕೆಯ ಜೊತೆಗೆ ಇನ್ನೂ ಹಲವಾರು ಉದ್ಯೋಗಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ