• ಹೋಂ
  • »
  • ನ್ಯೂಸ್
  • »
  • Jobs
  • »
  • Online Free Course: ಗೂಗಲ್​ನಲ್ಲಿ ಉಚಿತವಾಗಿ ಲಭ್ಯವಿರುವ ಈ 4 ಕೋರ್ಸ್ ಮಾಡಿದ್ರೆ ಬೇಗ ಕೆಲಸ ಸಿಗುತ್ತೆ

Online Free Course: ಗೂಗಲ್​ನಲ್ಲಿ ಉಚಿತವಾಗಿ ಲಭ್ಯವಿರುವ ಈ 4 ಕೋರ್ಸ್ ಮಾಡಿದ್ರೆ ಬೇಗ ಕೆಲಸ ಸಿಗುತ್ತೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Google ಕೆಲವು ಆನ್‌ಲೈನ್ ಉಚಿತ ಕೋರ್ಸ್‌ಗಳನ್ನು ಪ್ರಾರಂಭಿಸಿದೆ, ಅವುಗಳ ಸಹಾಯದಿಂದ ಉದ್ಯೋಗ ಸಿಗುವ ಹಾದಿಯು ಸುಲಭವಾಗುತ್ತೆ.

  • Share this:

 ಇಂದಿನ ಡಿಜಿಟಲ್ ಯುಗದಲ್ಲಿ (Digital World) ಉದ್ಯೋಗ (Job) ಗಿಟ್ಟಿಸಿಕೊಳ್ಳುವುದು ಸುಲಭದ ಮಾತಲ್ಲ. ಇನ್ನು ಸರ್ಕಾರಿ ಉದ್ಯೋಗಗಳಲ್ಲಿ (Govt Job) ಪೈಪೋಟಿಯೂ ಹೆಚ್ಚುತ್ತಿದೆ. ಇದರಿಂದ ಅನೇಕ ವಿದ್ಯಾರ್ಥಿಗಳು ಖಾಸಗಿ ಕ್ಷೇತ್ರದತ್ತ ಮುಖ ಮಾಡುತ್ತಿದ್ದಾರೆ. ಖಾಸಗಿ ವಲಯದಲ್ಲಿ ಉದ್ಯೋಗಗಳಿಗೆ ಹಲವು ಆಯ್ಕೆಗಳಿವೆ. Google ಕೆಲವು ಆನ್‌ಲೈನ್ ಉಚಿತ ಕೋರ್ಸ್‌ಗಳನ್ನು (Online Free Course) ಪ್ರಾರಂಭಿಸಿದೆ, ಅವುಗಳ ಸಹಾಯದಿಂದ ನಿಮಗೆ ಉದ್ಯೋಗ ಸಿಗುವ ಹಾದಿಯು ಸುಲಭವಾಗುತ್ತೆ.


ಆನ್‌ಲೈನ್ ಉಚಿತ ಕೋರ್ಸ್‌ಗಳನ್ನು ಮಾಡುವ ಮೂಲಕ ನಿಮ್ಮ ವೃತ್ತಿಜೀವನವನ್ನು ಸುಧಾರಿಸಲು ನೀವು ಬಯಸಿದರೆ, Google ನ ಈ ಕೋರ್ಸ್‌ಗಳನ್ನು ಮಾಡಿ. ನೀವು ತಾಂತ್ರಿಕ ಕ್ಷೇತ್ರದಲ್ಲಿ ನಿಮ್ಮ ಕೌಶಲ್ಯಗಳನ್ನು ತೋರಿಸಬಹುದು, ಒಳ್ಳೆಯ ಕೆಲಸವನ್ನೂ ಮಾಡಬಹುದು. ಇಲ್ಲಿ ಗೂಗಲ್ ನಡೆಸುತ್ತಿರುವ ಕೋರ್ಸ್‌ಗಳ ಬಗ್ಗೆ ನೀಡಲಾಗಿದೆ. ಅವುಗಳನ್ನು ಮಾಡಿದ ನಂತರ ನಿಮಗೆ ಜಾಸ್ತಿ ಸಂಬಳದ ಕೆಲಸ ಸಿಗೋದು ಗ್ಯಾರೆಂಟಿ.


ಗೂಗಲ್ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ (Google Digital Marketing Course)


ಈ ಕೋರ್ಸ್ ಗೆ ಬೇಡಿಕೆ ಹೆಚ್ಚುತ್ತಿದೆ. ಬೇರೆಡೆ ಈ ಕೋರ್ಸ್‌ಗೆ ಲಕ್ಷಾಂತರ ರೂಪಾಯಿ ಫೀಸ್​ ಕಟ್ಟಬೇಕಾಗುತ್ತದೆ. ಆದರೆ ಈ ಕೋರ್ಸ್ ಅನ್ನು ಗೂಗಲ್ ಉಚಿತವಾಗಿ ನೀಡುತ್ತಿದೆ. ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಸಹಾಯದಿಂದ ನೀವು ಮನೆಯಲ್ಲಿ ಕುಳಿತು ಈ ಕೋರ್ಸ್ ಅನ್ನು ಸುಲಭವಾಗಿ ಮಾಡಬಹುದು. ಕೋರ್ಸ್ ಮುಗಿದ ನಂತರ, ಪರೀಕ್ಷೆಯ ಆಧಾರದ ಮೇಲೆ Google ನಿಂದ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಇದು ವಿಶ್ವದ ಎಲ್ಲಿಯಾದರೂ ಮಾನ್ಯವಾಗಿರುತ್ತದೆ.


ಗೂಗಲ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೋರ್ಸ್ (Google Artificial Intelligence Course)


ಕೃತಕ ಬುದ್ಧಿಮತ್ತೆ (AI) ಒಂದು ರೀತಿಯ ಟೆಕ್ನಾಲಜಿ ಕೋರ್ಸ್ ಆಗಿದ್ದು, ಇದರ ಆಧಾರದ ಮೇಲೆ ಹೆಚ್ಚಿನ ಕೆಲಸಗಳು ತ್ವರಿತವಾಗಿ ಆಗುತ್ತವೆ. ಚಾಟ್‌ಜಿಪಿಟಿಯ ಹೆಸರನ್ನು ನೀವು ಕೇಳಿರಬೇಕು, ಇದು ಅಂತಹ ಪ್ರೋಗ್ರಾಮಿಂಗ್ ಸಾಫ್ಟ್‌ವೇರ್ ಆಗಿದೆ. ಇದು ಮನುಷ್ಯರು ಕೇಳುವ ಪ್ರಶ್ನೆಗಳಿಗೆ ಬಹಳ ಎಚ್ಚರಿಕೆಯಿಂದ ಉತ್ತರಿಸುತ್ತದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ನಲ್ಲಿ ಆಸಕ್ತಿ ಇರುವವರು ಈ ಕೋರ್ಸ್ ಅನ್ನು ಉಚಿತವಾಗಿ ಮಾಡಬಹುದು.


Artificial Intelligence
ಸಾಂದರ್ಭಿಕ ಚಿತ್ರ


ಯಂತ್ರ ಕಲಿಕೆ ಕೋರ್ಸ್ (Machine Learning Course)


ಯಂತ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇದರಲ್ಲಿ ನೀಡಲಾಗಿದೆ ಎಂದು ಹೆಸರಿನಿಂದಲೇ ತಿಳಿಯುತ್ತದೆ. ಈ ಕೋರ್ಸ್ ಮಾಡಿದ ನಂತರ, ನೀವು ಯಂತ್ರ ಕಲಿಕೆಯಲ್ಲಿ ಉತ್ತಮ ಜ್ಞಾನವನ್ನು ಪಡೆಯುತ್ತೀರಿ. ವಿದೇಶಿ ಕಂಪನಿಯಲ್ಲಿ ಕೆಲಸ ಮಾಡಬಹುದು. ಮೆಷಿನ್ ಲರ್ನಿಂಗ್ ಕೋರ್ಸ್ ನಂತರ ನೀವು ಲಕ್ಷ ರೂಪಾಯಿಗಳನ್ನು ಗಳಿಸಬಹುದು.




ಗೂಗಲ್​ ವ್ಯಾಪಾರ ಕೋರ್ಸ್ (Google Business Course)


ಪ್ರಸ್ತುತ ಎಲ್ಲಾ ವ್ಯವಹಾರಗಳು ಆನ್‌ಲೈನ್‌ಮಯವಾಗಿವೆ. ಕಂಪನಿಗಳು ತಮ್ಮ ಸರಕುಗಳನ್ನು ಆನ್​​ಲೈನ್​ ಮೂಲಕ ಗ್ರಾಹಕರಿಗೆ ತಲುಪಿಸಲು ಬಯಸುತ್ತವೆ. ಆದರಿಂದ ಈ ವಿಧಾನವು ಗ್ರಾಹಕರಿಗೂ ತುಂಬಾ ಇಷ್ಟವಾಗಿದ್ದು. ಈ ಉಚಿತ Google ಕೋರ್ಸ್‌ನಲ್ಲಿ, ನೀವು ವ್ಯಾಪಾರ ತಂತ್ರ, ಸ್ಥಳೀಯ ಮಾರ್ಕೆಟಿಂಗ್, ಇಮೇಲ್ ಮಾರ್ಕೆಟಿಂಗ್, ಇ ಕಾಮರ್ಸ್, D2C ಬಗ್ಗೆ ಮಾಹಿತಿ ಪಡೆಯುತ್ತೀರಿ.

First published: