• ಹೋಂ
  • »
  • ನ್ಯೂಸ್
  • »
  • Jobs
  • »
  • Success Story: ಬೆಂಗಳೂರಲ್ಲಿ ಸ್ಟಾರ್ಟ್ಅಪ್ ಆರಂಭಿಸಿ ಬಿಲಿಯನೇರ್ ಆದ ಸಚಿನ್ ಬನ್ಸಾಲ್ ; ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ

Success Story: ಬೆಂಗಳೂರಲ್ಲಿ ಸ್ಟಾರ್ಟ್ಅಪ್ ಆರಂಭಿಸಿ ಬಿಲಿಯನೇರ್ ಆದ ಸಚಿನ್ ಬನ್ಸಾಲ್ ; ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ

ಸಚಿನ್​ ಬನ್ಸಾಲ್​

ಸಚಿನ್​ ಬನ್ಸಾಲ್​

ಫ್ಲಿಪ್‌ಕಾರ್ಟ್‌ನ ಮಾಜಿ ಸಹ ಸಂಸ್ಥಾಪಕರಾದ ಸಚಿನ್ ಬನ್ಸಾಲ್ ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಆರಂಭಿಸಿ ಬಿಲಿಯನೇರ್ ಆದವರಾಗಿದ್ದಾರೆ.

  • Share this:

ದೇಶದಲ್ಲಿ ಅನೇಕ ಯುವ ಬಿಲಿಯನೇರ್‌ಗಳು (Youngest Billionaires in India) ಸೃಷ್ಟಿಯಾಗುತ್ತಿದ್ದಾರೆ. ತಮ್ಮದೇ ಸ್ಟಾರ್ಟಪ್ (Startups) ಆರಂಭಿಸುವ ಮೂಲಕ, ಕಂಪನಿಯ ಜವಾಬ್ದಾರಿ ಹೊತ್ತುಕೊಳ್ಳುವ ಮೂಲಕ, ದೊಡ್ಡ ಪ್ಯಾಕೇಜ್‌ಗಳನ್ನು ಪಡೆಯುವ ಮೂಲಕ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದಾರೆ.


ಕೇವಲ ಸಂಪತ್ತಿನ ದೃಷ್ಟಿಯಿಂದ ಮಾತ್ರವಲ್ಲದೇ ಅವರ ಸಾಧನೆ, ದೇಶಕ್ಕೆ ನೀಡುತ್ತಿರುವ ಆರ್ಥಿಕ ಕೊಡುಗೆ, ಉದ್ಯೋಗ ಸೃಷ್ಟಿ ಹೀಗೆ ಎಲ್ಲದರಿಂದಲೂ ಹೆಸರು ಮಾಡಿರುವ ಅನೇಕ ಉದ್ಯಮಿಗಳು ನಮ್ಮಲ್ಲಿದ್ದಾರೆ. ಇಂತಹ ಸಾಧಕರ ಪಟ್ಟಿಯಲ್ಲಿ ನಿಲ್ಲುವುದು ಫ್ಲಿಪ್‌ಕಾರ್ಟ್‌ನ ಮಾಜಿ ಸಹ-ಸಂಸ್ಥಾಪಕ ಸಚಿನ್‌ ಬನ್ಸಾಲ್.‌


ಫ್ಲಿಪ್‌ಕಾರ್ಟ್‌ ಸಂಸ್ಥೆಯ ಸಹ-ಸಂಸ್ಥಾಪಕ ಸಚಿನ್‌ ಬನ್ಸಾಲ್


ಇ-ಕಾಮರ್ಸ್‌ ಅಂತಾ ಬಂದರೆ ಮುಖ್ಯವಾಗಿ ಅಮೆಜಾನ್‌, ಫ್ಲಿಪ್‌ಕಾರ್ಟ್​, ಮಿಂತ್ರಾ ಹೀಗೆ ಇನ್ನೂ ಅನೇಕ ಆನ್‌ಲೈನ್‌ ವೇದಿಕೆಗಳು ನೆನಪಿಗೆ ಬರುತ್ತವೆ. ಈಗ ಜನ ಹೆಚ್ಚಾಗಿ ಆನ್‌ಲೈನ್‌ ಶಾಪಿಂಗ್‌ಗೆ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಇವುಗಳ ಜನಪ್ರಿಯತೆ ಕೂಡ ಹೆಚ್ಚಿದೆ. ಇದೇ ರೀತಿ‌ ಜನರಿಗೆ ಕೂತಲ್ಲೇ ‌ಎಲ್ಲಾ ಸಿಗುವ ಅವಕಾಶವನ್ನು ಆನ್‌ಲೈನ್‌ ಸೈಟ್‌ನಲ್ಲಿ ಒದಗಿಸಲು ನಿರ್ಧರಿಸಿದ ಸಚಿನ್‌ ಫ್ಲಿಪ್‌ಕಾರ್ಟ್‌ ಎಂಬ ಇ-ಕಾಮರ್ಸ್‌ ಸೇವೆ ಆರಂಭಿಸಿದರು.


ಇ-ಕಾರ್ಟ್ ಸಂಸ್ಥೆ ಫ್ಲಿಪ್‌ಕಾರ್ಟ್‌ನ ಮಾಜಿ ಸಹ ಸಂಸ್ಥಾಪಕರಾದ ಸಚಿನ್ ಬನ್ಸಾಲ್ ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಆರಂಭಿಸಿ ಬಿಲಿಯನೇರ್ ಆದವರಾಗಿದ್ದಾರೆ. ಜಗತ್ತಿನ ಅತಿದೊಡ್ಡ ಇ-ಕಾಮರ್ಸ್ ಸಂಸ್ಥೆ ಅಮೆಜಾನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬಂದರು. ಆನಂತರ ಅವರು ಶುರುಮಾಡಿದ್ದೇ ಫ್ಲಿಪ್‌ಕಾರ್ಟ್ ಸ್ಟಾರ್ಟ್ ಅಪ್. ಸ್ಟಾರ್ಟ್‌ಅಪ್‌ ಆಗಿ ಆರಂಭಿಸಿದ ಕಂಪನಿ ಇಂದು ಇ-ಕಾಮರ್ಸ್‌ನ ಹೆಮ್ಮರವಾಗಿ ಬೆಳೆದು ನಿಂತಿದೆ.


ಫ್ಲಿಪ್‌ಕಾರ್ಟ್‌ ಷೇರನ್ನು ವಾಲ್‌ಮಾರ್ಟ್‌ಗೆ ಮಾರಾಟ


2018 ರಲ್ಲಿ ಕಂಪನಿಯ ಮೌಲ್ಯಮಾಪನವು ಸುಮಾರು $20.8 ಬಿಲಿಯನ್ ಆಗಿತ್ತು. ಅದೇ ವರ್ಷ, ಸಚಿನ್ ಬನ್ಸಾಲ್ ಅವರು ಫ್ಲಿಪ್‌ಕಾರ್ಟ್‌ನಲ್ಲಿ ತಮ್ಮ 5.5 ಶೇಕಡಾ ಪಾಲನ್ನು ವಾಲ್‌ಮಾರ್ಟ್‌ಗೆ ಮಾರಾಟ ಮಾಡಲು ನಿರ್ಧರಿಸಿದರು ಮತ್ತು ವಾಲ್‌ಮಾರ್ಟ್‌ ಕೂಡ ಇದರ ಷೇರುಗಳನ್ನು ಖರೀದಿ ಮಾಡಿತು.
ಕಂಪನಿಯನ್ನು ಎತ್ತರಕ್ಕೆ ಬೆಳೆಸಿದ ಬಳಿಕ ಫ್ಲಿಪ್‌ಕಾರ್ಟ್‌ನ ಕಾರ್ಯಕಾರಿ ಅಧ್ಯಕ್ಷ ಸ್ಥಾನದಿಂದ ಸಚಿನ್ ಬನ್ಸಾಲ್ ಕೆಳಗಿಳಿದರು. ಅಮೆಜಾನ್‌, ಫ್ಲಿಪ್‌ಕಾರ್ಟ್‌ ಬಳಿಕ ಇವರು ನವಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಸೇರಿಕೊಂಡರು. ಇದು ವೃತ್ತಿಜೀವನದಲ್ಲಿ ಸಚಿನ್‌ ಬನ್ಸಾಲ್‌ ಅವರ ಸಾಧನೆ ಆದರೆ, ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಒಂದು ನೋಟ ಈ ಕೆಳಕಂಡತಿದೆ.


ಸಚಿನ್ ಬನ್ಸಾಲ್ ಅವರ ಶಿಕ್ಷಣ


ಆಗಸ್ಟ್ 5, 1981 ರಂದು ಚಂಡೀಗಢದಲ್ಲಿ ಜನಿಸಿದ ಸಚಿನ್ ಬನ್ಸಾಲ್ ಅವರು ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 2005 ರಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು.


ಇದನ್ನೂ ಓದಿ: Campus Placement: ಮೈಕ್ರೋಸಾಫ್ಟ್​ನಿಂದ ದಾಖಲೆಯ ಪ್ಯಾಕೇಜ್ ಪಡೆದ IIM ವಿದ್ಯಾರ್ಥಿನಿ ಅವನಿ ಮಲ್ಹೋತ್ರಾ


ಸಚಿನ್ ಬನ್ಸಾಲ್ ಅವರ ವೃತ್ತಿಜೀವನ


ಪದವಿ ಪಡೆದ ಕೂಡಲೇ, ಸಚಿನ್ ಬನ್ಸಾಲ್ ಅವರು ಟೆಕ್‌ಸ್ಪಾನ್‌ನಲ್ಲಿ ಕೆಲವು ತಿಂಗಳು ಕೆಲಸ ಮಾಡಿದರು ಮತ್ತು ನಂತರ 2006 ರಲ್ಲಿ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಅಮೆಜಾನ್ ವೆಬ್ ಸೇವೆಗಳಿಗೆ ಸೇರಲು ನಿರ್ಧರಿಸಿ, ಅಲ್ಲಿ ತಮ್ಮ ಕೆಲಸ ಆರಂಭಿಸಿದರು. ಅಲ್ಲೂ ಕೂಡ ಸ್ವಲ್ಪ ದಿನ ಕೆಲಸ ಮಾಡಿ, 2007ರಲ್ಲಿ ಅಮೆಜಾನ್ ತೊರೆದು ತಮ್ಮದೇ ಆದ ಫ್ಲಿಫ್‌ಕಾರ್ಟ್ ಕಂಪನಿಯನ್ನು ಪ್ರಾರಂಭಿಸಿದರು.


ಸಚಿನ್​ ಬನ್ಸಾಲ್​


ಸಚಿನ್ ಬನ್ಸಾಲ್ ‌ಕುಟುಂಬ


ವೃತ್ತಿಜೀವನ ಆರಂಭಿಸಿದ ಬಳಿಕ ಸಚಿನ್‌ ಬನ್ಸಾಲ್‌ ದಂತ ವೈದ್ಯರಾಗಿದ್ದ ಪ್ರಿಯಾ ಸಿಂಗ್‌ ಅವರನ್ನು ವಿವಾಹವಾದರು. ದಂಪತಿಗೆ ಒಬ್ಬ ಮಗ ಸಹ ಇದ್ದಾನೆ. ಸುಖವಾಗಿ ಸಾಗುತ್ತಿದ್ದ ಸಂಸಾರದಲ್ಲಿ ಕ್ರಮೇಣ ಬಿರುಗಾಳಿ ಕಾಣಿಸಿಕೊಂಡಿತು. ಮಾರ್ಚ್ 2020 ರಲ್ಲಿ, ಅವರ ಪತ್ನಿ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ಸಚಿನ್‌ ವಿರುದ್ಧ ದಾಖಲಿಸಿದ್ದು ತನ್ನ ಮೇಲೆ ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು.


ಸಚಿನ್ ಬನ್ಸಾಲ್ ಅವರ ನಿವ್ವಳ ಮೌಲ್ಯ


ಸಚಿನ್ ಬನ್ಸಾಲ್ ಅವರು 1.3 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ.

top videos
    First published: