• ಹೋಂ
 • »
 • ನ್ಯೂಸ್
 • »
 • Jobs
 • »
 • Advertising Career Path: ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಸಿಕ್ಕರೆ, ಆರಾಮಾಗಿ ಜೀವನದಲ್ಲಿ ಸೆಟಲ್ ಆಗಬಹುದು

Advertising Career Path: ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಸಿಕ್ಕರೆ, ಆರಾಮಾಗಿ ಜೀವನದಲ್ಲಿ ಸೆಟಲ್ ಆಗಬಹುದು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಜಾಹೀರಾತು ಉದ್ಯಮದಲ್ಲಿ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಿಕೊಳ್ಳಲು ನೀವು ಅನುಸರಿಸಲೇಬೇಕಾದ ಏಳು ಸಲಹೆಗಳು ಇಲ್ಲಿವೆ ನೋಡಿ.

 • Trending Desk
 • 5-MIN READ
 • Last Updated :
 • Share this:

  ಕಳೆದ ಕೆಲವು ದಶಕಗಳಲ್ಲಿ, ಈ ಜಾಹೀರಾತು (Advertising) ಉದ್ಯಮವು ಊಹೆಗೂ ನಿಲುಕದ ರೀತಿಯಲ್ಲಿ ಬೆಳೆದಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ಅನೇಕ ರೀತಿಯ ವ್ಯವಹಾರಗಳಿಗೆ (Business) ಬೆನ್ನುಲುಬು ಎಂದರೆ ಅದು ಜಾಹೀರಾತು ಅಂತ ಹೇಳಿದರೆ ಸುಳ್ಳಲ್ಲ. ಎಲ್ಲಾ ರೀತಿಯ ವ್ಯವಹಾರಗಳನ್ನು ಜನರ ಹತ್ತಿರಕ್ಕೆ ತೆಗೆದುಕೊಂಡು ಹೋಗುವುದೇ ಈ ಜಾಹೀರಾತು ಉದ್ಯಮ ಅಂತ ಹೇಳಬಹುದು. ಇದರಲ್ಲಿ ಸಾಂಪ್ರದಾಯಿಕ ಮುದ್ರಣ ಮತ್ತು ದೂರದರ್ಶನ ಜಾಹೀರಾತುಗಳಿಂದ ಹಿಡಿದು ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ವರೆಗೂ ಎಲ್ಲಾ ರೀತಿಯ ಜಾಹಿರಾತುಗಳನ್ನು ಒಳಗೊಂಡಿದೆ ಅಂತ ಹೇಳಬಹುದು.


  ನಿಮಗೂ ಈ ಜಾಹೀರಾತು ಎಂದರೆ, ಅಡ್ವರ್ಟೈಸಿಂಗ್  ವೃತ್ತಿಜೀವನದಲ್ಲಿ ಯಶಸ್ವಿಯಾಗಬೇಕು ಅಂತ ಬಯಕೆ ಇದ್ದರೆ, ಈ ಕೆಳಗೆ ನೀಡಿರುವಂತಹ ಸಲಹೆಗಳನ್ನು ಅನುಸರಿಸಿ. ಯಾವುದೇ ವೃತ್ತಿಜೀವನವನ್ನು ಯಶಸ್ವಿಯಾಗಿ ನಿರ್ಮಿಸಿಕೊಳ್ಳಲು ಶಿಕ್ಷಣ, ಕಠಿಣ ಪರಿಶ್ರಮ ಮತ್ತು ನೆಟ್​ವರ್ಕಿಂಗ್​ ಕೌಶಲ್ಯಗಳು ತುಂಬಾನೇ ಸಹಾಯಕವಾಗುತ್ತವೆ ಅಂತ ಹೇಳಬಹುದು. ಜಾಹೀರಾತು ಉದ್ಯಮದಲ್ಲಿ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಿಕೊಳ್ಳಲು ನೀವು ಅನುಸರಿಸಲೇಬೇಕಾದ ಏಳು ಸಲಹೆಗಳು ಇಲ್ಲಿವೆ ನೋಡಿ.


  1) ಜಾಹೀರಾತಿನಲ್ಲಿ ಶಿಕ್ಷಣವನ್ನು ಪಡೆಯಿರಿ


  ಜಾಹೀರಾತು, ಮಾರ್ಕೆಟಿಂಗ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪದವಿ ಪಡೆಯುವುದು ಇದಕ್ಕೆ ಉತ್ತಮ ಆರಂಭವಾಗಬಹುದು. ಇದು ಗ್ರಾಹಕರ ನಡವಳಿಕೆ, ಮಾರುಕಟ್ಟೆ ಸಂಶೋಧನೆ ಮತ್ತು ಬ್ರ್ಯಾಂಡಿಂಗ್ ನ ಬಗ್ಗೆ ಬೇಕಾದ ತಿಳುವಳಿಕೆಯನ್ನು ಮತ್ತು ಜ್ಞಾನವನ್ನು ಒದಗಿಸುತ್ತದೆ.


  ಅನೇಕ ಜಾಹೀರಾತು ಉದ್ಯೋಗಗಳಿಗೆ ಅನುಭವದ ಅಗತ್ಯವಿರುತ್ತದೆ, ಆದ್ದರಿಂದ ನೀವು ಕಾಲೇಜಿನಲ್ಲಿದ್ದಾಗ ಇಂಟರ್ನ್ಶಿಪ್ ಪಡೆಯುವುದನ್ನು ಮರೆಯಬೇಡಿ. ಇದು ನೀವು ಕಲಿತ ಸಿದ್ಧಾಂತಗಳು ಮತ್ತು ಪರಿಕಲ್ಪನೆಗಳನ್ನು ನೈಜ-ಪ್ರಪಂಚದ ಯೋಜನೆಗಳಿಗೆ ಅನ್ವಯಿಸಲು ಮತ್ತು ಅಮೂಲ್ಯವಾದ ಅನುಭವವನ್ನು ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ.


  Career in the Advertising Industry
  ಪ್ರಾತಿನಿಧಿಕ ಚಿತ್ರ


  2) ಬಲವಾದ ಪೋರ್ಟ್‌ಫೋಲಿಯೋವನ್ನು ನಿರ್ಮಿಸಿಕೊಳ್ಳಿ


  ಸಂಭಾವ್ಯ ಉದ್ಯೋಗದಾತರಿಗೆ ನಿಮ್ಮ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ಪೋರ್ಟ್‌ಫೋಲಿಯೋ ತುಂಬಾನೇ ನಿರ್ಣಾಯಕವಾಗಿದೆ. ನೀವು ಶಾಲೆಯಲ್ಲಿ ಪೂರ್ಣಗೊಳಿಸಿದ ಯೋಜನೆಗಳು, ಸ್ವತಂತ್ರ ಕೆಲಸ ಅಥವಾ ಇಂಟರ್ನ್ಶಿಪ್ ಸೇರಿದಂತೆ ನಿಮ್ಮ ಅತ್ಯುತ್ತಮ ಕೆಲಸದ ಪೋರ್ಟ್‌ಫೋಲಿಯೋವನ್ನು ರಚಿಸಿಕೊಳ್ಳಿ.


  ನಿಮ್ಮ ಪೋರ್ಟ್‌ಫೋಲಿಯೋ ಬಲವಾದ ಅಭಿಯಾನಗಳನ್ನು ರಚಿಸುವ ನಿಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ ಮತ್ತು ನಿಮ್ಮ ಕೌಶಲ್ಯಗಳು ಮತ್ತು ಪರಿಣತಿಯನ್ನು ಸಹ ಇದು ತೋರಿಸುತ್ತದೆ.


  ಇದನ್ನೂ ಓದಿ: Alternative Careers: ಅಕೌಂಟಿಂಗ್ & ಫೈನಾನ್ಸ್ ಓದಿದವರಿಗೆ 6 ಅದ್ಭುತ ಪರ್ಯಾಯ ವೃತ್ತಿಗಳಿವು


  3) ನೆಟ್​ವರ್ಕ್​ ಬೆಳೆಸಿಕೊಳ್ಳಿ


  ಜಾಹೀರಾತು ಉದ್ಯಮದಲ್ಲಿ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಲು ನೆಟ್ವರ್ಕಿಂಗ್ ತುಂಬಾನೇ ಅತ್ಯಗತ್ಯವಾಗಿದೆ. ಉದ್ಯಮ ಕಾರ್ಯಕ್ರಮಗಳಿಗೆ ಹಾಜರಾಗಿ, ವೃತ್ತಿಪರ ಸಂಸ್ಥೆಗಳಿಗೆ ಸೇರಿಕೊಳ್ಳಿ, ಜಾಹೀರಾತು ಉದ್ಯಮದಲ್ಲಿನ ಜನರೊಂದಿಗೆ ಸಂಪರ್ಕ ಸಾಧಿಸಿ. ಸಂಪರ್ಕಗಳ ಜಾಲವನ್ನು ನಿರ್ಮಿಸುವುದು ಹೊಸ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಪಡೆಯಲು ನಿಮಗೆ ಸಹಾಯ ಮಾಡುತ್ತದೆ, ಜೊತೆಗೆ ಉದ್ಯಮದ ಪ್ರವೃತ್ತಿಗಳು ಮತ್ತು ಬೆಳವಣಿಗೆಗಳ ಬಗ್ಗೆ ನವೀಕೃತವಾಗಿರಲು ನಿಮಗೆ ಸಹಾಯ ಮಾಡುತ್ತದೆ.


  ಈ ಸಂಬಂಧಗಳನ್ನು ಹೀಗೆ ಕಾಪಾಡಿಕೊಳ್ಳುವುದನ್ನು ತುಂಬಾನೇ ಮುಖ್ಯವಾಗುತ್ತದೆ. ಏಕೆಂದರೆ ನಿಮ್ಮ ಮುಂದಿನ ಉದ್ಯೋಗವನ್ನು ಹುಡುಕಲು ಅಥವಾ ಹೊಸ ಅವಕಾಶಕ್ಕಾಗಿ ರೆಫರೆನ್ಸ್​ ಪಡೆಯಲು ನಿಮಗೆ ಸಹಾಯ ಮಾಡುತ್ತವೆ.
  4) ಪ್ರಸ್ತುತ ಉದ್ಯಮದ ಬೆಳವಣಿಗೆಗಳ ಬಗ್ಗೆ ಮಾಹಿತಿ ಇರಲಿ


  ಜಾಹೀರಾತು ಉದ್ಯಮವು ನಿರಂತರವಾಗಿ ವಿಕಸನಗೊಳ್ಳುತ್ತಿದೆ, ಆದ್ದರಿಂದ ಹೊಸ ತಂತ್ರಜ್ಞಾನಗಳು ಮತ್ತು ಪ್ರವೃತ್ತಿಗಳಲ್ಲಿ ಪ್ರಸ್ತುತವಾಗಿರುವುದು ಅತ್ಯಗತ್ಯ. ಉದ್ಯಮ ಪ್ರಕಟಣೆಗಳನ್ನು ಓದಿ, ಸಮ್ಮೇಳನಗಳಿಗೆ ಹಾಜರಾಗಿ, ಕಾರ್ಯಾಗಾರಗಳು ಮತ್ತು ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ. ಉದ್ಯಮದಲ್ಲಿನ ಇತ್ತೀಚಿನ ಬೆಳವಣಿಗೆಗಳೊಂದಿಗೆ ನವೀಕೃತವಾಗಿರುವುದು ನಿಮಗೆ ಮಾಹಿತಿ ನೀಡಲು ಸಹಾಯ ಮಾಡುತ್ತದೆ.


  5) ಉದ್ಯಮದಲ್ಲಿ ಅನುಭವವನ್ನು ಪಡೆಯಿರಿ


  ಜಾಹೀರಾತು ಉದ್ಯಮಕ್ಕೆ ಹೊಸದಾಗಿ ಸೇರಿಕೊಂಡಾಗ ಪ್ರವೇಶ ಹಂತದ ಸ್ಥಾನಗಳಿಂದ ಪ್ರಾರಂಭಿಸಿ. ಮೊದಲಿಗೆ ಖಾತೆ ನಿರ್ವಹಣೆ, ಸೃಜನಶೀಲ, ಮಾಧ್ಯಮ ಯೋಜನೆ, ಸಂಶೋಧನೆ ಮತ್ತು ಒಳನೋಟಗಳು ಮತ್ತು ಕಾರ್ಯತಂತ್ರದಂತಹ ಉದ್ಯಮದ ವಿವಿಧ ಕ್ಷೇತ್ರಗಳಲ್ಲಿ ನೀವು ಅಮೂಲ್ಯವಾದ ಅನುಭವವನ್ನು ಪಡೆಯಬಹುದು.


  ಪ್ರತಿಯೊಂದು ಪಾತ್ರವು ಉದ್ಯಮದ ಬಗ್ಗೆ ನಿಮಗೆ ವಿಶಿಷ್ಟ ದೃಷ್ಟಿಕೋನವನ್ನು ನೀಡುತ್ತದೆ ಮತ್ತು ಉತ್ತಮವಾದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ನಿಮಗೆ ಸಹಾಯ ಮಾಡುತ್ತದೆ.


  6) ತಂಡದ ಸಕ್ರಿಯ ಸದಸ್ಯರಾಗಿ


  ಜಾಹೀರಾತು ಒಂದು ತಂಡದ ಪ್ರಯತ್ನವಾಗಿರುತ್ತದೆ ಮತ್ತು ಪರಿಣಾಮಕಾರಿ ಅಭಿಯಾನಗಳನ್ನು ಉತ್ಪಾದಿಸಲು ನೀವು ಇತರರೊಂದಿಗೆ ನಿಕಟವಾಗಿ ಕೆಲಸ ಮಾಡಬೇಕು. ಬಲವಾದ ಸಹಯೋಗ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ, ಪರಿಣಾಮಕಾರಿಯಾಗಿ ಸಂವಹನ ಮಾಡಿ ಮತ್ತು ಅಗತ್ಯವಿರುವಲ್ಲಿ ಸಹಾಯ ಮಾಡಲು ಸಿದ್ಧರಾಗಿರಿ.


  ಇದು ನಿಮಗೆ ಬಲವಾದ ಕೆಲಸದ ಸಂಬಂಧಗಳನ್ನು ನಿರ್ಮಿಸಲು ಸಹಾಯ ಮಾಡುವುದಲ್ಲದೆ, ನೀವು ತಂಡದ ವಿಶ್ವಾಸಾರ್ಹ ಮತ್ತು ಮೌಲ್ಯಯುತ ಸದಸ್ಯ ಎಂದು ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳಿಗೆ ತೋರಿಸುತ್ತದೆ.
  7) ಕೆಲಸದಲ್ಲಿ ಮುಂದಾಳತ್ವ ವಹಿಸಿ


  ಹೊಸ ಯೋಜನೆಗಳನ್ನು ತೆಗೆದುಕೊಳ್ಳಲು, ಸೃಜನಶೀಲ ಪರಿಹಾರಗಳನ್ನು ನೀಡಲು ಮತ್ತು ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಮುಂದಾಳತ್ವ ವಹಿಸಿ. ನೀವು ಸಮಸ್ಯೆಯನ್ನು ಪರಿಹರಿಸುವವರು, ಸೃಜನಶೀಲ ಚಿಂತಕರು ಮತ್ತು ಯೋಜನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬಹುದು ಎಂದು ನಿಮ್ಮ ಬಾಸ್ ಮತ್ತು ಸಹೋದ್ಯೋಗಿಗಳಿಗೆ ತೋರಿಸಿ.


  ಈ ಮೇಲಿನ ಹಂತಗಳನ್ನು ಅನುಸರಿಸುವ ಮೂಲಕ, ನೀವು ಕ್ರಿಯೇಟಿವ್ ಡೈರೆಕ್ಟರ್, ಅಕೌಂಟ್ ಮ್ಯಾನೇಜರ್ ಅಥವಾ ಮಾರ್ಕೆಟಿಂಗ್ ಮ್ಯಾನೇಜರ್ ನಂತಹ ಉನ್ನತ ಮಟ್ಟದ ಸ್ಥಾನಗಳಲ್ಲಿ ಕೆಲಸ ಮಾಡಬಹುದು.

  Published by:Kavya V
  First published: