ಈ ಎಂಜಿನಿಯರಿಂಗ್ (Engineering) ಓದುತ್ತಿರುವ ಮತ್ತು ಎಂಬಿಎ (MBA) ಓದುತ್ತಿರುವ ವಿದ್ಯಾರ್ಥಿಗಳು ಕೋರ್ಸ್ ಮುಗಿಯುವ ಹಂತಕ್ಕೆ ಬಂದರೆ ಸಾಕು, ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಗಿಟ್ಟಿಸುವ ಗುರಿಯನ್ನು ಇಟ್ಟುಕೊಂಡು ತಮ್ಮ ಕಾಲೇಜಿನಲ್ಲಿ ಬರುವ ಕ್ಯಾಂಪಸ್ ಇಂಟರ್ವ್ಯೂ ಗೆ (Campus Interview) ತಯಾರಿ ನಡೆಸುವುದನ್ನು ನಾವೆಲ್ಲಾ ನೋಡಿರುತ್ತೇವೆ.
ವಿದ್ಯಾರ್ಥಿಗಳು ಈ ಕ್ಯಾಂಪಸ್ ಇಂಟರ್ವ್ಯೂ ನಲ್ಲಿಯೇ ಒಳ್ಳೆಯ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ನೋಡುವುದು ಏಕೆಂದರೆ ಮತ್ತೆ ಕೋರ್ಸ್ ಮುಗಿಸಿದ ನಂತರ ಕೆಲಸಕ್ಕೆ ಅಂತ ಕಂಪನಿಗಳಿಗೆ ರೆಸ್ಯೂಮ್ ಕಳುಹಿಸುತ್ತಾ, ಇಂಟರ್ವ್ಯೂ ಗೆ ಅಲೆಯೋದು ಬೇಡ ಅಂತ ಹೆಚ್ಚಾಗಿ ಕ್ಯಾಂಪಸ್ ಇಂಟರ್ವ್ಯೂ ನಲ್ಲಿಯೇ ಕೆಲಸ ಗಿಟ್ಟಿಸಿಕೊಳ್ಳಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಅವರು ಮಾಡುತ್ತಾರೆ.
ವರ್ಷದ ಈ ಸಮಯಕ್ಕೆ ಪ್ರತಿ ಸಲ ನಾವು ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಇಂತಹ ಒಂದು ದೊಡ್ಡ ಕಂಪನಿ ಕೆಲಸ ನೀಡಿದೆಯಂತೆ ಮತ್ತು ಅವರ ಸಂಬಳದ ಪ್ಯಾಕೇಜ್ ಸಹ ತುಂಬಾನೇ ಜಾಸ್ತಿಯಾಗಿದೆ ಅಂತೆಲ್ಲಾ ಹೇಳುವುದನ್ನು ಈ ಸುದ್ದಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಪೋಸ್ಟ್ ಗಳಲ್ಲಿ ನಾವು ನೋಡುತ್ತೇವೆ.
ಜಿಐಎಂ ವಿದ್ಯಾರ್ಥಿಗೆ ಸಿಕ್ತು ಮೈಕ್ರೋಸಾಫ್ಟ್ ನಲ್ಲಿ ಕೆಲಸ..
ಇಲ್ಲಿಯೂ ಸಹ ಅಂತಹದೇ ಒಂದು ಸುದ್ದಿ ಇದೆ ನೋಡಿ. ಗೋವಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಜಿಐಎಂ) ವಿದ್ಯಾರ್ಥಿ ಹರ್ಷಿತಾ ಬಂತಿಯಾ ಅವರನ್ನು ಮೈಕ್ರೋಸಾಫ್ಟ್ ಕಂಪನಿಯು 55 ಲಕ್ಷ ರೂಪಾಯಿಗಳ ಅತ್ಯಧಿಕ ವೇತನ ಪ್ಯಾಕೇಜ್ ನೀಡುವ ಮೂಲಕ ಕೆಲಸಕ್ಕೆ ನೇಮಕ ಮಾಡಿಕೊಂಡಿದೆ.
ಪಿಜಿಡಿಎಂ ವಿದ್ಯಾರ್ಥಿನಿ ಹರ್ಷಿತಾ ಬಂತಿಯಾ ಕಳೆದ ವರ್ಷ ಈ ಕೋರ್ಸ್ ನ ಸರಾಸರಿ ವೇತನ ಪ್ಯಾಕೇಜ್ 14.66 ಎಲ್‌ಪಿಎ ಆಗಿತ್ತು. ಜಿಐಎಮ್ ಸೇರುವ ಮೊದಲು ಹರ್ಷಿತಾ ಅವರು ಪುಣೆಯಲ್ಲಿ ಸಾಫ್ಟ್‌ವೇರ್ ಡೆವಲಪ್ಮೆಂಟ್ ಎಂಜಿನಿಯರ್ ಆಗಿ ಅಂತರರಾಷ್ಟ್ರೀಯ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು.
ಹರ್ಷಿತಾ ಬಗ್ಗೆ ಏನ್ ಹೇಳಿದೆ ನೋಡಿ ಜಿಐಎಂ..
ಹರ್ಷಿತಾ ಛತ್ತೀಸ್‌ಘಡ್ ದ ಕಾಲೇಜೊಂದರಿಂದ ಬಿ.ಟೆಕ್ ಪದವಿಯನ್ನು ಪಡೆದಿದ್ದಾರೆ. ಹರ್ಷಿತಾ ರಾಯ್‌ಪುರ್ ಮೂಲದವರಾಗಿದ್ದು, ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. "ತನ್ನ ನಿರ್ವಹಣಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ, ಅವಳು ತನ್ನ ಉದ್ಯೋಗವನ್ನು ತೊರೆದು ಆನ್ಲೈನ್ ನಲ್ಲಿ ಎಂಬಿಎ ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸಿದಳು.
ಅವಳು ತನ್ನ ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಳು ಮತ್ತು ಅನೇಕ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಿದಳು" ಎಂದು ಜಿಐಎಂನ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ತಮ್ಮ ಶಿಕ್ಷಣ ಸಂಸ್ಥೆಯ ಬಗ್ಗೆ ಜಿಐಎಂ ನಿರ್ದೇಶಕರು ಹೇಳಿದ್ದೇನು?
ಜಿಐಎಂ ನಿರ್ದೇಶಕರು "ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಶಿಕ್ಷಣದ ವಿಷಯಕ್ಕೆ ಬಂದಾಗ ಜಿಐಎಂ ಶಿಕ್ಷಣ ಉದ್ಯಮದ ಉತ್ಕೃಷ್ಟತೆಯಲ್ಲಿ ಮುಂಚೂಣಿಯಲ್ಲಿದೆ.
ನಮ್ಮ ವಿದ್ಯಾರ್ಥಿಗಳನ್ನು ಪ್ರಜ್ಞಾಪೂರ್ವಕ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಮತ್ತು ಅವರ ವೃತ್ತಿಜೀವನದ ಹಾದಿಯಲ್ಲಿ ಉತ್ಕೃಷ್ಟರಾಗಲು ನಾವು ಪ್ರೋತ್ಸಾಹಿಸುತ್ತೇವೆ. ಪ್ರತಿ ವರ್ಷದಂತೆ, ಈ ವರ್ಷವೂ ನಮ್ಮ ನೇಮಕಾತಿದಾರರ ಪೋರ್ಟ್ಫೋಲಿಯೋ ಮತ್ತು ಉದ್ಯೋಗಗಳಲ್ಲಿ ಅದ್ಭುತ ಬೆಳವಣಿಗೆಯನ್ನು ನಾವು ನೋಡಿದ್ದೇವೆ.
ಇದನ್ನೂ ಓದಿ: Success Story: ರೈತನ ಮಗಳಿಗೆ 65 ಲಕ್ಷ ಸಂಬಳದ ಪ್ಯಾಕೇಜ್; ಪ್ರತಿಭಾವಂತೆ ರಮ್ಯಾಗೆ ಬಂಪರ್ ಆಫರ್
2022 ರಲ್ಲಿ, ನ್ಯಾಷನಲ್ ಕರಿಕುಲಮ್ ರ್ಯಾಂಕಿಂಗ್ ಫ್ರೇಮ್ ವರ್ಕ್ (ಎನ್ಐಆರ್‌ಎಫ್) ನಲ್ಲಿ ಜಿಐಎಂ 36ನೇ ಸ್ಥಾನದಲ್ಲಿದೆ. 2020-21ರ ಶೈಕ್ಷಣಿಕ ವರ್ಷದಲ್ಲಿ, ಈ ಶಿಕ್ಷಣ ಸಂಸ್ಥೆಯಲ್ಲಿ ಓದಿದ 424 ಪದವೀಧರರಲ್ಲಿ 407 ಜನರು ಈ ರೀತಿಯಾಗಿ ಕಂಪನಿಗಳಲ್ಲಿ ಪ್ಲೇಸ್ಮೆಂಟ್ ಗಳನ್ನು ಎಂದರೆ ಕೆಲಸಗಳನ್ನು ಪಡೆದಿದ್ದಾರೆ ಮತ್ತು ಕೆಲಸ ಗಿಟ್ಟಿಸಿಕೊಂಡ ವಿದ್ಯಾರ್ಥಿಗಳ ಸರಾಸರಿ ವೇತನವು 10 ಲಕ್ಷ ರೂಪಾಯಿಯಾಗಿದೆ.
ಮೈಕ್ರೋಸಾಫ್ಟ್ ಕಂಪನಿಯು ಐಐಎಂ ವಿದ್ಯಾರ್ಥಿ ಅವ್ನಿ ಮಲ್ಹೋತ್ರಾ ಅವರನ್ನು ಸಹ ಹೀಗೆ ತುಂಬಾನೇ ದೊಡ್ಡ ಮೊತ್ತದ ಸಂಬಳ ಎಂದರೆ 64.61 ಲಕ್ಷ ರೂಪಾಯಿಗಳ ಪ್ಯಾಕೇಜ್ ನೊಂದಿಗೆ ನೇಮಿಸಿಕೊಂಡಿತ್ತು. ಐಐಎಂ ಸಂಬಲ್ಪುರ್ ತನ್ನ ಟ್ವಿಟ್ಟರ್ ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ