ಕೆಲ ತಿಂಗಳುಗಳ ಹಿಂದೆ ನೋಯ್ಡಾದ ಅವಳಿ ಗೋಪುರಗಳನ್ನು ಕೆಡವಿದ್ದು (Noida Twin Tower Demolition), ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಕಟ್ಟಡ ಕುಸಿದು ಬೀಳುವುದನ್ನು ಸಂಭ್ರಮದಿಂದ ವಿಡಿಯೋ ಮಾಡಿದ್ದರು. ಕೇವಲ ಒಂದು ಬಟನ್ ಒತ್ತಿದ್ದರಿಂದ 40 ಅಂತಸ್ತಿನ ಕಟ್ಟಡವು 9 ಸೆಕೆಂಡುಗಳಲ್ಲಿ ನೆಲಸಮವಾಯಿತು. ಕಟ್ಟಡವನ್ನು ಬೀಳಿಸುವ (Demolition) ಜವಾಬ್ದಾರಿಯನ್ನು ಭಾರತದ ಬ್ಲಾಸ್ಟರ್ ಎಡಿಫೈಸ್ ಕಂಪನಿಯ ಚೇತನ್ ದತ್ತ ಹೊತ್ತಿದ್ದರು. ಕಟ್ಟಡಗಳನ್ನು ಬೀಳಿಸಲು ಯಾವ ಟೆಕ್ನಾಲಜಿ ಬಳಸುತ್ತಾರೆ. ಕಟ್ಟಡ ಬೀಳುಸುವುದಕ್ಕೆ ಪ್ರತ್ಯೇಕ ಇಂಜಿನಿಯರ್ ಗಳು ಇರುತ್ತಾರಾ? ಅವರು ಏನು ಓದಿರುತ್ತಾರೆ? ಅವರಿಗೆ ಸಂಬಳ ಎಷ್ಟು? ಎಂಬೆಲ್ಲಾ ವಿಷಯಗಳು ಜನಸಾಮಾನ್ಯರನ್ನು ಕಾಡಿತ್ತು.
ಸ್ಪೋಟಕಗಳನ್ನು ಬಳಸಿ ಕಟ್ಟಡಗಳನ್ನು, ಸುರಂಗಗಳನ್ನು , ಗಣಿಗಳನ್ನು ಬ್ಲಾಸ್ ಮಾಡಲು ಪ್ರತ್ಯೇಕ ತಜ್ಞರು ಇರುತ್ತಾರೆ. ಅವರನ್ನು ಇಕ್ಸ್ಪ್ಲೊಸಿವ್ ಇಂಜಿನಿಯರ್ಸ್ (Explosive Engineering) ಎನ್ನುತ್ತಾರೆ.
ಸ್ಫೋಟಕ ಇಂಜಿನಿಯರ್/ ಬ್ಲಾಸ್ಟರ್ ಎಂದರೇನು?
ಈ ಬ್ಲಾಸ್ಟರ್ಗಳನ್ನು ಸ್ಫೋಟಕ ಎಂಜಿನಿಯರ್ಗಳು ಎಂದು ಕರೆಯಲಾಗುತ್ತದೆ. ಗಣಿಗಾರಿಕೆ ಮತ್ತು ದೊಡ್ಡ ನಿರ್ಮಾಣ ಕಾರ್ಯಗಳಿಗೆ ಬೇಕಾದ ಸ್ಫೋಟಕಗಳನ್ನು ನಿರ್ವಹಿಸುವುದು ಇವರ ಕೆಲಸ. ಗಣಿಗಾರಿಕೆ, ಪರ್ವತಗಳನ್ನು ಕೆಡವೋದು, ಗ್ರಾನೈಟ್ ಕಲ್ಲುಗಳಂತಹ ಕೆಲಸಗಳಲ್ಲಿ ಇವರು ಅಗತ್ಯವಿದೆ. ಬ್ಲಾಸ್ಟರ್ನ ಕೆಲಸವು ತುಂಬಾ ಭಯಾನಕವಾಗಿರುತ್ತದೆ. ಈ ಬ್ಲಾಸ್ಟರ್ಗಳು ಅನೇಕ ಯಂತ್ರಗಳು, ಸ್ಫೋಟಕಗಳನ್ನು ಬಳಸುತ್ತಾರೆ. ಈ ರೀತಿ ಸ್ಫೋಟಕ ಇಂಜಿನಿಯರ್ ಆಗಲು ಯಂತ್ರೋಪಕರಣಗಳು ಮತ್ತು ಸಿವಿಲ್ಗೆ ಸಂಬಂಧಿಸಿದ ವಿಷಯಗಳನ್ನು ಅಧ್ಯಯನ ಮಾಡಬೇಕು.
ಬ್ಲಾಸ್ಟರ್ ಆಗುವುದು ಹೇಗೆ?
1)ಬ್ಲಾಸ್ಟರ್ ಡಿಪ್ಲೊಮಾ ಸರ್ಟಿಫಿಕೇಟ್ ಮಾಡಬಹುದು
2) ಜಾರ್ಖಂಡ್ ರಾಯ್ ವಿಶ್ವವಿದ್ಯಾಲಯದಿಂದ ಮೈನಿಂಗ್ ಇಂಜಿನಿಯರಿಂಗ್ನಲ್ಲಿ ಡಿಪ್ಲೊಮಾ
3) ಇಂಟರ್ನ್ಯಾಷನಲ್ ಸೊಸೈಟಿ ಆಫ್ ಎಕ್ಸ್ಪ್ಲೋಸಿವ್ ಇಂಜಿನಿಯರ್ಸ್ ISEE ನಿಂದ ಪ್ರಾಯೋಗಿಕ ಬ್ಲಾಸ್ಟಿಂಗ್ ಫಂಡಮೆಂಟಲ್ಸ್ ಕೋರ್ಸ್ ಮಾಡಬಹುದು.
ಇದಲ್ಲದೇ ಸುರತ್ಕಲ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕದಿಂದ ಬಿ.ಟೆಕ್.(ಮೈನಿಂಗ್ ಇಂಜಿನಿಯರಿಂಗ್) ಕೋರ್ಸ್ ಮಾಡಬಹುದು. ಇದಕ್ಕಾಗಿ, ಅನೇಕ ಇತರ ಡಿಪ್ಲೊಮಾ ಕಾರ್ಯಕ್ರಮಗಳು ಮತ್ತು ಪ್ರಮಾಣಪತ್ರ ಕೋರ್ಸ್ಗಳನ್ನು ಸಹ ನಡೆಸಲಾಗುತ್ತಿದೆ. ಈ ಕೋರ್ಸ್ ಕುರಿತು ಮಾಹಿತಿಯನ್ನು ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತೆ ಸಂಸ್ಥೆಯ PESO- peso.gov.in ವೆಬ್ಸೈಟ್ನಿಂದ ಪಡೆಯಬಹುದು.
ಇದನ್ನೂ ಓದಿ: BE vs B.Tech: ಮುಂದೆ ಒಳ್ಳೆಯ ಕೆಲಸ ಸಿಗಬೇಕು ಎಂದರೆ BE ಮಾಡಬೇಕಾ, B.Tech ಓಕೆ ನಾ?
ಕೋರ್ಸ್ ಮಾಡಲು ಬೇಕಾದ ಅರ್ಹತೆಗಳೇನು?
ಹಲವು ಸಂಸ್ಥೆಗಳು 10ನೇ ತರಗತಿಯ ನಂತರವೂ ಈ ಕೋರ್ಸ್ ಅನ್ನು ನೀಡುತ್ತವೆ. ನೀವು ಡಿಪ್ಲೊಮಾ ಮಾಡಲು ಬಯಸಿದರೆ SSLC ನಂತರ ಈ ಕೋರ್ಸ್ ಮಾಡಬಹುದು. ಇದರ ನಂತರ, ನೀವು ಸಂಸ್ಥೆಯಲ್ಲಿ ಕನಿಷ್ಠ 1 ವರ್ಷ ಕೆಲಸವನ್ನು ಕಲಿಯಬೇಕು. ಇದಲ್ಲದೆ, ನೀವು ಮಾನ್ಯವಾದ ಚಾಲನಾ ಪರವಾನಗಿಯನ್ನು ಹೊಂದಿರಬೇಕು. ಈ ಕೋರ್ಸ್ ಮಾಡಲು, ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು.
ಬ್ಲಾಸ್ಟರ್ನ ಕೆಲಸವೇನು?
ಬ್ಲಾಸ್ಟರ್ ಎಂದರೆ ಸ್ಫೋಟಕ ಇಂಜಿನಿಯರ್. ಇವರು ಅನೇಕ ರೀತಿಯ ಕೆಲಸಗಳನ್ನು ಮಾಡಬೇಕು. ಸ್ಫೋಟಕ ಯಂತ್ರಗಳನ್ನು ಸರಿಯಾದ ಸ್ಥಳದಲ್ಲಿ ಇಡುವುದರಿಂದ ಹಿಡಿದು ಸ್ಫೋಟಕಗಳ ಮೇಲೆ ನಿಗಾ ಇಡುವ ಕೆಲಸವನ್ನೂ ಮಾಡುತ್ತಾರೆ. ಇದಲ್ಲದೆ, ಅವರು ಬ್ಲಾಸ್ಟಿಂಗ್ಗಾಗಿ ತಂತಿಗಳು ಮತ್ತು ಸಾಧನಗಳನ್ನು ಸಂಪರ್ಕಿಸುತ್ತಾರೆ. ಬ್ಲಾಸ್ಟ್ ಲೈನ್ಗಳ ನಡುವೆ ತಂತಿಗಳನ್ನು ಹಾಕುತ್ತಾರೆ. ಬ್ಲಾಸ್ಟಿಂಗ್ ಸಮಯದಲ್ಲಿ ನಿಯಂತ್ರಣ ಕೊಠಡಿಯಿಂದ ಮಾನಿಟರ್ ಮಾಡುತ್ತಾರೆ.
ವಾರ್ಷಿಕ ಪ್ಯಾಕೇಜ್ ಎಷ್ಟು?
ಬ್ಲಾಸ್ಟರ್ನ ವೇತನವು ಆತನ ಅನುಭವ ಮತ್ತು ಅರ್ಹತೆಯ ಮೇಲೆ ಆಧಾರಿಸಿರುತ್ತದೆ. ವಾರ್ಷಿಕವಾಗಿ ಸುಮಾರು 3 ಲಕ್ಷದಿಂದ 6 ಲಕ್ಷ ಆಗಿರಬಹುದು. ಇದಲ್ಲದೆ, ಅವರು ಆರೋಗ್ಯ ವಿಮೆ, ದಂತ ವಿಮೆ, ದೃಷ್ಟಿ ವಿಮೆ ಮತ್ತು ಸ್ವಯಂಪ್ರೇರಿತ ವಿಮಾ ಸೌಲಭ್ಯದಂತಹ ಅನೇಕ ಪ್ರಯೋಜನಗಳನ್ನು ಹೊಂದಿರುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ