• ಹೋಂ
  • »
  • ನ್ಯೂಸ್
  • »
  • Jobs
  • »
  • AI, ChatGPT ಯುಗದಲ್ಲಿ ನಿಮ್ಮ ವೃತ್ತಿಯನ್ನು ಉಳಿಸಿಕೊಳ್ಳಲು ಸ್ಕಿಲ್ಸ್ ಅನ್ನು ಸುಧಾರಿಸಿಕೊಳ್ಳುವುದು ಹೇಗೆಂದು ತಿಳಿಯಿರಿ

AI, ChatGPT ಯುಗದಲ್ಲಿ ನಿಮ್ಮ ವೃತ್ತಿಯನ್ನು ಉಳಿಸಿಕೊಳ್ಳಲು ಸ್ಕಿಲ್ಸ್ ಅನ್ನು ಸುಧಾರಿಸಿಕೊಳ್ಳುವುದು ಹೇಗೆಂದು ತಿಳಿಯಿರಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಯಂತ್ರಗಳ ಅಗತ್ಯಕ್ಕಿಂತ ಉದ್ಯೋಗಿಗಳ ಅಗತ್ಯತೆ ಹೆಚ್ಚಾಗುತ್ತಿದೆ ಎಂಬ ಆಶಾಭಾವನೆಯನ್ನು ಬಿಟ್ಟುಕೊಡಬೇಡಿ. ಆ ನಿಟ್ಟಿನಲ್ಲಿ ಕೌಶಲ್ಯಗಳನ್ನು ಕಲಿಯುತ್ತಿರಿ.

  • Share this:

ಕೃತಕ ಬುದ್ಧಿಮತ್ತೆ (Artificial intelligence) ಅದರಲ್ಲೂ ನಿರ್ದಿಷ್ಟವಾಗಿ ಚಾಟ್‌ ಜಿಪಿಟಿ ಇದರ ( ChatGPT) ನಂತರ ಆವೃತ್ತಿ ಎಂದೆನಿಸಿರುವ ಜಿಪಿಟಿ – 4 ಇಂದು ಬ್ಯುಸಿನೆಸ್, ಶಿಕ್ಷಣ, ತಂತ್ರಜ್ಞಾನ ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ಪ್ರಗತಿ ಸಾಧಿಸುತ್ತಿದೆ ಅಂತೆಯೇ ಗೂಗಲ್, ಫೇಸ್‌ಬುಕ್, ಅಮೆಜಾನ್ ಮೊದಲಾದ ಟೆಕ್ ಕಂಪನಿಗಳು ಕೂಡ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಅನೇಕ ಸಂಶೋಧನೆಗಳನ್ನು ನಡೆಸುತ್ತಿವೆ.


ಚಾಟ್‌ಜಿಪಿಟಿ ಉದ್ಯೋಗಿಗಳನ್ನೇ ಸ್ಥಳಾಂತರಿಸಬಲ್ಲದೇ?


ಇನ್ನು ಮುಂದಿನ ದಿನಗಳಲ್ಲಿ ಮಾನವರ ಸ್ಥಾನವನ್ನು ಈ ಕೃತಕ ಬುದ್ಧಿಮತ್ತೆ ಚಾಟ್‌ಜಿಪಿಟಿ ಆಕ್ರಮಿಸಿಕೊಳ್ಳಲಿದೆ ಎಂಬ ಭಯ ಕೂಡ ಇದ್ದೇ ಇದೆ ಏಕೆಂದರೆ ಅಷ್ಟೊಂದು ಪ್ರಗತಿಪರ ಮಟ್ಟದಲ್ಲಿ ಈ ತಂತ್ರಜ್ಞಾನ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಬಳಕೆಯಾಗುತ್ತಿದೆ. ವೃತ್ತಿಪರ ಮಟ್ಟದಲ್ಲಿ ಕಲೆ ಹಾಗೂ ವಿನ್ಯಾಸವನ್ನು ರೂಪಿಸಬಹುದು ಎಂಬುದನ್ನು ತೋರಿಸಿದ್ದು ಲೇಖನ ಹಾಗೂ ಎಡಿಟಿಂಗ್ ಕೆಲಸವನ್ನು ಎಐ ಮಾಡುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ.


ಯಂತ್ರಗಳನ್ನು ಮೀರಿಸುವ ಕೌಶಲ್ಯಗಳನ್ನು ಹೊಂದುವುದು


ಹಾಗಿದ್ದರೆ ಯಂತ್ರಗಳು ಮಾಡುವಂತಹ ಅದೇ ಕೌಶಲ್ಯಗಳನ್ನು ಮಾನವರು ಕೂಡ ಮಾಡಬಹುದು ಎಂಬುದನ್ನು ಪ್ರದರ್ಶಿಸುವ ಕಾಲ ಸನ್ನಿಹಿತವಾಗಿದೆ. ಏಕೆಂದರೆ ಮುಂದೊಂದು ದಿನ ಯಂತ್ರಗಳೇ ಉದ್ಯೋಗಿಗಳ ಸ್ಥಾನವನ್ನು ಆಕ್ರಮಿಸಿದರೆ ಮಾನವ ಸಂಪನ್ಮೂಲದ ಅಗತ್ಯತೆಯೇ ಬೇಕಾಗಿರುವುದಿಲ್ಲ ಹಾಗಾಗಿ ಕೃತಕ ಬುದ್ಧಿಮತ್ತೆಯನ್ನು ಮೀರಿಸುವ ಕೌಶಲಗಳನ್ನು ಉದ್ಯೋಗಿಗಳು ಹೊಂದಿರುವುದು ಅನಿವಾರ್ಯವಾಗಿದೆ.


Artificial Intelligence
ಸಾಂದರ್ಭಿಕ ಚಿತ್ರ


ಊಹಾತ್ಮಕವಾಗಿ ಯೋಚಿಸುವುದನ್ನು ನಿಲ್ಲಿಸಿ


ಇನ್ನು ಮುಂದೆ ಕೃತಕ ಬುದ್ಧಿಮತ್ತೆ ಅಥವಾ ಚಾಟ್‌ಜಿಪಿಟಿಯೇ ಮುಂದುವರಿಯಲಿದೆ ಎಂಬ ಊಹೆಯನ್ನು ಕೈಬಿಡಿ. ಏಕೆಂದರೆ ಮಾನವ ಬುದ್ಧಿವಂತಿಕೆ ಎಂಬುದು ಯಂತ್ರದ ಬುದ್ಧಿವಂತಿಕೆಯಿಂದ ಹೆಚ್ಚು ಪ್ರಖರ ಎಂದೆನಿಸಿದ್ದು ಆ ಸಮಯದಲ್ಲಿ ಕೆಲವೊಂದು ಪರಿಹಾರಗಳನ್ನೊದಗಿಸಲು ಮಾನವರ ಸಹಾಯ ಅಗತ್ಯವಿರುತ್ತದೆ.


ನಿಮ್ಮ ಕ್ಷೇತ್ರದಲ್ಲಿ ನೀವು ಪ್ರಗತಿ ಸಾಧಿಸಿದಷ್ಟೂ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಯಂತ್ರಗಳ ಅಗತ್ಯಕ್ಕಿಂತ ಉದ್ಯೋಗಿಗಳ ಅಗತ್ಯತೆ ಹೆಚ್ಚಾಗುತ್ತಿದೆ ಎಂಬ ಆಶಾಭಾವನೆಯನ್ನು ಬಿಟ್ಟುಕೊಡಬೇಡಿ.


ಯಂತ್ರಗಳು ಅನುಕರಿಸಲು ಶ್ರಮಿಸುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು


ಎಐ ಮಾನವರ ಕೌಶಲ್ಯ ಹಾಗೂ ಸಾಮರ್ಥ್ಯಗಳನ್ನು ಪ್ರದರ್ಶಿಸುವಷ್ಟು ನಿಷ್ಣಾತವಾಗಿಲ್ಲ. ಯಂತ್ರಗಳು ಮಾನವರಿಗಿದ್ದ ಭಾವನೆಗಳನ್ನು ಹೊರಹಾಕುವಲ್ಲಿ ಸಮರ್ಥವಾಗಿಲ್ಲ ಅಂತೆಯೇ ಕೆಲಸದ ವಿಷಯದಲ್ಲಿ ಕೂಡ ಭಾವನಾತ್ಮಕವಾಗಿ ಸಂಯೋಜನೆಗೊಂಡು ಮನುಷ್ಯರಂತೆ ಯಂತ್ರಗಳು ಕೆಲಸ ಮಾಡಲಾರವು ಎಂಬುದು ಧನಾತ್ಮಕ ಅಂಶವಾಗಿದೆ.


ವೈಯಕ್ತಿಕ ಅಂಶಗಳನ್ನೇ ಸುಧಾರಿಸುವುದು


AI ಪರಿಕರಗಳು ಸಾಕಷ್ಟು ಗುಣಮಟ್ಟದ ಅಂಶವನ್ನು ತಲುಪಿವೆ. ಮಾರುಕಟ್ಟೆ ಸ್ಥಳಗಳಲ್ಲಿ ಕೂಡ ಉದ್ಯೋಗಿಗಳನ್ನು ಕೈಬಿಟ್ಟು ಇಂದು ಎಐ ಸ್ಥಾನ ಪಡೆದುಕೊಳ್ಳುತ್ತಿದೆ. AI ಉನ್ನತ ಮಟ್ಟದ ವೃತ್ತಿಪರರೊಂದಿಗೆ ಗುಣಮಟ್ಟವನ್ನು ಹೊಂದಬಹುದು ಅದಾಗ್ಯೂ ಆ ಉದ್ಯಮದ ಅನುಭವಸ್ಥರನ್ನು ಯಂತ್ರಗಳಿಗೆ ಸ್ಥಳಾಂತರಿಸಲು ಸಾಧ್ಯವಿಲ್ಲ ಎಂಬುದು ನಿಜವಾಗಿದೆ. ಯಂತ್ರಗಳನ್ನು ಬಳಸಿಕೊಂಡು ಮಾಡುವ ಕೆಲವೊಂದು ಕೆಲಸಗಳಿಗೆ ಮಾತ್ರವೇ ಎಐ ಅಗತ್ಯವಾಗಿದ್ದು ಇನ್ನುಳಿದ ಕೆಲಸಗಳಿಗೆ ಉದ್ಯೋಗಿಗಳೇ ಅಗತ್ಯವಾಗಿರುತ್ತಾರೆ ಎಂಬುದು ಉದ್ಯಮ ಕ್ಷೇತ್ರದ ಪರಿಣಿತರ ಮಾತಾಗಿದೆ. ಮನುಷ್ಯರೇ ಇಲ್ಲದೆ ಬರಿಯ ಯಂತ್ರಗಳಿಂದಲೇ ಕೆಲಸ ಮಾಡಿಸಿಕೊಳ್ಳುವ ಪರಿಸ್ಥಿತಿ ಬಂದೊದಗುವುದಿಲ್ಲ ಎಂಬುದು ಪರಿಣಿತರ ಮಾತಾಗಿದೆ.




ಯಂತ್ರಗಳು ಮಾಡುವ ಕೆಲಸವನ್ನು ಯಂತ್ರಗಳೇ ಮಾಡಬೇಕು ಅಂತೆಯೇ ಮನುಷ್ಯರ ಬುದ್ಧಿವಂತಿಕೆ ಹಾಗೂ ಕೌಶಲಗಳನ್ನು ಬಳಸಿಕೊಂಡು ಮಾಡುವ ಕೆಲಸವನ್ನು ಮನುಷ್ಯರೇ ಮಾಡಬೇಕು ಎಂಬುದು ಉದ್ಯಮ ತಜ್ಞರ ಮಾತಾಗಿದೆ.


ಪರಿಣಿತಿಯನ್ನು ಬೆಳೆಸಿಕೊಳ್ಳುವುದು


GPT-4 ಮತ್ತು ಇತರ AI ತಂತ್ರಜ್ಞಾನಗಳು ಅದ್ಭುತ ಸಂಶೋಧನೆ ಹಾಗೂ ಪ್ರಗತಿ ಎಂದೆನಿಸಿದ್ದರೂ ಅವು ಪ್ರತೀ ಬಾರಿ ನಿಖರವಾದ ಫಲಿತಾಂಶವನ್ನೇ ನೀಡುತ್ತವೆ ಎಂಬುದು ಖಾತ್ರಿಯಿಲ್ಲದ ಮಾತಾಗಿದೆ. ಹಾಗಾಗಿಯೇ ಉದ್ಯೋಗಿ ತನ್ನ ಕ್ಷೇತ್ರದಲ್ಲಿ ಮಾನ್ಯವಾಗಿರುವ ಪರಿಣಿತಿಯನ್ನು ಹೊಂದುವುದು ಅಗತ್ಯವಾಗಿರುತ್ತದೆ.


ಇದನ್ನೂ ಓದಿ: Highest Paying Careers: ಭಾರತದಲ್ಲಿ ಹೆಚ್ಚು ಸಂಬಳ ಬೇಕೆಂದರೆ ನಿಮ್ಮ ಉದ್ಯೋಗ ಆಯ್ಕೆ ಹೀಗಿರಲಿ

top videos


    ಯಂತ್ರಗಳು ಯಾವುದೇ ಉತ್ಪನ್ನವನ್ನು ತಯಾರಿಸಿದರೂ ಅದನ್ನು ಪರಿಶೀಲಿಸಲು ಮಾನವರ ಕೌಶಲ್ಯ ಹಾಗೂ ಅನುಭವ ಬೇಕೇ ಬೇಕು. ಹಾಗಾಗಿ ಕೃತಕ ಬುದ್ಧಿಮತ್ತೆ ತಯಾರಿಸಿದ ಯಾವುದೇ ಉತ್ಪನ್ನವನ್ನು ಪರಿಶೀಲಿಸಲು ಉದ್ಯೋಗಿಗಳ ಅಗತ್ಯ ಇದ್ದೇ ಇರುತ್ತದೆ.

    First published: