• Home
  • »
  • News
  • »
  • jobs
  • »
  • Google ಕಂಪನಿಯಲ್ಲಿ 60 ಲಕ್ಷ ಪ್ಯಾಕೇಜ್​ನ ಕೆಲಸ ಗಿಟ್ಟಿಸಿಕೊಂಡ ಪೂಜಿತಾ- ಇವರ ಯಶಸ್ಸಿನ ಹಿಂದಿನ ಗುಟ್ಟೇನು?

Google ಕಂಪನಿಯಲ್ಲಿ 60 ಲಕ್ಷ ಪ್ಯಾಕೇಜ್​ನ ಕೆಲಸ ಗಿಟ್ಟಿಸಿಕೊಂಡ ಪೂಜಿತಾ- ಇವರ ಯಶಸ್ಸಿನ ಹಿಂದಿನ ಗುಟ್ಟೇನು?

ರಾವೂರಿ ಪೂಜಿತಾ

ರಾವೂರಿ ಪೂಜಿತಾ

ಹೌದು, ಗುಂಟೂರಿನ ಹುಡುಗಿ ರಾವೂರಿ ಪೂಜಿತಾ ಗೂಗಲ್‌ನಲ್ಲಿ 60 ಲಕ್ಷ ರೂಪಾಯಿಗಳ ಪ್ಯಾಕೇಜ್‌ ಇರುವ ಕೆಲಸದ ಆಫರ್ ಪಡೆದಿದ್ದಾಳೆ.

  • Trending Desk
  • Last Updated :
  • Guntur, India
  • Share this:

ಗುಂಟೂರು: ಗೂಗಲ್(Google), ಆಪಲ್(Apple) ಮತ್ತು ಅಮೆಜಾನ್(Amazon) ವಿಶ್ವದ ದೊಡ್ಡ ಟೆಕ್ ಕಂಪನಿಗಳಾಗಿದ್ದು(Tech Companies), ಈ ಕಂಪನಿಗಳ ಪೈಕಿ ಒಂದು ಕಂಪನಿಯಲ್ಲಾದರೂ ಕೆಲಸ ಪಡೆಯಬೇಕುನ್ನುವ ಕನಸು ಹಲವರಲ್ಲಿ ಇರುತ್ತದೆ. ಆದರೆ ಈ ಕಂಪನಿಗಳಲ್ಲಿ ಕೆಲಸ(Job) ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭವಲ್ಲ.


ಈ ದೈತ್ಯ ಟೆಕ್ ಕಂಪನಿಗಳಲ್ಲಿ ನೇಮಕಾತಿ ಮಾಡುವವರಿಂದ ಅನುಮೋದನೆ ಪಡೆಯಲು ಹಲವಾರು ಸುತ್ತಿನ ಸಂದರ್ಶನಗಳನ್ನು(Interviews) ಪಾಸ್ ಮಾಡಬೇಕಾಗುತ್ತದೆ. ಆದರೆ ಇದೀಗ ಗುಂಟೂರು(Guntur) ಮೂಲದ ವಿದ್ಯಾರ್ಥಿನಿಯೊಬ್ಬಳು ಗೂಗಲ್‌ನಲ್ಲಿ(Google) 60 ಲಕ್ಷ ಪ್ಯಾಕೆಜ್ ಇರುವ ಕೆಲಸದ ಆಫರ್ ಗಿಟ್ಟಿಸಿಕೊಂಡಿದ್ದಾಳೆ. ಹೌದು, ಗುಂಟೂರಿನ ಹುಡುಗಿ ರಾವೂರಿ ಪೂಜಿತಾ ಗೂಗಲ್‌ನಲ್ಲಿ 60 ಲಕ್ಷ ರೂಪಾಯಿಗಳ ಪ್ಯಾಕೇಜ್‌ ಇರುವ ಕೆಲಸದ ಆಫರ್ ಪಡೆದಿದ್ದಾಳೆ.


ಶ್ರದ್ಧೆಯಿಂದ ಓದಿದ್ದೆ ನನಗೆ ಈ ಆಫರ್ ಪಡೆಯಲು ಸಾಧ್ಯವಾಯ್ತು: ರಾವೂರಿ ಪೂಜಿತಾ


ಸದ್ಯ ತಾನು ಮಾಡಿರುವ ಸಾಧನೆ ಬಗ್ಗೆ ಹಾಗೂ ಅದರ ಹಿಂದೆ ಪಟ್ಟ ಪರಿಶ್ರಮದ ಬಗ್ಗೆ ರಾವೂರಿ ಈ ಕೆಳಗಿನಂತೆ ವಿವರಿಸಿದ್ದಾಳೆ


"ನಾನು ಬಿ.ಟೆಕ್ ಮೊದಲ ವರ್ಷದಲ್ಲಿದ್ದಾಗ ಕೋವಿಡ್ -19 ಉಲ್ಬಣಗೊಂಡಿತ್ತು, ಆಗ, ಲಾಕ್‌ಡೌನ್ ಹೇರಲಾಯಿತು, ಅನೇಕ ಜನರಂತೆ ನನಗೆ ಕಾಲೇಜಿಗೆ ಹೋಗಿ ಓದಲು ಅವಕಾಶವಿರಲಿಲ್ಲ, ಅದರಿಂದ ನನಗೇನು ತೊಂದರೆಯಾಗಲಿಲ್ಲ.ಆನ್‌ಲೈನ್‌ನಲ್ಲಿ ಕಾಲೇಜು ಸಿಬ್ಬಂದಿ ಮಾಡುವ ಉಪನ್ಯಾಸಗಳನ್ನು ನಾನು ಗಮನವಿಟ್ಟು ಕೇಳುತ್ತಿದ್ದೆ, ನನ್ನ ಅನುಮಾನಗಳನ್ನು ಮತ್ತು ಸಮಸ್ಯೆಗಳನ್ನು ಸಾಧ್ಯವಾದಷ್ಟು ನನ್ನ ಶಿಕ್ಷಕರಿಗೆ ಮತ್ತು ಹಿರಿಯರಿಗೆ ಕೇಳುತ್ತಿದ್ದೆ.


ಆನ್​ಲೈನ್​ ನಲ್ಲಿ ಮಾಹಿತಿ ಕಲೆ ಹಾಕುತ್ತಿದ್ದ ವಿದ್ಯಾರ್ಥಿನಿ


ನನಗೆ ಬೇಕಿರುವ ಮಾಹಿತಿಯನ್ನು ನಾನು ಆನ್‌ಲೈನ್‌ನಲ್ಲಿ ಹುಡುಕುತ್ತಿದ್ದೆ. ನನ್ನ ತಂದೆ ಖಾಸಗಿ ಬ್ಯಾಂಕ್‌ನಲ್ಲಿ ಅಧಿಕಾರಿ. ನನ್ನ ತಂಗಿ ಏಳನೇ ತರಗತಿ ಓದುತ್ತಿದ್ದಾಳೆ. ನನ್ನ ಅಧ್ಯಯನಕ್ಕೆ ಮಾರ್ಗದರ್ಶನ ನೀಡುವವರು ಯಾರೂ ಇರಲಿಲ್ಲ. ಹಾಗಾಗಿ ನಾನೇ ಓದಿಕೊಳ್ಳುತ್ತಿದೆ ಎಂದು ರಾವೂರಿ ಪೂಜಿತಾ ಹೇಳಿದ್ದಾರೆ.


ಜೆಇಇಯಲ್ಲಿ ನನಗೆ ಜಾರ್ಖಂಡ್ ಬಿಟ್ಸ್‌ನಲ್ಲಿ ಸೀಟ್ ಸಿಕ್ಕಿತ್ತು, ಆದರೆ ನನ್ನ ಪೋಷಕರು ಅಷ್ಟು ದೂರ ಹೋಗಿ ಕಲಿಯುವುದು ಬೇಡ ಎಂದರು. ಹಾಗಾಗಿ ನಾನು ಗುಂಟೂರಿನ ಕೆಎಲ್ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್‌ಗೆ ಸೇರಿಕೊಂಡೆ.


ಇದನ್ನೂ ಓದಿ: Exam Tips: ಬೋರ್ಡ್​ ಎಕ್ಸಾಂ & ಸ್ಪರ್ಧಾತ್ಮಕ ಪರೀಕ್ಷೆ ಒಟ್ಟಿಗೆ ಎದುರಿಸೋದು ಹೇಗೆ? ಇಲ್ಲಿವೆ ನೋಡಿ ಟಿಪ್ಸ್


ನಾನು ನನ್ನ ಮೊದಲ ವರ್ಷದಲ್ಲಿದ್ದಾಗ ಕೆಎಲ್ ವಿಶ್ವವಿದ್ಯಾಲಯವು ಸಮಸ್ಯೆ-ಪರಿಹರಿಸುವ ಕೋರ್ಸ್ ಅನ್ನು ಪರಿಚಯಿಸಿತು. ಅಲ್ಲಿ ನನ್ನ ಕೋಡಿಂಗ್ ಕಲಿಯುವ ಪ್ರಯಾಣ ಪ್ರಾರಂಭವಾಯಿತು.


ಯೂಟ್ಯೂಬ್ ನೋಡಿ ಕೋಡಿಂಗ್​ ಕಲಿತೆ- ಪೂಜಿತಾ


ಎರಡನೇ ಸೆಮಿಸ್ಟರ್‌ನ ಕೊನೆಯಲ್ಲಿ ಲಾಕ್‌ಡೌನ್ ಅನ್ನು ವಿಧಿಸಲಾಯಿತು. ನನಗೆ ಆನ್‌ಲೈನ್ ತರಗತಿಗಳು ಅರ್ಥವಾಗದಿದ್ದಾಗ, ನಾನು ಯೂಟ್ಯೂಬ್ ವೀಡಿಯೊಗಳನ್ನು ನೋಡುವ ಮೂಲಕ ಕೋಡಿಂಗ್ ಅನ್ನು ಕರಗತ ಮಾಡಿಕೊಳ್ಳಲು ಪ್ರಾರಂಭಿಸಿದೆ.


ಸಾಫ್ಟ್‌ವೇರ್ ಕಂಪನಿಗಳು ಕೋಡಿಂಗ್ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತವೆ, ಅದನ್ನು ಕರಗತ ಮಾಡಿಕೊಳ್ಳಲು ನಾನು ಅನೇಕ ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತಿದ್ದೆ.


ಕೋಡಿಂಗ್ ಕಲಿಯಲು, ಇತರ ಸಮಸ್ಯೆಗಳ ಪರಿಹಾರಕ್ಕಾಗಿ ಹಾಗೂ ಉದ್ಯೋಗ ಪಡೆಯಲು ಅಗತ್ಯವಿರುವ ಕೌಶಲ್ಯಗಳನ್ನು ಕಲಿಯಲು ನಾನು ಬಿಡುವಿನ ಸಮಯವನ್ನು ಬಳಸಿಕೊಂಡಿದ್ದೇನೆ.


ಆನ್​ಲೈನ್​ ಕ್ಲಾಸ್ ಕೇಳುತ್ತಿದ್ದೆ


ನಾನು ಉಚಿತ ಆನ್‌ಲೈನ್ ತರಗತಿಗಳನ್ನು ಆಲಿಸುತ್ತಿದ್ದೆ. ನನ್ನ ತಪ್ಪುಗಳ ಬಗ್ಗೆ ಪರಮಾರ್ಶೆ ಮಾಡಿಕೊಳ್ಳಲು ನಾನು ನನ್ನನ್ನು ಪರೀಕ್ಷಿಸಿಕೊಳ್ಳುತ್ತಿದ್ದೆ.


Leatcode, CodeChef, Prepbytes, BinarySearch.com, ಇತ್ಯಾದಿ ಸೈಟ್‌ಗಳು ಕೋಡಿಂಗ್‌ ಕಲಿಯಲು ಉತ್ತಮವಾಗಿವೆ. ನಾನು ಸಮಯ ನಿರ್ವಹಣೆ ಮಾಡುವುದನ್ನು ಕಲಿತಿದ್ದೇನೆ.


ಸಂದರ್ಶನ ಎದುರಿಸಿದ್ದು ಹೇಗೆ?


ಆನ್‌ಲೈನ್ ಮೌಲ್ಯಮಾಪನ ಮತ್ತು ಸಂದರ್ಶನಗಳನ್ನು ಅಭ್ಯಾಸ ಮಾಡಿದ್ದೇನೆ. ಹಲವು ಅಭ್ಯಾಸದ ಸಂದರ್ಶನಗಳಿಗೆ ಹಾಜರಾಗುತ್ತಿದ್ದೆ. ಆನ್‌ಲೈನ್‌ನಲ್ಲಿ ಹಿರಿಯರೊಂದಿಗೆ ಸಂಪರ್ಕದಲ್ಲಿದ್ದು, ಅವರ ಅನುಭವಗಳನ್ನು ತಿಳಿದುಕೊಳ್ಳುತ್ತಿದ್ದೆ.


ಇವೆಲ್ಲವೂ ನನಗೆ ಸಂದರ್ಶನವನ್ನು ಎದುರಿಸಲು ಬಹಳಷ್ಟು ಸಹಾಯ ಮಾಡಿತು. ಹೀಗಾಗಿಯೇ ನಾನು ಗೂಗಲ್, ಅಡೋಬ್ ಮತ್ತು ಅಮೆಜಾನ್ ಕಂಪನಿಗಳಿಂದ ಆಫರ್‌ಗಳನ್ನು ಪಡೆದುಕೊಂಡಿದ್ದೇನೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ. ಗೂಗಲ್‌ನಿಂದ 60 ಲಕ್ಷ ರೂಪಾಯಿಗಳ ಪ್ಯಾಕೇಜ್‌ ಇರುವ ಕೆಲಸದ ಅವಕಾಶವನ್ನು ಆರಿಸಿಕೊಂಡಿದ್ದೇನೆ.


ಮುಂದಿನ ವಾರ ಇಂಟರ್ನ್ ಆಗಿ ಸೇರುತ್ತಿದ್ದೇನೆ. ಮನ್ನಣೆ ಮತ್ತು ಕೆಲಸದ ಪಾಂಡಿತ್ಯವನ್ನು ಪಡೆದ ನಂತರ ಜನರಿಗೆ ಉಪಯುಕ್ತವಾದ ಉತ್ಪನ್ನಗಳನ್ನು ವಿನ್ಯಾಸಗೊಳಿಸುವುದು ನನ್ನ ಗುರಿಯಾಗಿದೆ" ಎಂದು ಹೇಳುತ್ತಾರೆ ಪೂಜಿತಾ. 

Published by:Latha CG
First published: