ಐಐಎಮ್ ಲಕ್ನೋ (IIM Lucknow) ಕ್ರಿಯಾತ್ಮಕತೆಗೆ ಉತ್ತೇಜನ ನೀಡುವ ಸಂಸ್ಥೆ ಎಂದೆನಿಸಿದ್ದು ಅತ್ಯುತ್ತಮ ನೀತಿ ನಿಯಮಗಳೊಂದಿಗೆ ಯುವ ನಾಯಕರುಗಳನ್ನು ಪ್ರಬುದ್ಧಗೊಳಿಸುವಲ್ಲಿ ಸಿದ್ಧ ಹಸ್ತ ಎಂದೆನಿಸಿದೆ. ತಮ್ಮ ಕಾಲ ಮೇಲೆ ನಿಂತು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವವರಿಗೆ ಐಐಎಮ್ ಲಕ್ನೋ ಸೂಕ್ತ ಸ್ಥಳವಾಗಿದೆ. ವಿದ್ಯಾರ್ಥಿಗಳು ಸಾಕಷ್ಟು ವೃತ್ತಿ (Career) ಕೌಶಲ್ಯಗಳನ್ನು (Skills) ಹಾಗೂ ಪ್ರಬುದ್ಧತೆಯನ್ನು ವಿದ್ಯಾಲಯದಲ್ಲಿ ಗಳಿಸಬಹುದಾಗಿದ್ದು ಮುಂದಿನ ವೃತ್ತಿಜೀವನದಕ್ಕೆ ಆಧಾರ ಸ್ತಂಭ ಎಂದೆನಿಸಿದೆ.
ಐಐಎಮ್ ಲಕ್ನೋ ಹಲವಾರು ವೃತ್ತಿ ಸಂಬಂಧಿತ ಕೋರ್ಸ್‌ಗಳನ್ನು ಒದಗಿಸುತ್ತಿದ್ದು, ವಿದ್ಯಾರ್ಥಿಗಳು ಈ ಕೋರ್ಸ್‌ಗಳನ್ನು ಮಾಡುವ ಮೂಲಕ ಹೈ ಪ್ಯಾಕೇಜ್ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ.
ಚೀಫ್ ಆಪರೇಶನ್ ಆಫೀಸರ್ ಪ್ರೊಗ್ರಾಮ್
ಐಐಎಮ್ ಲಕ್ನೋ ಒದಗಿಸುವ ಈ ಪ್ರೊಗ್ರಾಮ್ ಇಂದಿನ ಬ್ಯುಸಿನೆಸ್ ಜಗತ್ತಿಗೆ ಸೂಕ್ತವಾಗಿರುವ ಕಲಿಕಾ ವಿಧಾನವಾಗಿದೆ. ಕೋರ್ಸ್‌ನಲ್ಲಿ ಬೇರೆ ಬೇರೆ ವಿಷಯಗಳಿದ್ದು ರಿಸ್ಕ್ ಮ್ಯಾನೇಜ್‌ಮೆಂಟ್, ಸಪ್ಲೈ ಚೈನ್ ಅಪ್ಟಿಮೈಸೇಶನ್, ಆಪರೇಶನ್ಸ್ ಪ್ಲಾನಿಂಗ್ ಹೀಗೆ ಅನೇಕ ವಿಧಗಳಿವೆ. ಮಾರುಕಟ್ಟೆಯ ಹೊಸ ಹೊಸ ಅಪ್‌ಡೇಟ್‌ಗಳೊಂದಿಗೆ ನಿರತವಾಗಿರಲು ಇದು ವಿದ್ಯಾರ್ಥಿಗಳಿಗೆ ಸಹಾಯಕವಾಗಿದೆ.
ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಪ್ರೊಗ್ರಾಮ್
ಐಐಎಮ್ ಲಕ್ನೋ ಒದಗಿಸುವ ಈ ಪ್ರೊಗ್ರಾಮ್ ಆರ್ಗನೈಸೇಶನ್ ಸಂಸ್ಕೃತಿಯನ್ನು ಅಭ್ಯರ್ಥಿಗಳಲ್ಲಿ ಪರಿಚಯಿಸುವಲ್ಲಿ ಸಹಾಯಕವಾಗಿದೆ. ಸಿಇಒ ಆಗಿ ನಾಯಕತ್ವದ ಗುಣಗಳನ್ನು ಬೆಳೆಸಲು ನೆರವನ್ನು ನೀಡುತ್ತದೆ. ಸಂಸ್ಥೆಯಲ್ಲಿ ಸಿಇಒ ಜವಾಬ್ದಾರಿ ಹಾಗೂ ಬಾಧ್ಯತೆಗಳನ್ನು ನೆರವೇರಿಸುವಲ್ಲಿ ಈ ಪ್ರೊಗ್ರಾಮ್ ಸಹಾಯಕವಾಗಿದೆ.
ಚೀಫ್ ಮಾರ್ಕೆಟಿಂಗ್ ಆಫೀಸರ್ ಪ್ರೊಗ್ರಾಮ್
ಸಿಎಮ್‌ಒಗಳ ಗುರಿ ಹಾಗೂ ಉದ್ದೇಶವನ್ನು ಸರಿಯಾಗಿ ಅರ್ಥೈಸುವಲ್ಲಿ ಈ ಪ್ರೊಗ್ರಾಮ್ ಸಹಾಯಕವಾಗಿದೆ. ಆಧುನಿಕ ತಂತ್ರಜ್ಞಾನಗಳು, ಹೊಸ ಹೊಸ ಅಪ್‌ಡೇಟ್‌ಗಳು, ನಿರ್ಧಾರ ತಾಳುವಿಕೆ, ಅನ್ವೇಷಣೆ ಹೀಗೆ ಅಭ್ಯರ್ಥಿಗೆ ಅಗತ್ಯವಾಗಿರುವ ಕೌಶಲ್ಯಗಳನ್ನು ಸಿಎಮ್‌ಒ ಪರಿಚಯಿಸುತ್ತದೆ.
ಫಿನ್‌ಟೆಕ್, ಬ್ಯಾಂಕಿಂಗ್, ರಿಸ್ಕ್ ಮ್ಯಾನೇಜ್‌ಮೆಂಟ್‌ನಲ್ಲಿ ಎಕ್ಸಿಕ್ಯುಟಿವ್ ಪ್ರೊಗ್ರಾಮ್
ರಿಸ್ಕ್ ಮ್ಯಾನೇಜ್‌ಮೆಂಟ್, ನಿರ್ವಹಣೆ ಹಾಗೂ ದೀರ್ಘ ಮಟ್ಟದ ಮೌಲ್ಯ ಅಭಿವೃದ್ಧಿ ಅಂಶಗಳನ್ನು ಅಭ್ಯರ್ಥಿಗಳಲ್ಲಿ ಅಳವಡಿಸಿಕೊಳ್ಳಲು ನೆರವನ್ನು ನೀಡುತ್ತದೆ.
ಬ್ಯಾಕಿಂಗ್, ಫಿನ್‌ಟೆಕ್, ಎನ್‌ಬಿಎಫ್‌ಸಿ ಗಳಲ್ಲಿ ವೃತ್ತಿಪರತೆ ಸುಧಾರಣೆಗೆ ನೆರವನ್ನು ನೀಡುತ್ತದೆ. ಆನ್‌ಲೈನ್ ಸೆಶನ್‌ಗಳ ಮೂಲಕ ಈ ಪ್ರೊಗ್ರಾಮ್ ಕಲಿಕೆಯನ್ನು ಒದಗಿಸುತ್ತದೆ.
ಡಿಜಿಟಲ್ ಟ್ರಾನ್ಸ್‌ಫಾರ್ಮೇಶನ್‌ನಲ್ಲಿ ಎಕ್ಸಿಕ್ಯುಟಿವ್ ಪ್ರೊಗ್ರಾಮ್
ಇಂದಿನ ವ್ಯವಹಾರ ಜಗತ್ತನ್ನು ಟೆಕ್ನಾಲಜಿ ಆಳುತ್ತಿದೆ ಎಂಬುದರಲ್ಲಿ ಅತಿಶಯೋಕ್ತಿ ಏನಿಲ್ಲ. ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ, ಡಿಜಿಟಲ್ ಬ್ಯುಸಿನೆಸ್ ಮಾಡೆಲ್, ಬ್ಯುಸಿನೆಸ್ ಪ್ರಾಕ್ಟೀಸ್ ಇದನ್ನು ಮುನ್ನಡೆಸುತ್ತಿದೆ.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುನ್ನಡೆ ಸಾಧಿಸಲು ಈ ಅಂಶಗಳನ್ನು ಕರಗತ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಎಲ್ಲಾ ರಂಗದಲ್ಲೂ ಸಿದ್ಧಹಸ್ತರಾಗಿರುವುದು ಪ್ರಮುಖ ಅಂಶವಾಗಿದೆ.
ಭಾರತದ ಉನ್ನತ ಮಟ್ಟದ ಮ್ಯಾನೇಜ್‌ಮೆಂಟ್ ಶಿಕ್ಷಣ ಸಂಸ್ಥೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಮ್ ಲಕ್ನೋ) ಮ್ಯಾನೇಜ್‌ಮೆಂಟ್ ವಲಯದಲ್ಲಿ ಹೆಚ್ಚಿನ ತಿಳುವಳಿಕೆ ಹಾಗೂ ಜ್ಞಾನವನ್ನು ಒದಗಿಸುವಲ್ಲಿ ಸಿದ್ಧಹಸ್ತ ಎಂದೆನಿಸಿದೆ. ಪರಿಣಿತ ಅನುಭವಿ ಬೋಧಕ ವರ್ಗ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತದೆ.
ಇದನ್ನೂ ಓದಿ: Success Story: ದಾಖಲೆಯ ಸ್ಯಾಲರಿ ಪ್ಯಾಕೇಜ್ ಪಡೆದು ಇತಿಹಾಸ ಸೃಷ್ಟಿಸಿದ ಸಾಮಾನ್ಯ ವಿದ್ಯಾರ್ಥಿ
ಉಚಿತ ಕೋರ್ಸ್
ಐಐಎಮ್‌ನಲ್ಲಿ ಆನ್‌ಲೈನ್ ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ಮಾಡಬಹುದಾಗಿದ್ದು ಇದು ಉಚಿತವಾಗಿದೆ ಹಾಗೂ ಪೂರ್ಣ ಪ್ರಮಾಣದಲ್ಲಿ ಮತ್ತು ಪಾರ್ಟ್ ಟೈಮ್ ಫಾರ್ಮ್ಯಾಟ್‌ಗಳಲ್ಲಿ ಲಭ್ಯವಿದೆ
ವೃತ್ತಿ ಬೆಳವಣಿಗೆಗೆ ಸರ್ಟಿಫಿಕೇಟ್ ಕೋರ್ಸ್
ವೃತ್ತಿ ಬೆಳವಣಿಗೆಗೆ ಐಐಎಮ್ ಸರ್ಟಿಫಿಕೇಟ್ ಕೋರ್ಸ್‌ಗಳು ನೆರವನ್ನು ನೀಡುತ್ತಿದ್ದು ಈ ವಿದ್ಯಾಲಯದಲ್ಲಿ ಡಿಗ್ರಿ ಪಡೆಯುವುದು ವೃತ್ತಿರಂಗವನ್ನು ಮುನ್ನಡೆಸಲು ಸಹಕಾರಿಯಾಗಿದೆ.
ಉದ್ಯೋಗ ಪ್ಯಾಕೇಜ್ ಹೇಗಿರುತ್ತದೆ?
ಐಐಎಮ್ ಲಕ್ನೋ ಪ್ಲೇಸ್‌ಮೆಂಟ್ 2023 ರ ಪ್ರಕಾರ ಅಂತರಾಷ್ಟ್ರೀಯ ಮಟ್ಟದಲ್ಲಿ ರೂ 65 ಲಕ್ಷ ಪ್ಯಾಕೇಜ್ ಅನ್ನು ಉದ್ಯೋಗಾಂಕ್ಷಿ ಪಡೆದುಕೊಳ್ಳಬಹುದಾಗಿದ್ದು, ಸರಾಸರಿ ಸಂಬಳ ಏರಿಕೆಯು ರೂ 32 ಲಕ್ಷವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ತಗಲುವ ವೆಚ್ಚ
ಐಐಎಮ್ ಹಲವಾರು ಕೋರ್ಸ್‌ಗಳನ್ನು ಆಫರ್ ಮಾಡುತ್ತಿದ್ದು ಬೇರೆ ಥೀಮ್ ಹಾಗೂ ವಿಷಯಗಳನ್ನು ಒಳಗೊಂಡಿರುತ್ತವೆ. ಈ ಕೋರ್ಸ್‌ಗಳಿಗೆ ತಗಲುವ ವೆಚ್ಚ ಅಂದಾಜು ವೆಚ್ಚ ರೂ 3,000,000 ರಿಂದ 7,000,000 ವಾಗಿದೆ. ಐಐಎಮ್ ಗ್ರೇಡ್‌ನಲ್ಲಿ ಸಾಮಾನ್ಯ ಸಂಬಳ ಎಂದರೆ 20 ಲಕ್ಷವಾಗಿದ್ದು ಇದು ಆರಂಭಿಕ ಸಂಬಳವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ