• ಹೋಂ
  • »
  • ನ್ಯೂಸ್
  • »
  • jobs
  • »
  • Game: ಹವ್ಯಾಸದಿಂದ ವೃತ್ತಿಜೀವನದವರೆಗೆ: ಭಾರತದಲ್ಲಿ ಬದಲಾಗುತ್ತಿರುವ ಗೇಮಿಂಗ್‌ ಉದ್ಯಮ!

Game: ಹವ್ಯಾಸದಿಂದ ವೃತ್ತಿಜೀವನದವರೆಗೆ: ಭಾರತದಲ್ಲಿ ಬದಲಾಗುತ್ತಿರುವ ಗೇಮಿಂಗ್‌ ಉದ್ಯಮ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸುಮಾರು 420 ಮಿಲಿಯನ್ ಡೈನಾಮಿಕ್ ಗೇಮರ್‌ಗಳು ಮತ್ತು 15 ರಿಂದ 35ವರ್ಷ ವಯಸ್ಸಿನ 500 ಮಿಲಿಯನ್ ಡಿಜಿಟಲ್ ಸಕ್ರಿಯ ಪ್ರೇಕ್ಷಕರನ್ನು ಹೊಂದಿದೆ. ಹಾಗಾಗಿ ಭಾರತವು ಈಗ ಜಾಗತಿಕ ಗೇಮಿಂಗ್ ಉದ್ಯಮದಲ್ಲಿ ವೇಗವಾಗಿ ಬೆಳೆಯುತ್ತಿರುವ ವಲಯಗಳಲ್ಲಿ ಒಂದಾಗಲು ಸಿದ್ಧವಾಗಿದೆ ಎನ್ನಬಹುದು.

  • Trending Desk
  • 5-MIN READ
  • Last Updated :
  • Share this:

ವಿಶ್ವದಾದ್ಯಂತ ಆವರಿಸಿದ್ದ ಕೊರೋನಾ (Covid) ಸಾಂಕ್ರಾಮಿಕದ ನಂತರದ ಎಲ್ಲೆಡೆ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದೆ. ಮಕ್ಕಳಿಂದ ವೃದ್ಧರವರೆಗೆ ಮೊಬೈಲ್‌ ನೋಡುವುದು, ಗೇಮ್‌ ಆಡುವುದೂ ಸಾಮಾನ್ಯವಾಗಿದೆ. ಸಾಕಷ್ಟು ಜನರು ಹೆಚ್ಚಾದ ಸಾಮಾಜಿಕ ಜಾಲತಾಣಗಳ (Social Media) ಬಳಕೆಯಿಂದ ವೃತ್ತಿಗಳನ್ನು ಬಿಟ್ಟು ಯುಟ್ಯೂಬರ್‌ ಆಗಿದ್ದಾರೆ. ಇನ್‌ಸ್ಟಾಗ್ರಾಂ ರೀಲ್‌ನಿಂದ ಆದಾಯ ಗಳಿಸುತ್ತಿದ್ದಾರೆ. ಇವುಗಳ ಹಾಗೆಯೇ ಮೊಬೈಲ್‌ನಲ್ಲಿ ಆಟಗಳನ್ನು ಆಡುವುದು ಹೆಚ್ಚಾಗಿರುವುದರಿಂದ ಗೇಮಿಂಗ್ (Gaming)‌ ಉದ್ಯಮವೂ ಕೂಡ ವೇಗವಾಗಿ ಬೆಳೆಯುತ್ತಿದೆ. ಹೌದು, ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಗೇಮಿಂಗ್‌ ಉದ್ಯಮವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಇದು ಸುಮಾರು 420 ಮಿಲಿಯನ್ ಡೈನಾಮಿಕ್ ಗೇಮರ್‌ಗಳು ಮತ್ತು 15 ರಿಂದ 35ವರ್ಷ ವಯಸ್ಸಿನ 500 ಮಿಲಿಯನ್ ಡಿಜಿಟಲ್ ಸಕ್ರಿಯ ಪ್ರೇಕ್ಷಕರನ್ನು ಹೊಂದಿದೆ. ಹಾಗಾಗಿ ಭಾರತವು ಈಗ ಜಾಗತಿಕ ಗೇಮಿಂಗ್ ಉದ್ಯಮದಲ್ಲಿ ವೇಗವಾಗಿ ಬೆಳೆಯುತ್ತಿರುವ ವಲಯಗಳಲ್ಲಿ ಒಂದಾಗಲು ಸಿದ್ಧವಾಗಿದೆ ಎನ್ನಬಹುದು.


ಭಾರತದಲ್ಲಿ ಗೇಮಿಂಗ್‌ ಉದ್ಯಮ


ವಿಶ್ವದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆಯನ್ನು ಹೊಂದಿರುವ ಭಾರತವು ಗೇಮಿಂಗ್ ಉದ್ಯಮದಲ್ಲಿ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗುವ ನಿರೀಕ್ಷೆಯಿದೆ. ವಿವಿಧ ವರದಿಗಳ ಪ್ರಕಾರ ಜಾಗತಿಕ ಗೇಮಿಂಗ್ ವಲಯವು 2025 ರ ವೇಳೆಗೆ ಮೂರು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.


ಭಾರತದ ಮೊಬೈಲ್ ಗೇಮಿಂಗ್ ವಲಯದ ಕುರಿತು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಮತ್ತು ಸಿಕ್ವೊಯಾ ನೀಡಿದ ವರದಿಯು 300 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯರು ಮೊಬೈಲ್ ಆಟಗಳನ್ನು ಆಡುತ್ತಾರೆ ಎಂದಿದೆ.


ಮಾಧ್ಯಮ ವರದಿಗಳ ಪ್ರಕಾರ, 5G, ಕ್ಲೌಡ್ ಗೇಮಿಂಗ್ ಮತ್ತು ಪೋರ್ಟಬಲ್ ಗೇಮಿಂಗ್ ಸಾಧನಗಳ ಅಳವಡಿಕೆಯಿಂದ ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ಬೆಳವಣಿಗೆಯ ಮುಂದಿನ ಹಂತವನ್ನು ಎರಡನೇ ಇಂಡಿಯಾ ಗೇಮಿಂಗ್ ಕಾನ್ಫರೆನ್ಸ್ 2022 ರಲ್ಲಿ ಹೈಲೈಟ್ ಮಾಡಲಾಗಿದೆ.


2022ರಲ್ಲಿ ಹೊರಹೊಮ್ಮಿದ ಹೊಸ ಟ್ರೆಂಡ್‌ಗಳೊಂದಿಗೆ ಗೇಮಿಂಗ್ ಉದ್ಯಮವು ರೂಪಾಂತರಕ್ಕೆ ಒಳಗಾಗಲು ಸಿದ್ಧವಾಗಿದೆ. 2023 ಕೌಶಲ್ಯ ಆಧಾರಿತ ಗೇಮಿಂಗ್ ವಲಯದಲ್ಲಿ ತಾಂತ್ರಿಕ ಪ್ರಗತಿಯ ವರ್ಷವಾಗಿದೆ. ಅಲ್ಲದೇ ವರ್ನಾಕ್ಯುಲರ್ ಗೇಮಿಂಗ್ ಸಹ ಪ್ರಾರಂಭವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.


ಇಸ್ಪೋರ್ಟ್ಸ್ ಮತ್ತು ಕನ್ಸೋಲ್ ಗೇಮಿಂಗ್


ಭಾರತೀಯ ಇಸ್ಪೋರ್ಟ್ಸ್ ಉದ್ಯಮವನ್ನು ಭಾರತ ಸರ್ಕಾರವು ಬಹು-ಕ್ರೀಡಾ ಕಾರ್ಯಕ್ರಮಗಳ ಮಹತ್ವದ ಭಾಗವಾಗಿ ಗುರುತಿಸಿದೆ. ಇದನ್ನು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಮೇಲ್ವಿಚಾರಣೆ ಮಾಡುತ್ತದೆ. 2022 ರ $1.1 ಶತಕೋಟಿಗೆ ಹೋಲಿಸಿದರೆ ಮಾರ್ಚ್ 2027 ರ ವೇಳೆಗೆ ಇಸ್ಪೋರ್ಟ್ಸ್ ಉದ್ಯಮವು $4 ಬಿಲಿಯನ್‌ಗೆ ಬೆಳೆಯುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ಹೇಳುತ್ತವೆ.


ಇನ್ನು, ಕನ್ಸೋಲ್ ಗೇಮಿಂಗ್ ಇತ್ತೀಚೆಗೆ ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ಕ್ಲೌಡ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಪರಿಚಯವು ಗೇಮಿಂಗ್ ಉದ್ಯಮದ ಅಭಿವೃದ್ಧಿಗೆ ಕಾರಣವಾಗಿವೆ.


ಇದನ್ನೂ ಓದಿ: ಲುಡೋ ಗೇಮ್‌ ಆಡ್ತಾ ಹುಟ್ಟಿಕೊಂಡೇ ಬಿಡ್ತು ಪ್ರೀತಿ, ಪ್ರಿಯಕರನನ್ನು ಮದುವೆಯಾಗಲು ಭಾರತಕ್ಕೆ ಬಂದ ಪಾಕ್‌ ಹುಡುಗಿ!


ಅಂದಹಾಗೆ ಇದಕ್ಕೆ ವೇಗವಾಗಿ ಬೆಳೆಯುತ್ತಿರುವ ಯುವ ಜನಸಂಖ್ಯೆ, ವ್ಯಾಪಕವಾದ ಸ್ಮಾರ್ಟ್‌ಫೋನ್ ಬಳಕೆ, ಕಡಿಮೆ ಬೆಲೆಯಲ್ಲಿ ಸಿಗುತ್ತಿರುವ ಡೇಟಾ ಪ್ಲಾನ್ ಮುಂತಾದ ಸಂಗತಿಗಳು ಕಾರಣವಾಗಿವೆ ಎನ್ನಬಹುದು.


ಗೇಮಿಂಗ್‌ ಉದ್ಯಮದಲ್ಲಿ ವೃತ್ತಿ ಮಾರ್ಗ


ಭಾರತೀಯ ವೀಡಿಯೋ ಗೇಮ್ ಉದ್ಯಮವು ಅಭಿವೃದ್ಧಿ ಹೊಂದುತ್ತಿದೆ. ಅನೇಕ ಗೇಮರುಗಳು ಇದನ್ನು ವೃತ್ತಿ ಆಯ್ಕೆಯಾಗಿ ಆರಿಸಿಕೊಳ್ಳುತ್ತಿದ್ದಾರೆ. ಮುಂದಿನ ಪೀಳಿಗೆಯು ಅದನ್ನು ಪೂರ್ಣ ಪ್ರಮಾಣದ ವೃತ್ತಿಯಾಗಿ ಯಶಸ್ವಿಯಾಗಿ ಆಯ್ಕೆ ಮಾಡಬಹುದು. ಭಾರತೀಯ ಗೇಮಿಂಗ್ ಉದ್ಯಮವು 2023 ರಲ್ಲಿ 10,000-12,000 ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಉದ್ಯಮ ತಜ್ಞರು ಭವಿಷ್ಯ ನುಡಿದಿದ್ದಾರೆ.


ಲೈವ್ ಸ್ಟ್ರೀಮಿಂಗ್‌ನ ಸಾಮಾಜಿಕ ಪರಿಣಾಮ ಸಾಮಾಜಿಕ ಮಾಧ್ಯಮಗಳಲ್ಲಿ ಮೀಸಲಾದ ಸ್ಟ್ರೀಮಿಂಗ್ ಚಾನಲ್‌ಗಳ ಮೂಲಕ ವೀಕ್ಷಕರು ನೇರವಾಗಿ ಗೇಮರ್‌ಗಳು ಮತ್ತು ತಂಡಗಳೊಂದಿಗೆ ಸಂವಹನ ನಡೆಸಬಹುದು.


ಕೋವಿಡ್‌ ಸಾಂಕ್ರಾಮಿಕ, ಸ್ಮಾರ್ಟ್‌ಫೋನ್‌ಗಳ ವ್ಯಾಪಕ ಬಳಕೆ, ಕೈಗೆಟುಕುವ ಡೇಟಾ ಯೋಜನೆಗಳು ಮೊಬೈಲ್‌ ಗೇಮ್‌ ಆಡುವವರ ಸಂಖ್ಯೆಯನ್ನು ಹೆಚ್ಚು ಮಾಡಿದೆ.


ಈ ಉದ್ಯಮದ ಅಭೂತಪೂರ್ವ ಬೆಳವಣಿಗೆಯನ್ನು ನೋಡಿದರೆ, 5G, 360-ಡಿಗ್ರಿ ವೀಡಿಯೊ, ವರ್ಧಿತ ಮತ್ತು ವರ್ಚುವಲ್ ರಿಯಾಲಿಟಿಗಳು (AR ಮತ್ತು VR), ಮತ್ತು Web3 ನಂತಹ ತಂತ್ರಜ್ಞಾನದ ಅಳವಡಿಕೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಅಲ್ಲದೇ 5G ನೆಟ್‌ವರ್ಕ್‌ ಭಾರತದಲ್ಲಿನ ಗೇಮಿಂಗ್ ಉದ್ಯಮದ ಮೇಲೆ ಗಮನಾರ್ಹ ಪರಿಣಾಮ ಬೀರುವ ನಿರೀಕ್ಷೆಯಿದೆ. ಆದ್ದರಿಂದ ಆಧುನಿಕ ಭಾರತದಲ್ಲಿ ಗೇಮಿಂಗ್ ಉದ್ಯಮವು ಹವ್ಯಾಸವಾಗಿ ಮತ್ತು ಲಾಭದಾಯಕ ವೃತ್ತಿಯಾಗಿ ಬೆಳೆಯುತ್ತಿದೆ ಅನ್ನೋದಂತೂ ಇದರಿಂದ ಸ್ಪಷ್ಟವಾಗಿದೆ.

First published: