• ಹೋಂ
 • »
 • ನ್ಯೂಸ್
 • »
 • Jobs
 • »
 • Career Options: ಗ್ರಾಫಿಕ್ ಡಿಸೈನಿಂಗ್ vs ಅನಿಮೇಷನ್: ಎರಡರಲ್ಲಿ ಯಾವುದು ಬೆಸ್ಟ್ ಜಾಬ್?

Career Options: ಗ್ರಾಫಿಕ್ ಡಿಸೈನಿಂಗ್ vs ಅನಿಮೇಷನ್: ಎರಡರಲ್ಲಿ ಯಾವುದು ಬೆಸ್ಟ್ ಜಾಬ್?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಗ್ರಾಫಿಕ್ ವಿನ್ಯಾಸ ಮತ್ತು ಅನಿಮೇಷನ್ ಎರಡೂ ಕ್ಷೇತ್ರಗಳು ತಮ್ಮದೇ ಆದ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿವೆ. ಹಾಗೆಯೇ ಗ್ರಾಫಿಕ್ ವಿನ್ಯಾಸ ಮತ್ತು ಅನಿಮೇಷನ್​ಗೆ ತಮ್ಮದೇ ಆದ ಕೌಶಲ್ಯ ಮತ್ತು ವೃತ್ತಿ ಅವಕಾಶಗಳನ್ನು ಹೊಂದಿವೆ. ಗ್ರಾಫಿಕ್ ವಿನ್ಯಾಸ ಮತ್ತು ಅನಿಮೇಷನ್​ನಲ್ಲಿ ಯಾವುದು ಉತ್ತಮ ಎಂಬ ವಿವರ ಇಲ್ಲಿದೆ.

ಮುಂದೆ ಓದಿ ...
 • Share this:

  ಗ್ರಾಫಿಕ್ ವಿನ್ಯಾಸ (Graphic Designing) ಮತ್ತು ಅನಿಮೇಷನ್ ( Animation) ಅನ್ನೋದು ವಿಭಿನ್ನ ಉಪಕರಣ, ತಂತ್ರಗಳು ಮತ್ತು ಅಪ್ಲಿಕೇಶನ್‌ಗಳೊಂದಿಗಿನ ಎರಡು ವಿಭಿನ್ನ ಕ್ಷೇತ್ರಗಳಾಗಿವೆ. ಗ್ರಾಫಿಕ್ ವಿನ್ಯಾಸವು ಮುದ್ರಣ, ಡಿಜಿಟಲ್ ಮತ್ತು ಜಾಹೀರಾತುಗಳು ಮುಂತಾದವುಗಳಿಗೆ ದೃಶ್ಯ ವಿಷಯವನ್ನು ರಚಿಸುವ ಪ್ರಕ್ರಿಯೆ. ಬಣ್ಣ, ಮುದ್ರಣಕಲೆ, ಚಿತ್ರಣ ಮತ್ತು ವಿನ್ಯಾಸದಂಥ ಅಂಶಗಳನ್ನು ಇದು ಒಳಗೊಂಡಿರುತ್ತದೆ.


  ಇತ್ತ ಅನಿಮೇಷನ್ ಅನ್ನೋದು ಡಿಜಿಟಲ್ ತಂತ್ರಗಳ ಮೂಲಕ ಚಲಿಸುವ ಚಿತ್ರಗಳು ಅಥವಾ ಮೂವಿಂಗ್‌ ಇಮೇಜ್‌ ಗಳನ್ನು ರಚಿಸುವ ಪ್ರಕ್ರಿಯೆಯಾಗಿದೆ. ಇದು ಸ್ಟಿಲ್‌ ಇಮೇಜ್‌ ಅಥವಾ ಡ್ರಾಯಿಂಗ್‌ ಸರಣಿ ರಚಿಸುವುದನ್ನು ಒಳಗೊಂಡಿರುತ್ತದೆ. ಗ್ರಾಫಿಕ್ ವಿನ್ಯಾಸವು ಸ್ಥಿರವಾದ ದೃಶ್ಯ ವಿಷಯವನ್ನು ರಚಿಸುವುದರ ಮೇಲೆ ಕೇಂದ್ರೀಕರಿಸಿದರೆ, ಅನಿಮೇಷನ್ ಅನ್ನೋದು ಕ್ರಿಯಾತ್ಮಕ ಚಲಿಸುವ ಚಿತ್ರಗಳನ್ನು ರಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.


  ಗ್ರಾಫಿಕ್ ವಿನ್ಯಾಸ ಮತ್ತು ಅನಿಮೇಷನ್ ಎರಡೂ ಕ್ಷೇತ್ರಗಳು ತಮ್ಮದೇ ಆದ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿವೆ. ಹಾಗೆಯೇ ಗ್ರಾಫಿಕ್ ವಿನ್ಯಾಸ ಮತ್ತು ಅನಿಮೇಷನ್​ಗೆ ತಮ್ಮದೇ ಆದ ಕೌಶಲ್ಯ ಮತ್ತು ವೃತ್ತಿ ಅವಕಾಶಗಳನ್ನು ಹೊಂದಿವೆ. ಡಿಜಿಟಲ್ ಮಾಧ್ಯಮ ಉದ್ಯಮವು ವಿಕಸನಗೊಳ್ಳುತ್ತಿದ್ದಂತೆ ಅನಿಮೇಷನ್ ಕ್ಷೇತ್ರ ಬಹುಮುಖ ವೃತ್ತಿ ಆಯ್ಕೆಯಾಗಿ ಹೊರಹೊಮ್ಮುತ್ತಿದೆ. ಗ್ರಾಫಿಕ್ ವಿನ್ಯಾಸವು ಜನಪ್ರಿಯ ಕ್ಷೇತ್ರವಾಗಿದ್ದರೂ, ಅನಿಮೇಷನ್‌ ಕ್ಷೇತ್ರವು ಡಿಜಿಟಲ್ ಮಾಧ್ಯಮದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಹೆಚ್ಚಿನ ಆಯ್ಕೆ ಹಾಗೂ ಅವಕಾಶಗಳನ್ನು ನೀಡುತ್ತದೆ.
  Ssoftoons ಎಂಟರ್‌ಟೈನ್‌ಮೆಂಟ್ ಮತ್ತು Ssoftoons ಇನ್‌ಸ್ಟಿಟ್ಯೂಟ್‌ನ ಸ್ಥಾಪಕ ಮತ್ತು ಸಿಇಒ ತಜ್ಞ ಸೌರವ್ ಮೊಂಡಲ್ ಅವರು ಈ ಬಗ್ಗೆ ಬಹಳಷ್ಟು ವಿವರಗಳನ್ನು ಹಂಚಿಕೊಳ್ಳುತ್ತಾರೆ.


  ಅನಿಮೇಷನ್ ಏಕೆ ಮಹತ್ವಾಕಾಂಕ್ಷೆಯ ವೃತ್ತಿ ಆಯ್ಕೆಯಾಗಿ ಬೆಳೆಯುತ್ತಿದೆ?


  *ವೃತ್ತಿಯಾಗಿ ಅನಿಮೇಷನ್ ಉನ್ನತ ಮಟ್ಟದ ಕಲಾತ್ಮಕ ಅಭಿವ್ಯಕ್ತಿಗೆ ಅವಕಾಶ ನೀಡುತ್ತದೆ. ಅನಿಮೇಟರ್‌ಗಳು ಪಾತ್ರಗಳ ಮೂಲಕ ಕಥೆಗಳು ಮತ್ತು ಭಾವನೆಗಳನ್ನು ಹೇಳಬಹುದು. ಅನಿಮೇಷನ್‌ ಕಥೆ ಹೇಳಲು ಅತ್ಯಂತ ಶಕ್ತಿಯುತ ಮಾಧ್ಯಮವಾಗಿದೆ.


  *ಅನಿಮೇಷನ್ ಎನ್ನುವುದು ಕೇವಲ ಮನರಂಜನೆ ಅಥವಾ ಸಾಂಪ್ರದಾಯಿಕ ಅನಿಮೇಷನ್ ಉದ್ಯಮಕ್ಕೆ ಮಾತ್ರ ಸೀಮಿತವಾಗಿಲ್ಲ. ಶಿಕ್ಷಣ, ವಾಸ್ತುಶಿಲ್ಪ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರಗಳಂತಹ ವಿವಿಧ ಕ್ಷೇತ್ರಗಳಲ್ಲಿ ಅನಿಮೇಶನ್ಅನ್ನು ಬಳಸಲಾಗುತ್ತಿದೆ.


  *ಇದು ಆನಿಮೇಟರ್‌ಗಳಿಗೆ ತಮ್ಮ ವೃತ್ತಿಯನ್ನು ಅನ್ವೇಷಿಸಲು ಮತ್ತು ವಿಸ್ತರಿಸಲು ವ್ಯಾಪಕವಾದ ಅವಕಾಶಗಳನ್ನು ಒದಗಿಸುತ್ತದೆ.


  *ವೀಡಿಯೋ ಗೇಮ್‌ಗಳಲ್ಲಿ ಅನಿಮೇಷನ್‌ನ ಬಳಕೆ ಹೆಚ್ಚಾಗಿರುತ್ತದೆ. ವೀಡಿಯೊ ಗೇಮ್‌ಗಳಲ್ಲಿನ ಈಗ, ಮೋಷನ್ ಕ್ಯಾಪ್ಚರ್ ಮತ್ತು ಅತ್ಯಾಧುನಿಕ ಅನಿಮೇಷನ್ ಸಾಫ್ಟ್‌ವೇರ್ ಬಳಕೆ ಮಾಡಲಾಗುತ್ತಿದೆ.


  ಇದು ಆನಿಮೇಟರ್‌ಗಳಿಗೆ ವೀಡಿಯೊ ಗೇಮ್ ಉದ್ಯಮದಲ್ಲಿ ಕೆಲಸ ಮಾಡಲು ಮತ್ತು ಆಟಗಾರರಿಗೆ ವಿಶೇಷ ಅನುಭವಗಳನ್ನು ಸೃಷ್ಟಿಸಲು ಹೊಸ ಅವಕಾಶಗಳನ್ನು ನೀಡುತ್ತಿದೆ.
  *ವರ್ಚುವಲ್ ಮತ್ತು ವರ್ಧಿತ ರಿಯಾಲಿಟಿಗಳಲ್ಲಿ ಅನಿಮೇಷನ್ ಪ್ರಮುಖ ಪಾತ್ರ ವಹಿಸುತ್ತದೆ. ಈ ತಂತ್ರಜ್ಞಾನಗಳ ತ್ವರಿತ ಅಭಿವೃದ್ಧಿಯೊಂದಿಗೆ ಇದು ಅತ್ಯಾಕರ್ಷಕ ಕ್ಷೇತ್ರವಾಗಿದೆ. ಏಕೆಂದರೆ ಇಲ್ಲಿ ಆನಿಮೇಟರ್‌ಗಳು ಪ್ರೇಕ್ಷಕರಿಗೆ ಸಂಪೂರ್ಣ ಹೊಸ ಮಟ್ಟದ ಸಂವಹನ ರಚಿಸಬಹುದಾಗಿದೆ.


  *ವೃತ್ತಿಯ ಆಯ್ಕೆಯಾಗಿ ಅನಿಮೇಷನ್‌ನ ಜನಪ್ರಿಯತೆಗೆ ಕಾರಣವಾಗುವ ಮತ್ತೊಂದು ಅಂಶವೆಂದರೆ ಅನಿಮೇಷನ್ ಉಪಕರಣಗಳು ಮತ್ತು ಸಂಪನ್ಮೂಲಗಳ ಹೆಚ್ಚುತ್ತಿರುವ ವ್ಯಾಪ್ತಿ.


  ಇದನ್ನೂ ಓದಿ: Govt Teacher Exams: ಸರ್ಕಾರಿ ಶಿಕ್ಷಕರಾಗಲು ಯಾವೆಲ್ಲಾ ಪರೀಕ್ಷೆಗಳನ್ನು ಪಾಸ್ ಮಾಡಬೇಕೆಂಬ ಮಾಹಿತಿ ಇಲ್ಲಿದೆ


  ಈ ಹಿಂದೆ, ಅನಿಮೇಷನ್ ಒಂದು ಸಂಕೀರ್ಣ ಮತ್ತು ದುಬಾರಿ ಪ್ರಕ್ರಿಯೆಯಾಗಿದ್ದು, ದುಬಾರಿಯಾದ ವಿಶೇಷ ಉಪಕರಣಗಳು ಮತ್ತು ತರಬೇತಿಯ ಅಗತ್ಯವಿತ್ತು. ಆದರೆ ಇಂದು ತಂತ್ರಜ್ಞಾನದಲ್ಲಿನ ಪ್ರಗತಿಯಿಂದಾಗಿ ಸುಲಭವಾಗಿ ಮತ್ತು ಕೈಗೆಟುಕುವ ದರದಲ್ಲಿನ ಉಪಕರಣಗಳನ್ನು ಬಳಸಬಹುದಾಗಿದೆ.


  ಗ್ರಾಫಿಕ್ ಡಿಸೈನರ್ VS ಅನಿಮೇಷನ್


  *ಅನಿಮೇಷನ್ ಹೆಚ್ಚು ಕ್ರಿಯಾತ್ಮಕವಾಗಿದೆ: ಗ್ರಾಫಿಕ್ ಡಿಸೈನ್‌ಗಿಂತಲೂ ಹೆಚ್ಚಿನ ಕ್ರಿಯಾತ್ಮಕ ಅನುಭವಗಳನ್ನು ರಚಿಸುವ ಸಾಮರ್ಥ್ಯವನ್ನು ಅನಿಮೇಷನ್ ಹೊಂದಿದೆ.


  ಗ್ರಾಫಿಕ್ ವಿನ್ಯಾಸವು ಸಾಮಾನ್ಯವಾಗಿ ಹೆಚ್ಚು ಸ್ಥಿರವಾದ ಮಾಧ್ಯಮವಾಗಿದ್ದು, ಸಂವಹನಕ್ಕೆ ಸೀಮಿತ ಅವಕಾಶಗಳನ್ನು ಹೊಂದಿದೆ.ಆದರೆ ಅನಿಮೇಷನ್‌ ಬಹಳಷ್ಟು ಕ್ರಿಯೇಟಿವ್‌ ಆಗಿ ಮಾಡಬಹುದಾದ ಕೆಲಸಗಳನ್ನು ಅನುಮತಿಸುತ್ತದೆ.


  *ನಿರಂತರ ವಿಕಸನ: ಅನಿಮೇಷನ್ ನಿರಂತರವಾಗಿ ವಿಕಸನಗೊಳ್ಳುತ್ತಿರುವ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳು ಮತ್ತು ತಂತ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ.


  ಡಿಜಿಟಲ್ ಮಾಧ್ಯಮ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿರುವ ಕ್ರಿಯೇಟಿವ್‌ ಜನರಿಗೆ ಇದು ಉತ್ತಮ ಅವಕಾಶವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಗ್ರಾಫಿಕ್ ವಿನ್ಯಾಸವು ವೇಗವಾಗಿ ವಿಕಸನಗೊಳ್ಳುತ್ತಿರುವ ಕ್ಷೇತ್ರವಾಗಿಲ್ಲ. ಹಾಗೆಯೇ ಕಲಿಕೆ ಮತ್ತು ಪ್ರಗತಿಗೆ ಕಡಿಮೆ ಸ್ಥಳಾವಕಾಶವನ್ನು ಒದಗಿಸುತ್ತದೆ ಎನ್ನಬಹುದು.
  *ಹೆಚ್ಚಿನ ಗಳಿಕೆಯ ಸಾಮರ್ಥ್ಯ: ಅನಿಮೇಷನ್‌ನ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ಗಳಿಕೆಯ ಸಾಮರ್ಥ್ಯ. ವಿಶೇಷವಾಗಿ ಅವರು ಸಾಕಷ್ಟು ಅನುಭವ ಮತ್ತು ಉತ್ತಮ ಪೋರ್ಟ್‌ಫೋಲಿಯೊ ಹೊಂದಿದ್ದರೆ ಆನಿಮೇಟರ್‌ಗಳು ಹೆಚ್ಚಿನ ಸಂಬಳವನ್ನು ಗಳಿಸಬಹುದು. ಈ ಗಳಿಕೆಯು ಸಾಮಾನ್ಯವಾಗಿ ಗ್ರಾಫಿಕ್ ವಿನ್ಯಾಸಕರು ಗಳಿಸುವ ಆದಾಯಕ್ಕಿಂತ ಹೆಚ್ಚಾಗಿರುತ್ತದೆ.


  ಒಟ್ಟಾರೆ, ಅನಿಮೇಟೆಡ್ ವಿಷಯಕ್ಕೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಈ ಕ್ಷೇತ್ರದಲ್ಲಿ ವೃತ್ತಿ ಅವಕಾಶಗಳು ಹೆಚ್ಚಾಗಿವೆ. ತಂತ್ರಜ್ಞಾನವು ನಿರಂತರವಾಗಿ ವಿಕಸನಗೊಳ್ಳುವುದರೊಂದಿಗೆ ಅನಿಮೇಷನ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಜನರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ.


  ಹಾಗಾಗಿಯೇ ಅನಿಮೇಷನ್‌ ಅವಕಾಶ ಹಾಗೂ ಗಳಿಕೆ ಸಾಮರ್ಥ್ಯದಿಂದಾಗಿ ಮಹತ್ವಾಕಾಂಕ್ಷೆಯ ವೃತ್ತಿ ಆಯ್ಕೆಯಾಗಿ ಬೆಳೆಯುತ್ತಿದೆ. ಪ್ರತಿಭೆ, ಉತ್ಸಾಹ ಮತ್ತು ಕಠಿಣ ಪರಿಶ್ರಮ ಹೊಂದಿದ್ದರೆ ಯಾರು ಬೇಕಿದ್ದರೂ ಅನಿಮೇಷನ್‌ನಲ್ಲಿ ಯಶಸ್ವಿಯಾಗಬಹುದು.

  Published by:Kavya V
  First published: