• ಹೋಂ
  • »
  • ನ್ಯೂಸ್
  • »
  • Jobs
  • »
  • ChatGPT-4 ಯುವಜನತೆಗಾಗಿ 20 ವೃತ್ತಿ ಸಲಹೆಗಳನ್ನು ನೀಡಿದ್ದು, ಇದನ್ನು ಫಾಲೋ ಮಾಡಿದ್ರೆ ಸಕ್ಸಸ್ ಪಕ್ಕಾ ಅಂತೆ

ChatGPT-4 ಯುವಜನತೆಗಾಗಿ 20 ವೃತ್ತಿ ಸಲಹೆಗಳನ್ನು ನೀಡಿದ್ದು, ಇದನ್ನು ಫಾಲೋ ಮಾಡಿದ್ರೆ ಸಕ್ಸಸ್ ಪಕ್ಕಾ ಅಂತೆ

ಚಾಟ್ ಜಿಪಿಟಿ

ಚಾಟ್ ಜಿಪಿಟಿ

ಇಂದಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ತನ್ನದೇ ಆದ ದಾರಿಯನ್ನು ಕಂಡುಕೊಳ್ಳಲು ತಂತ್ರಜ್ಞಾನಗಳು ಸಾಕಷ್ಟು ಸಹಾಯ ಮಾಡುತ್ತಿವೆ. ಅದರಲ್ಲಿ ಇತ್ತೀಚೆಗೆ OpenAI ನ ಸಂವೇದನಾಶೀಲ ಚಾಟ್‌ಬಾಟ್ ChatGPT ಕೂಡ ಒಂದು.

  • Share this:

ಚಾಟ್‌ಜಿಪಿಟಿ (GPT-4) ಬಗ್ಗೆ ನೀವು ಕೇಳಿರಬಹುದು. ಈ ಕೃತಕ ಬುದ್ದಿಮತ್ತೆಯ ( Artificial intelligence) ತಂತ್ರಜ್ಞಾನ ಇಂಟರ್‌ನೆಟ್‌ ಲೋಕದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ನಾವು ಕೇಳುವ ಪ್ರಶ್ನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದಕ್ಕೆ ಉತ್ತರವನ್ನು ಪಠ್ಯ ರೂಪದಲ್ಲೇ ಸಿದ್ಧ ಮಾಡಿ ನೀಡುವಂಥ ಈ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನ ಸದ್ಯದ ವಿಸ್ಮಯ ಎನ್ನಬಹುದು.


ಇನ್ನು, ಲಾಭದಾಯಕ ಉದ್ಯೋಗವನ್ನು ಮಾಡಬೇಕು ಅಂತ ಎಲ್ಲರೂ ಅಂದುಕೊಳ್ಳುತ್ತಾರೆ. ಇಂದಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ತನ್ನದೇ ಆದ ದಾರಿಯನ್ನು ಕಂಡುಕೊಳ್ಳಲು ತಂತ್ರಜ್ಞಾನಗಳು ಸಾಕಷ್ಟು ಸಹಾಯ ಮಾಡುತ್ತಿವೆ. ಅದರಲ್ಲಿ ಇತ್ತೀಚೆಗೆ OpenAI ನ ಸಂವೇದನಾಶೀಲ ಚಾಟ್‌ಬಾಟ್ ChatGPT ಕೂಡ ಒಂದು. ವಿದ್ಯಾರ್ಥಿಗಳಿಗೆ ಓದಲು, ಬರೆಯಲು, ಪ್ರಶ್ನೋತ್ತರಗಳಿಗೆ, ಪ್ರಬಂಧಗಳನ್ನು ಪ್ರಸ್ತುಪಡಿಸಲು, ಪ್ರಾಜೆಕ್ಟ್‌ ಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತಿದೆ. ಇದರ ಜೊತೆಗೆ ಚಾಟ್‌ ಜಿಪಿಟಿ ಬಳಕೆದಾರರಿಗೆ ಸರಿಯಾದ ಮಾರ್ಗದರ್ಶನ ಕೂಡ ನೀಡುತ್ತಿದೆ.


ಇತ್ತೀಚೆಗೆ, ನೀವು ಇಂದು ಯುವಜನರಿಗೆ ಯಾವ ವೃತ್ತಿ ಸಲಹೆಯನ್ನು ನೀಡಲು ಬಯಸುತ್ತೀರಿ ಎಂದು ಕೇಳಿದಾಗ ಜಿಪಿಟಿ 4 ನೀಡಿದಂತಹ ಸಲಹೆಗಳು ಯಾವವು ಅನ್ನೋದನ್ನು ರೋವನ್ ಚೆಯುಂಗ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ರೆ ಈ AI ತಂತ್ರಜ್ಞಾನ ಏನು ಸಲಹೆಗಳನ್ನು ನೀಡಿದೆ ಅನ್ನೋದನ್ನು ನೋಡೋಣ.




ಯುವಜನರಿಗೆ ಚಾಟ್ ಜಿಪಿಟಿ ನೀಡಿರುವ 20 ಸಲಹೆಗಳು ಈ ಕೆಳಗಿನಂತಿವೆ


1. ನಿಮ್ಮ ಉತ್ಸಾಹವನ್ನು ಅನ್ವೇಷಿಸಿ. ನಿಮ್ಮ ಆಸಕ್ತಿಗಳು ಮತ್ತು ಅದಕ್ಕೆ ಸಂಬಂಧಿತ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಿ.


2. ಬೆಳವಣಿಗೆಯ ಮನಸ್ಥಿತಿಯನ್ನು ಅಭಿವೃದ್ಧಿಪಡಿಸಿ. ಕಲಿಕೆಯನ್ನು ಮತ್ತು ಸವಾಲುಗಳನ್ನು ನಿಮ್ಮಲ್ಲಿ ಅಳವಡಿಸಿಕೊಳ್ಳಿ.


3. ಬಲವಾದ ಅಡಿಪಾಯ ನಿರ್ಮಿಸುವುದರ ಜೊತೆಗೆ ವಿಮರ್ಶಾತ್ಮಕ ಚಿಂತನೆಯಂತಹ ಪ್ರಮುಖ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಿ.


4. ವೃತ್ತಿಪರ ನೆಟ್‌ವರ್ಕ್ ಅನ್ನು ಬೆಳೆಸಿಕೊಳ್ಳಿ. ನಿಮ್ಮ ಕ್ಷೇತ್ರದ ಜನರೊಂದಿಗೆ ಸಂಪರ್ಕ ಸಾಧಿಸಿ.


5. ಇಂಟರ್ನ್‌ಶಿಪ್‌ಗಳನ್ನು ಮಾಡಿ. ನಿಮ್ಮ ಪುನರಾರಂಭಕ್ಕಾಗಿ ಪ್ರಾಯೋಗಿಕ ಅನುಭವವನ್ನು ಪಡೆಯಿರಿ.


6. ಮಾರ್ಗದರ್ಶನಕ್ಕಾಗಿ ಅನುಭವಿ ವೃತ್ತಿಪರರನ್ನು ಹುಡುಕಿ.


7. ಹೊಸದನ್ನು ಕಲಿತುಕೊಳ್ಳಿ. ಉದ್ಯಮದ ಬಗ್ಗೆ, ಅಲ್ಲಿನ ಸುದ್ದಿಗಳು ಮತ್ತು ಬೆಳವಣಿಗೆಗಳನ್ನು ಅರಿತುಕೊಳ್ಳಿ.


8. ನಿರಂತರ ಕಲಿಕೆ ನಿಮ್ಮಲ್ಲಿರಲಿ. ಕೋರ್ಸ್‌ಗಳು, ಕಾರ್ಯಾಗಾರಗಳು ಮತ್ತು ಸರ್ಟಿಫಿಕೇಟ್‌ಗಳನ್ನು ಪಡೆದುಕೊಳ್ಳಿ.


9. ವೈಯಕ್ತಿಕ ಬ್ರ್ಯಾಂಡ್ ಅನ್ನು ಅಭಿವೃದ್ಧಿಪಡಿಸಿ. ಆನ್‌ಲೈನ್‌ನಲ್ಲಿ ಅದನ್ನು ಶೋಕೇಸ್‌ ಮಾಡಿ.


10. ವೈವಿಧ್ಯಮಯ ಕೌಶಲ್ಯಗಳನ್ನು ಕಲಿತುಕೊಳ್ಳಿ. ಅಲ್ಲದೇ ಅದಕ್ಕೆ ಪೂರಕ ಕೌಶಲ್ಯಗಳನ್ನು ಪಡೆದುಕೊಳ್ಳಿ.


ಇದನ್ನೂ ಓದಿ: Top 10 Careers: ಭಾರತದಲ್ಲಿ ಈ 10 ವೃತ್ತಿಗಳನ್ನು ಆಯ್ಕೆ ಮಾಡಿದ್ರೆ ಎಂದಿಗೂ ಉದ್ಯೋಗ ಕೊರತೆ ಎದುರಾಗಲ್ಲ


11. ಸ್ಮಾರ್ಟ್ ಗೋಲ್‌ ನಿಮ್ಮಲ್ಲಿರಲಿ. ಸಾಧಿಸಬಹುದಾದ ವೃತ್ತಿಗಳ ಕಡೆಗೆ ಗಮನಹರಿಸಿ.


12. ಬದಲಾವಣೆಯನ್ನು ಒಪ್ಪಿಕೊಳ್ಳಿ. ಬೆಳೆಯುತ್ತಿರುವ ಉದ್ಯೋಗ ಮಾರುಕಟ್ಟೆಗೆ ಹೊಂದಿಕೊಳ್ಳಿ.


13. ಟೈಮ್‌ ಮ್ಯಾನೇಜ್‌ಮೆಂಟ್‌ ಅಭ್ಯಾಸ ಮಾಡಿ: ವೈಯಕ್ತಿಕ ಅಭಿವೃದ್ಧಿಗೆ ಆದ್ಯತೆ ನೀಡಿ.


14. ವೈಫಲ್ಯದಿಂದ ಕಲಿಯಿರಿ: ಸೋಲುಗಳನ್ನು ಅಮೂಲ್ಯವಾದ ಪಾಠಗಳೆಂದುಕೊಳ್ಳಿ.


15. ಸಾಫ್ಟ್‌ ಸ್ಕಿಲ್‌ಗಳಿಗೆ ಒತ್ತು ನೀಡಿ. ಟೀಮ್‌ವರ್ಕ್‌ನಂತಹ ಪರಸ್ಪರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ.


16. ಫೀಡ್‌ಬ್ಯಾಕ್‌ಗಳನ್ನು ಪಡೆದಿಕೊಳ್ಳಿ. ಟೀಕೆಗಳನ್ನು ಪಡೆದರೆ ಸುಧಾರಣೆ ಮಾಡಿಕೊಳ್ಳಿ.


17. ಕೆಲಸ-ಜೀವನದ ಸಮತೋಲನವನ್ನು ಕಾಪಾಡಿಕೊಳ್ಳಿ. ಸೆಲ್ಫ್‌ ಕೇರ್‌ ಬಗ್ಗೆ ಆದ್ಯತೆ ನೀಡಿ.


18 .ಪೂರ್ವಭಾವಿಯಾಗಿ ತಯಾರಿ ಮಾಡಿ. ವೃತ್ತಿ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ.


19. ನೀವು ಊಹೆ ಮಾಡಿರದ ಪರಿಸ್ಥಿತಿಗಳನ್ನು, ಕಷ್ಟಕರ ಸನ್ನಿವೇಶಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿ.


20. ಮೌಲ್ಯಗಳಿಗೆ ನಿಷ್ಠರಾಗಿರಿ. ವೈಯಕ್ತಿಕ ನೀತಿಗಳೊಂದಿಗೆ ವೃತ್ತಿ ಆಯ್ಕೆ ಮಾಡಿ.




ಅಂದಹಾಗೆ GPT-4 ಎಂಬುದು OpenAI ನಿಂದ ರಚಿಸಲ್ಪಟ್ಟ ದೊಡ್ಡ ಭಾಷಾ ಮಾದರಿಯಾಗಿದ್ದು, ಇದನ್ನು ಮಾರ್ಚ್ 14 ರಂದು ಪ್ರಾರಂಭಿಸಲಾಯಿತು. GPT-3 ಗೆ ಹೋಲಿಸಿದರೆ GPT-4 ಪ್ರತಿಕ್ರಿಯೆಯಲ್ಲಿ ವೇಗವಾಗಿರುತ್ತದೆ. ಹೆಚ್ಚು ಸೂಕ್ಷ್ಮವಾದ ಸೂಚನೆಗಳನ್ನು ನಿಭಾಯಿಸುತ್ತದೆ. ಒಟ್ಟಾರೆಯಾಗಿ ಕೃತಕ ಬುದ್ಧಿಮತ್ತೆಯು ಇಂದಿನ ಕಾಲದ ತಂತ್ರಜ್ಞಾನದ ಅದ್ಭುತಗಳಲ್ಲಿ ಒಂದು ಅಂತಲೇ ಹೇಳಬಹುದು.

top videos
    First published: