ಕೃತಕ ಬುದ್ಧಿಮತ್ತೆಯ (Artificial Intelligence) ಆಗಮನದೊಂದಿಗೆ ಉದ್ಯೋಗ ರಂಗದಲ್ಲಿ ಇದೀಗ ಹೊಸ ಆತಂಕ, ಕಳವಳ ಸೃಷ್ಟಿಯಾಗಿದೆ. ಇನ್ನು ಮುಂದೆ ಉದ್ಯೋಗಿಗಳು ನಿರ್ವಹಿಸುವ ಕೆಲಸವನ್ನು ಕೃತಕ ಬುದ್ಧಿಮತ್ತೆ ನಿರ್ವಹಿಸಲಿದೆ ಹಾಗಾಗಿ ಉದ್ಯೋಗಿಗಳಿಗೆ (Employee) ಅವಕಾಶಗಳಿರುವುದಿಲ್ಲ ಎಂಬ ಮಾತು ಉದ್ಯೋಗ (Job) ವಲಯದಲ್ಲಿ ಕೇಳಿಬರುತ್ತಿದ್ದು ಹೊಸ ಅಪಾಯದ ಮುನ್ಸೂಚನೆಯಾಗಲಿದೆಯೇ ಎಂಬುದು ಹೆಚ್ಚಿನವರಿಗೆ ಆತಂಕವನ್ನುಂಟು ಮಾಡಿದೆ.
ತಂತ್ರಜ್ಞಾನದ ಪ್ರಗತಿ
ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ, ಮುಖ್ಯವಾಗಿ ಆರ್ಥಿಕ ಕಾರಣಗಳಿಗಾಗಿ ಉದ್ಯೋಗಿ ವಜಾಗೊಳಿಸುವಿಕೆಗೆ ಹೆಚ್ಚಿನ ತಂತ್ರಜ್ಞಾನ ಸಂಸ್ಥೆಗಳು ಮುಂದಾಗಿದ್ದು ಚಾಟ್‌ಜಿಪಿಟಿ ಹಾಗೂ ಎಐಗಳೇ ಇನ್ನು ಉದ್ಯೋಗಿಗಳ ಬದಲಿಗೆ ಕಾರ್ಯನಿರ್ವಹಿಸಲಿವೆ, ಹಾಗಾಗಿಯೇ ಅಸಂಖ್ಯಾತ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂಬ ಸುದ್ದಿಯೂ ಇದೆ.
ಎಲಾನ್ ಮಸ್ಕ್ ನೀಡಿರುವ ಸಲಹೆಗಳೇನು?
ಹೀಗಾಗಿ ಹೊಸದಾಗಿ ವೃತ್ತಿಜೀವನವನ್ನು ನಡೆಸುವವರು ಹಾಗೂ ಪ್ರಸ್ತುತ ವೃತ್ತಿಜೀವನ ನಡೆಸುತ್ತಿರುವವರು ಗೊಂದಲಕ್ಕೆ ಒಳಗಾಗಿದ್ದು ಯಾವ ವೃತ್ತಿಯನ್ನು ಆರಿಸಿಕೊಳ್ಳಬೇಕು, ಯಾವ ಕ್ಷೇತ್ರವನ್ನು ಪ್ರವೇಶಿಸಬೇಕು ಎಂಬ ನಿರ್ಧಾರ ತಾಳಲಾರದೇ ಗೊಂದಲಕ್ಕೊಳಗಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ಆಸಕ್ತರು ಅಪ್ಲೈ ಮಾಡಿ
ಈ ಸಮಯದಲ್ಲಿ ಟೆಕ್ ದೈತ್ಯ ಎಲಾನ್ ಮಸ್ಕ್ ಹೊಸ ತಂತ್ರಜ್ಞಾನ ಟ್ರೆಂಡ್ ಕುರಿತಾದ ಅನಿಸಿಕೆಗಳನ್ನು ಹಂಚಿಕೊಂಡಿದ್ದು AI ಯುಗದಲ್ಲಿ ತಮ್ಮ ವೃತ್ತಿ ಆಯ್ಕೆಗಳ ಬಗ್ಗೆ ಯುವಜನರಿಗೆ ಸಲಹೆ ನೀಡಿದ್ದಾರೆ.
ಎಐ ಕುರಿತ ಅನಿಸಿಕೆಗಳನ್ನು ಹಂಚಿಕೊಂಡ ಮಸ್ಕ್
ತಮ್ಮದೇ ಮಕ್ಕಳಿಗೆ ಶಿಫಾರಸು ಮಾಡುವ ವೃತ್ತಿ ಆಯ್ಕೆಗಳ ಬಗ್ಗೆ ಮಸ್ಕ್ ಅವರನ್ನು ಕೇಳಿದಾಗ ಎಐ ಕುರಿತ ಅನಿಸಿಕೆಗಳನ್ನು ಮಸ್ಕ್ ಹಂಚಿಕೊಂಡಿದ್ದಾರೆ.
ಆಸಕ್ತಿಯ ಮೇಲೆ ಗಮನ ಹರಿಸಿ, ವಿಷಯದ ಮೇಲೆ ಕೇಂದ್ರೀಕರಿಸಬೇಡಿ
ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಟೆಕ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವಾಗ ಮಸ್ಕ್ ಕೆಲವೊಂದು ಅಮೂಲ್ಯ ಮಾರ್ಗದರ್ಶನಗಳನ್ನು ನೀಡಿದ್ದಾರೆ. ಮಸ್ಕ್ ಅವರ ಪ್ರತಿಕ್ರಿಯೆಯು ವೃತ್ತಿಜೀವನದ ಹಾದಿಯನ್ನು ನಿರ್ಧರಿಸುವಾಗ ಅವರ ಸ್ವಂತ ಮಕ್ಕಳ ಕುರಿತಾದ ಅನಿಸಿಕೆಗಳನ್ನು ಹಂಚಿಕೊಂಡಿದ್ದು ಅವರವರ ಆಸಕ್ತಿ ಹಾಗೂ ಉದ್ದೇಶಗಳಿಗೆ ಅನುಗುಣವಾಗಿ ವೃತ್ತಿ ನಿರ್ಧಾರವನ್ನು ಮಾಡಿ ಎಂದು ತಿಳಿಸಿದ್ದಾರೆ.
ಮಾನವ ಕ್ರಿಯಾತ್ಮಕತೆಗೆ ಬೆಲೆ ಇದ್ದೇ ಇರುತ್ತದೆ
ವಿವಿಧ ವೃತ್ತಿಗಳಲ್ಲಿ ಎಐ ಮಾನವನ ಸಾಮರ್ಥ್ಯಗಳನ್ನು ಮೀರಿಸುವ ಕಾರ್ಯದಕ್ಷತೆಯನ್ನು ಪ್ರದರ್ಶಿಸಿದರೂ ಮಾನವ ಬುದ್ಧಿಮತ್ತೆ, ಕ್ರಿಯಾತ್ಮಕತೆ ಹಾಗೂ ಕಾರ್ಯಕ್ಷಮತೆಗೆ ಎಂದಿಗೂ ಬೆಲೆ ಇರುತ್ತದೆ ಎಂಬ ಅಂಶವನ್ನು ಒತ್ತಿಹೇಳಿದ್ದಾರೆ.
ಎಐ ಏನು ಮಾಡಬಹುದು ಹಾಗೂ ನಾನು ಏನು ಮಾಡಲಾಗುವುದಿಲ್ಲ ಎಂಬುದರ ಬಗ್ಗೆ ಆಲೋಚಿಸದಿರಿ
ತನ್ನ ಕಂಪನಿಗಳನ್ನು ಸ್ಥಾಪಿಸಲು ಅವರು ಮಾಡಿದ ಸಮರ್ಪಣೆ ಮತ್ತು ತ್ಯಾಗವನ್ನು ಪ್ರತಿಬಿಂಬಿಸುವ ಮಸ್ಕ್, AI ತಂತ್ರಜ್ಞಾನದಲ್ಲಿನ ತ್ವರಿತ ಪ್ರಗತಿಯ ಉದ್ದೇಶದಲ್ಲಿ ತಮ್ಮ ಪ್ರಯತ್ನಗಳ ಮಹತ್ವದ ಬಗ್ಗೆ ಪ್ರಶ್ನಿಸಿದ್ದಾರೆ. ವೃತ್ತಿ ರಂಗದಲ್ಲಿ ಪ್ರೇರಣೆ ಹಾಗೂ ನಿರ್ಣಯವನ್ನು ಕಾಪಾಡಿಕೊಳ್ಳುವ ಅಂಶಕ್ಕೆ ಬದ್ಧವಾಗಿರಿ ಎಂದು ಮಸ್ಕ್ ಸಲಹೆ ನೀಡಿದ್ದಾರೆ.
ಜೀವನದಲ್ಲಿ ಅರ್ಥವನ್ನು ಕಂಡುಕೊಳ್ಳಿ
ತಂತ್ರಜ್ಞಾನ ಅಭಿವೃದ್ಧಿ ಕಾಣುತ್ತಿರುವಂತೆಯೇ ಎಐಯಂತಹ ಟೆಕ್ನಾಲಜಿ ಬರುವುದು ಸಾಮಾನ್ಯ ಎಂದು ತಿಳಿಸಿದ್ದಾರೆ. AI ನಿಮ್ಮ ಕೆಲಸವನ್ನು ನಮಗಿಂತ ಉತ್ತಮವಾಗಿ ಮಾಡಲು ಸಾಧ್ಯವಾದರೆ ನಾವು ಜೀವನದಲ್ಲಿ ಹೇಗೆ ಅರ್ಥವನ್ನು ಕಂಡುಕೊಳ್ಳಬಹುದು ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದು ಮಸ್ಕ್ ತಿಳಿಸಿದ್ದಾರೆ.
ಮಸ್ಕ್ ಅವರು ತಮ್ಮ ವೃತ್ತಿಜೀವನದಲ್ಲಿ ಯುವಜನರನ್ನು ಅವರು ಅನುಸರಿಸಿದ ಅದೇ ಹಾದಿಯನ್ನು ಪ್ರಾರಂಭಿಸಲು ಸಲಹೆ ನೀಡಿದ್ದಾರೆ. ವೃತ್ತಿಜೀವನದಲ್ಲಿ ಮುನ್ನಡೆಯಲು ಹಾಗೂ ಉದ್ದೇಶಿತ ಗುರಿ ಸಾಧಿಸಲು ವೃತ್ತಿಜೀವನದಲ್ಲಿ ದೃಢನಿಶ್ಚಯ ಮಾಡಿಕೊಳ್ಳಬೇಕು ಎಂಬ ಸಲಹೆಯನ್ನು ನೀಡಿದ್ದಾರೆ.
ಪ್ರಾಮಾಣಿಕವಾಗಿ ಆಕರ್ಷಿಸುವ ಮತ್ತು ತೃಪ್ತಿಪಡಿಸುವ ಕೆಲಸವನ್ನು ಮುಂದುವರಿಸಲು ಅವರು ಸಲಹೆ ನೀಡಿದ್ದಾರೆ. ಉದ್ಯೋಗಿಗಳು ತಮ್ಮ ವೈಯಕ್ತಿಕ ಸಾಮರ್ಥ್ಯ ಹೆಚ್ಚಿಸುವ ಮೂಲಕ ಎಐ ಒದಗಿಸುವ ಅಡೆತಡೆಗಳನ್ನು ಪರಿಹರಿಸಬಹುದು ಹಾಗೂ ಮುಂದುವರಿದ ತಂತ್ರಜ್ಞಾನಗಳೊಂದಿಗೆ ಜೊತೆಯಾಗಿ ಕಾರ್ಯನಿರ್ವಹಿಸಲು ಅರ್ಥಪೂರ್ಣ ವಿಧಾನಗಳನ್ನು ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ