• Home
  • »
  • News
  • »
  • jobs
  • »
  • UPSC Examನಲ್ಲಿ ಯಶಸ್ವಿಯಾಗುವುದು ಸುಲಭವಲ್ಲ: ಈ ಪಂಚ ಸೂತ್ರ ಬಳಸಿದ್ರೆ ಅಷ್ಟೇನೂ ಕಷ್ಟವೂ ಅಲ್ಲ

UPSC Examನಲ್ಲಿ ಯಶಸ್ವಿಯಾಗುವುದು ಸುಲಭವಲ್ಲ: ಈ ಪಂಚ ಸೂತ್ರ ಬಳಸಿದ್ರೆ ಅಷ್ಟೇನೂ ಕಷ್ಟವೂ ಅಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಫಲರಾಗಲು ಕೇವಲ ಓದು ಒಂದಿದ್ದರೆ ಸಾಲದು. ನೀವು ಓದಿನಲ್ಲಿ ಪ್ರಾಬಲ್ಯ ಸಾಧಿಸಿದಂತೆ ಬರವಣಿಗೆಯ ಮೇಲೂ ಹಿಡಿತ ಸಾಧಿಸಬೇಕು.

  • Share this:

    ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ (Civil Services Examination) ದೇಶದ ಅತ್ಯಂತ ಹೆಚ್ಚು ಸ್ಪರ್ಧಾತ್ಮಕ ಹಾಗೂ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದೆನಿಸಿದೆ. ಪ್ರತಿ ವರ್ಷ, ಹಲವಾರು ಲಕ್ಷ ಮಹತ್ವಾಕಾಂಕ್ಷಿ ಅಭ್ಯರ್ಥಿಗಳು ಯುಪಿಎಸ್‌ಸಿ (UPSC) ಅಡಿಯಲ್ಲಿ ವಿವಿಧ ಪರೀಕ್ಷೆಗಳಿಗೆ ಅರ್ಜಿ ಗುಜರಾಯಿಸುತ್ತಾರೆ. ಅದಾಗ್ಯೂ ಕೆಲವೇ ಅಭ್ಯರ್ಥಿಗಳು ಮಾತ್ರವೇ ಪರೀಕ್ಷೆಯಲ್ಲಿ ಜಯಗಳಿಸುತ್ತಾರೆ.


    ಯುಪಿಎಸ್‌ಸಿ ಪರೀಕ್ಷೆ ಕಠಿಣ ಏಕೆ?


    ಯುಪಿಎಸ್‌ಸಿ (UPSC) ಪರೀಕ್ಷೆಗಳು ಕಠಿಣವಾದ ಪರೀಕ್ಷಾ ಸ್ವರೂಪನ್ನು ಒಳಗೊಂಡಿದ್ದು, ಹೆಚ್ಚಿನ ಪಠ್ಯಕ್ರಮದೊಂದಿಗೆ ಒಟ್ಟು 1,000 ಹುದ್ದೆಗಳು ಮಾತ್ರವೇ ಖಾಲಿ ಇದೆ ಎಂಬ ಅಂಶವೇ ಅಭ್ಯರ್ಥಿಗಳಲ್ಲಿ ಒಂದು ರೀತಿಯ ಹೆದರಿಕೆಯನ್ನುಂಟು ಮಾಡುತ್ತದೆ. ಅತ್ಯಂತ ಕಠಿಣ ಎಂಬ ಮನೋಭಾವವನ್ನು ಸೃಷ್ಟಿಸುತ್ತದೆ. ಇಷ್ಟೇ ಅಲ್ಲದೆ ಮೂರು ಹಂತಗಳನ್ನು ಪರೀಕ್ಷೆಯು ಒಳಗೊಂಡಿದ್ದು ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ, ಸಂದರ್ಶನ ಎಂದು ಅವುಗಳನ್ನು ವರ್ಗೀಕರಿಸಲಾಗಿದೆ.




    ಹಾಗಾಗಿಯೇ ಈ ಪರೀಕ್ಷೆಗಳಿಗೆ ಸಿದ್ಧತೆಗಳನ್ನು ಮಾಡುವುದು ಕೊಂಚ ಸವಾಲಿನ ಪ್ರಕ್ರಿಯೆಯೇ ಆಗಿದ್ದು ಎಷ್ಟು ಸಿದ್ಧತೆಗಳನ್ನು ಮಾಡಿದರೂ ಸಾಕಾಗುವುದಿಲ್ಲ ಎಂಬುದು ಅಭ್ಯರ್ಥಿಗಳ ಅಹವಾಲಾಗಿದೆ. ಅಭ್ಯರ್ಥಿಗಳು ಪರೀಕ್ಷೆಗೆ ಸಿದ್ಧಗೊಳ್ಳುವಾಗ ಕೆಲವೊಂದು ಅಂಶಗಳನ್ನು ಪಾಲಿಸಬೇಕು, ಪಠ್ಯದಲ್ಲಿರುವ ಎಲ್ಲಾ ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳಬೇಕು ಹಾಗೂ ಉತ್ತಮ ಅಂಕಗಳನ್ನು ಗಳಿಸಲು ತಾವು ಕಲಿತಿರುವುದನ್ನು ಪುನರಾವರ್ತನೆ ಮಾಡಬೇಕು.


    ಯುಪಿಎಸ್‌ಸಿ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಇಲ್ಲಿದೆ ಕೆಲವೊಂದು ಸಲಹೆಗಳು


    1) ಕಠಿಣ ಪಠ್ಯಕ್ರಮಗಳನ್ನು ಆದಷ್ಟು ಆಳವಾಗಿ ಓದುವುದು ಮತ್ತು ಪರೀಕ್ಷಾ ತಂತ್ರಗಳನ್ನು ಅಭಿವೃದ್ಧಿಪಡಿಸುವುದು


    ಯುಪಿಎಸ್‌ಸಿ ಸಿಎಸ್‌ಇಯ ಅತಿದೊಡ್ಡ ಸವಾಲು ಎಂದರೆ ಅಭ್ಯರ್ಥಿಗಳು ಯಶಸ್ಸು ಹೊಂದಲು ವಿವಿಧ ಕ್ಷೇತ್ರಗಳಲ್ಲಿನ ವಿಷಯಗಳ ಬಗ್ಗೆ ಜ್ಞಾನವನ್ನು ಹೊಂದಿರಬೇಕು. ಇದು ಆರಂಭದಲ್ಲಿ ಕೊಂಚ ಕಠಿಣ ಎಂದು ತೋರಿದರೂ ಸಂಪೂರ್ಣ ಪಠ್ಯಕ್ರಮವನ್ನು ಚೆನ್ನಾಗಿ ಮನನ ಮಾಡುವ ಮೂಲಕ ಸರಿಯಾದ ಯೋಜನೆಯನ್ನು ಅಳವಡಿಸಿಕೊಂಡು ಪರೀಕ್ಷೆಗಳಿಗೆ ತಯಾರಾಗಬಹುದು.




    2) ಸರಿಯಾದ ಪಠ್ಯವಿವರಗಳ ಮೂಲಕ ಸ್ಪಷ್ಟವಾಗಿ ಅರ್ಥೈಸಿಕೊಳ್ಳುವುದು


    ಯುಪಿಎಸ್‌ಸಿ ನಾಗರಿಕ ಪರೀಕ್ಷೆಯಲ್ಲಿ ವಿಜಯಿಯಾಗಲು ಉತ್ತಮ ಬುದ್ಧಿಮತ್ತೆಯನ್ನು ಹೊಂದಿರುವುದು ಅತ್ಯವಶ್ಯಕವಾಗಿದೆ. ಸಾಮಾನ್ಯವಾಗಿ, ಆರಂಭಿಕ ಹಂತಗಳಲ್ಲಿ ಪರೀಕ್ಷೆಗಳಿಗೆ ಅಧ್ಯಯನ ಮಾಡಲು ಅಭ್ಯರ್ಥಿಗಳು ಅನೇಕ ಮಾರ್ಗದರ್ಶಿಗಳು ಮತ್ತು ಕೈಪಿಡಿಗಳನ್ನು ಅವಲಂಬಿಸಿರುತ್ತಾರೆ.


    ಬದಲಾಗಿ, ಪ್ರತಿ ವಿಷಯದ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲು ನೀವು ಪ್ರಮಾಣಿತ ಪಠ್ಯಪುಸ್ತಕಗಳನ್ನು ಉಲ್ಲೇಖಿಸಬೇಕು.


    ಇದನ್ನೂ ಓದಿ: UPSC Success Story: ಗೌಡ್ರು, ಅವರ ಹೆಂಡ್ತಿ ಇಬ್ಬರೂ IAS ಆಫೀಸರ್ಸ್: ಸೂಪರ್ ಜೋಡಿಯ ಕಹಾನಿ ಇಲ್ಲಿದೆ


    3) ಬರವಣಿಗೆಯ ಅಭ್ಯಾಸ


    ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಫಲರಾಗಲು ಕೇವಲ ಓದು ಒಂದಿದ್ದರೆ ಸಾಲದು. ನೀವು ಓದಿನಲ್ಲಿ ಪ್ರಾಬಲ್ಯ ಸಾಧಿಸಿದಂತೆ ಬರವಣಿಗೆಯ ಮೇಲೂ ಹಿಡಿತ ಸಾಧಿಸಬೇಕು. ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸುವುದು ನಿಮ್ಮ ಬರವಣಿಗೆಯ ಮೇಲಿನ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಎಲ್ಲಾ ಪ್ರಶ್ನೆಗಳನ್ನು ಪ್ರಯತ್ನಿಸಲು ನೀವು ವೇಗವಾಗಿ ಬರೆಯುವ ಅಗತ್ಯವಿಲ್ಲ, ಆದರೆ ಬರವಣಿಗೆಯು ವ್ಯಾಕರಣಬದ್ಧವಾಗಿ ಸರಿಯಾಗಿರಬೇಕು.




    4) ಭಾರತೀಯ ಸಂವಿಧಾನದ ಸಮಗ್ರ ಜ್ಞಾನವನ್ನು ಪಡೆದುಕೊಳ್ಳಿ


    ಯುಪಿಎಸ್‌ಸಿ (UPSC) ಮುಖ್ಯ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಇತಿಹಾಸ, ಸಾಮಾನ್ಯ ಜ್ಞಾನ, ರಾಜಕೀಯ ಮತ್ತು ಇತರ ವಿವಿಧ ಕ್ಷೇತ್ರಗಳ ಸಂಪೂರ್ಣ ಜ್ಞಾನವನ್ನು ಹೊಂದಿರಬೇಕು.


    ಪ್ರಿಲಿಯಮ್ಸ್, ಮೇನ್ಸ್ ಮತ್ತು ಸಂದರ್ಶನದಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲು, ಅಭ್ಯರ್ಥಿಗಳು ಭಾರತೀಯ ಸಂವಿಧಾನದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿರುವುದು ಬಹಳ ಮುಖ್ಯ.


    5) ಪರಿಣಾಮಕಾರಿ ಕಲಿಕೆ ಮತ್ತು ಮನನ ಮಾಡಿಕೊಳ್ಳುವ ತಂತ್ರಗಳು


    ಯುಪಿಎಸ್‌ಸಿ ಸಿಎಸ್‌ಇ ಪಠ್ಯಕ್ರಮವು ಸಾಮಾನ್ಯವಾಗಿ ಯಾವುದೇ ಅಭ್ಯರ್ಥಿಗೆ ಆತಂಕವನ್ನುಂಟು ಮಾಡಬಹುದು ಹಾಗೂ ಹಿಂಜರಿಯುವಂತೆಯೂ ಮಾಡುತ್ತದೆ. ಸಂಪೂರ್ಣ ಪಠ್ಯಕ್ರಮವನ್ನು ಮನನ ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಒಂದು ವರ್ಷಕ್ಕಿಂತಲೂ ಹೆಚ್ಚಿನ ಸಮಯ ಅಗತ್ಯವಿರುತ್ತದೆ. ನೀವು ಚೆನ್ನಾಗಿ ಅಭ್ಯಾಸ ನಡೆಸಿದ್ದರೂ ಕಲಿತಿರುವುದು ಮರೆತುಹೋಗದಿರಲು ಅದನ್ನು ಆಗಾಗ್ಗೆ ಪುನರಾವರ್ತಿತವಾಗಿ ಅಭ್ಯಾಸ ಮಾಡಬೇಕಾಗುತ್ತದೆ.




    ದೈಹಿಕ ಹಾಗೂ ಮಾನಸಿಕವಾಗಿ ಬಳಲಿಕೆಯನ್ನುಂಟು ಮಾಡಿದರೂ ಪ್ರತಿಯೊಬ್ಬ ಅಭ್ಯರ್ಥಿಗೂ ಕಲಿತಿರುವುದನ್ನು ಮನನ ಮಾಡಿಕೊಳ್ಳುವುದು ಹಾಗೂ ಆಗಾಗ್ಗೆ ಪುನರಾವರ್ತನೆಗಳನ್ನು ಮಾಡಿಕೊಳ್ಳುವುದು, ಪರೀಕ್ಷೆಗಳನ್ನು ಸುಲಭವಾಗಿ ಗೆಲ್ಲುವ ಕೀಲಿಕೈಯಾಗಿದೆ.

    Published by:Kavya V
    First published: