• ಹೋಂ
 • »
 • ನ್ಯೂಸ್
 • »
 • jobs
 • »
 • Carreer Tips: ವೃತ್ತಿಜೀವನದಲ್ಲಿ ಮಹಿಳೆಯರಿಗೆ ಯಶಸ್ಸು ಬೇಕೆಂದರೆ ಈ ಶಿಕ್ಷಣವನ್ನು ಪಡೆಯಿರಿ

Carreer Tips: ವೃತ್ತಿಜೀವನದಲ್ಲಿ ಮಹಿಳೆಯರಿಗೆ ಯಶಸ್ಸು ಬೇಕೆಂದರೆ ಈ ಶಿಕ್ಷಣವನ್ನು ಪಡೆಯಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯಶಸ್ವಿ ಉದ್ಯಮಗಳನ್ನು ನಡೆಸುವ ಮಹಿಳಾ ಉದ್ಯಮಿಗಳು ರಾಷ್ಟ್ರದ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಈ ಸ್ತ್ರೀ ನೇತೃತ್ವದ ಅನೇಕ ಯಶಸ್ವಿ ಉದ್ಯಮಗಳು ಬಹಳಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತಿವೆ. ಈ ಮೂಲಕ ವಿವಿಧ ಕುಟುಂಬಗಳಿಗೆ ಆದಾಯದ ಮೂಲಗಳನ್ನು ಒದಗಿಸುತ್ತಿವೆ.

ಮುಂದೆ ಓದಿ ...
 • Trending Desk
 • 3-MIN READ
 • Last Updated :
 • Share this:

  ಜಗತ್ತಿನಾದ್ಯಂತ ಇಂದು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಇದಕ್ಕೆ ಭಾರತೀಯ ನಾರಿಯರೂ (Indian Womens) ಹೊರತಾಗಿಲ್ಲ. ತಮ್ಮನ್ನು ಹಾಗೂ ಕುಟುಂಬವನ್ನು ಬೆಂಬಲಿಸಲು ವೃತ್ತಿಯನ್ನು, ಉದ್ಯಮವನ್ನು (Industry) ನಡೆಸುತ್ತಿದ್ದಾರೆ. ಈ ಮೂಲಕ ಉದ್ಯಮಶೀಲತೆಯ ಪರಿಸರ ವ್ಯವಸ್ಥೆಯನ್ನು ಬದಲಾಯಿಸುತ್ತಿದ್ದಾರೆ. ಆದ್ರೆ ಉದ್ಯಮ ನಡೆಸುವುದು ಅನ್ನೋದು ಸುಲಭದ ಕೆಲಸವಲ್ಲ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯಮದ ವಿವಿಧ ಅಪಾಯಕಾರಿ ಅಂಶಗಳು, ಹಣಕಾಸು ನಿರ್ವಹಣೆ (Financial Management) ಮತ್ತು ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳುವ ಅಗತ್ಯತೆ, ಅದರ ಬೇಡಿಕೆಗಳು ಮತ್ತು ವ್ಯಾಪಾರ ಮಾದರಿಯನ್ನು ರಚಿಸುವ ಪ್ರಾಮುಖ್ಯತೆ ಮುಂತಾದ ಅಂಶಗಳಲ್ಲಿ ಇಂದಿನ ಮಹಿಳಾ ಉದ್ಯಮಿಗಳು ಪರಿಣಿತರಾಗುತ್ತಿದ್ದಾರೆ.


  ರಾಷ್ಟ್ರದ ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ


  ಯಶಸ್ವಿ ಉದ್ಯಮಗಳನ್ನು ನಡೆಸುವ ಮಹಿಳಾ ಉದ್ಯಮಿಗಳು ರಾಷ್ಟ್ರದ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಈ ಸ್ತ್ರೀ ನೇತೃತ್ವದ ಅನೇಕ ಯಶಸ್ವಿ ಉದ್ಯಮಗಳು ಬಹಳಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತಿವೆ. ಈ ಮೂಲಕ ವಿವಿಧ ಕುಟುಂಬಗಳಿಗೆ ಆದಾಯದ ಮೂಲಗಳನ್ನು ಒದಗಿಸುತ್ತಿವೆ.


  ಅದರಲ್ಲೂ ಇಂಥ ಕಂಪನಿಗಳು ಹೆಚ್ಚಾಗಿ ಇತರ ಮಹಿಳೆಯರನ್ನು ನೇಮಿಸಿಕೊಳ್ಳುತ್ತವೆ. ಅವರ ಕಂಪನಿಗಳಲ್ಲಿ ವಿಭಿನ್ನ ವಿಭಾಗಗಳಲ್ಲಿ ತರಬೇತಿ ನೀಡುತ್ತಿವೆ. ಇದು ಇತರ ಮಹಿಳೆಯರಿಗೆ ಸುಸ್ಥಿರ ಉದ್ಯೋಗವನ್ನು ಪಡೆಯಲು ಮತ್ತು ಅವರ ಕುಟುಂಬಗಳಿಗೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಹಾಯ ಮಾಡಿದೆ.


  ಇದನ್ನೂ ಓದಿ: ವರ್ಕ್ ಫ್ರಮ್ ಹೋಮ್ ಪರಿಸರದಲ್ಲಿ ವೃತ್ತಿಜೀವನಕ್ಕೆ ಆದ್ಯತೆ ನೀಡೋದು ಹೇಗೆ?


  ಮಹಿಳಾ ನೇತೃತ್ವದ ಉದ್ಯಮಗಳು ಹೆಚ್ಚಿನ ಮಹಿಳೆ ಉದ್ಯೋಗಿಗಳಲ್ಲಿ ತಮ್ಮ ಕೌಶಲ್ಯ ಮತ್ತು ಪ್ರತಿಭೆಯ ಬಗ್ಗೆ ವಿಶ್ವಾಸವನ್ನು ನಿರ್ಮಿಸುತ್ತವೆ. ಇದರಿಂದಾಗಿ ಹೆಚ್ಚಿನ ಮಹಿಳೆಯರು ಕಾರ್ಮಿಕ ವಲಯದಲ್ಲಿ ಕೆಲಸ ಮಾಡುವುದರಿಂದ ಅವರ ಕುಟುಂಬದ ಜೀವನಮಟ್ಟವನ್ನು ಸುಧಾರಿಸುತ್ತದೆ. ಹೀಗಾಗಿ ಮಹಿಳಾ ನೇತೃತ್ವದ ಕಂಪನಿಗಳಿಂದಾಗಿ ಉನ್ನತ ಮಟ್ಟದ ಉದ್ಯೋಗದೊಂದಿಗೆ, ರಾಷ್ಟ್ರದ ಆರ್ಥಿಕ ಅಭಿವೃದ್ಧಿಯು ಏರಿಕೆಯಾಗಲಿದೆ ಎನ್ನಬಹುದು.


  ಸಾಂದರ್ಭಿಕ ಚಿತ್ರ


  ಮಹಿಳಾ ಉದ್ಯಮಿಗಳು ಎದುರಿಸುವ ಸವಾಲುಗಳು


  ಗೂಗಲ್ ಮತ್ತು ಬೈನ್ & ಕಂಪನಿಯ ವರದಿಯ ಪ್ರಕಾರ, ಕಳೆದ ದಶಕದಲ್ಲಿ ಮಹಿಳಾ ಒಡೆತನದ ಕಂಪನಿಗಳು 14% ರಿಂದ ಪ್ರಸ್ತುತ 20% ಕ್ಕೆ ಏರಿಕೆಯಾಗಿವೆ.


  ಆದರೆ ಈ ಮಹಿಳಾ ಉದ್ಯಮಿಗಳು ಯಶಸ್ವಿ ವ್ಯವಹಾರಗಳನ್ನು ನಡೆಸಲು ಎದುರಾಗುವ ಮುಖ್ಯವಾದ ಸವಾಲೆಂದರೆ ಹಣಕಾಸಿನದ್ದು. ಉದ್ಯಮ ಕ್ಷೇತ್ರದಲ್ಲಿ ಬೆಳೆಯಲು, ಹೂಡಿಕೆ ಹೆಚ್ಚಿಸಲು ಮತ್ತು ಅದನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವಾಗ ಹಣಕಾಸು ಮತ್ತು ಹಣಕಾಸಿನ ನಿರ್ವಹಣೆಯು ಪ್ರಮುಖ ಸಮಸ್ಯೆಗಳಾಗಿವೆ.


  ಆರ್ಥಿಕ ಶಿಕ್ಷಣದ ಅಗತ್ಯತೆ


  ಉದ್ಯಮ ನಡೆಸಲು ಆರ್ಥಿಕ ಶಿಕ್ಷಣ ಮತ್ತು ತರಬೇತಿ ಅತ್ಯಗತ್ಯ. ಮಹಿಳಾ ನೇತೃತ್ವದ MSME (Ministry of Micro, Small & Medium Enterprises)ಗಳಿಗೆ ಕ್ರೆಡಿಟ್ ಪ್ರವೇಶವು ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಹಾಗಾಗಿ ಬ್ಯಾಂಕಿಂಗ್ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ, ತಮ್ಮ ವ್ಯವಹಾರದ ಬೆಳವಣಿಗೆಗೆ ಹಣವನ್ನು ಹೇಗೆ ಹೂಡಿಕೆ ಮಾಡುವುದು ಮತ್ತು ಅವರ ಕಂಪನಿಯ ಹಣಕಾಸುಗಳನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.


  ಹಣಕಾಸಿನ ಜ್ಞಾನವನ್ನು ಹೊಂದಿರುವುದು ಯಾವುದೇ ವ್ಯವಹಾರಕ್ಕೆ ಅತ್ಯಂತ ಮುಖ್ಯ. ಒಬ್ಬರು ತಮ್ಮ ಬಂಡವಾಳ ಮತ್ತು ಹಂಚಿಕೆಯ ಬಗ್ಗೆ ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ವ್ಯವಹಾರವು ಕುಸಿಯಬಹುದು. ಬಂಡವಾಳವನ್ನು ನಿಭಾಯಿಸಲು ಹಣಕಾಸಿನ ಶಿಕ್ಷಣವನ್ನು ಪಡೆಯುವುದರಿಂದ ಹಣಕಾಸನ್ನು ಹೇಗೆ ಹೊಂದಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೇ ಇದರಿಂದ ಮೋಸದ ಸಾಲಗಳು ಮತ್ತು ಭಾರೀ ಬಡ್ಡಿದರಗಳಿಂದ ಮೋಸಹೋಗುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.
  ಒಟ್ಟಾರೆ, ಉದ್ಯಮವನ್ನು ನಿರ್ಮಿಸುವುದು ಒಂದೆಡೆಯಾದರೆ ಅದನ್ನು ಬೆಳೆಸುವುದು ಮತ್ತು ವಿಸ್ತರಿಸುವುದು ಇನ್ನೂ ಕಷ್ಟಕರವಾದ ಕೆಲಸ. ಉದ್ಯಮವನ್ನು ಯಶಸ್ವಿಗೊಳಿಸುವಲ್ಲಿ ಹಣಕಾಸು ಮತ್ತು ಹೂಡಿಕೆಗಳು ಪ್ರಮುಖ ಪಾತ್ರವಹಿಸುತ್ತವೆ. ಹಣಕಾಸಿನ ಪ್ರಪಂಚದ ಜ್ಞಾನವನ್ನು ಪಡೆಯುವುದು ಉದ್ಯಮಕ್ಕೆ ಬಲವಾದ ಅಡಿಪಾಯ ನಿರ್ಮಿಸಲು ಮತ್ತು ಯಶಸ್ವಿಯಾಗಿ ನಿಭಾಯಿಸಲು ಸಹಾಯ ಮಾಡುತ್ತದೆ. ಇದು ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ.

  Published by:Prajwal B
  First published: