ಹೊಸ ವರ್ಷ (New Year 2023) ಹೊಸ ಉತ್ಸಾಹವನ್ನು ಹೊತ್ತು ತರುತ್ತದೆ. ಹೊಸದಾಗಿ ಏನನ್ನಾದರೂ ಆರಂಭಿಸಲು ಹೊಸ ವರ್ಷ ಒಂದೊಳ್ಳೆ ಅವಕಾಶ. ಅದರಲ್ಲೂ ವಿದ್ಯಾರ್ಥಿಗಳಿಗೆ ಸರಿಯಾದ ವೃತ್ತಿ ಆಯ್ಕೆ (Career Choice) ಮಾಡಲು ಇದು ಸುಸಮಯ. ಕರಿಯರ್ ಆಯ್ಕೆ ವಿಷಯಕ್ಕೆ ಬಂದಾಗ ಗೊಂದಲಗಳಾಗೋದು ಸಾಮಾನ್ಯ. ಯಾವ ಕ್ಷೇತ್ರಕ್ಕೆ ಹೋಗಬೇಕು, ಎಂತಹ ಉದ್ಯೋಗ (Job) ಮಾಡಲು ಶುರು ಮಾಡಿದರೆ ಭವಿಷ್ಯ ಚೆನ್ನಾಗಿರುತ್ತದೆ ಎಂದು ಯೋಚಿಸುತ್ತಾರೆ. ಅದಕ್ಕಾಗಿ 5 ಅತ್ಯುತ್ತಮ ಸಲಹೆಗಳೊಂದಿಗೆ ನಾವು ಬಂದಿದ್ದೇವೆ. ಈ 5 ಕರಿಯರ್ ಆಯ್ಕೆಗಳು 2023ರಲ್ಲಿ ನಿಮ್ಮ ವೃತ್ತಿಜೀವನವನ್ನು ಲಾಭದಾಯಕವಾಗಿಸುತ್ತವೆ. ಹಾಗಾದರೆ ಬನ್ನಿ ಆ 5 ವೃತ್ತಿ ಆಯ್ಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
1) ಸಾಫ್ಟ್ವೇರ್ ಇಂಜಿನಿಯರಿಂಗ್: ಈ ಹುದ್ದೆಗೆ ಡಿಮ್ಯಾಂಡ್ ಕಡಿಮೆಯೇ ಆಗಿಲ್ಲ. ಕರಿಯರ್ ವಿಷಯಕ್ಕೆ ಬಂದರೆ 2023ರಲ್ಲೂ ಇದೊಂದು ಅದ್ಭುತ ಆಯ್ಕೆ ಅಂತಲೇ ಹೇಳಬಹುದು. ದೊಡ್ಡ ಸಂಬಳದ ಜೊತೆ ವೃತ್ತಿ ಬೆಳವಣಿಗೆಯೂ ನಿಮಗೆ ತೃಪ್ತಿ ನೀಡುತ್ತದೆ. ಇನ್ನು ನಮ್ಮ ಭಾರತದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಉದ್ಯೋಗಗಳಲ್ಲಿ ಸಾಫ್ಟ್ ವೇರ್ ಇಂಜಿನಿಯರಿಂಗ್ ಹುದ್ದೆಯೂ ಒಂದು. ಹೀಗಾಗಿ ಈ ವೃತ್ತಿ ಆಯ್ಕೆ ಸೇಫ್ ಎನ್ನಬಹುದು.
2) ಸೇಲ್ಸ್ ಅಂಡ್ ಬ್ಯುಸಿನೆಸ್ ಡೆವಲೆಪ್ಮೆಂಟ್: ಮಾರಾಟ ವಿಭಾಗ ಯಾವುದೇ ಬ್ಯುಸಿನೆಸ್ನಲ್ಲಿ ಅತ್ಯಂತ ಮುಖ್ಯವಾದದ್ದು. ಉದ್ಯಮಕ್ಕೆ ಲಾಭವನ್ನು ತಂದು ಕೊಡುವುದು ಸೇಲ್ಸ್ ಡಿಪಾರ್ಟ್ಮೆಂಟ್ ಹಾಗಾಗಿ ಎಲ್ಲಾ ಕ್ಷೇತ್ರದಲ್ಲೂ ಸೇಲ್ಸ್ ವಿಭಾಗದವರಿಗೆ ಸಖತ್ ಡಿಮ್ಯಾಂಡ್ ಇರುತ್ತದೆ. ಹೀಗಾಗಿ ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು ನಿಜಕ್ಕೂ ಜಾಣತನ.
3) ಕ್ವಾಲಿಟಿ ಅನಾಲಿಸ್ಟ್: 2023 ರಲ್ಲಿ ಗುಣಮಟ್ಟದ ವಿಶ್ಲೇಷಕರ ವೃತ್ತಿಯ ಬೇಡಿಕೆಯ ವೃತ್ತಿಯಾಗಲಿದೆ. ಹೆಚ್ಚಿನ ವ್ಯವಹಾರಗಳು ಉತ್ಪನ್ನ ತಯಾರಿಕೆಯನ್ನು ಆಧರಿಸಿರುವುದರಿಂದ, ಗುಣಮಟ್ಟ ವಿಶ್ಲೇಷಕ ಉದ್ಯೋಗಗಳು ಭವಿಷ್ಯದಲ್ಲಿ ಬೇಡಿಕೆಯಲ್ಲಿರುತ್ತವೆ. ಸಾಫ್ಟ್ವೇರ್ ಮತ್ತು ಉತ್ಪನ್ನಗಳಲ್ಲಿನ ದೋಷಗಳನ್ನು ಪತ್ತೆಹಚ್ಚುವಲ್ಲಿ ಕ್ವಾಲಿಟಿ ಅನಾಲಿಸ್ಟ್ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಬಳಕೆದಾರರಿಗೆ ಉತ್ತಮ ಗುಣಮಟ್ಟದ ಅನುಭವವನ್ನು ನೀಡುವಲ್ಲಿ ಇವರ ಪಾತ್ರ ಮಹತ್ವದ್ದು.
ಇದನ್ನೂ ಓದಿ: Interview Tips-5: ಇಂಟರ್ವ್ಯೂನಲ್ಲಿ ನಿಮ್ಮ ಪರಿಚಯ ಮಾಡಿಕೊಡುವಾಗ ಈ ಮಾಹಿತಿಗಳನ್ನು ಹೇಳಬೇಡಿ
4) ಹೆಲ್ತ್ ಅಂಡ್ ಮೆಡಿಕಲ್ ಕೇರ್: ಆರೋಗ್ಯ ಕ್ಷೇತ್ರದಲ್ಲಿ ಎಂದಿಗೂ ಉದ್ಯೋಗ ಕೊರತೆ ಉಂಟಾಗುವುದಿಲ್ಲ. 2023ರಲ್ಲೂ ವೃತ್ತಿಪರರಿಗೆ ಸಾಕಷ್ಟು ಅವಕಾಶಗಳಿವೆ. ತಜ್ಞರ ಪ್ರಕಾರ ಈ ಕ್ಷೇತ್ರಗಳಲ್ಲಿ ಮುಂಬರುವ ವರ್ಷಗಳು ಲಾಭದಾಯಕವಾಗಿದೆ. ಮತ್ತೆ ಕೊರೊನಾ ಅಲೆ ಬರುವ ಮುನ್ಸೂಚನೆ ಇದ್ದು, ಆರೋಗ್ಯ ಕ್ಷೇತ್ರ ಅಲರ್ಟ್ ಆಗಿದೆ. ಮೆಡಿಕಲ್ ಸಂಬಂಧಿತ ಯಾವುದೇ ವೃತ್ತಿ ನಿಮಗೆ ಉದ್ಯೋಗ ಭದ್ರತೆಯನ್ನು ನೀಡುತ್ತೆ.
5) ಆರ್ಟಿಫಿಷಲ್ ಇಂಟೆಲಿಜೆನ್ಸ್: ಕೃತಕ ಬುದ್ಧಿಮತ್ತೆ ತಜ್ಞರಿಗೆ 2023ರಲ್ಲಿ ಹೆಚ್ಚಿನ ಬೇಡಿಕೆ ಇರಲಿದೆ. ಮುಂಬರುವ ವರ್ಷಗಳಲ್ಲಿ ಈ ಕ್ಷೇತ್ರವು ಸಂಭಾವ್ಯ ಬೆಳವಣಿಗೆಯನ್ನು ತೋರಿಸುವ ನಿರೀಕ್ಷೆಯಿದೆ. ಬ್ಯುರಿಂಗ್ ಕ್ಲಾಸ್ ಟೆಕ್ನಾಲಜೀಸ್ ಪ್ರಕಾರ, ಕೃತಕ ಬುದ್ಧಿಮತ್ತೆಯು ಹೆಚ್ಚು ಅಭಿವೃದ್ಧಿ ಹೊಂದುತ್ತದೆ ಎಂದು ಅಂದಾಜಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಈ ಕ್ಷೇತ್ರದಲ್ಲಿ ದಾಖಲೆಯ ಬೆಳವಣಿಗೆಯನ್ನು ನೋಡಬಹುದಾಗಿದೆ.
ಮೇಲಿನ ವೃತ್ತಿಗಳನ್ನು ಆಯ್ಕೆ ಮಾಡುವುದು ನಿಮಗೆ ಒಳ್ಳೆ ವೃತ್ತಿಜೀವನವನ್ನು ನೀಡಲಿದೆ. ಆರಂಭದಲ್ಲೇ ಮಾಡುವ ಸರಿಯಾದ ನಿರ್ಧಾರ ನಿಮ್ಮನ್ನು ಸರಿಯಾದ ದಿಕ್ಕಿಗೆ ಕರೆದೊಯ್ಯುತ್ತದೆ ಎಂಬುವುದನ್ನು ಮರೆಯಬೇಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ