ಮ್ಯಾನೇಜ್‌ಮೆಂಟ್ ಕೋರ್ಸ್‌ಗಳಲ್ಲಿ (Management Course) ಇಂದು ಅನೇಕ ಕೋರ್ಸ್‌ಗಳು ಅತ್ಯಂತ ಬೇಡಿಕೆಯಲ್ಲಿರುವ ಕೋರ್ಸ್‌ಗಳು ಆಗಿವೆ. ಇಂದಿನ ಜನ-ಜೀವನಕ್ಕೆ ಪರ್ಫೆಕ್ಟ್ ಆಗಿ ಕೂಡಿ ಬರೋ ಮ್ಯಾನೇಜ್‌ಮೆಂಟ್ ಕೋರ್ಸ್ ಎಂದ್ರೆ ಅದುವೇ ಲಕ್ಸುರಿ ಬ್ರಾಂಡ್ (Luxury Brand) ಮ್ಯಾನೇಜ್‌ಮೆಂಟ್ ಕೋರ್ಸ್. ಈ ಕೋರ್ಸ್‌ಗೆ ಭಾರತದಲ್ಲಿಂದು ಹಿಂದೆಂದೂ ಇರದ ಡಿಮ್ಯಾಂಡ್ ಬಂದಿದೆ ಎಂದ್ರೂ ತಪ್ಪಾಗಲಾರದು.
ಈ ಕೋರ್ಸ್ ಬಗ್ಗೆ ಅಮೇರಿಕಾದ ರಾಬ್ ರಿಪೋರ್ಟ್ ಮ್ಯಾಗಜೀನ್ ಏನ್ ಹೇಳ್ತಿದೆ?
ಲಕ್ಸುರಿ ಬ್ರಾಂಡ್ ಮ್ಯಾನೇಜ್‌ಮೆಂಟ್ ಕೋರ್ಸ್ ಬಗ್ಗೆ ರಾಬ್ ರಿಪೋರ್ಟ್ ಮ್ಯಾಗಜೀನ್ ತಜ್ಞರು ಭಾರತದಲ್ಲಿನ ಲಕ್ಸುರಿ ಬ್ರಾಂಡ್ ಕೋರ್ಸ್ ಅನ್ನು $5 ಶತಕೋಟಿ (ಸುಮಾರು ₹ 500 ಕೋಟಿಗಳು) ಗಳಷ್ಟು ಎಂದು ಮೌಲ್ಯೀಕರಿಸಿದ್ದಾರೆ. ಇದರೊಂದಿಗೆ ಮುಂದಿನ 5 ವರ್ಷಗಳಲ್ಲಿ ಈ ಮ್ಯಾನೇಜ್‌ಮೆಂಟ್ ಕೋರ್ಸ್ 10% ರಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಈ ವರದಿಯು ಡಿಸೆಂಬರ್ 2022ರಲ್ಲಿ ಪ್ರಕಟವಾಗಿದೆ. ರಾಬ್ ರಿಪೋರ್ಟ್ ಮ್ಯಾಗಜೀನ್ ಅಮೇರಿಕನ್ , ಇಂಗ್ಲಿಷ್ ಭಾಷೆಯ, ಲಕ್ಸುರಿ -ಲೈಪ್‌ಸ್ಟೈಲ್‌ನ ಮ್ಯಾಗಜೀನ್ ಆಗಿದೆ.
ಆದ್ದರಿಂದ, ಉದ್ಯೋಗದಲ್ಲಿ ಈ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುವ ಕಾರಣದಿಂದ ಭಾರತದಲ್ಲಿ ಉದ್ಯೋಗಾಕಾಂಕ್ಷಿಗಳು ಈ ಕೋರ್ಸ್ ಅನ್ನು ಮಾಡುವ ಮೂಲಕ ಲಕ್ಸುರಿ ಬ್ರಾಂಡ್‌ನಲ್ಲಿ ಉತ್ತಮ ಉದ್ಯೋಗವನ್ನು ಪಡೆದುಕೊಳ್ಳಬಹುದು. ಇದು ಮ್ಯಾನೇಜ್‌ಮೆಂಟ್ ಮಾಡ ಬಯಸುವ ವಿದ್ಯಾರ್ಥಿಗಳಿಗೆ ಬೆಸ್ಟ್ ಆಪ್ಷನ್ ಎಂದೇ ಹೇಳಬಹುದು.
ಹಾಗೆಯೇ ನಾವಿಂದು ಲಕ್ಸುರಿ ಬ್ರಾಂಡ್ ಮ್ಯಾನೇಜ್‌ಮೆಂಟ್ ಕೋರ್ಸ್‌ನಲ್ಲಿ ಕೆಲವು ಉತ್ತಮ ವೃತ್ತಿ ಆಯ್ಕೆಗಳನ್ನು ಇಲ್ಲಿ ತಿಳಿಸಲಾಗಿದೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ.
ಲಕ್ಸುರಿ ಬ್ರಾಂಡ್ ಮ್ಯಾನೆಜ್‌ಮೆಂಟ್‌ನಲ್ಲಿರುವ 5 ಬೆಸ್ಟ್ ಜಾಬ್‌ಗಳು ಇವು
1) ಕ್ರಿಯೇಟಿವ್ ಡೈರೆಕ್ಟರ್/ ಡಿಸೈನ್ ಡೈರೆಕ್ಟರ್
ಕ್ರಿಯೆಟಿವ್ ಡೈರೆಕ್ಟರ್ ಅಂದ್ರೆ ಒಂದು ಪ್ರೊಡಕ್ಟ್ ಬಗ್ಗೆ ಸಂಪೂರ್ಣ ನಿಯಂತ್ರಣ ಹೊಂದಿದ ವ್ಯಕ್ತಿ. ಜಾಗತಿಕವಾಗಿ ಹೇಳುವುದಾದರೆ, ಈ ಉದ್ಯೋಗವು ಲಕ್ಸುರಿ ವಲಯದಲ್ಲಿಯೇ ಅತ್ಯಂತ ಗಣ್ಯ ಮತ್ತು ಹಿರಿಯ ಹುದ್ದೆಗಳಲ್ಲಿ ಒಂದಾಗಿದೆ.
ಅವರು ಫ್ಯಾಶನ್ ಶೋಗಳು, ರಿಟೈಲ್ ಶೋಗಳಿಂದ ಮಾರ್ಕೆಟಿಂಗ್ ಮತ್ತು ಒಟ್ಟಾರೆ ನಿರ್ವಹಣೆಯವರೆಗೆ ಬ್ರ್ಯಾಂಡ್‌ನ ವಿಷನ್ ಮತ್ತು ಮಿಷನ್ ಅನ್ನು ರೂಪಿಸುವ ಮತ್ತು ಸ್ಥಾಪಿಸುವ ಉಸ್ತುವಾರಿ ಕೆಲಸವನ್ನು ನಿರ್ವಹಿಸುತ್ತಾರೆ. ಅವರು ಮಾರ್ಕೆಟಿಂಗ್‌ಗೆ ಸಂಬಂಧಪಟ್ಟ ಪಿಆರ್ ಚಟುವಟಿಕೆಗಳನ್ನು ಸಹ ಮಾಡುತ್ತಾರೆ.
ಬ್ರಾಂಡ್‌ನ ವಿಷಯದಲ್ಲಿ ಯಾವುದೇ ವಿವಾದ ಮತ್ತು ಬಿಕ್ಕಟ್ಟುಗಳನ್ನು ಅವರೇ ನಿರ್ವಹಿಸಬೇಕಾಗುತ್ತದೆ. ಈ ಕ್ಷೇತ್ರದಲ್ಲಿ ನೀವು 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರೆ, ನೀವು ಗ್ಲೋಬಲ್ ಲೆವೆಲ್‌ನಲ್ಲಿ ಕ್ರಿಯೆಟಿವ್ ಡೈರೆಕ್ಟರ್ ಆಗಿ ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳಬಹುದು. ಆಕರ್ಷಕ ಸಂಬಳವು ಇರುತ್ತದೆ.
2) ಲಕ್ಸುರಿ ಬ್ರಾಂಡ್ ಮ್ಯಾನೇಜರ್
ಲಕ್ಸುರಿ ಬ್ರ್ಯಾಂಡ್ ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಕೆಲಸ ಮಾಡಲು ಅಪಾರ ತಾಳ್ಮೆ ಮತ್ತು ವಿವಿಧ ಕೌಶಲ್ಯಗಳು ಬೇಕಾಗುತ್ತವೆ. ವಿಶೇಷವಾಗಿ ನಾವು ಬ್ರ್ಯಾಂಡ್ ಮ್ಯಾನೇಜ್‌ಮೆಂಟ್ ಬಗ್ಗೆ ಮಾತನಾಡುವಾಗ, ಬ್ರ್ಯಾಂಡ್ ಮ್ಯಾನೇಜರ್ ದಿನನಿತ್ಯದ ಬ್ರ್ಯಾಂಡ್ ಚಟುವಟಿಕೆಗಳನ್ನು ನೋಡಿಕೊಳ್ಳಲು ಮತ್ತು ಎಲ್ಲಾ ಬ್ರಾಂಡ್ ಸಿಬ್ಬಂದಿಯನ್ನು ನಿರ್ವಹಿಸಲು ಸುಧಾರಿತ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಹೊಂದಿರಬೇಕಾಗುತ್ತದೆ.
3) ಲಕ್ಸುರಿ ಕನ್ಸಲ್‌ಟಂಟ್
ಲಕ್ಸುರಿ ಕನ್ಸಲ್‌ಟಂಟ್ ಆಗಿ ಕಾರ್ಯ ನಿರ್ವಹಿಸುವ ಇವರು ಅಂತರರಾಷ್ಟ್ರೀಯ ಮತ್ತು ಸ್ವದೇಶಿ ಬ್ರಾಂಡ್‌ಗಳು ಎರಡಕ್ಕೂ ಸಮಾನ ಬೆಂಬಲವನ್ನು ನೀಡುತ್ತಾರೆ. ಬ್ರ್ಯಾಂಡ್‌ಗಳ ಬೆಳವಣಿಗೆಗೆ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಬೆಳವಣಿಗೆಯ ತಂತ್ರಗಳೆರಡರಲ್ಲೂ ಸಲಹೆ ನೀಡುತ್ತಾರೆ.
ಸಾಮಾನ್ಯವಾಗಿ ಲಕ್ಸುರಿ ಕನ್ಸಲ್‌ಟಂಟ್ ಬ್ರಾಂಡ್‌ಗಳ ಬಗ್ಗೆ ಹೆಚ್ಚು ಪ್ರೀತಿಯನ್ನು ಹೊಂದಿರುತ್ತಾರೆ. ಏಕೆಂದರೆ ಅವರಿಗೆ ಸ್ಥಳೀಯ ಮಾರುಕಟ್ಟೆಗಳ ಬಗ್ಗೆ ಹೆಚ್ಚು ಜ್ಞಾನವಿರುತ್ತದೆ. ಲಕ್ಸುರಿ ಕನ್ಸಲ್‌ಟಂಟ್ ಒಂದು ಬ್ರ್ಯಾಂಡ್‌ಗೆ ಒಂದು ರೀತಿಯ ಸಲಹೆಗಾರನಾಗುತ್ತಾನೆ. ಆ ಬ್ರಾಂಡ್ ಮಾರುಕಟ್ಟೆಯಲ್ಲಿ ತನ್ನದೇ ಮಹತ್ವವನ್ನು ಕ್ರಿಯೆಟ್ ಮಾಡುವಲ್ಲಿ ಈತನ ಕೆಲಸ ಅಪಾರ.
4) ಕಂಟ್ರಿ ಹೆಡ್/ ರಿಜನಲ್ ಹೆಡ್
ಇವರು ಸಿಬ್ಬಂದಿಯ ನೇಮಕಾತಿ, ಬಜೆಟ್‌ಗಳು, ಯೋಜನೆ ಮತ್ತು ಎಲ್ಲಾ ರೀತಿಯ ಮಾರ್ಕೆಟಿಂಗ್ ಮತ್ತು ಮಾರಾಟ ಸಂಬಂಧಿತ ಚಟುವಟಿಕೆಗಳಿಗೆ ವರದಿಗಳನ್ನು ಸಲ್ಲಿಸುವುದು ಸೇರಿದಂತೆ ಅನೇಕ ಕೆಲಸಗಳನ್ನು ಇವರು ನಿರ್ವಹಿಸುತ್ತಾರೆ.
ಇದರಲ್ಲಿ ಕೆಲಸ ಮಾಡುವ ಕಂಟ್ರಿ ಹೆಡ್ ಉದ್ಯೋಗ ನಿರ್ವಹಿಸುವವರಿಗೆ ವಿಶೇಷ ಕೌಶಲ್ಯಗಳು ಮತ್ತು ಉದ್ಯಮ ಸಂಬಂಧಿತ ಜ್ಞಾನದ ಅಗತ್ಯವಿರುತ್ತದೆ. ಇವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳು ಮತ್ತು ಸ್ಪರ್ಧಾತ್ಮಕ ಬ್ರ್ಯಾಂಡ್‌ಗಳು ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.
5) ಖರೀದಿದಾರ/ ಬೈಯರ್
ಲಕ್ಸುರಿ ಬ್ರಾಂಡ್‌ಗಳಲ್ಲಿನ ಖರೀದಿದಾರರು ತಮ್ಮ ನಿರ್ದಿಷ್ಟವಾದ ಪ್ರದೇಶಗಳಿಗೆ ಸಿದ್ಧಪಡಿಸಿದ ಸರಕುಗಳು ಮತ್ತು ಸೇವೆಗಳನ್ನು ಖರೀದಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಉದಾಹರಣೆಗೆ, ಲಕ್ಸುರಿ ಬ್ರ್ಯಾಂಡ್‌ನಲ್ಲಿ, ಕಂಟ್ರಿ ಹೆಡ್ ಇರುವಂತೆಯೇ ಬಹು ಪ್ರದೇಶ ಅಥವಾ ನಿರ್ದಿಷ್ಟ ಪ್ರದೇಶದ ಖರೀದಿದಾರರು ಇರಬಹುದು.
ಖರೀದಿದಾರರು ವ್ಯಾಪಕವಾದ ಸಂಶೋಧನಾ-ಆಧಾರಿತ ಕೌಶಲ್ಯಗಳನ್ನು ಹೊಂದಿರಬೇಕು, ಅವರು ಗ್ರಾಹಕರಿಗಿಂತ ಮುಂಚಿತವಾಗಿ ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನಿಪುಣನಾಗಿರಬೇಕು. ಇವರು ಹೆಚ್ಚು ಪ್ರವಾಸವನ್ನು ಕೈಗೊಳ್ಳುವವರು ಆಗಿರಬೇಕು.
ಇದನ್ನೂ ಓದಿ: Career Options: ಎಂಎಸ್ ಎಕ್ಸೆಲ್ ಒಂದನ್ನು ಕಲಿತರೆ ಸಾಕು; ಲಕ್ಷಗಳ ಪ್ಯಾಕೇಜಿನ ಈ ಉದ್ಯೋಗಗಳು ಸಿಗುತ್ತೆ
ಇವರು ಮುಕ್ತ ಮನಸ್ಸು ಮತ್ತು ಇತರ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳ ಬಗ್ಗೆ ಸೂಕ್ಷ್ಮತೆಯನ್ನು ಹೊಂದಿರಬೇಕು. ಉತ್ಪನ್ನ ವರ್ಗಗಳು, ಪ್ರಕಾರಗಳು ಮತ್ತು ನಿರ್ದಿಷ್ಟತೆಗಳ ಜ್ಞಾನವನ್ನು ಹೊಂದಿರುವುದರ ಹೊರತಾಗಿ, ಖರೀದಿದಾರರು ಗುಣಮಟ್ಟದ ಕುರಿತು ಅತ್ಯಂತ ಜಾಗೃತರಾಗಿರಬೇಕು.
-ಹೀಗೆಯೇ ಈ 5 ಉದ್ಯೋಗಗಳು ಲಕ್ಸುರಿ ಬ್ರಾಂಡ್ ಮ್ಯಾನೇಜ್‌ಮೆಂಟ್ ಕೋರ್ಸ್‌ನಲ್ಲಿರುವ ದಿ ಬೆಸ್ಟ್ ಉದ್ಯೋಗಗಳು ಆಗಿವೆ ಎಂದ್ರೂ ತಪ್ಪಾಗಲಾರದು. ನೀವು ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಬೇಕಿಂದ್ರೆ ಅಥವಾ ಈಗಾಗಲೇ ಈ ಕೋರ್ಸ್ ಮುಗಿಸಿದ್ರೆ ನೀವು ಈ ಉದ್ಯೋಗಗಳನ್ನು ಟ್ರೈ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ