ಸಾಮಾನ್ಯವಾಗಿ ಈ ಉದ್ಯೋಗದಾತರು ಸಂದರ್ಶನಗಳಲ್ಲಿ ಕೆಲಸಕ್ಕೆ ಅರ್ಜಿ ಹಾಕಿ ಬಂದ ಅಭ್ಯರ್ಥಿಗಳಲ್ಲಿ (Candidates ) ಯಾವೆಲ್ಲಾ ಗುಣಗಳು ಇವೆ ಎಂದು ನೋಡುತ್ತಾರೆ ಎಂಬುದು ಯಾರಿಂದಾನೂ ಊಹಿಸುವುದಕ್ಕೂ ಸಹ ಸಾಧ್ಯವಾಗುವುದಿಲ್ಲ. ರೆಸ್ಯೂಮ್ನಲ್ಲಿರುವ (Resume) ಸ್ವವಿವರ ಮತ್ತು ಕೆಲಸ ಮಾಡಿದ ಅನುಭವಗಳ (Experience) ಮಾಹಿತಿಯನ್ನು ಹೊರತುಪಡಿಸಿ, ಉದ್ಯೋಗ (Job) ನೀಡುವವರು ಉದ್ಯೋಗಿಯಲ್ಲಿರುವ ಇತರೆ ಕೌಶಲ್ಯಗಳ ಪರೀಕ್ಷಿಸುತ್ತಾರೆ. ಈ ಬಗ್ಗೆ ಗೂಗಲ್ನಲ್ಲಿ ದಶಕದ ಕಾಲ ಕಾರ್ಯನಿರ್ವಹಿಸಿದ ಅನುಭವವುಳ್ಳ ಕ್ಲೇರ್ ಹ್ಯೂಸ್ ಜಾನ್ಸನ್ (Claire Hughes Johnson) ತಾವೂ ಅಭ್ಯರ್ಥಿಗಳಲ್ಲಿ ಗಮನಿಸುತ್ತಿದ್ದ ಪ್ರಮುಖ ಕೌಶಲ್ಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಗೂಗಲ್ನಲ್ಲಿ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದ ಕ್ಲೇರ್ ಹ್ಯೂಸ್ ಜಾನ್ಸನ್
ಪ್ರತಿಷ್ಠಿತಿ ಗೂಗಲ್ ಸಂಸ್ಥೆಯಲ್ಲಿ ಉಪಾಧ್ಯಕ್ಷರಾಗಿ ಕೆಲಸ ಮಾಡಿರುವ ಕ್ಲೇರ್ ಹ್ಯೂಸ್ ಜಾನ್ಸನ್ ಅವರು ತಾವು ಗೂಗಲ್ನಲ್ಲಿ ಇದ್ದಾಗ ಉದ್ಯೋಗಿ ಸಂದರ್ಶನದಲ್ಲಿ ಯಾವೊಂದು ಕೌಶಲ್ಯ ಅಥವಾ ಗುಣವನ್ನು ಹುಡುಕುತ್ತಿದ್ದರು ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ಗೂಗಲ್ನಲ್ಲಿ ಉಪಾಧ್ಯಕ್ಷರಾಗಿ 10 ವರ್ಷಗಳ ಕಾಲ ಕೆಲಸ ಮಾಡಿದ ಕ್ಲೇರ್ ಅವರು ತಮ್ಮ ಸೇವಾ ಅವಧಿಯಲ್ಲಿ ಜಿಮೇಲ್, ಗೂಗಲ್ ಅಪ್ಲಿಕೇಶನ್ಗಳು ಮತ್ತು ಗ್ರಾಹಕ ಕಾರ್ಯಾಚರಣೆಗಳ ಅಂಶಗಳನ್ನು ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. ಕ್ಲೇರ್ ಅವರ ಕೆಲಸದ ಅವಧಿಯಲ್ಲಿ ವಾರಕ್ಕೆ ಸುಮಾರು 40 ಗಂಟೆಗಳ ಕಾಲ ಉದ್ಯೋಗ ಸಂದರ್ಶನಗಳನ್ನು ನಡೆಸಲು ಕಳೆಯಬೇಕಾಗಿತ್ತು. ಇತ್ತೀಚೆಗೆ, ಅವರು ಗೂಗಲ್ನಲ್ಲಿ ಕೆಲಸ ಮಾಡುತ್ತಿದ್ದಾಗ ಹೊಸದಾಗಿ ಕಂಪನಿಗೆ ಸೇರಲು ಬಂದಂತಹ ಉದ್ಯೋಗಿಗಳಲ್ಲಿ ಅವರು ಹುಡುಕುತ್ತಿದ್ದ ಉನ್ನತ ಕೌಶಲ್ಯದ ಬಗ್ಗೆ ಮಾಹಿತಿ ಬಿಟ್ಟಿದ್ದಾರೆ.
ಇದನ್ನೂ ಓದಿ: Tips for Job Seekers : ನೀವು ಬೇಗನೆ ಒಂದೊಳ್ಳೆ ಕೆಲಸ ಹುಡುಕಿಕೊಳ್ಳಬೇಕೆ? ಈ 12 ಸಲಹೆಗಳನ್ನು ಪಾಲಿಸಿ
ಉದ್ಯೋಗಾಕಾಂಕ್ಷಿಗಳಲ್ಲಿ ಕ್ಲೇರ್ ಯಾವ ಗುಣವನ್ನು ಹುಡುಕುತ್ತಿದ್ರು?
" ನಾನು ಯಾವಾಗಲೂ ಎಲ್ಲಕ್ಕಿಂತ ಮೊದಲು ಅಭ್ಯರ್ಥಿಗಳಲ್ಲಿ ಹುಡುಕುತ್ತಿದ್ದ ಪ್ರಮುಖ ಕೌಶಲ್ಯವೆಂದರೆ, ಅವರಲ್ಲಿ ಸ್ವಯಂ ಜಾಗೃತಿ ಎಷ್ಟಿದೆ ಅನ್ನೋದು" ಎಂದು ಜಾನ್ಸನ್ ಸಿಎನ್‌ಬಿಸಿಗೆ ತಿಳಿಸಿದರು.
" ಖಂಡಿತವಾಗಿಯೂ, ನಿಮ್ಮ ಅನುಭವ ಮತ್ತು ಕೌಶಲ್ಯಗಳು ಮುಖ್ಯವಾಗುತ್ತದೆ, ಆದರೆ ಅವುಗಳನ್ನು ಕಂಪನಿಗೆ ಸೇರಿದ ನಂತರವೂ ನೀವು ಕಲಿಯಬಹುದು. ಯಾರಾದರೂ ಹೆಚ್ಚು ಸ್ವಯಂ ಜಾಗೃತಿ ಇರುವಂತಹವರು ಕಲಿಯಲು ಹೆಚ್ಚು ಪ್ರೇರೇಪಿಸಲ್ಪಡುತ್ತಾರೆ, ಏಕೆಂದರೆ ಅವರು ಏನು ಕೆಲಸ ಮಾಡಬೇಕೆಂಬುದರ ಬಗ್ಗೆ ಪ್ರಾಮಾಣಿಕರಾಗಿರುತ್ತಾರೆ. ಅವರು ತಮ್ಮ ಸಹೋದ್ಯೋಗಿಗಳು ಮತ್ತು ವ್ಯವಸ್ಥಾಪಕರೊಂದಿಗೆ ಉತ್ತಮ ಸಂಬಂಧ ಹೊಂದಿರುತ್ತಾರೆ ” ಎಂದು ಕ್ಲೇರ್ ಅವರು ಹೇಳಿದ್ದಾರೆ.
“ ಸ್ವಯಂ ಅರಿವು ಅನ್ನೋದು ಭಾರಿ ಅಪರೂಪದ ಗುಣಲಕ್ಷಣವಾಗಿದೆ. 95 ಪ್ರತಿಶತದಷ್ಟು ಜನರು ತಾವು ಸ್ವಯಂಜಾಗೃತರಾಗಿದ್ದೇವೆ ಎಂದು ಭಾವಿಸಿದರೂ, ಕೇವಲ 10 ರಿಂದ 15 ಪ್ರತಿಶತದಷ್ಟು ಜನರು ಮಾತ್ರ ನಿಜವಾಗಿಯೂ ಸ್ವಯಂ ಜಾಗೃತರಾಗಿರುತ್ತಾರೆ ಎಂದು ಸಂಶೋಧನೆ ತೋರಿಸುತ್ತದೆ " ಎಂದು ಜಾನ್ಸನ್ ಸಿಎನ್‌ಬಿಸಿಗೆ ತಿಳಿಸಿದರು.
ಈ ಎರಡು ಪದಗಳ ಬಳಕೆಯನ್ನ ನೋಡುತ್ತಿದ್ರಂತೆ ಕ್ಲೇರ್
ಗೂಗಲ್ ಕಂಪನಿಯಲ್ಲಿದ್ದಾಗ ಅವರ ಸಂದರ್ಶನದ ಸಮಯದಲ್ಲಿ ಅವರು ಅಭ್ಯರ್ಥಿಗಳನ್ನು ಹೇಗೆ ಮೌಲ್ಯಮಾಪನ ಮಾಡಿದ್ದರು ಎಂಬುದರ ಕುರಿತು ವಿವರಿಸಿದ ಜಾನ್ಸನ್ "ನಾನು ಯಾವಾಗಲೂ ಎರಡು ಪದಗಳ ಬಳಕೆ ಬಗ್ಗೆ ನೋಡುತ್ತೇನೆ.. ಅತಿಯಾಗಿ 'ನಾನು' ಅಂತ ಬಳಸುವವರನ್ನ ಇಷ್ಟಪಡುತ್ತಿರಲಿಲ್ಲ, ನನ್ನ ಪ್ರಕಾರ ಅವರು ವಿನಮ್ರ ಅಥವಾ ಸಹಕಾರ ಮನೋಭಾವ ಹೊಂದಿರುವುದಿಲ್ಲ. ಇನ್ನೂ ಅತಿಯಾಗಿ 'ನಾವು' ಅಂತ ಬಳಸುವ ಜನರನ್ನು ಸಹ ನಾನು ಇಷ್ಟಪಡುತ್ತಿರಲಿಲ್ಲ. ಏಕೆಂದರೆ ನಾವು ಎನ್ನುವವವರಲ್ಲಿ ಅವರ ನಿರ್ಧಿಷ್ಟ ಪಾತ್ರ ಎನೆಂಬುದನ್ನು ಅಸ್ಪಷ್ಟಗೊಳಿಸುತ್ತದೆ. ಹಾಗಾಗಿ ಇವೆರಡರ ಮಧ್ಯೆ ಒಂದು ಸಮತೋಲನ ಇರಬೇಕು ” ಎಂದು ಕ್ಲೇರ್ ಹೇಳಿದ್ದಾರೆ.
ನಾನು ಅವರ ನಿರ್ದಿಷ್ಟ ಪಾತ್ರದ ಬಗ್ಗೆ ಕೇಳಿದಾಗ ನಾನು ಸಾಮಾನ್ಯವಾಗಿ ಕೇಳುತ್ತಿದ್ದ ಉತ್ತರವೆಂದರೆ: ' ಇದು ನನ್ನ ಕಲ್ಪನೆ, ಆದರೆ ಕ್ರೆಡಿಟ್ ಇಡೀ ತಂಡಕ್ಕೆ ಹೋಗುತ್ತದೆ' ಎಂಬುದಾಗಿತ್ತು.
ಉದ್ಯೋಗಿಗಳನ್ನು ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ಹೇಗೆ ವಿವರಿಸುತ್ತಾರೆ ಎಂದು ಅಭ್ಯರ್ಥಿಗಳನ್ನು ಕೇಳುತ್ತಿದ್ದೆ, ಅವರು ಒಳ್ಳೆಯ ಮಾತುಗಳನ್ನು ಮಾತ್ರ ಹೇಳಿದರೆ, ಅವರು ಯಾವ ರೀತಿಯ ನಿರ್ಧಿಷ್ಟ ಪ್ರತಿಕ್ರಿಯೆಯನ್ನು ಪಡೆದ ಬಗ್ಗೆ ಕೇಳುತ್ತಿದ್ದೆ. ಕಲಿಯುವುದಕ್ಕೆ ಮತ್ತು ಸ್ವಯಂ-ಸುಧಾರಣೆಯ ಕಡೆಗೆ ಅವರ ದೃಷ್ಟಿಕೋನವನ್ನು ಪರಿಶೀಲಿಸಲು ಏನು ಮಾಡಿದರು, ಮತ್ತು ಅವರು ಆ ಪ್ರತಿಕ್ರಿಯೆಯನ್ನು ಬದಲಾಯಿಸಿಕೊಳ್ಳುವುದಕ್ಕೆ ಏನೆಲ್ಲಾ ಪ್ರಯತ್ನಗಳನ್ನು ಮಾಡಿದ್ದರು ಎಂದು ಪ್ರಶ್ನಿಸುತ್ತಿದ್ದುದಾಗಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ