• ಹೋಂ
  • »
  • ನ್ಯೂಸ್
  • »
  • Jobs
  • »
  • Career Tips: ಕೆಲಸಕ್ಕೆ ರಿಸೈನ್ ಮಾಡಿದ ಬಳಿಕ ನೋಟಿಸ್ ಪಿರಿಯಡ್​ನಲ್ಲಿ ಈ ತಪ್ಪುಗಳನ್ನು ಮಾಡಬೇಡಿ

Career Tips: ಕೆಲಸಕ್ಕೆ ರಿಸೈನ್ ಮಾಡಿದ ಬಳಿಕ ನೋಟಿಸ್ ಪಿರಿಯಡ್​ನಲ್ಲಿ ಈ ತಪ್ಪುಗಳನ್ನು ಮಾಡಬೇಡಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನೋಟಿಸ್​ ಪಿರಿಯಡ್​ ನಲ್ಲಿ ನಿಮ್ಮ ವರ್ತನೆ ಮೇಲೆ ಹಿಡಿತವಿರಲಿ. ಹೊಸ ಕೆಲಸ ಸಿಕ್ಕರೆ ಹಳೆಯದನ್ನು ಮರೆಯಬಾರದು. ನಿಮ್ಮ ಕಂಪನಿಯ ನಿಯಮಗಳನ್ನು ಅನುಸರಿಸಿ.

  • Share this:

ಬಹುತೇಕ ಉದ್ಯೋಗಿಗಳು ಮಾರ್ಚ್-ಮೇ ತಿಂಗಳ ನಡುವೆ ಕೆಲಸ ಬದಲಾಯಿಸುತ್ತಾರೆ (Job Change). ಏಪ್ರಿಲ್​​ ಸಮಯಕ್ಕೆ ಹಳೆ ಉದ್ಯೋಗದಿಂದ ಸ್ಯಾಲರಿ ಹೈಕ್​ (Salary Hike) ಪಡೆದು, ಬೇರೆ ಕಂಪನಿಗೆ ಜಾಯ್ನ್​ ಆಗುತ್ತಾರೆ. ಆಗ ಸಂಬಳ, ಬಡ್ತಿ ಹೆಚ್ಚಾಗುತ್ತೆ ಅನ್ನೋದು ಉದ್ಯೋಗಿಗಳ ಪ್ಲಾನ್​. ಹೀಗೆ ಕೆಲಸ ಬಿಟ್ಟು ಹೊಸ ಕೆಲಸಕ್ಕೆ ಸೇರುವ ಸಮಯ ವೃತ್ತಿ (Career) ದೃಷ್ಟಿಯಿಂದ ಮಹತ್ವದ್ದು.


ನೀವು ಸಹ ಉದ್ಯೋಗವನ್ನು ಬದಲಾಯಿಸಲು ಯೋಜಿಸುತ್ತಿದ್ದರೆ, ಹಲವಾರು ವಿಷಯಗಳನ್ನು ಸರಿಯಾಗಿ ಪ್ಲಾನ್​ ಮಾಡಬೇಕು. ಹಳೆ ಕೆಲಸ ಬಿಡುವ ಭರದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಬೇಡಿ. ಹಳೆ ಉದ್ಯೋಗದ ಮೇಲೆ ಎಷ್ಟೇ ಅಸಮಾಧಾನ ಇದ್ದರೂ ಯಾವಾಗಲೂ ಪಾಸಿಟಿವ್​ ಆಗಿ ಕಂಪನಿಗೆ ರಾಜೀನಾಮೆ ನೀಡಿ.


ಉದ್ಯೋಗ ಬದಲಾವಣೆಗೆ ಹಲವು ಕಾರಣಗಳಿರಬಹುದು. ಸಾಮಾನ್ಯವಾಗಿ, ಜನರು ಉದ್ಯೋಗಗಳನ್ನು ಬದಲಾಯಿಸುವ ಏಕೈಕ ಕಾರಣ ವೃತ್ತಿಜೀವನದ ಬೆಳವಣಿಗೆ ಎನ್ನುತ್ತಾರೆ. ಆಫೀಸ್​ ನಲ್ಲಿ ಬಾಸ್​ ಅಥವಾ ಸಹದ್ಯೋಗಿಗಳ ಜೊತೆಗೆ ಸಂಬಂಧ ಕೆಟ್ಟಾಗ ಅನೇಕರು ಹೊಸ ಉದ್ಯೋಗವನ್ನು ಹುಡುಕಲು ಪ್ರಾರಂಭಿಸುತ್ತಾರೆ.




ಯಾವುದೇ ಕಾರಣವಿರಲಿ, ಹೊಸ ಉದ್ಯೋಗವನ್ನು ಪಡೆಯುವ ಮೊದಲೇ ಹಳೆಯದನ್ನು ಬಿಡುವ ತಪ್ಪನ್ನು ಮಾಡಬೇಡಿ. ಇದು ನಿಮಗೆ ತೊಂದರೆ ಉಂಟುಮಾಡಬಹುದು. ಹಳೆ ಆಫೀಸ್​ ಬಿಟ್ಟು ಹೊರಡುವ ಮೊದಲು ಕಠಿಣವಾಗಿ ನಡೆದುಕೊಳ್ಳಬೇಡಿ. ಇದು ನಿಮ್ಮ ಕೆರಿಯರ್​ ಗೆ ಡ್ಯಾಮೇಜ್​ ಮಾಡಬಹುದು.


ಮಾತುಕತೆಯಿಂದ ಎಲ್ಲವೂ ಸರಿ ಹೋಗಬಹುದು


ಕೆಲಸವನ್ನು ತೊರೆಯುವ ಮೊದಲು ಅಂದರೆ ರಾಜೀನಾಮೆ ನೀಡುವ ಮೊದಲು, ನಿಮ್ಮ ಬಾಸ್, ಹಿರಿಯ ಸಹ ಉದ್ಯೋಗಿಗಳು ಅಥವಾ HR ಮ್ಯಾನೇಜರ್ ಜೊತೆ ಮಾತನಾಡಿ. ಪರಸ್ಪರ ಚರ್ಚೆಯು ಸಮಸ್ಯೆಯನ್ನು ಪರಿಹರಿಸುವ ಸಾಧ್ಯತೆಯಿದೆ. ಈ ರೀತಿ ಮಾಡಿದ್ರೆ ಕೆಲವೊಮ್ಮ ನೀವು ಹೊಸ ಕೆಲಸವನ್ನು ಹುಡುಕಬೇಕಾಗಿಲ್ಲ. ಅನೇಕ ಬಾರಿ ಕಂಪನಿಗಳು ಉದ್ಯೋಗಿಯನ್ನು ಉಳಿಸಿಕೊಳ್ಳಲು ಪ್ರಮೋಷನ್​ ಮತ್ತು ಸ್ಯಾಲರಿ ಹೈಕ್​ ಸಹ ನೀಡುತ್ತವೆ.


ನೋಟಿಸ್​ ಪಿರಿಯಡ್ ನಲ್ಲಿ ಈ ತಪ್ಪುಗಳನ್ನು ಮಾಡಬೇಡಿ


ನೋಟಿಸ್​ ಪಿರಿಯಡ್​ ನಲ್ಲಿ ನಿಮ್ಮ ವರ್ತನೆ ಮೇಲೆ ಹಿಡಿತವಿರಲಿ. ಹೊಸ ಕೆಲಸ ಸಿಕ್ಕರೆ ಹಳೆಯದನ್ನು ಮರೆಯಬಾರದು. ನಿಮ್ಮ ಕಂಪನಿಯ ನಿಯಮಗಳನ್ನು ಅನುಸರಿಸಿ. ಒಂದು ಅಥವಾ ಎರಡು ತಿಂಗಳ ನೋಟಿಸ್ ಅವಧಿ ಏನೇ ಇರಲಿ, ಅದನ್ನು ಪೂರ್ಣಗೊಳಿಸಿ. ನೋಟಿಸ್​ ಪಿರಿಯಡ್​ ಸಮಯದಲ್ಲಿ ನಿಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿ, ಉಡಾಫೆ ಬೇಡ. ನಿಮ್ಮ ಹುದ್ದೆಗೆ ಕಂಪನಿಯು ಯಾರನ್ನಾದರೂ ನೇಮಿಸಿಕೊಂಡಿದ್ದರೆ, ಅವರಿಗೆ ಕೆಲಸವನ್ನು ಹಸ್ತಾಂತರಿಸಿದ ನಂತರವೇ ಕೆಲಸವನ್ನು ಬಿಡಿ.


ಇದನ್ನೂ ಓದಿ: Highest Paid Jobs: ಮಹಿಳಾ ಉದ್ಯೋಗಿಗಳಿಗೆ ಅತಿ ಹೆಚ್ಚು ಸಂಬಳ ನೀಡುವ 6 ಉದ್ಯೋಗಗಳ ಪಟ್ಟಿ ಇಲ್ಲಿದೆ


ಕೆಲಸವನ್ನು ಪೂರ್ಣಗೊಳಿಸಿ


ಯಾವುದೇ ಕೆಲಸವನ್ನು ಪೂರ್ಣಗೊಳಿಸದೆ ಬಿಡಬೇಡಿ. ಕೆಲಸವನ್ನು ಬಿಡುವ ಮೊದಲು ನೀವು ಯಾವುದೇ ಪ್ರಾಜೆಕ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದೀರಿ, ಅದನ್ನು ಪೂರ್ಣ ಪ್ರಾಮಾಣಿಕತೆಯಿಂದ ಪೂರ್ಣಗೊಳಿಸಿದ ನಂತರವೇ ನಿರ್ಗಮಿಸಿ. ಕೆಲಸ ಪೂರ್ತಿಯಾಗಿ ಮಾಡದೆ ಇರುವುದು ಸರಿಯಲ್ಲ. ನಿಮ್ಮ ಕೆಲಸವನ್ನು ಅಪೂರ್ಣವಾಗಿ ಬಿಡುವುದು ಕಂಪನಿ ಮತ್ತು ಅಲ್ಲಿ ಕೆಲಸ ಮಾಡುವವರಿಗೆ ನಿಮ್ಮ ಮೇಲೆ ತಪ್ಪು ಅಭಿಪ್ರಾಯವನ್ನು ಬರುವಂತೆ ಮಾಡುತ್ತೆ.  ಮತ್ತೊಂದೆಡೆ, ನಿಮ್ಮ ಕೆಲಸವನ್ನು ಪೂರ್ಣಗೊಳಿಸಿದ ನಂತರ ನೀವು ಹೊರಟು ಹೋದರೆ, ನಂತರದ ಸಂಬಂಧವು ಉತ್ತಮವಾಗಿರುತ್ತದೆ.


ವೈಯಕ್ತಿಕ ಮಾಹಿತಿಗಳನ್ನು ಅಳಿಸಿ ಹಾಕಿ

top videos


    ಆಫೀಸ್​ ನಲ್ಲಿ ಕೆಲಸ ಮಾಡುವಾಗ, ಹೆಚ್ಚಿನ ಜನರು ಡೆಸ್​ ಟಾಪ್​, ಲ್ಯಾಪ್ಟಾಪ್, ಪೆನ್ಡ್ರೈವ್, ಸಿಡಿ ಮತ್ತು ಇತರ ವಸ್ತುಗಳನ್ನು ಬಳಸುತ್ತಾರೆ. ದೈನಂದಿನ ಲಾಗಿನ್‌ ನಿಂದಾಗಿ, ಹೆಚ್ಚಿನ ಜನರು ತಮ್ಮ ಇಮೇಲ್ ಐಡಿ ಮತ್ತು ಸೋಷಿಯಲ್​ ಮೀಡಿಯಾ ಲಾಗ್‌ಔಟ್ ಆಗುವುದಿಲ್ಲ. ಕಚೇರಿಯಿಂದ ಹೊರಡುವ ಮೊದಲು, ನಿಮ್ಮ ವೈಯಕ್ತಿಕ ಡೇಟಾವನ್ನು ಅಳಿಸಿ. ಎಲ್ಲಾ ಖಾತೆಗಳಿಂದ ಲಾಗ್ಔಟ್ ಮಾಡಿ.

    First published: