• ಹೋಂ
  • »
  • ನ್ಯೂಸ್
  • »
  • Jobs
  • »
  • Post Graduation: ಡಬಲ್ ಡಿಗ್ರಿ ಮಾಡೋದಾದ್ರೆ ಈ 4 PG ಕೋರ್ಸ್​ಗಳು ಬೆಸ್ಟ್; ದೊಡ್ಡ ಸಂಬಳ ಸಿಗೋದು ಪಕ್ಕಾ

Post Graduation: ಡಬಲ್ ಡಿಗ್ರಿ ಮಾಡೋದಾದ್ರೆ ಈ 4 PG ಕೋರ್ಸ್​ಗಳು ಬೆಸ್ಟ್; ದೊಡ್ಡ ಸಂಬಳ ಸಿಗೋದು ಪಕ್ಕಾ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಮಾಸ್ಟರ್‌ ಡಿಗ್ರಿ ಪಡೆಯುವ ಮೂಲಕ ಅಭ್ಯರ್ಥಿಗಳು  ಕೌಶಲ್ಯ, ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ವೃತ್ತಿ ಜೀವನದಲ್ಲಿ ಸಕ್ಸಸ್‌ ಕಾಣಲು ಸಹ ಸ್ನಾತಕೋತ್ತರ ಪದವಿ ಸಹಾಯ ಮಾಡುತ್ತೆ.

  • Share this:

ಉನ್ನತ ವಿದ್ಯಾಭ್ಯಾಸ (Higher Education) ಎಂದರೆ ಉನ್ನತ ವೃತ್ತಿ ಬೆಳವಣಿಗೆ (Career Growth) ಎಂದರ್ಥ. ನೀವೂ ಸಹ ವೃತ್ತಿ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರೆ ಹಲವಾರು ಮಾರ್ಗಳಿವೆ. ಅವುಗಳಲ್ಲಿ ಒಂದು ಸ್ನಾತಕೋತ್ತರ ಪದವಿ (Post Graduation). ಕೇವಲ ವಿಶ್ವವಿದ್ಯಾನಿಲಯಗಳಿಂದ ಪಡೆಯುವ ಸರ್ಟಿಫಿಕೆಟ್‌ ಅಲ್ಲದೇ ಕೆಲ ಆನ್‌ಲೈನ್‌ ಕಾರ್ಯಕ್ರಮಗಳನ್ನು ಸಹ ತೆಗೆದುಕೊಂಡು ನಾವು ಪಿಜಿ ಕಾರ್ಯಕ್ರಮವನ್ನು ಪೂರ್ಣಗೊಳಿಸಬಹುದು.


ಮಾಸ್ಟರ್‌ ಡಿಗ್ರಿ ಪಡೆಯುವ ಮೂಲಕ ಅಭ್ಯರ್ಥಿಗಳು  ಕೌಶಲ್ಯ, ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ವೃತ್ತಿ ಜೀವನದಲ್ಲಿ ಸಕ್ಸಸ್‌ ಕಾಣಲು ಸಹ ಸ್ನಾತಕೋತ್ತರ ಪದವಿ ಪ್ರಮುಖವಾದ ಪಾತ್ರ ವಹಿಸುತ್ತದೆ. ಹಾಗಾದರೆ ಆನ್‌ಲೈನ್‌ ಅಭ್ಯರ್ಥಿಗಳು ಪಡೆಯಬಹುದಾದ ಪ್ರಮುಖ ಕೋರ್ಸ್‌ಗಳು ಯಾವುವು ನೋಡೋಣ.


ಉತ್ತಮ ಉದ್ಯೋಗವಕಾಶ ಮತ್ತು ವೇತನ ನೀಡುವ ಪಿಜಿ ಪ್ರೋಗ್ರಾಂ


1) ಮೆಟಾ ಬ್ಲೂಪ್ರಿಂಟ್ ಮೂಲಕ ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಸ್ನಾತಕೋತ್ತರ ಕಾರ್ಯಕ್ರಮ


ಡಿಜಿಟಲ್‌ ಮಾರ್ಕೆಟಿಂಗ್‌ ಉದ್ಯಮ ಕ್ಷೇತ್ರದಲ್ಲಿ ಉತ್ತಮ ವೇತನ, ಶ್ರೇಣಿ ಪಡೆಯುವ ಒಂದು ಕ್ಷೇತ್ರವಾಗಿದೆ. ಪರ್ಡ್ಯೂ ವಿಶ್ವವಿದ್ಯಾಲಯ ಮತ್ತು ಮೆಟಾ ಬ್ಲೂಪ್ರಿಂಟ್‌ನ ಸಹಯೋಗದೊಂದಿಗೆ ನೀಡಲಾಗುವ ಆನ್‌ಲೈನ್ ಮಾರ್ಕೆಟಿಂಗ್‌ ಅಭ್ಯರ್ಥಿಗಳಿಗೆ ಉತ್ತಮ ಉದ್ಯೋಗ ಅವಕಾಶದ ಕೋರ್ಸ್‌ ಆಗಿದೆ.
ಕಾರ್ಯಕ್ರಮವು ಆರು ತಿಂಗಳ ಅವಧಿಯನ್ನು ಹೊಂದಿದೆ ಮತ್ತು ಸಂಪೂರ್ಣವಾಗಿ ಆನ್‌ಲೈನ್‌ ಕಾರ್ಯಕ್ರಮವಾಗಿದೆ. ಈ ಪಿಜಿ ಕೋರ್ಸ್‌ ಪಡೆದವರು ಗರಿಷ್ಠ 300% ವೇತನ ಹೆಚ್ಚಳವನ್ನು ಪಡೆಯಲು ಸಹಾಯ ಮಾಡಿದೆ ಎಂದು ಕಂಪನಿ ಹೇಳಿಕೊಂಡಿದೆ ಮತ್ತು ಉದ್ಯಮದ ಸರಾಸರಿ ವೇತನ 7.25 ಲಕ್ಷ ರೂ. ಎಂದು ತಿಳಿಸಿದೆ.


2) UPES CCE ಯಿಂದ ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಸ್ನಾತಕೋತ್ತರ ಕಾರ್ಯಕ್ರಮ


ಎಲ್ಲ ಕಂಪನಿಗಳು ಈಗ ಕಡ್ಡಾಯವಾಗಿ ಹೆಚ್ಆರ್‌ ಅನ್ನು ನೇಮಕಾತಿ ಮಾಡಿಕೊಳ್ಳುತ್ತಿವೆ. ಹೆಚ್ಆರ್‌ ಕ್ಷೇತ್ರದಲ್ಲಿ ಹೆಚ್ಚಿನ ಸಂಬಳ ಪಡೆಯುವ ಆಕಾಂಕ್ಷಿಗಳು ಈ ಕೋರ್ಸ್‌ ಅನ್ನು ತೆಗೆದುಕೊಳ್ಳಬಹುದು. ಈ ಪಿಜಿ ಕೋರ್ಸ್‌ ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಹೆಚ್ಚಿನ ಉದ್ಯೋಗವಕಾಶಗಳನ್ನು ಅಭ್ಯರ್ಥಿಗಳಿಗೆ ನೀಡುತ್ತದೆ.


ಒಂದು ಕಂಪನಿಯಲ್ಲಿ ಮಾನವ ಸಂಪನ್ಮೂಲ ನಿರ್ವಹಣೆಯು ಅದರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಈ ವಿಭಾಗದಲ್ಲಿ ಹೇರಳ ಅವಕಾಶಗಳಿವೆ. ಆದರೆ ಈ ಅವಕಾಶಗಳನ್ನು ಪಡೆದುಕೊಳ್ಳಲು ಸರಿಯಾದ ಕೌಶಲ್ಯ, ಪದವಿ, ಜ್ಞಾನ ಮುಖ್ಯವಾಗುತ್ತದೆ.


UPES CCE ಯಿಂದ ತೆಗೆದುಕೊಳ್ಳುವ ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಸ್ನಾತಕೋತ್ತರ ಕಾರ್ಯಕ್ರಮ ಕೂಡ ಅಭ್ಯರ್ಥಿಗಳಿಗೆ ಅವಕಾಶಗಳನ್ನು ಸೃಷ್ಟಿಸುವ ಪಿಜಿ ಕೋರ್ಸ್‌ ಆಗಿದೆ. ಇದು ನಿರಂತರ ವೃತ್ತಿಪರ ಯಶಸ್ಸಿಗೆ ಅಗತ್ಯವಾದ ಸಾಮರ್ಥ್ಯಗಳು ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತದೆ. ಡಿಗ್ರಿಯಲ್ಲಿ ಕನಿಷ್ಠ 40% ಅಂಕಗಳನ್ನು ಪಡೆದವರು ಈ 10-ತಿಂಗಳ ಕಾರ್ಯಕ್ರಮವನ್ನು ತೆಗೆದುಕೊಳ್ಳಬಹುದು.


ಪ್ರಾತಿನಿಧಿಕ ಚಿತ್ರ


3) ಪ್ರಾಕ್ಸಿಸ್ ಬಿಸಿನೆಸ್ ಸ್ಕೂಲ್‌ನಿಂದ ಪಿಜಿಪಿ ಡೇಟಾ ಸೈನ್ಸ್‌


ಪ್ರಾಕ್ಸಿಸ್ ಬ್ಯುಸಿನೆಸ್ ಸ್ಕೂಲ್ ನೀಡುವ PGP ಇನ್ ಡೇಟಾ ಸೈನ್ಸ್ ಪ್ರೋಗ್ರಾಂ, ದೇಶದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಲು ಅಗತ್ಯವಾದ ಕೌಶಲ್ಯಗಳೊಂದಿಗೆ ವ್ಯಾಪಾರ ವೃತ್ತಿಪರರನ್ನು ಸಜ್ಜುಗೊಳಿಸಲು ವಿನ್ಯಾಸಗೊಳಿಸಲಾಗಿದೆ.


ಈ ಪೂರ್ಣ-ಸಮಯದ ಕಾರ್ಯಕ್ರಮವನ್ನು ವ್ಯಾಪಾರ ಅನಾಲಿಟಿಕ್ಸ್‌ನಲ್ಲಿ PGP ಎಂದು ಸಹ ಕರೆಯಲಾಗುತ್ತದೆ. ಇದು ಒಂಭತ್ತು ತಿಂಗಳ ಕೋರ್ಸ್‌ ಆಗಿದ್ದು, ಪೈಥಾನ್, R, Excel, SQL, Amazon AWS, ಮತ್ತು ಯಂತ್ರ ಕಲಿಕೆ ಮತ್ತು ಡೇಟಾದಂತಹ ಇತರ ನಿರ್ಣಾಯಕ ಕೌಶಲ್ಯಗಳನ್ನು ಒಳಗೊಂಡಿರುವ ಸಮಗ್ರ ಪಠ್ಯಕ್ರಮವನ್ನು ನೀಡುತ್ತದೆ.


4) ಎನರ್ಜಿ ಮ್ಯಾನೇಜ್‌ಮೆಂಟ್‌ - ಸ್ನಾತಕೋತ್ತರ ಡಿಪ್ಲೊಮಾ


ನವೀಕರಿಸಬಹುದಾದ ಇಂಧನ ಕ್ಷೇತ್ರವು ವೇಗವಾಗಿ ವಿಸ್ತರಿಸುತ್ತಿದೆ ಮತ್ತು ವಿಶ್ವಾದ್ಯಂತ ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಸಿಂಬಯೋಸಿಸ್ ಸೆಂಟರ್ ಫಾರ್ ಡಿಸ್ಟೆನ್ಸ್ ಲರ್ನಿಂಗ್ ನೀಡುವ ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಎನರ್ಜಿ ಮ್ಯಾನೇಜ್‌ಮೆಂಟ್ ಎನ್ನುವುದು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ವಿನ್ಯಾಸಗೊಳಿಸಲಾದ ಸಮಗ್ರ ಕಾರ್ಯಕ್ರಮವಾಗಿದೆ.


ಇದನ್ನೂ ಓದಿ: Toughest Courses: ಅತ್ಯಂತ ಕಷ್ಟಕರ 5 ಪದವಿಗಳಿವು, ಇದರಲ್ಲಿ ಪಾಸ್ ಆಗೋದು ನಿಜಕ್ಕೂ ಕಷ್ಟ


ಈ ಎರಡು ವರ್ಷಗಳ ಕಾರ್ಯಕ್ರಮವು ಇಂಧನ ನೀತಿ ರಚನೆ, ಹಣಕಾಸು, ಇಂಧನ ನಿರ್ವಹಣೆ, ಲೆಕ್ಕಪರಿಶೋಧನೆ ಮತ್ತು ಮೂಲಸೌಕರ್ಯ ಒದಗಿಸುವಿಕೆಯಂತಹ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.


ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ನಂತರ, ವಿದ್ಯಾರ್ಥಿಗಳು ವ್ಯಾಪಾರ ಅಭಿವೃದ್ಧಿ ವ್ಯವಸ್ಥಾಪಕ (ನವೀಕರಿಸಬಹುದಾದ ಇಂಧನ), ನವೀಕರಿಸಬಹುದಾದ ಇಂಧನದಲ್ಲಿ ಮುಖ್ಯ ಹೂಡಿಕೆ ಅಧಿಕಾರಿ, ಆರೋಗ್ಯ ಸಲಹೆಗಾರ ಮತ್ತು ಪ್ರಾಜೆಕ್ಟ್ ಮ್ಯಾನೇಜರ್ ಎನರ್ಜಿ ಮುಂತಾದ ವಿವಿಧ ವೃತ್ತಿಗಳನ್ನು ಪ್ರಾರಂಭಿಸಬಹುದು.


ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಲು ಮತ್ತು ಕೆರಿಯರ್‌ ಆರಂಭಿಸುವವರಿಗೆ ಈ ಪಿಜಿ ಪ್ರೋಗ್ರಾಂ ಸಹಕಾರಿಯಾಗಿದ್ದು, ವೃತ್ತಿ ಬೆಳವಣಿಗೆಗೆ ಸಹಕಾರಿಯಾಗಿದೆ.

top videos
    First published: