• ಹೋಂ
 • »
 • ನ್ಯೂಸ್
 • »
 • Jobs
 • »
 • Layoff ಬಳಿಕ ಉದ್ಯೋಗಿಗಳ ಜೀವನ ಹೇಗಿದೆ? ಅವರು ಎದುರಿಸಿದ ಸವಾಲುಗಳೇನು?

Layoff ಬಳಿಕ ಉದ್ಯೋಗಿಗಳ ಜೀವನ ಹೇಗಿದೆ? ಅವರು ಎದುರಿಸಿದ ಸವಾಲುಗಳೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲಸವನ್ನೇ ನಂಬಿಕೊಂಡವರು, ಸಂಬಳದಲ್ಲಿಯೇ ಜೀವನ ನಡೆಸುವವರು, ಮಕ್ಕಳು-ಕುಟುಂಬ ಹೊಂದಿದ ಎಲ್ಲರಿಗೂ ವಜಾಗೊಳಿಸುವಿಕೆ ಎಂಬುವುದು ದೊಡ್ಡ ಸಂಕಷ್ಟವನ್ನು ತಂದಿತ್ತು.

 • Trending Desk
 • 2-MIN READ
 • Last Updated :
 • New Delhi, India
 • Share this:

ಟೆಕ್‌ ದೈತ್ಯ ಕಂಪನಿಗಳು (Tech companies) ಸೇರಿ ಸ್ಟಾರ್ಟ್ ಕಂಪನಿಗಳವರೆಗೆ (Smart Companies) ದೇಶದಲ್ಲಿ ಅನೇಕ ಸಂಸ್ಥೆಗಳು ಉದ್ಯೋಗಿಗಳನ್ನು (Employees) ಕಂಪನಿಯಿಂದ ವಜಾಗೊಳಿಸಿವೆ. ಯಾವುದೇ ಸೂಚನೆ, ಮಾಹಿತಿ ಇಲ್ಲದೇ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿ (Layoff) ಆದೇಶ ಹೊರಡಿಸಿತು.


ಉದ್ಯೋಗ ವಜಾಗೊಳಿಸುವಿಕೆ ಪಾಶದಲ್ಲಿ ಉದ್ಯೋಗಿಗಳು ಮತ್ತು ಕುಟುಂಬ


ಕೆಲಸವನ್ನೇ ನಂಬಿಕೊಂಡವರು, ಸಂಬಳದಲ್ಲಿಯೇ ಜೀವನ ನಡೆಸುವವರು, ಮಕ್ಕಳು-ಕುಟುಂಬ ಹೊಂದಿದ ಎಲ್ಲರಿಗೂ ವಜಾಗೊಳಿಸುವಿಕೆ ಎಂಬುವುದು ದೊಡ್ಡ ಸಂಕಷ್ಟವನ್ನು ತಂದಿತ್ತು.


ಮುಂದೇ ಜೀವನ ಹೇಗೆ ಎಂಬ ಆತಂಕ ಕೂಡ ಮನೆ ಮಾಡಿತ್ತು. ವಜಾಗೊಳಿಸುವಿಕೆಯಿಂದ ಆರ್ಥಿಕವಾಗಿ, ಮಾನಸಿಕವಾಗಿ ಬಳಲಿದ ಅದೆಷ್ಟೋ ಉದ್ಯೋಗಿಗಳು ಇದ್ದಾರೆ.


ಅವರ ಜೊತೆ ಅವರ ಕುಟುಂಬ ಸಹ ವಜಾಗೊಳಿಸುವಿಕೆಯ ಪಾಶದಲ್ಲಿ ನೊಂದು ಬೆಂದಿದೆ. ಕೆಲಸ ಕಳೆದುಕೊಂಡ ನಂತರ ನಿರುದ್ಯೋಗಿಗಳು ಕಳೆದ ಒಂದು ವರ್ಷದಲ್ಲಿ ತಮ್ಮ ಉಳಿತಾಯದ ಹಣದಿಂದ ಜೀವನ ಸಾಗಿಸಿರುವ ಹಲವು ಮಂದಿ ಇದ್ದಾರೆ.


ದೊಡ್ಡ ಕಂಪನಿಗಳ ಜೊತೆ ಸ್ಟಾರ್ಟಾಪ್‌ ಕಂಪನಿಗಳಿಂದ ಹೊರಬಿದ್ದ ಅದೆಷ್ಟೋ ಅನೇಕರು ಮತ್ತೆ ವೃತ್ತಿಜೀವನ ಕಂಡುಕೊಳ್ಳುವುದು ಕಷ್ಟಕರವಾಗಿತ್ತು.


ಇದನ್ನೂ ಓದಿ: Doordarshan Recruitment 2023: ಪಿಯುಸಿ ಪಾಸಾಗಿದ್ರೆ ಈಗಲೇ ಅಪ್ಲೈ ಮಾಡಿ, ತಿಂಗಳಿಗೆ 40 ಸಾವಿರ ಸಂಬಳ


ಕೆಲಸ ಕಳೆದುಕೊಂಡ ನಂತರ ವಜಾಗೊಂಡ ಸ್ಟಾರ್ಟ್‌ಅಪ್‌ ಉದ್ಯೋಗಿಗಳ ಜೀವನ ಹೇಗಿದೆ, ಏನೆಲ್ಲಾ ಸವಾಲುಗಳನ್ನು ನಿಭಾಯಿಸಿದ್ದಾರೆ ಎಂಬುದನ್ನು ಹಲವಾರು ಉದ್ಯೋಗಿಗಳು ಮನಿಕಂಟ್ರೋಲ್‌ಗೆ ಹಂಚಿಕೊಂಡಿದ್ದಾರೆ.


ಕೆಲಸ ಹೋದ ನಂತರ ಮತ್ತೊಂದು ಕೆಲಸ ಹುಟುಕಾಟದ ಸವಾಲು


ಕೆಲಸದಿಂದ ವಜಾಗೊಂಡ ಎಲ್ಲಾ ಉದ್ಯೋಗಿಗಳು ಲಿಂಕ್ಡ್‌ಇನ್‌ನಲ್ಲಿ ಹಾಗೂ ಇತರೆ ಸೋಶಿಯಲ್‌ ಮೀಡಿಯಾಗಳಲ್ಲಿ ವಿಚಾರ ತಿಳಿಸಿ, ಹೊಸ ಕೆಲಸದ ಬಗ್ಗೆಯೂ ಮಾಹಿತಿ ಕೇಳುತ್ತಿದ್ದರು.


ಮಾಜಿ ಸಹೋದ್ಯೋಗಿಗಳು ಮತ್ತು ಕಿರಿಯರಿಂದ ಉದ್ಯೋಗಾವಕಾಶಗಳ ಕುರಿತು ವಿಚಾರಣೆ ಮಾಡುತ್ತಿದ್ದರು. ಕೆಲಸ ಅನಿವಾರ್ಯವಾಗಿರುವುದರಿಂದ ಒಂದು ಕೆಲಸ ಹೋದ ತಕ್ಷಣ ಮತ್ತೊಂದು ಕೆಲಸವನ್ನು ಪಡೆದುಕೊಳ್ಳಲು ಹರಸಾಹಸ ಪಟ್ಟಿದ್ದಾರೆ.
ಇದರಿಂದ ಹೊರಬರಲು ಮತ್ತೆ ಜೀವನ ನಡೆಸಲು ಅನೇಕರು ತಮ್ಮ ವೃತ್ತಿಜೀವನವನ್ನು ಸಂಪೂರ್ಣವಾಗಿ ಬದಲಾಯಿಸಲು ಮತ್ತು ಉತ್ತಮ ವೇತನ ಮತ್ತು ಭವಿಷ್ಯದೊಂದಿಗೆ ಕ್ಷೇತ್ರಗಳಿಗೆ ತೆರಳಲು ಎಸ್‌ಇಒ ಮತ್ತು ಕೋಡಿಂಗ್‌ನಂತಹ ಕೋರ್ಸ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ.


ವಜಾಗೊಂಡ ನಂತರ ನಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ನಾವು ಪ್ರಯತ್ನಿಸಿದೆವು ಮತ್ತು ಈ ಮೂಲಕ ಮತ್ತೊಂದು ಒಳ್ಳೆಯ ಕೆಲಸ ಪಡೆಯಲು ಮೊದಲ ಹೆಜ್ಜೆ ಹಾಕಿದೆವು ಎಂದು ಅನೇಕರು ತಿಳಿಸಿದ್ದಾರೆ.


ವೇತನ ಕಡಿತ


ವಜಾಗೊಂಡ ಉದ್ಯೋಗಿಗಳಿಗೆ ಕೆಲಸ ಹುಡುಕಿದ ನಂತರ ವೇತನ ಸವಾಲು ಎದುರಾಗಿತ್ತು. ಹಿಂದೆ ಇದ್ದ ಕೆಲಸಕ್ಕಿಂತ ಕಡಿಮೆ ಸಂಬಳವನ್ನು ಉದ್ಯೋಗದಾತರು ಆಫರ್‌ ಮಾಡುತ್ತಿದ್ದಾರೆ ಎಂದು ಉದ್ಯೋಗಿಗಳು ನೋವು ತೊಂಡಿಕೊಂಡಿದ್ದಾರೆ.


ಎಡ್‌ಟೆಕ್‌ ಕಂಪನಿಯ ಉದ್ಯೊಗಿ ದಿವೇಶ್ ಗುಪ್ತಾ ಮಾತನಾಡಿ, "ಕಂಪನಿಯು ಕಿರಿಯ ಶಿಕ್ಷಕರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿತು ಆದರೆ ಹೆಚ್ಚಿನ ವೇತನದೊಂದಿಗೆ ಹಿರಿಯ/ಅನುಭವಿ ಉದ್ಯೋಗಿಗಳನ್ನು ಇರಿಸಿಕೊಳ್ಳಲು ಸಾಧ್ಯವಾಗಲಿಲ್ಲ.


ಹಲವರು ತಮಗೆ ಆಫರ್ ಬರುತ್ತಿವೆಯಾದರೂ ಈ ಹಿಂದೆ ಅವರು ಪಡೆಯುತ್ತಿದ್ದ ಸಂಬಳ ನೀಡಲು ಸಂಸ್ಥೆಗಳು ಒಪ್ಪುತ್ತಿಲ್ಲ ಎಂಬುದಾಗಿ ನೋವು ತೋಡಿಕೊಂಡಿದ್ದಾರೆ


ಇತ್ತೀಚೆಗೆ ಕೈಬಿಡಲ್ಪಟ್ಟ ಟೆಕ್ಕಿ 27 ವರ್ಷದ ನಿತಿನ್ ದೇಸಾಯಿ ಕೂಡ ಇದನ್ನೇ ಹೇಳಿದರು. ಉದ್ಯೋಗದ ಪಾತ್ರಗಳಲ್ಲಿ ಸಂಬಳವು ಪ್ರಶ್ನೆಯಾಗುತ್ತಿದೆ. ಬಹುತೇಕ ಕಂಪನಿಗಳು ಕಡಿಮೆ ಸಂಬಳ ಪಾವತಿ ಮಾಡುವುದಾಗಿ ತಿಳಿಸುತ್ತಿವೆ ಎಂದರು.


ಆದಾಗ್ಯೂ ಈ ಸಂಬಳವನ್ನು ನಾನು ಒಪ್ಪಿಕೊಳ್ಳಲು ಸಿದ್ಧನಿದ್ದೆ. ಕಾರಣ ಐದು ಜನರಿರುವ ಕುಟುಂಬವನ್ನು ನಾನು ನಿಭಾಯಿಸಬೇಕಿತ್ತು ಎಂದರು.


ವಜಾಗೊಂಡ ಉದ್ಯೋಗಿಗಳಿಂದ ಸಮಾಲೋಚನೆ


ಒಂದೇ ಕಂಪನಿಗಳು ಅಥವಾ ವಲಯಗಳ ಅನೇಕ ವಜಾಗೊಂಡ ಉದ್ಯೋಗಿಗಳು ತಮ್ಮದೇ ಆದ ಸೋಶಿಯಲ್‌ ಮೀಡಿಯಾ ಗುಂಪುಗಳನ್ನು ರಚಿಸಿದ್ದಾರೆ ಮತ್ತು ಉದ್ಯೋಗಾವಕಾಶಗಳು, ಸಲಹೆಗಳು, ಉಲ್ಲೇಖಗಳನ್ನು ಅಲ್ಲಿ ಪರಸ್ಪರ ಹಂಚಿಕೊಳ್ಳುತ್ತಾರೆ. ಯಾವುದೇ ಕೆಲಸದ ಬಗ್ಗೆ ಮಾಹಿತಿ ಇದ್ದರೂ ಇಲ್ಲಿ ಹಂಚಿಕೊಳ್ಳುವ ಮೂಲಕ ಅವರಿಗವರೇ ನೆರವಾಗುತ್ತಿದ್ದಾರೆ.


ಇದನ್ನೂ ಓದಿ:CSB Recruitment 2023: ಸೆಂಟ್ರಲ್ ಸಿಲ್ಕ್​ ಬೋರ್ಡ್​​ನಲ್ಲಿ ಭರ್ಜರಿ ಉದ್ಯೋಗಾವಕಾಶ- ಆಸಕ್ತರು ಈಗಲೇ ಅಪ್ಲೈ ಮಾಡಿ


ಸೋಶಿಯಲ್‌ ಮೀಡಿಯಾದಲ್ಲಿ ಉದ್ಯೋಗಿಗಳ ಸಮಸ್ಯೆ ಹಂಚಿಕೆ


ಕಳೆದ ವರ್ಷದಿಂದ ಆರಂಭವಾದ ವಜಾಗೊಳಿಸುವಿಕೆ ನಿಲ್ಲದಂತೆ ಸದ್ದು ಮಾಡುತ್ತಿದೆ. ಉದ್ಯೋಗಿಗಳು ಸಹ ಈ ಬಗ್ಗೆ ಎಲ್ಲಾ ರೀತಿ ಹೋರಾಟ ಮಾಡಿದ್ದಾರೆ. ಇನ್ನು ಸೋಶಿಯಲ್‌ ಮೀಡಿಯಾದಲ್ಲಂತೂ ಉದ್ಯೋಗಿಗಳು ಈ ಬಗ್ಗೆ ವ್ಯಾಪಕವಾದ ಚರ್ಚೆ ನೆಡಸಿದರು.


ಅಷ್ಟೇ ಅಲ್ಲ ಹೊಸ ಕೆಲಸ ಹುಡುಕಾಟಕ್ಕೂ ಸಾಮಾಜಿಕ ಜಾಲತಾಣಗಳನ್ನೇ ಮೊರೆ ಹೋಗಿದ್ದಾರೆ. ಕಂಪನಿಯು ಪಾವತಿಸಿ ಬೇಕಿದ್ದ ಪಾವತಿಯನ್ನು ಸಹ ಉದ್ಯೋಗಿಗಳು ಸೋಶಿಯಲ್‌ ಮೀಡಿಯಾದಲ್ಲಿ ಕೇಳಿದ್ದಾರೆ.


ವಜಾಗೊಂಡ ಉದ್ಯೋಗಿ ಹೇಮಂತ್ ಮೆಹ್ತಾ ಅವರು ಸೆಪ್ಟೆಂಬರ್ 2022 ರಲ್ಲಿ ಕಂಪನಿ ಹಠಾತ್ತನೆ ಕೈಬಿಟ್ಟ ನಂತರ ತಮ್ಮ ಬಾಕಿಯನ್ನು ಮರುಪಾವತಿಸಲು ತನ್ನ ಮಾಜಿ ಉದ್ಯೋಗದಾತರನ್ನು ಸಂಪರ್ಕಿಸಿದಾಗ, ಅವರು ನನ್ನ ಮೇಲೆ ಹಲ್ಲೆ ನಡೆಸಿದರು ಎಂದು ಹೇಳಿಕೊಂಡಿದ್ದಾರೆ.


ಕಂಪನಿಯು ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಕ್ಕಾಗಿ ಕ್ಷಮೆಯಾಚಿಸುವ ಪತ್ರವನ್ನು ಬರೆಯಲು ನನ್ನನ್ನು ಕೇಳಿತು.


ವ್ಯವಹಾರಕ್ಕೆ ಹೊಡೆತ ಬೀಳುವ ಕಾರಣ ಕಂಪನಿ ಕ್ಷಮೆಯಾಚಿಸಲು ಕೇಳಿತ್ತು. ಇದನ್ನು ನಾನು ಮಾಡಿದ ನಂತರ ಅಂತಿಮವಾಗಿ ಜನವರಿಯಲ್ಲಿ ಕೆಲವೇ ದಿನಗಳಲ್ಲಿ ನನ್ನ ಸಂಪೂರ್ಣ ಪಾವತಿಯನ್ನು ಮಾಡಿದರು ಎಂದು ಹೇಳಿದರು.


ಕೆಲಸದ ಸಂಸ್ಕೃತಿ


ಕೆಲಸದ ಸಂಸ್ಕೃತಿ ಅಸಹನೀಯವಾಗಿದೆ ಎಂದು ಉದ್ಯೋಗಿಗಳು ಹಂಚಿಕೊಂಡಿದ್ದಾರೆ. ವಜಾಗೊಂಡ ಉದ್ಯೋಗಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆ ಎಂದು ಅನೇಕ ಟೆಕ್ಕಿಗಳು ಹೇಳಿದ್ದಾರೆ.


ಒಳ್ಳೆ ಟೈಂಗೆ ಕಾಯುತ್ತಿದ್ದಾರೆ ಉದ್ಯೋಗಿಗಳು


ಇನ್ನೂ ಒಳ್ಳೆ ಸಮಯ ಬರಬಹುದು ಎಂದು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಉದ್ಯೋಗಿಗಳು ಹೇಳಿಕೊಂಡಿದ್ದಾರೆ. ದೀಪಕ್ ಸಿಂಗ್ ಮಾತನಾಡಿ, ಕಳೆದ ವರ್ಷ ಕೆಲಸದಿಂದ ತೆಗೆದುಹಾಕಿದ ನಂತರ ಜೀವನ ಕಷ್ಟವಾಗಿತ್ತು, ಗೃಹ ಸಾಲ ನನ್ನನ್ನು ಮತ್ತಷ್ಟು ಹಿಂಡಿ ಹಿಪ್ಪೆ ಮಾಡಿತು.


ನಂತರ ಮತ್ತೊಂದು ಕೆಲಸಕ್ಕೆ ಹೋದೆ ಹಾಗೆ ಒಂದೆರೆಡು ಕೆಲಸ ಬದಲಾಯಿಸಿ ಈಗ ಒಳ್ಳೆ ಸಂಬಳ ಪಡೆಯುತ್ತಿದ್ದೇನೆ. ಮುಂದೆ ಮತ್ತಷ್ಟು ಒಳ್ಳೆ ದಿನ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ತಿಳಿಸಿದರು.

top videos
  First published: